ಸತತ ನಾಲ್ಕನೇ ದಿನವೂ ಏರಿದ ಷೇರುಪೇಟೆ, ಮತ್ತಷ್ಟು ಎತ್ತರಕ್ಕೆ ಜಿಗಿದ ಮಾರುತಿ

ಮಂಗಳವಾರ ಐಟಿ ಸೂಚ್ಯಂಕ ಹೊರತಾಗಿ ವಿಸ್ತೃತ ಪೇಟೆಯ ಬಹುತೇಕ ಸೂಚ್ಯಂಕಗಳು ಏರುಹಾದಿಯಲ್ಲಿ ಸಾಗಿದವು. ನಿಫ್ಟಿ ಆಟೋ ಅತಿ ಹೆಚ್ಚು ಗಳಿಕೆ ಸಾಧಿಸಿದೆ. ಹೂಡಿಕೆದಾರರ ಡಾರ್ಲಿಂಗ್ ಆಗಿರುವ ಮಾರುತಿ ಮತ್ತಷ್ಟು ಎತ್ತರಕ್ಕೆ ಜಿಗಿದಿದೆ. ಆಟೋ ವಲಯದ ಬಹುತೇಕ ಷೇರುಗಳು ಏರಿವೆ

ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಗುರುವಾರದಿಂದ ಏರುಹಾದಿಯಲ್ಲಿರುವ ಷೇರುಪೇಟೆ, ಸತತ ನಾಲ್ಕನೇ ದಿನ ಏರಿಕೆ ಕಂಡಿದೆ. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 235 ಅಂಶ ಏರಿ, 33,836ಕ್ಕೆ ಸ್ಥಿರಗೊಂಡು, 34,000 ದಾಟುವ ಹಂತದಲ್ಲಿದೆ. ನಿಫ್ಟಿ 74 ಅಂಶ ಏರಿದ್ದು, ನಿರ್ಣಾಯಕ ಮಟ್ಟ 10,450 ದಾಟಿದೆ.

ನಿಫ್ಟಿ ಐಟಿ ಹೊರತುಪಡಿಸಿ ವಿಸ್ತೃತ ಪೇಟೆಯ ಎಲ್ಲ ಸೂಚ್ಯಂಕಗಳು ಏರುಹಾದಿಯಲ್ಲಿ ಸಾಗಿವೆ. ನಿಫ್ಟಿ ಆಟೋ ಅತಿ ಹೆಚ್ಚು ಅಂದರೆ, ಶೇ.3.42ರಷ್ಟು ಏರಿಕೆ ಕಂಡಿದೆ. ಟೆಲಿಕಾಂ ಸೂಚ್ಯಂಕ ಶೇ.2ರಷ್ಟು ಏರಿದೆ. ಕನ್ಸೂಮರ್ ಡ್ಯೂರಬಲ್ ಸೂಚ್ಯಂಕ ಶೇ.1.80ರಷ್ಟು ಏರಿದೆ.

ಕಳೆದ ತಿಂಗಳು ಉತ್ತಮ ಹೂಡಿಕೆಗಾಗಿ ನಾವು ಸಲಹೆ ಮಾಡಿದ್ದ ಮಾರುತಿ ಷೇರು ಏರುಹಾದಿಯಲ್ಲೇ ಸಾಗಿದೆ. ದಿನದ ವಹಿವಾಟಿನಲ್ಲಿ 567 ರುಪಾಯಿ ಅಂದರೆ, ಶೇ.5.77ರಷ್ಟು ಏರಿಕೆ ದಾಖಲಿಸಿ 9,846ಗೆ ಏರಿದೆ. ಒಂದೇ ತಿಂಗಳಲ್ಲಿ 1,620 ಅಂದರೆ, ಶೇ.20ರಷ್ಟು ಏರಿಕೆ ಕಂಡಿದೆ. ಬಹುತೇಕ ಮ್ಯೂಚುವಲ್ ಫಂಡ್ ಮ್ಯಾನೇಜರ್‌ಗಳು ಮಾರುತಿ ಷೇರು ಖರೀದಿಸುತ್ತಲೇ ಇದ್ದಾರೆ. ಬ್ರೋಕರೇಜ್ ಹೌಸ್‌ಗಳು ಮಾರುತಿ ಗರಿಷ್ಠ ದರವನ್ನು ಏರಿಸುತ್ತಲೇ ಇವೆ. ಈ ಹಂತದಲ್ಲೂ ಮಾರುತಿ ಹೂಡಿಕೆಗೆ ಅತ್ಯುತ್ತಮ ಆಯ್ಕೆ ಆಗಿದೆ.

ಇದನ್ನೂ ಓದಿ : ಶೇ.53ರಷ್ಟು ಏರಿಕೆ ಕಂಡು ಹೂಡಿಕೆದಾರರ ಜೇಬು ತುಂಬಿಸಿದ ಮಾರುತಿ ಷೇರು

ದಿನದ ಅಂತ್ಯಕ್ಕೆ ನಿಫ್ಟಿ ಎಂಎನ್ಸಿ, ನಿಫ್ಟಿ ಕನ್ಸಂಪ್ಷನ್ ನಿಫ್ಟಿ ಗ್ರೋತ್ ಶೇ.2ರಷ್ಟು, ನಿಫ್ಟಿ ಮೆಟಲ್, ನಿಫ್ಟಿ ರಿಯಾಲ್ಟಿ, ನಿಫ್ಟಿ ಮಿಡ್ ಕ್ಯಾಪ್, ನಿಫ್ಟಿ ಕಮಾಡಿಟೀಸ್ ಶೇ.1ರಿಂದ 2ರಷ್ಟು ಏರಿವೆ. ದಿನದ ವಹಿವಾಟಿನಲ್ಲಿ ಮಾರುತಿ ಹಾದಿಯಲ್ಲೇ ಸಾಗಿದ ಹಿರೋ ಮೋಟೋಕಾರ್ಪ್ ಶೇ.4.69 ಏರಿದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಯುಪಿಎಲ್, ಐಡಿಯಾ ಸೆಲ್ಯುಲಾರ್ ಶೇ.3.5ರಿಂದ ಶೇ.4.5ರಷ್ಟು ಏರಿವೆ.

ಐಟಿ ವಲಯದ ಬಹುತೇಕ ಷೇರುಗಳು ಕುಸಿತದ ಹಾದಿಯಲ್ಲಿದ್ದವು. ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ವಿಪ್ರೊ, ಶೇ.1.50ರಿಂದ 2ರಷ್ಟು ಕುಸಿದವು. ಕಳೆದೊಂದು ತಿಂಗಳಿಂದ ಏರುಹಾದಿಯಲ್ಲಿ ಸಾಗಿ 950ರ ಗಡಿ ದಾಟಿದ್ದ ಸನ್ ಟಿವಿ ಶೇ.1ರಷ್ಟು, ಬ್ಯಾಂಕ್ ಆಫ್ ಬರೋಡ ಶೇ.0.50ರಷ್ಟು ಕುಸಿದಿದೆ.

ದಿನದ ಅಂತ್ಯದ ಮಾರುಕಟ್ಟೆ: ಸೆನ್ಸೆಕ್ಸ್ 33,836.74-23506 (0.70%), ನಿಫ್ಟಿ 10463.20(0.72%)

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More