ಹೊಸಪೇಟೆಯ ತುಂಗಭದ್ರ ಸ್ಟೀಲ್ ಪ್ರಾಡಕ್ಟ್ಸ್‌ ಮುಚ್ಚಲು ಕೇಂದ್ರ ಸಂಪುಟ ನಿರ್ಧಾರ

1960ರಲ್ಲಿ ಆರಂಭವಾದ ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ ನಾಡಿನ ನೀರಾವರಿ ಯೋಜನೆಗಳಿಗೆ ವಿವಿಧ ಉಪಕರಣ ಒದಗಿಸುತ್ತಿತ್ತು. ಸದ್ಯ ನಷ್ಟದಲ್ಲಿರುವ ಈ ಉದ್ದಿಮೆಯನ್ನು ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಂಪನಿಯಿಂದ ಬರಬೇಕಾದ ಬಾಕಿಗಾಗಿ ಕಾರ್ಮಿಕರು ಕೋರ್ಟ್‌ ಮೆಟ್ಟಿಲೇರಿದ್ದಾರೆ

ತುಂಗಭದ್ರ ಸ್ಟೀಲ್ ಪ್ರಾಡಕ್ಟ್ ಲಿಮಿಡೆಟ್ ಬಂದ್ ಮಾಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ನಷ್ಟದಲ್ಲಿದ್ದ ಈ ಕಂಪನಿಯನ್ನು ಮುಚ್ಚುವಂತೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

1960ರಲ್ಲಿ ಪ್ರಾರಂಭವಾದ ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ ಲಿಮಿಟೆಡ್ ನಾಡಿನ ಹಲವು ನೀರಾವರಿ ಯೋಜನೆಗಳಿಗೆ ವಿವಿಧ ಉಪಕರಣಗಳನ್ನು ಒದಗಿಸಿದೆ. ಹೈಡ್ರಾಲಿಕ್ ಗೇಟ್, ರೇಡಿಯಲ್ ಗೇಟ್, ವರ್ಟಿಕಲ್ ಗೇಟ್, ಸ್ಲೈಡ್ ಗೇಟ್, ಸ್ಟಾಪೇಜ್ ಗೇಟ್, ರೋಪ್ ಡ್ರಮ್ ಸೇರಿದಂತೆ ಹತ್ತಾರು ಪರಿಕರಗಳನ್ನು ಪೂರೈಸಿದೆ. ವಿವಿಧ ಕಬ್ಬಿಣ ಉತ್ಪಾದನ ಘಟಕಗಳಿಗೆ ಅಗತ್ಯ ಯಂತ್ರೋಪಕರಣಗಳನ್ನೂ ಸರಬರಾಜು ಮಾಡಿದೆ.

ಆರಂಭದಲ್ಲಿ ಫ್ರಾನ್ಸ್ ದೇಶದ ‘ನೇಪ್ರಿಕ್ಸ್’ ಕಂಪನಿ ಜತೆ ಈ ಕಂಪನಿ ತಾಂತ್ರಿಕ ಸಹಭಾಗಿತ್ವ ಹೊಂದಿತ್ತು. 1974ರವರೆಗೆ ಈ ತಾಂತ್ರಿಕ ಸಹಭಾಗಿತ್ವ ಇತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿದ್ಯುತ್ ಮತ್ತು ನೀರಾವರಿ ಇಲಾಖೆ, ವಿದ್ಯುತ್ ಮಂಡಳಿಗಳು, ವಿದ್ಯುತ್ ನಿಗಮಗಳು, ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಗಲ್ಲದೇ ಖಾಸಗಿ ವಲಯದ ಸಂಸ್ಥೆಗಳಿಗೂ ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ ತನ್ನ ಸೇವೆ ಒದಗಿಸಿತ್ತು.

ಇದನ್ನೂ ಓದಿ : ಐಟಿ ಉದ್ಯಮಕ್ಕೆ ಉದ್ಯೋಗ ಕಡಿತವೆಂಬ ದುಃಸ್ವಪ್ನ; 2022ಕ್ಕೆ 7 ಲಕ್ಷ ಮಂದಿ ಅತಂತ್ರ

ಟಿಎಸ್‌ಪಿಎಲ್ ವೆಬ್ ಸೈಟ್ ನಲ್ಲಿರುವ ಮಾಹಿತಿ ಪ್ರಕಾರ 2011-12ರಲ್ಲಿ ₹2.79 ಕೋಟಿ ವಹಿವಾಟು ನಡೆಸಿತ್ತು. ಭಾರಿ ನಷ್ಟಕ್ಕೀಡಾಗಿದ್ದ ಸಂಸ್ಥೆಯನ್ನು 2016ರಲ್ಲಿ ಮುಚ್ಚಲಾಗಿತ್ತು. ಆದರೆ, ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಬಾಕಿ ಪಾವತಿ ಮಾಡಿಲ್ಲ. ಹೀಗಾಗಿ ಕಾರ್ಮಿಕರು ನ್ಯಾಯಾಲಯದ ಮೆಟ್ಟಲೇರಿದ್ದಾರೆ. ಕಂಪನಿ ತನ್ನ ಭೂಮಿ ಮಾರಾಟ ಮಾಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಕ್ಯಾಪಿಟಲ್ ಗೇನ್ ಟಾಕ್ಸ್ ಪಾವತಿಸಬೇಕಿದೆ. ಭಾರತೀಯ ಉಕ್ಕು ಪ್ರಾಧಿಕಾರ ಮತ್ತು ಸಿಐಎಸ್ಎಫ್ ಗೆ ಸುಮಾರು ₹20 ಕೋಟಿ ಬಾಕಿ ಪಾವತಿಸಬೇಕಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಕಂಪನಿಯ ಮಾಜಿ ಸಿಬ್ಬಂದಿ.

ಸಂಪುಟದಲ್ಲಿ ಕೈಗೊಂಡ ನಿರ್ಧಾರದ ಪ್ರಕಾರ, ಎಸ್‌ಪಿಎಲ್ ಗೆ ಸೇರಿದ 20000 ಚದರ ಮೀಟರ್ ಭೂಮಿಯೊಂದಿಗೆ ಘಟಕವನ್ನು ಕರ್ನಾಟಕ ಸರ್ಕಾರಕ್ಕೆ ವರ್ಗಾಹಿಸಲಾಗುತ್ತದೆ. ಹೊಸಪೇಟೆಯಲ್ಲಿರುವ 82 ಎಕರೆ ಭೂಮಿಯನ್ನು ಸಹ ಪ್ರತಿ ಎಕರೆಗೆ ₹66 ಲಕ್ಷ ದಂತೆ ರಾಜ್ಯ ಸರ್ಕಾರ ಖರೀದಿಸಿದ್ದು, ಅದನ್ನು ಕರ್ನಾಟಕ ಹೌಸಿಂಗ್ ಬೋರ್ಡ್ ಬಳಸಿಕೊಳ್ಳಲಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More