ಫೋರ್ಬ್ಸ್ ಪಟ್ಟಿಯಿಂದ ನೀರವ್ ಮೋದಿ ಔಟ್, ಅಮೆಜಾನ್ ಸ್ಥಾಪಕ ಜೆಫ್ ಅಗ್ರಸ್ಥಾನ

ಫೋರ್ಬ್ಸ್ ಬಿಡುಗಡೆ ಮಾಡಿರುವ 2018ನೇ ಸಾಲಿನ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಭಾರತದ 119 ಮಂದಿ ಸ್ಥಾನ ಪಡೆದಿದ್ದಾರೆ. ಭಾರತದ ಅತಿ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 40.1 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ (₹2.6 ಲಕ್ಷ ಕೋಟಿ) 19ನೇ ಸ್ಥಾನದಲ್ಲಿದ್ದಾರೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ ₹12800 ಕೋಟಿ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಫೋರ್ಬ್ಸ್ ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾನೆ. ದೇಶಬಿಟ್ಟು ಪರಾರಿಯಾಗಿರುವ ನೀರವ್ ಮೋದಿ 2017ನೇ ಸಾಲಿನಲ್ಲಿ 11,695 ಕೋಟಿ ಸಂಪತ್ತಿನೊಂದಿಗೆ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿದ್ದ.

ಅಮೆಜಾನ್ ಸ್ಥಾಪಕ ಮತ್ತು ಮುಖ್ಯಸ್ಥ ಜೆಫ್ ಬಿಜೋಸ್ 2018ನೇ ಸಾಲಿನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೇ 100 ಬಿಲಿಯನ್ ಡಾಲರ್ ಮೀರಿ ಸಂಪತ್ತು ಹೊಂದಿರುವ ವಿಶ್ವದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಜೆಫ್ ಬಿಜೋಸ್ ಸಂಪತ್ತಿನ ಮೌಲ್ಯ ಈಗ 112 ಬಿಲಿಯನ್ ಡಾಲರ್ ನಷ್ಟಿದೆ. ರೂಪಾಯಿ ಲೆಕ್ಕದಲ್ಲಿ ₹7.28 ಲಕ್ಷ ಕೋಟಿ. ಅಂದರೆ ನಮ್ಮ ಕರ್ನಾಟಕ ರಾಜ್ಯದ ಕಳೆದ ನಾಲ್ಕು ವರ್ಷಗಳ ಒಟ್ಟು ಬಜೆಟ್ಟಿಗೆ ಸಮ. ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ನ ಮೂರನೇ ಒಂದರಷ್ಟು!

ಫೋರ್ಬ್ಸ್ ಬಿಡುಗಡೆ ಮಾಡಿರುವ 2018ನೇ ಸಾಲಿನ ಶ್ರೀಮಂತರ ಪಟ್ಟಿಯಲ್ಲಿ ಭಾರತದ 119 ಮಂದಿ ಸ್ಥಾನ ಪಡೆದಿದ್ದಾರೆ. ಭಾರತದ ಅತಿ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 40.1 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ (₹2.6 ಲಕ್ಷ ಕೋಟಿ) 19ನೇ ಸ್ಥಾನದಲ್ಲಿದ್ದಾರೆ. ಅಜೀಂ ಪ್ರೇಮ್‌ಜಿ 58ನೇ ಸ್ಥಾನದಲ್ಲಿದ್ದಾರೆ. ಲಕ್ಷ್ಮಿ ಮಿತ್ತಲ್, ಶಿವ್ ನಾಡರ್, ದಿಲಿಪ್ ಸಾಂಘ್ವಿ ಫೋರ್ಬ್ಸ್ ಪಟ್ಟಿಯಲ್ಲಿರುವ ಭಾರತದ ಮೊದಲ ಐವರು. 2017ರಲ್ಲಿ ಭಾರತದ 101 ಮಂದಿ ಬಿಲಿಯನೇರ್ಸ್ ಪಟ್ಟಿಯಲ್ಲಿದ್ದರು. ಈ ಸಂಖ್ಯೆ ಈಗ 18ರಷ್ಟು ಹೆಚ್ಚಿದೆ.

ಫೋರ್ಬ್ಸ್ ಪಟ್ಟಿಯಲ್ಲಿ 2208 ಬಿಲಿಯನೇರ್‌ಗಳಿದ್ದಾರೆ. ಇವರೆಲ್ಲರ ಒಟ್ಟು ಸಂಪತ್ತಿನ ಮೌಲ್ಯ 9.1 ಟ್ರಿಲಿಯನ್ ಡಾಲರ್ ಅಂದರೆ ₹591 ಲಕ್ಷ ಕೋಟಿ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಲೇ ಇದ್ದಾರೆ, ಶ್ರೀಮಂತರ ಮತ್ತು ಇಲ್ಲದವರ ನಡುವಿನ ಅಂತರ ಮತ್ತಷ್ಟು ಹಿಗ್ಗುತ್ತಲೇ ಇದೆ ಎಂದು ಫೋರ್ಬ್ಸ್ ಅಸಿಸ್ಟಂಟ್ ಮ್ಯಾನೆಜಿಂಗ್ ಎಡಿಟರ್ ಗಳಾದ ಲೂಯಿಸ ಕ್ರಾಲ್ ಮತ್ತು ಕೆರ್ರಿ ಡಾಲನ್ ಹೇಳಿದ್ದಾರೆ.

ಇದನ್ನೂ ಓದಿ : ಫೋರ್ಬ್ಸ್ ಪಟ್ಟಿಯಲ್ಲಿ ಹೀನಾ ಸಿಧು, ಬುಮ್ರಾ ಸೇರಿ ನಾಲ್ವರು ಅಥ್ಲೀಟ್‌ಗಳು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಟ್ಟು ಸಂಪತ್ತು 3.1 ಬಿಲಿಯನ್ ಡಾಲರ್, ಇದು ಕಳೆದ ವರ್ಷದ ಸಂಪತ್ತಿಗೆ ಹೋಲಿಸಿದರೆ 400 ಮಿಲಿಯನ್ ಡಾಲರ್ ಕಡಮೆ ಇದೆ. ಕಳೆದ ವರ್ಷ 544ನೇ ಸ್ಥಾನದಲ್ಲಿದ್ದ ಟ್ರಂಪ್ ಈಗ 766 ಸ್ಥಾನಕ್ಕಿಳಿದಿದ್ದಾರೆ. ಕಳೆದ 24ವರ್ಷಗಳ ಪೈಕಿ 18 ವರ್ಷ ಅಗ್ರಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಈಗ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಸಂಪತ್ತಿನ ಮೌಲ್ಯ 90 ಬಿಲಿಯನ್ ಡಾಲರ್.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More