10,500ರ ಗಡಿ ದಾಟಿದ ನಿಫ್ಟಿ, 290 ಅಂಶ ಏರಿದ ಸೆನ್ಸೆಕ್ಸ್, ಬಿಒಬಿ ಜಿಗಿತ

ದಿನವಿಡೀ ಏರಿಳಿತ ಕಂಡ ಮಾರುಕಟ್ಟೆ ಸತತ ಕುಸಿತದ ಹಾದಿಯಿಂದ ಏರುಹಾದಿಯತ್ತ ಮುಖ ಮಾಡಿದೆ. ಜಾಗತಿಕ ಮಾರುಕಟ್ಟೆಗಳು ಏರು ಹಾದಿಯಲ್ಲಿ ಸಾಗಿದ್ದರಿಂದ ದೇಶೀಯ ಪೇಟೆಯೂ ಅದೇ ಹಾದಿಯಲ್ಲಿ ಸಾಗಿದೆ. ಕುಸಿತದ ಹಾದಿ ಮುಗಿದಿಲ್ಲ. ಹೂಡಿಕೆದಾರರು ಎಚ್ಚರಿಕೆ ಹೆಜ್ಜೆ ಇಡಬೇಕು

ದಿನವಿಡೀ ಏರಿಳಿತ ಕಂಡ ಮಾರುಕಟ್ಟೆ ಏರುಹಾದಿಯಲ್ಲೇ ಸಾಗಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ಐಟಿ ಸೂಚ್ಯಂಕ ಹೊರತುಪಡಿಸಿದರೆ ಎಲ್ಲ ಸೂಚ್ಯಂಕಗಳೂ ಏರುಹಾದಿಯಲ್ಲೇ ಸಾಗಿವೆ. ಜಾಗತಿಕ ಮಾರುಕಟ್ಟೆಗಳು ಏರುಹಾದಿಯಲ್ಲಿ ಸಾಗಿದ್ದು, ದೇಶೀಯ ಪೇಟೆಯೂ ಅದೇ ಹಾದಿಯಲ್ಲಿ ಸಾಗಿದೆ. ಸದ್ಯಕ್ಕೆ ಮಾರುಕಟ್ಟೆ ಹಾದಿ ನಿರ್ದೇಶಿಸುವ ಯಾವುದೇ ದೇಶೀಯ ವಿದ್ಯಮಾನಗಳಿಲ್ಲ. ಹೀಗಾಗಿ ಜಾಗತಿಕ ವಿದ್ಯಮಾನಗಳು ಮಾರುಕಟ್ಟೆಯ ಹಾದಿಯನ್ನು ನಿರ್ದೇಶಿಸುತ್ತವೆ. ಅಮೆರಿಕದ ಫೆಡರಲ್ ರಿಸರ್ವ್ ಕೈಗೊಳ್ಳುವ ನಿರ್ಧಾರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತದಿಂದ ಪೇಟೆ ದಿಕ್ಸೂಚಿ ನಿರ್ಧಾರ ಆಗಲಿದೆ.

ಸದ್ಯಕ್ಕೆ ಈಗಾಗಲೇ ಫಲಿತಾಂಶ ಪ್ರಕಟಿಸಿರುವ ಮತ್ತು ಪ್ರಕಟಿಸಲಿರುವ ಕಂಪನಿಗಳ ಷೇರುಗಳು ಪೇಟೆ ವಹಿವಾಟಿನಲ್ಲಿ ನಿರ್ಣಾಯಕವಾಗಲಿವೆ. ಉತ್ತಮ ಫಲಿತಾಂಶ ಪಡೆದ ಷೇರುಗಳು ಖರೀದಿ ಮತ್ತು ಕಳಪೆ ಫಲಿತಾಂಶ ಪ್ರಕಟಿಸಿದ ಕಂಪನಿಗಳ ಷೇರುಗಳ ಮಾರಾಟ ಒತ್ತಡವು ಪೇಟೆಯ ಹಾದಿಯನ್ನು ನಿರ್ಧರಿಸಬಹುದು.

ಆದರೆ, ಸೋಮವಾರದ ಏರಿಕೆಯ ನಂತರವೂ ಮಾರುಕಟ್ಟೆ ಕುಸಿತದ ಭೀತಿಯಿಂದ ದೂರವಾಗಿಲ್ಲ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂಪಡೆಯುತ್ತಿದ್ದಾರೆ. ಗರಿಷ್ಠ ಪ್ರಮಾಣದಲ್ಲಿ ಹಿಂಪಡೆಯಲು ಪ್ರಾರಂಭಿಸಿದರೆ ಆರಂಭದಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಖರೀದಿಸಿ ಮಾರುಕಟ್ಟೆ ಕುಸಿಯುವುದನ್ನು ತಡೆಯಬಹುದು. ಆದರೆ, ಒಂದು ಹಂತ ದಾಟಿದರೆ, ದೇಶೀಯ ಹೂಡಿಕೆದಾರರಿಂದಲೂ ಮಾರುಕಟ್ಟೆ ಕುಸಿತವನ್ನು ತಡೆಯಲು ಸಾಧ್ಯವಾಗದು. ಹೀಗಾಗಿ ಹೂಡಿಕೆ ಮಾಡುವವರು ಎಚ್ಚರಿಕೆಯಿಂದ ಇರಬೇಕು.

ದಿನದ ಆರಂಭದಲ್ಲಿ 200 ಅಂಶ ಏರಿದ್ದ ಸೆನ್ಸೆಕ್ಸ್ ಅಲ್ಲಿಂದ ಏರಿಳಿಯುತ್ತಲೇ ವಹಿವಾಟು ನಡೆಸಿತು. ದಿನದ ಅಂತ್ಯಕ್ಕೆ 294 ಅಂಶ ಏರಿಕೆಯೊಂದಿಗೆ 34300 ಕ್ಕೆ ಅಂತ್ಯಗೊಂಡಿತು. ಇದು ಸೆನ್ಸೆಕ್ಸ್ ಗೆ ನಿರ್ಣಾಯಕ ಮಟ್ಟ. ಈ ಮಟ್ಟ ಕಾಯ್ದುಕೊಂಡರೆ ಏರುಹಾದಿ ಸುಗಮ ಆಗಬಹುದು. 84 ಅಂಶ ಏರಿದ ನಿಫ್ಟಿ 10539 ಅಂಶಕ್ಕೆ ಅಂತ್ಯಗೊಂಡಿತು.

ನಿಫ್ಟಿ ಸ್ಮಾಲ್ ಕ್ಯಾಪ್ ಶೇ.1.80 ರಷ್ಟು ಜಿಗಿಯಿತು. ನಿಫ್ಟಿ ರಿಯಾಲ್ಟಿ, ನಿಫ್ಟಿ ಮಿಡ್ ಕ್ಯಾಪ್ 50, ನಿಫ್ಟಿ ನೆಕ್ಸ್ಟ್ 50, ನಿಫ್ಟಿ ಫ್ರೀ ಪ್ಲೋಟ್ ಮಿಡ್ ಕ್ಯಾಪ್ 100, ನಿಫ್ಟಿ ಎನರ್ಜಿ, ನಿಫ್ಟಿ ಇನ್ಫ್ರಾ, ನಿಫ್ಟಿ ಫಾರ್ಮ, ನಿಫ್ಟಿ ಮಿಡ್ ಕ್ಯಾಪ್ ಲಿಕ್ವಿಡ್ 15, ನಿಫ್ಟಿ ಆಟೋ, ನಿಫ್ಟಿ ಮೆಡಿಯಾ, ನಿಪ್ಟಿ ಪ್ರೈವೆಟ್ ಬ್ಯಾಂಕ್, ನಿಫ್ಟಿ ಕಮಾಡಿಟೀಸ್, ನಿಫ್ಟಿ ಮೆಟಲ್ ಶೇ.1ರಿಂದ ಶೇ.1.50ರಷ್ಟು ಏರಿದವು. ಫಸ್ಟ್ ಸೋರ್ಸ್ ಸಲುಷನ್, ಜೆಕೆ ಟೈರ್, ಬಿಇಎಂಎಲ್, ಬಾಂಬೆ ಬರ್ಮಾ, ಎಚ್ಡಿಐಎಲ್, ವೆಲ್ಸ್ ಪನ್, ಮಹಾನಗರ ಗ್ಯಾಸ್, ಜಸ್ಟ್ ಡಯಲ್, ರಾಡಿಕೋ ಖೈತಾನ್, ಇಂಡಿಯನ್ ಬ್ಯಾಂಕ್ ಶೇ.5ರಿಂದ 8ರಷ್ಟು ಏರಿವೆ. ಪವರ್ ಗ್ರಿಡ್, ರಿಲಯನ್ಸ್ ಇನ್ಫ್ರಾ, ಟಾಟಾ ಪವರ್, ಒಎನ್ಜಿಸಿ, ಎನ್ಟಿಪಿಸಿ, ಗೇಲ್, ಇಂಡಿಯನ್ ಆಯಿಲ್ ಕಾರ್ಪೊರೆಷನ್ ಶೇ.1ರಿಂದ 3ರಷ್ಟು ಏರಿದವು.

ಪೇಟೆಯಲ್ಲಿ ಬೆಳಗ್ಗೆ ಆಗಿದ್ದೇನು?

ಕಳೆದ ವಾರ ತೀವ್ರ ಕುಸಿದಿದ್ದ ಷೇರುಪೇಟೆ ವಾರದ ಮೊದಲ ದಿನ ಚೇತರಿಸಿಕೊಂಡಿದೆ. ದಿನದ ಆರಂಭದ ವಹಿವಾಟಿನಲ್ಲಿ 200 ಅಂಶ ಏರಿದ್ದ ಸೆನ್ಸೆಕ್ಸ್ ಏರಿಳಿತದ ವಹಿವಾಟು ನಡೆಸುತ್ತಿದೆ. ನಿಫ್ಟಿ, ಬ್ಯಾಂಕ್ ನಿಫ್ಟಿ ಸಹ ಏರುಹಾದಿಯಲ್ಲಿ ಸಾಗಿವೆ. ಸೆನ್ಸೆಕ್ಸ್ 34221 ಅಂಶದೊಂದಿಗೆ ವಹಿವಾಟು ನಡೆಸುತ್ತಿದೆ. ನಿಫ್ಟಿ 10500 ಮಟ್ಟ ಕಾಯ್ದುಕೊಂಡು 10515 ಅಂಶದೊಂದಗೆ ವಹಿವಾಟಾಗುತ್ತಿದೆ.

ನಿಫ್ಟಿ ಐಟಿ ಸೂಚ್ಯಂಕ ಹೊರತು ಪಡಿಸಿ ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಏರುಹಾದಿಯಲ್ಲಿವೆ. ನಿಫ್ಟಿ ರಿಯಾಲ್ಟಿ ಗರಿಷ್ಠ ಎಂದರೆ ಶೇ.2.18ರಷ್ಟು ಏರಿದೆ. ನಿಫ್ಟಿ ಫ್ರೀ ಪ್ಲೋಟ್ ಸ್ಮಾಲ್ ಕ್ಯಾಪ್ ಶೇ.1.91ರಷ್ಟು, ನಿಫ್ಟಿ ಮಿಟ್ ಡ್ಯಾಪ್, ನಿಫ್ಟಿ ನಿಫ್ಟಿ ನೆಕ್ಸ್ಟ್ 50 ಶೇ.1.60ರಷ್ಟು ಏರಿವೆ. ನಿಫ್ಟಿ ಫಾರ್ಮ, ನಿಫ್ಟಿ ಮೆಟಲ್, ನಿಫ್ಟಿ ಮಿಡ್ ಕ್ಯಾಪ್ ಲಿಕ್ವಿಡ್, ನಿಫ್ಟಿ ಇನ್ಫ್ರಾ, ನಿಫ್ಟಿ ಆಟೋ, ನಿಫ್ಟಿ ಎಂಎನ್ಸಿ, ನಿಫ್ಟಿ ಕಮಾಡಿಟೀಸ್ ಶೇ.1ರಿಂದ 1.50ರಷ್ಟು ಏರಿದೆ.

ರಿಯಾಲ್ಟಿ ವಲಯದ ಎಚ್ಡಿಐಲ್, ಇಂಡಿಯಾ ಬುಲ್ ರಿಯಲ್ ಎಸ್ಟೇಟ್, ಡೆಲ್ಟಾ ಕಾರ್ಪ್ ಪ್ರೆಸ್ಟೀಜ್ ಎಸ್ಟೇಟ್, ಡಿಎಲ್ಎಫ್, ಒಬೆರಾಯ್ ರಿಯಾಲ್ಟಿ ಶೇ.2ರಿಂದ 5ರಷ್ಟು ಏರಿವೆ. ಫಾರ್ಮಾ ವಲಯದ ಕ್ಯಾಡಿಲಾ ಹೆಲ್ತ್ ಶೇ.3ರಷ್ಟು ಏರಿದೆ. ಪಿರಮಲ್ ಎಂಟರ್ ಪ್ರೈಸಸ್, ಲುಪಿನ್, ಸನ್ ಫಾರ್ಮ, ಡಿವಿಸ್ ಲ್ಯಾಬ್ ಡಾ. ರೆಡ್ಡಿ, ಗ್ಲೆನ್ ಮಾರ್ಕ್ ಶೇ.1ರಿಂದ 2ರಷ್ಟು ಏರಿವೆ.

ಉತ್ತಮ ಫಲಿತಾಂಶ ಪ್ರಕಟಿಸಿರುವ ಅಮರ್ ರಾಜಾ ಬ್ಯಾಟರಿ ಶೇ.6ರಷ್ಟು ಜಿಗಿದಿದೆ. ಮದರ್ ಸನ್ ಸುಮಿ, ಎಕ್ಸೈಡ್ ಇಂಡಸ್ಟ್ರೀಸ್, ಎಂಆರ್ಎಫ್, ಟಾಟಾ ಮೋಟಾರ್ಸ್, ಹಿರೋ ಮೊಟೊ ಕಾರ್ಪ್, ಮಾರುತಿ ಸುಜುಕಿ, ಅಪಲೊ ಟೈರ್, ಭಾರತ್ ಫೋರ್ಜ್ ಶೇ.1ರಿಂದ 3ರಷ್ಟು ಏರಿವೆ. ಉತ್ತಮ ಫಲಿತಾಂಶ ಪ್ರಕಟಿಸಿರುವ ಐಡಿಬಿಐ ಶೇ.8, ಬ್ಯಾಂಕ್ ಆಫ್ ಬರೋಡ ಶೇ. 7, ಪಿಎನ್ಬಿ ಶೇ.3.50ರಷ್ಟು ಏರಿವೆ. ಎಸ್ಪಿಐ ದಿನದ ಆರಂಭದಲ್ಲಿ ಶೇ.3ರಷ್ಟು ಕುಸಿದು ಕೊಂಚ ಚೇತರಿಸಿಕೊಂಡಿದೆ.

ಇದನ್ನೂ ಓದಿ : ಎಲ್ಐಸಿಯ ಡೈಲಿ ಎಸ್ಐಪಿಯಲ್ಲಿ ಹೂಡಿಕೆ ಮಾಡುವ ಮುನ್ನ ಈ ಮಾಹಿತಿ ತಿಳಿಯಿರಿ

ಚಿನಿವಾರ ಪೇಟೆಯಲ್ಲಿ ಬೆಳ್ಳಿ ₹425 ರುಪಾಯಿ ಏರಿದ್ದು, ಕೆಜಿಗೆ ₹37800ರ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಚಿನ್ನ ₹121 ರುಪಾಯಿ ಏರಿದ್ದು ₹30000 ಗಡಿದಾಟಿದೆ. ಕಳೆದವಾರವಿಡೀ ಕುಸಿತದ ಹಾದಿಯಲ್ಲಿದ್ದ ಕಚ್ಚಾ ತೈಲ ಮತ್ತೆ ಏರುಹಾದಿಯಲ್ಲಿದೆ. ಶೇ.1.20ರಷ್ಟು ಏರಿಕೆ ದಾಖಲಿಸಿದೆ. ಡಾಲರ್ ವಿರುದ್ಧ ರುಪಾಯಿ 64.27ರಲ್ಲಿ ವಹಿವಾಟಾಗುತ್ತಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More