ಚುನಾವಣೆ ಮುಗಿಯಿತು, ಇನ್ನು ಷೇರುಪೇಟೆ ದೃಷ್ಟಿ ಚಳಿಗಾಲದ ಅಧಿವೇಶನದತ್ತ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಯಾಸದ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಎಚ್ಚರಿಕೆಯಿಂದ ವಹಿವಾಟು ನಡೆಸಲಿದೆ. ಮಂಗಳವಾರದ ಏರಿಕೆ ಗುಜರಾತ್ ಫಲಿತಾಂಶದ ಪರಿಣಾಮವಲ್ಲ. ಜಾಗತಿಕ ಮಾರುಕಟ್ಟೆಗಳಿಂದ ಸಿಕ್ಕ ಮುನ್ಸೂಚನೆಯಿಂದಾದ ಏರಿದೆ.

ಗುಜರಾತ್ ಫಲಿತಾಂಶದ ಹಿನ್ನೆಲೆಯಲ್ಲಿ ಸೋಮವಾರ ಏರಿದ್ದ ಷೇರುಪೇಟೆ ಸೂಚ್ಯಂಕಗಳು ಮಂಗಳವಾರವೂ ಏರುಹಾದಿಯಲ್ಲೇ ಸಾಗಿವೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 110 ಅಂಶ ಏರಿ 33715ಕ್ಕೆ ತಲುಪಿತ್ತು. 35 ಅಂಶ ಏರಿದ್ದ ನಿಫ್ಟಿ 10400ರ ಮಟ್ಟ ದಾಟಿತು. ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ಉತ್ಸಾಹದಿಂದಾಗಿ ಪೇಟೆಯಲ್ಲಿ ಬಿರುಸಿನ ವಹಿವಾಟು ನಡೆಸಿದೆ.

ಆದರೆ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಯಾಸದ ಗೆಲುವು ಸಾಧಿಸಿರುವ ಬಗ್ಗೆ ಮಾರುಕಟ್ಟೆಯೂ ಎಚ್ಚರಿಕೆಯಿಂದ ವಹಿವಾಟು ನಡೆಸಲಿದೆ. ಮಂಗಳವಾರದ ಏರಿಕೆ ಗುಜರಾತ್ ಫಲಿತಾಂಶದ ಪರಿಣಾಮವಲ್ಲ. ಜಾಗತಿಕ ಮಾರುಕಟ್ಟೆಗಳೆಲ್ಲ ಬಹುತೇಕ ಏರುಹಾದಿಯಲ್ಲಿವೆ. ಈ ಸಕಾರಾತ್ಮಕ ಏರಿಕೆಯ ಮುನ್ಸೂಚನೆಯಿಂದಾಗಿ ಷೇರು ಪೇಟೆ ಏರಿದೆ.

ಇದುವರೆಗೆ ಗುಜರಾತ್ ಚುನಾವಣಾ ಫಲಿತಾಂಶದ ಗುಂಗಿನಲ್ಲೇ ವಹಿವಾಟು ನಡೆಸುತ್ತಿದ್ದ ಪೇಟೆ ಈಗ ಸಂಸತ್ ಚಳಿಗಾಲದ ಅಧಿವೇಶನ ಮತ್ತು ಬಜೆಟ್ ನತ್ತ ದೃಷ್ಟಿ ನೆಟ್ಟಿದೆ. ಸಂಸತ್ತಿನಲ್ಲಿ ಪ್ರಮುಖ ಸುಧಾರಣಾ ಮಸೂದೆಗಳ ಕುರಿತಂತೆ ಸಕಾರಾತ್ಮಕ ಚರ್ಚೆ ಆದರೆ, ಪೇಟೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ.

ಎಫ್ಆರ್ಡಿಐ ಮಸೂದೆ ಈ ಅಧಿವೇಶನದಲ್ಲೇ ಅಂಗೀಕರಾವಾಗುವ ನಿರೀಕ್ಷೆ ಇದೆ. ಜಂಟಿ ಸಂಸದೀಯ ಸಮಿತಿ ಪರಿಶೀಲನೆಯಲ್ಲಿರುವ ಎಪ್ಆರ್ಡಿಐ ಮಸೂದೆಗೆ ಗ್ರಾಹಕರ ಆತಂಕ ನಿವಾರಿಸುವ ಸಲುವಾಗಿ ಕೆಲವು ಮಾರ್ಪಾಡು ಮಾಡಿದರೆ ಮಾರುಕಟ್ಟೆ ಮುಖ್ಯವಾಗಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳು ಏರಬಹುದು. ಈಗಾಗಲೇ ಎಫ್ಆರ್ಡಿಐ ಮಸೂದೆ ಕಾರಣಕ್ಕಾಗಿ ಈ ವಲಯದ ಷೇರುಗಳು ಒಂದು ಸುತ್ತು ಇಳಿದಿವೆ.

ಈ ನಡುವೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಮಾಡುವ ನಿರ್ಧಾರಕ್ಕೂ ಸಂಸತ್ತಿನ ಅನುಮೋದನೆ ಬೇಕಿದೆ. ಹೀಗಾಗಿ ಷೇರುಪೇಟೆ ದೃಷ್ಟಿ ಬಜೆಟ್ ಮತ್ತು ಅಧಿವೇಶನದ ಮೇಲಿದೆ. ನಿಫ್ಟಿ ಐಟಿ ಮತ್ತು ನಿಫ್ಟಿ ಸರ್ವೀಸ್ ಸೆಕ್ಟರ್ ಹೊರತು ಪಡೆಸಿದರೆ ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಏರುಹಾದಿಯಲ್ಲಿವೆ.ನಿಫ್ಟಿ ಮೆಟಲ್, ನಿಫ್ಟಿ ಆಟೋ, ನಿಫ್ಟಿ ರಿಯಾಲ್ಟಿ ಶೇ.1-1.25ರಷ್ಟು ಏರಿವೆ.

ದಿನದ ಆರಂಭದ ವಹಿವಾಟಿನಲ್ಲಿ ವೇದಾಂತ ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ಸ್, ಎಸ್ಪಿಐ, ಯೆಸ್ ಬ್ಯಾಂಕ್ ಮತ್ತು ಐಷರ್ ಮೋಟಾರ್ಸ್ ಏರಿದವು. ಯುಐಎಡಿಐ ಇ-ಕೆವೈಸಿ ಬಳಸಲು ನೀಡಿದ್ದ ಅನುಮತಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಏರ್ ಟೆಲ್ ಇಳಿಜಾರಿಗೆ ಸರಿದಿದೆ. ಜತೆಗೆ ಐಟಿ ವಲಯದ ಎಚ್ಸಿಎಲ್ ಟೆಕ್ನಾಲಜೀಸ್, ಟಿಸಿಎಸ್, ವಿಪ್ರೊ, ಇನ್ಫೋಸಿಸ್ ಶೇ.1 ರಷ್ಟು ಕುಸಿದಿವೆ.

ಹಲವು ವರ್ಷಗಳಿಂದ ಅಂಡರ್ ಪರ್ಫಾರ್ಮರ್ ಆಗಿದ್ದ ಮಹಿಂದ್ರಾ ಅಂಡ್ ಮಹಿಂದ್ರಾ ವರ್ಷದ ಗರಿಷ್ಟ ಮಟ್ಟಕ್ಕೆರಿದೆ. ಇದೇ ಹಾದಿಯಲ್ಲಿ ಟೈಟಾನ್ ಮತ್ತು ಪಿಐ ಇಂಡಸ್ಟ್ರೀಸ್ ಸಾಗಿವೆ. ದಿನದ ವಹಿವಾಟಿನಲ್ಲಿ ಶೇ.1-4ರಷ್ಟು ಏರಿದ ಇತರ ಷೇರುಗಳೆಂದರೆ ಗೋದಾವರಿ ಪವರ್, ರೂರಲ್ ಎಲೆಕ್ಟ್ರಿಫಿಕೇಷನ್, ಪವರ್ ಫೈನಾನ್ಸ್ ಕಾರ್ಪೋರೆಷನ್, ಇಂಡಿಯಾಬುಲ್ ರಿಯಲ್ ಎಸ್ಟೇಟ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಜೆಎಂ ಫೈನಾನ್ಸಿಯಲ್ ಮತ್ತು ನ್ಯಾಷನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೆಷನ್.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More