ಷೇರುಪೇಟೆ ರಕ್ತದೋಕುಳಿಗೆ ₹5 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ನಷ್ಟ! 

ಷೇರುಪೇಟೆ ರಕ್ತದೋಕುಳಿಕೆಗೆ ಹೂಡಿಕೆದಾರರು ನಲುಗಿದ್ದಾರೆ. ಮಾರುಕಟ್ಟೆ ಕುಸಿತ ನಿರೀಕ್ಷಿತವಾಗಿತ್ತು. ಆದರೆ ಈ ಪ್ರಮಾಣದ ಕುಸಿತವನ್ನು ಯಾರೂ ನೀರಿಕ್ಷಿಸಿರಲಿಲ್ಲ. ಒಂದೇ ದಿನ ಸೂಚ್ಯಂಕಗಳು ಶೇ.2-6ರಷ್ಟು ಕುಸಿಯುವುದು ಮಾರುಕಟ್ಟೆ ಕರಡಿಯ ಬಿಗಿ ಹಿಡಿತಕ್ಕೆ ಸಿಕ್ಕಿರುವ ಲಕ್ಷಣ

ವಿತ್ತ ಸಚಿವ ಜೇಟ್ಲಿ ಬಜೆಟ್ ಗೆ ವ್ಯತಿರಿಕ್ತವಾಗಿ ಸ್ಪಂದಿಸಿದ ಮಾರುಕಟ್ಟೆ ಕುಸಿತದಿಂದ ಒಟ್ಟಾರೆ ಷೇರುಪೇಟೆಯ ಮಾರುಕಟ್ಟೆ ಬಂಡವಾಳ ನಷ್ಟ ₹5ಲಕ್ಷ ಕೋಟಿಯಷ್ಟಾಗಿದೆ. ಗುರುವಾರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನೆರವಿಗೆ ಬಂದಿದ್ದ ಎಲ್ಐಸಿ ಶುಕ್ರವಾರ ನೆರವಿಗೆ ಬರಲಾಗಲಿಲ್ಲ. ಷೇರುಪೇಟೆಯಲ್ಲಿ ಮಾರಾಟ ಒತ್ತಡ ಎಷ್ಟು ತೀವ್ರವಾಗಿತ್ತೆಂದರೆ ಮಾರುಕಟ್ಟೆ ಕುಸಿತಕ್ಕೆ ತಡೆಯೇ ಇರಲಿಲ್ಲ. ದಿನವಿಡೀ ಚೇತರಿಕೆಗೆ ಅವಕಾಶವೇ ಸಿಗಲಿಲ್ಲ. ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಕುಸಿದವು. ಸಾಮಾನ್ಯವಾಗಿ ಮಾರಾಟ ಒತ್ತಡ ಹೆಚ್ಚಾದಾಗ ಮತ್ತೊಂದು ಕಡೆಯಿಂದ ಖರೀದಿ ಪ್ರಮಾಣ ಹೆಚ್ಚಳವಾಗುತ್ತದೆ. ಆದರೆ, ಶುಕ್ರವಾರ ಖರೀದಿಸುವವರೇ ಇಲ್ಲದೇ ಕುಸಿತದ ಪ್ರಮಾಣ ಹೆಚ್ಚಿತು.

ನಿಫ್ಟಿ, ಸೆನ್ಸೆಕ್ಸ್ ಶೇ.2.33 ರಷ್ಟು ಕುಸಿತ ಕಂಡಿವೆ. ಸೆನ್ಸೆಕ್ಸ್ 839 ಅಂಶ, ನಿಫ್ಟಿ 256 ಅಂಶ ಕುಸಿದವು. ಬ್ಯಾಂಕ್ ನಿಫ್ಟಿ 800 ಅಂಶ ಕುಸಿತ ದಾಖಲಿಸಿದೆ. ಸ್ಮಾಲ್ ಕ್ಯಾಪ್ ಸೂಚ್ಯಂಕವು 1000 ಅಂಶಗಳಷ್ಟು ಕುಸಿದಿತ್ತು. ಸೆನ್ಸೆಕ್ಸ್ 35000 ಮಟ್ಟ ಕಾಯ್ದುಕೊಂಡಿತು. ನಿಫ್ಟಿ 10750 ಮಟ್ಟಕಾಯ್ದುಕೊಂಡಿದೆ.

ತೀವ್ರ ಏರಿದ್ದ ಮಾರುಕಟ್ಟೆ ಬಜೆಟ್ ಗೆ ಮುನ್ನವೇ ಒಂದು ಹಂತದ ಕುಸಿತ ಕಾಣಬೇಕಿತ್ತು. ಆದರೆ, ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದರಿಂದಾಗಿ ಕುಸಿಯುವ ಬದಲು ಏರುಹಾದಿಯಲ್ಲಿ ಸಾಗಿತ್ತು. ಬಜೆಟ್ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆಗಳು ಹುಸಿಯಾದ ಕಾರಣ ತೀವ್ರ ಕುಸಿತವಾಗಿದೆ. ಮತ್ತಷ್ಟು ದಿನಗಳ ಕಾಲ ಮಾರುಕಟ್ಟೆ ಕುಸಿತದ ಹಾದಿಯಲ್ಲೇ ಸಾಗಲಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.

ಮಿಡ್ ಕ್ಯಾಪ್ ಸೂಚ್ಯಂಕದಲ್ಲಿ ವಹಿವಾಟಾಗುತ್ತಿದ್ದ ಮತ್ತು ಗರಿಷ್ಠ ಏರಿದ್ದ ಷೇರುಗಳು ತೀವ್ರವಾಗಿ ಕುಸಿದಿವೆ. ಅಲ್ಲದೇ ಸರ್ಕಾರ ಹೊಸದಾಗಿ ತಂದಿರುವ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ತೆರಿಗೆಯು ಮಾರ್ಚ್ 31ರವರೆಗೆ ಅನ್ವಯವಾಗುವುದಿಲ್ಲ. ಹೀಗಾಗಿ ಬಹುತೇಕ ಲಾಭ ಮಾಡಿಕೊಂಡಿರುವ ಷೇರುಗಳನ್ನು ಹೂಡಿಕೆದಾರರು ಮಾರಾಟ ಮಾಡಲು ಮುಂದಾಗಿದ್ದಾರೆ.

ನಿಫ್ಟಿ ಸ್ಮಾಲ್ ಕ್ಯಾಪ್ ಶೇ.5, ನಿಫ್ಟಿ ರಿಯಾಲ್ಟಿ ಶೇ.6.17, ನಿಫ್ಟಿ ಮಿಡ್ ಕ್ಯಾಪ್ ಶೇ. 5.31, ನಿಫ್ಟಿ ಮಿಡ್ ಕ್ಯಾಪ್100 ಶೇ.4.3, ನಿಫ್ಟಿ ಮೆಡಿಯಾ ಶೇ.3.5, ನಿಫ್ಟಿ ಪಿಎಸ್ಇ, ನಿಫ್ಟಿ ಪ್ರೈವೆಟ್ ಬ್ಯಾಂಕ್, ನಿಫ್ಟಿ ಫಾರ್ಮ, ನಿಫ್ಟಿ ಇನ್ಫ್ರಾ ಶೇ.2-3ರಷ್ಟು ಕುಸಿದಿವೆ. ನಿಫ್ಟಿ ಐಟಿ ಮಾತ್ರ ಏರುಹಾದಿಯಲ್ಲಿ ಸಾಗಿತು.

ಇದನ್ನೂ ಓದಿ : ಸ್ಯ್ಟಾಂಡರ್ಡ್ ಡಿಡಕ್ಷನ್ ಮೂಲಕ ಮೂಗಿಗೆ ತುಪ್ಪ ಸವರಿದರೇ ವಿತ್ತ ಸಚಿವ ಜೇಟ್ಲಿ?

ರುಪಾಯಿ ದುರ್ಬಲವಾಗಿದ್ದು ಡಾಲರ್ ವಿರುದ್ಧ 64 ರುಪಾಯಿ ನಿರ್ಣಾಯಕ ಮಟ್ಟಕ್ಕಿಂತ ಮೇಲೇರಿದ್ದು, 64.12ಕ್ಕೇರಿ ನಂತರ 64.01ಕ್ಕೆ ಸ್ಥಿರವಾಗಿದೆ. ಕಚ್ಚಾ ತೈಲವೂ ಶೇ.1.50ರಷ್ಟು ಏರಿದೆ. ದಿನದ ವಹಿವಾಟಿನಲ್ಲಿ ಇನ್ಫೊಎಡ್ಜ್ ಶೇ.3.50, ಟೆಕ್ ಮಹಿಂದ್ರ, ಎಸ್ಬಿಐ ಲೈಫ್, ಮ್ಯಾಕ್ಸ್ ಫಿನ್ ಸರ್ವೀಸ್, ಟಾಟಾ ಕನ್ಸಲ್ಟೆನ್ಸಿ, ಎಚ್ಸಿಎಲ್ ಟೆಕ್ನಾಲಜೀಸ್ ಶೇ.1-2ರಷ್ಟು ಏರಿವೆ. ಪಿಸಿ ಜುವೆಲ್ಲರ್ ಶೇ.50ರಷ್ಟು ಕುಸಿದು ಮತ್ತೆ ಚೇತರಿಸಿಕೊಂಡು, ಶೇ.30ರಷ್ಟು ಕುಸಿತದೊಂದಿಗೆ ಸ್ಥಿರವಾಗಿದೆ.. ವಾಕ್ರಂಗೀ ಶೇ.10ರಷ್ಟು ಕುಸಿದಿದೆ. ಕಮಿನ್ಸ್ ಇಂಡಿಯಾ, ಡಿಎಲ್ಎಫ್ ಶೇ.8ರಷ್ಟು ಕುಸಿದಿವೆ.

ಮಾರುಕಟ್ಟೆ ಶುಕ್ರವಾರ ಕುಸಿದಿರುವ ಪ್ರಮಾಣ ಗಮನಿಸಿದರೆ, ಇದರ ತೀವ್ರತೆ ಮುಂದಿನವಾರವೂ ಮುಂದುವರೆಯು ಸಾಧ್ಯತೆ ಇದೆ. ಸತತ ಏರಿದ್ದ ಮಾರುಕಟ್ಟೆ ಒಂದು ಹಂತದಲ್ಲಿ ಕುಸಿದು ಸ್ಥಿರವಾಗಬೇಕು. ಆದರೆ, ಯಾವ ಹಂತದಲ್ಲೂ ನಿರ್ಣಾಯಕವಾಗಿ ಕುಸಿಯಲಿಲ್ಲ. ಈಗ ಬಜೆಟ್ ಕಾರಣದಿಂದಾಗಿ ಕುಸಿಯುತ್ತಿದೆ. ಮಾರುಕಟ್ಟೆ ತಜ್ಞರು ಕನಿಷ್ಠ 5ರಿಂದ 10ರಷ್ಟು ಕುಸಿತ ಸಾಧ್ಯತೆಯನ್ನು ನಿರೀಕ್ಷಿಸುತ್ತಿದ್ದಾರೆ.

ನಾವು ಈಗಾಗಲೇ ಎಚ್ಚರಿಸಿದಂತೆ ಹೂಡಿಕೆದಾರರು ಆಯ್ದ ಷೇರುಗಳನ್ನು ಮಾತ್ರ ಖರೀದಿಸಬೇಕು. ಮಾರುಕಟ್ಟೆ ಸ್ಥಿರವಾಗುವವರೆಗೂ ಹೂಡಿಕೆದಾರರು ಮಾರುಕಟ್ಟೆಯಿಂದ ದೂರವಿದ್ದು ಏರಿಳಿತ ವೀಕ್ಷಿಸಬೇಕು. ಈಗ ಮಾರುಕಟ್ಟೆ ಕುಸಿದಿರುವುದನ್ನು ಉತ್ತಮ ಷೇರುಗಳ ಖರೀದಿಗೆ ಒಂದು ಅವಕಾಶ ಎಂದುಕೊಂಡು ಮಾರುಕಟ್ಟೆ ಸ್ಥಿರವಾದ ನಂತರ ಮರು ಹೂಡಿಕೆ ಮಾಡಬೇಕು.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More