ಬೆಂಗಳೂರು-ಚೆನ್ನೈ ಏರ್ ಟಿಕೆಟ್ ₹1120, ಇದು ಚಳಿಗಾಲದ ಇಂಡಿಗೋ ಆಫರ್

ದೇಶದಲ್ಲಿ ವೈಮಾನಿಕ ಹಾರಾಟ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ, ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ಲಾಭ ಪಡೆಯಲು ಏರ್‌ಲೈನ್ ಕಂಪನಿಗಳು ಮುಂದಾಗಿವೆ. ಏರ್ ಡೆಕ್ಕನ್ ಮರುಪ್ರವೇಶದಿಂದ ಸ್ಪರ್ಧೆ ತೀವ್ರವಾಗುತ್ತಿದ್ದು, ಸ್ಪರ್ಧಾತ್ಮಕ ದರದಲ್ಲಿ ಟಿಕೆಟ್ ಲಭ್ಯವಾಗಲಿದೆ

ಏರ್ ಡೆಕ್ಕನ್ ಮರುಪ್ರವೇಶ ಆಗುತ್ತಿದ್ದಂತೆ ದೇಶೀಯ ವೈಮಾನಿಕ ಕ್ಷೇತ್ರದಲ್ಲಿ ಮತ್ತೊಂದು ಸುತ್ತಿನ ಸ್ಪರ್ಧೆ ಆರಂಭವಾಗುತ್ತಿದೆ. ಈಗ ಸ್ಪರ್ಧೆಗೆ ಇಳಿದಿರುವುದು ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಿರುವ ಇಂಡಿಗೋ.

ಇಂಡಿಗೋ ಈ ವರ್ಷಾಂತ್ಯ ಸೀಸನ್ನಿಗೆ ಟಿಕೆಟ್ ದರದಲ್ಲಿ ಭಾರಿ ರಿಯಾಯ್ತಿ ಘೋಷಿಸಿದೆ. ಚಳಿಗಾಲದ ವೇಳೆ ಸಹಜವಾಗಿಯೇ ವಿಮಾನ ಹಾರಾಟಗಾರರ ಸಂಖ್ಯೆ ಕಡಮೆ. ಆದರೆ, ವರ್ಷಾಂತ್ಯ ರಜೆಯನ್ನು ಕಳೆಯಲು ಸಾಮಾನ್ಯ ಜನರನ್ನೂ ಉತ್ತೇಜಿಸಲು ಇಂಡಿಗೋ ಹೊಸ ಆಫರ್ ಘೋಷಿಸಿದೆ. ಸ್ಪೈಸ್ ಜೆಟ್, ಜೆಟ್ ಏರ್ವೇಸ್, ಏರ್ ಇಂಡಿಯಾ, ಏರ್ ಏಷ್ಯಾ, ಗೋಏರ್, ವಿಸ್ತಾರ ಕೂಡ ಸ್ಪರ್ಧೆಗೆ ಇಳಿಯುವ ನಿರೀಕ್ಷೆ ಇದೆ.

ಆಯ್ದ ಮಾರ್ಗಗಳ ಟಿಕೆಟ್ ದರವನ್ನು 999ಕ್ಕೆ ಇಳಿಸಲಾಗಿದೆ. ಜೈಪುರ-ದೆಹಲಿ ನಡುವಿನ ಟಿಕೆಟ್ ದರ 999ಕ್ಕೆ ನಿಗದಿಯಾಗಿದೆ. ಇದು ತೆರಿಗೆಗಳೆಲ್ಲವೂ ಸೇರಿದ ಪ್ರಯಾಣ ದರ. ‘ಫೈನಾನ್ಸಿಯಲ್ ಎಕ್ಸ್‌ಪ್ರೆಸ್’ ವರದಿ ಪ್ರಕಾರ, ಬಡ್ಗೊಗ್ರಾ-ಗುವಾಹತಿ ನಡುವಿನ ಪ್ರಯಾಣ ದರ 1005, ಕೊಯಮತ್ತೂರು-ಚೆನ್ನೈ ನಡುವಿನ ದರ 1095 ರು. ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣ ದರ 1,120 ರು. ಫೆಬ್ರವರಿ ಮೊದಲ ವಾರದವರೆಗೂ ಈ ಆಫರ್ ಇರಲಿದೆ.

ಸಾಮಾನ್ಯವಾಗಿ ವರ್ಷಾಂತ್ಯದಲ್ಲಿ ಬಹುತೇಕ ಏರ್‌ಲೈನ್‌ಗಳು ರಿಯಾಯಿತಿ ಆಫರ್ ಘೋಷಿಸುತ್ತವೆ. ಕೇಂದ್ರ ಸರ್ಕಾರ ಉಡಾನ್ ಯೋಜನೆ ಘೋಷಿಸಿದ ನಂತರ ಹೊಸ ಹೊಸ ಮಾರ್ಗಗಳು ಆರಂಭವಾಗುತ್ತಿವೆ. ಉಡಾನ್ ಯೋಜನೆಯ ಮೊದಲ ಸುತ್ತಿನಲ್ಲಿ 128 ಮಾರ್ಗಗಳಲ್ಲಿ ಐದು ಕಂಪನಿಗಳು ಹಾರಾಟಕ್ಕೆ ಅನುಮತಿ ಪಡೆದಿವೆ.

ಇದನ್ನೂ ಓದಿ : ಒಂದು ರುಪಾಯಿಗೆ ಏರ್ ಟಿಕೆಟ್! ನೀವು ನಂಬಲೇಬೇಕು, ಇದು ಏರ್ ಡೆಕ್ಕನ್ ಆಫರ್

ಕಡಿಮೆ ಅವಧಿಯಲ್ಲಿ ಅತಿ ಹೆಚ್ಚಿನ ಮಾರುಕಟ್ಟೆ ಪಡೆದಿರುವ ಇಂಡಿಗೋ, ಇತ್ತೀಚಿನ ತ್ರೈಮಾಸಿಕದಲ್ಲಿ ಶೇ.294ರಷ್ಟು ಹೆಚ್ಚು ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ 139.85 ಕೋಟಿ ರು. ನಿವ್ವಳ ಲಾಭ ಗಳಿಸಿದ್ದ ಇಂಡಿಗೋ ಈಗ 551.55 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಶೇ.38ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಇಂಡಿಗೋ, 141 ವಿಮಾನ ಹೊಂದಿದ್ದು, 913 ಮಾರ್ಗಗಳಲ್ಲಿ ಸೇವೆ ಕಲ್ಪಿಸಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More