ಉ.ಕೊರಿಯಾ ಕ್ಷಿಪಣಿ ಪರೀಕ್ಷೆಗೆ ಷೇರುಪೇಟೆ ತಲ್ಲಣ, ನೀರಸ ವಹಿವಾಟು

ಮೂಡಿ ರೇಟಿಂಗ್ ನಂತರ ಏರುಹಾದಿಯಲ್ಲಿದ್ದ ಷೇರುಪೇಟೆ ಉತ್ಸಾಹಕ್ಕೆ ಎಸ್ ಅಂಡ್ ಪಿ ತಣ್ಣೀರೆರಚಿದೆ. ಉತ್ತರ ಕೊರಿಯಾ ಕ್ಷಿಪಣಿ ದಾಳಿಯಿಂದ ಜಾಗತಿಕ ಮಾರುಕಟ್ಟೆ ಕುಸಿಯುವ ಆತಂಕದ ನಡುವೆಯೇ, ಮೂಡಿ ಉತ್ಸಾಹದಲ್ಲಿ ಮೇಲೇರಿದ ಷೇರುಗಳ ಲಾಭ ನಗದೀಕರಣ ಚುರುಕಾಗಿ ನಡೆಯುತ್ತಿದೆ

ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಹಾರಿಸಿದ ಪರಿಣಾಮ ಭಾರತದ ಷೇರುಪೇಟೆಯ ಮೇಲೂ ಆಗಿದೆ. ಜಾಗತಿಕ ಮಾರುಕಟ್ಟೆ ಕುಸಿಯುವ ಭೀತಿಯಲ್ಲಿ ದಿನವಿಡೀ ನೀರಸ ವಹಿವಾಟು ನಡೆಯಿತು. ದಿನದ ವಹಿವಾಟಿನಲ್ಲಿ ಕೊಂಚ ಏರಿಳಿತ ಕಂಡ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 15 ಅಂಶ ಮತ್ತು ನಿಫ್ಟಿ 9 ಅಂಶ ಕುಸಿದಿವೆ. ನಿಫ್ಟಿ ರಿಯಾಲ್ಟಿ ಶೇ.1ರಷ್ಟು ಏರಿದ್ದರೆ, ನಿಫ್ಟಿ ಸಿಪಿಎಸ್ಇ ಶೇ.0.45ರಷ್ಟು ಏರಿವೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಶೇ.1ರಷ್ಟು ಕುಸಿದರೆ, ನಿಫ್ಟಿ ಮಿಡ್ ಕ್ಯಾಪ್, ನಿಫ್ಟಿ ಮೆಡಿಯಾ, ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇ.0.50ರಷ್ಟು ಕುಸಿದಿವೆ. ಒಟ್ಟಾರೆ ವಿಸ್ತೃತ ಮಾರುಕಟ್ಟೆ ಇಳಿಜಾರಿನಲ್ಲಿದೆ.

ಬಾಶ್ ಶೇ.6ರಷ್ಟು, ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಶೇ.5ರಷ್ಟು ಏರಿವೆ. ಪಿರಮಲ್ ಎಂಟರ್‌ಪ್ರೈಸ್, ಭಾರತಿ ಇನ್ಫ್ರಾಟೆಲ್, ಅದಾನಿ ಪೋರ್ಟ್ ಶೇ.2ರಷ್ಟು ಏರಿವೆ. ಸೇಲ್ ಶೇ.3.30ರಷ್ಟು, ಐಸಿಐಸಿಐ ಪ್ರುಡೆನ್ಷಿಯಲ್, ಆಕ್ಸಿಸ್ ಬ್ಯಾಂಕ್, ಪೆಟ್ರೋನೆಟ್ ಎಲ್ಎನ್‌ಜಿ ಮತ್ತು ಐಡಿಯಾ ಸೆಲ್ಯುಲಾರ್ ಶೇ.2ರಿಂದ 3ರಷ್ಟು ಕುಸಿದಿವೆ.

ತಗಾದೆ ಪ್ರಕರಣವೊಂದರಲ್ಲಿ ₹1,035 ಕೋಟಿ ತನಗೆ ಸಂದಾಯವಾಗಬೇಕೆಂಬ ಪಾರ್ಶ್ವನಾಥ್ ಲ್ಯಾಂಡ್ ರೇಲ್ ಪ್ರಾಜೆಕ್ಟ್ ಲಿಮಿಟೆಡ್ ಬೇಡಿಕೆಯನ್ನು ಆರ್ಬಿಟ್ರಲ್ ಟ್ರಿಬ್ಯುನಲ್ ಎತ್ತಿಹಿಡಿದ ಪರಿಣಾಮ ಪಾರ್ಶ್ವನಾಥ್ ಡೆವಲಪ್ಮೆಂಟ್ ಶೇ.5ರಷ್ಟು ಏರಿಕೆ ಕಂಡಿತು. ಏರಿಕೆ ಮಿತಿ ಶೇ.5ರಷ್ಟು ಮಾತ್ರವಾದ್ದರಿಂದ ನಾಳಿನ ವಹಿವಾಟಿನಲ್ಲಿ ಮತ್ತಷ್ಟು ಏರಲಿದೆ. 357 ಕೋಟಿ ಗುತ್ತಿಗೆ ಪಡೆದ ಹಿನ್ನೆಲೆಯಲ್ಲಿ ಪವರ್ ಮೆಕ್ ಪ್ರಾಜೆಕ್ಟ್ ಶೇ.10ರಷ್ಟು ಏರಿತು.

ಹರ್ಯಾಣ ಕರ್ನೆಲ್‌ನಲ್ಲಿ ಹೊಸ ವಸತಿ ಯೋಜನೆ ಆರಂಭಿಸುತ್ತಿರುವ ಹಿನ್ನೆಯಲ್ಲಿ ಸಿಎಚ್‌ಡಿ ಡೆವಲಪರ್ಸ್ ಷೇರು ಶೇ.19ರಷ್ಟು ಏರಿತು. ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭದ ಪ್ರಮಾಣ ನಾಲ್ಕು ಪಟ್ಟು ಹೆಚ್ಚಿದ್ದರಿಂದ ಕಾಕತೀಯ ಸಿಮೆಂಟ್ ಷೇರು ಶೇ.9ರಷ್ಟು ಏರಿತು.

ಇಂಡಸ್ ಇಂಡ್ ಬ್ಯಾಂಕ್ ಮತ್ತು ಭಾರತ್ ಫೈನಾನ್ಷಿಯಲ್ ವಿಲೀನ ಪ್ರಕ್ರಿಯೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡುವ ನಿರೀಕ್ಷೆ ಇದೆ. 2018ರ ಸೆಪ್ಟಂಬರ್ ವೇಳೆಗೆ ವಿಲೀನ ಪೂರ್ಣಗೊಳ್ಳಲಿದೆ. ಈ ನಡುವೆ ಸಿಎಲ್ಎಸ್ಎ ಮಿಡ್ ಕ್ಯಾಪ್ ಐಟಿ ಷೇರುಗಳ ಕುರಿತ ವಿಶ್ಲೇಷಣೆ ಪ್ರಕಟಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಬಹುತೇಕ ಉತ್ತಮ ಫಲಿತಾಂಶ ನೀಡಿವೆ. ಒಟ್ಟು 10 ಮಿಡ್ ಕ್ಯಾಪ್ ಐಟಿ ಕಂಪನಿಗಳು ಶೇ.25ಕ್ಕಿಂತ ಹೆಚ್ಚು ಲಾಭ ತಂದುಕೊಟ್ಟಿವೆ ಎಂದು ತಿಳಿಸಿದೆ. ಎಲ್ ಅಂಡ್ ಟಿ ಟೆಕ್ ಮತ್ತು ಪರ್ಸಿಸ್ಟಂಟ್ ಷೇರುಗಳು ಮತ್ತಷ್ಟು ಸಾಧನೆ ಮಾಡಬಹುದು ಎಂದು ಹೇಳಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More