ಫೆಬ್ರವರಿಯಲ್ಲಿ ಶೇ.4.4ಕ್ಕೆ ತಗ್ಗಿದ ಗ್ರಾಹಕರ ದರ ಹಣದುಬ್ಬರ, ಇಳಿದ ಆಹಾರ ಪದಾರ್ಥ

ಫೆಬ್ರವರಿ ತಿಂಗಳ ಚಿಲ್ಲರೆದರ (ಗ್ರಾಹಕ ದರ) ಹಣದುಬ್ಬರ ಶೇ.4.4ಕ್ಕೆ ತಗ್ಗಿದೆ. ಜನವರಿಯಲ್ಲಿ ಶೇ.5.7ರಷ್ಟಿತ್ತು. ಮುಖ್ಯವಾಗಿ ಆಹಾರ ಪದಾರ್ಥಗಳು, ಇಂಧನ ಮತ್ತು ಗೃಹ ಬಾಡಿಗೆ ಹೆಚ್ಚಿದ್ದರಿಂದ ಜನವರಿಯಲ್ಲಿ ಶೇ.5ರ ಗಡಿ ದಾಟಿತ್ತು. ಏರಿದ್ದ ದರಗಳು ಫೆಬ್ರವರಿಯಲ್ಲಿ ನಿಧಾನವಾಗಿ ತಗ್ಗಿವೆ. ಆಹಾರ ಪದಾರ್ಥ ಇಳಿದಿವೆ

ಡಿಸೆಂಬರ್ ಮತ್ತು ಜನವರಿಯಲ್ಲಿ ಶೇ.5ರ ಗಡಿ ದಾಟಿದ್ದ ಚಿಲ್ಲರೆ ದರ (ಗ್ರಾಹಕ ದರ) ಹಣದುಬ್ಬರ ಫೆಬ್ರವರಿಯಲ್ಲಿ ಶೇ.4.4ಕ್ಕೆ ತಗ್ಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದ್ದ ಪ್ರಮಾಣಕ್ಕಿಂತಲೂ ಕಡಮೆ ಇದೆ.

ಹಿಂದಿನ ಎರಡು ತಿಂಗಳಲ್ಲಿ ವಸತಿ, ಇಂಧನ ಮತ್ತು ಆಹಾರ ಪದಾರ್ಥಗಳ ದರ ಏರಿಕೆಯಿಂದಾಗಿ ಹಣದುಬ್ಬರ ಶೇ.5ರ ಗಡಿದಾಟಿತ್ತು. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿ ಮಾಡಿರುವ ಗರಿಷ್ಠ ಹಣದುಬ್ಬರ ಶೇ.6ರ ಸಮೀಪದಲ್ಲಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಬಡ್ಡಿದರ ನಿಗಿದ ಮಾಡಲು ಚಿಲ್ಲರೆ ದರ ಹಣದುಬ್ಬರವನ್ನು ಆಧಾರವಾಗಿ ಪರಿಗಣಿಸುತ್ತದೆ.

ಫೆಬ್ರವರಿ ತಿಂಗಳಲ್ಲಿ ಆಹಾರ ಪದಾರ್ಥಗಳ ಹಣದುಬ್ಬರ ಶೇ.3.26ರಷ್ಟಕ್ಕೆ ಇಳಿದಿದೆ. ಜನವರಿಯಲ್ಲಿ ಇದು ಶೇ.4.58ರಷ್ಟಿತ್ತು. ವಸತಿ ಹಣದುಬ್ಬರವು 8.28ಕ್ಕೆ ತಗ್ಗಿದೆ. ಜನವರಿಯಲ್ಲಿ ಇದು ಶೇ.8.33ರಷ್ಟಿತ್ತು. ಇದೇ ವೇಳೆ ಜನವರಿಯಲ್ಲಿ 26.97ರಷ್ಟಿದ್ದ ತರಕಾರಿ ದರಗಳು ಶೇ.17.57ಕ್ಕೆ ಇಳಿದಿವೆ.

ಕಳೆದ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿಯು ಮಾರ್ಚ್ ಅಂತ್ಯದ ತ್ರೈಮಾಸಿಕದ ಹಣದುಬ್ಬರವು, ವಸತಿಯೂ ಸೇರಿದಂತೆ ಶೇ.5.1ರಷ್ಟಾಗುತ್ತದೆ ಎಂದು ಅಂದಾಜಿಸಿತ್ತು

ಡಿಸೆಂಬರ್‌ನಲ್ಲಿ ನಡೆದ ದ್ವೈಮಾಸಿಕ ಹಣಕಾಸು ಸಮಿತಿ ಸಭೆಯಲ್ಲಿ ಆರ್‌ಬಿಐ 2017-18ನೇ ಸಾಲಿನ ಉತ್ತರಾರ್ಧದಲ್ಲಿ ವಸತಿ ಹಣದುಬ್ಬರವೂ ಸೇರಿದಂತೆ ಶೇ.4.3-4.7ರಷ್ಟಾಗಲಿದೆ ಎಂದು ಅಂದಾಜಿಸಿತ್ತು. ಆದರೆ, ನವೆಂಬರ್ ತಿಂಗಳಲ್ಲಿ ಆಹಾರ ಪದಾರ್ಥಗಳ ದರ ತ್ವರಿತ ಏರಿಕೆಯಿಂದಾಗಿ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಹಣದುಬ್ಬರ ಶೇ.4.6ಕ್ಕೆ ಏರಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್ 2018-19ನೇ ಸಾಲಿನಲ್ಲಿ ಒಟ್ಟಾರೆ ಹಣದುಬ್ಬರವು ಶೇ.5.1-5.6ರ ಆಜುಬಾಜಿನಲ್ಲಿ, ಏಪ್ರಿಲ್-ಸೆಪ್ಟೆಂಬರ್ ಹಣದುಬ್ಬರ ಶೇ.4.5-4.6ರ ಆಜುಬಾಜಿನಲ್ಲಿ ಇರಲಿದೆ ಎಂದು ಅಂದಾಜಿಸಿದೆ.

ಹಣದುಬ್ಬರ ಏರಿದರೆ ಬ್ಯಾಂಕ್ ಬಡ್ಡಿದರಗಳ ಏರುತ್ತವೆ. ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಬಡ್ಡಿದರಗಳನ್ನು ಏರಿಸುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಬಂದಾಗ ಬಡ್ಡಿದರ ತಗ್ಗಿಸುತ್ತದೆ. ಹಣದುಬ್ಬರ ತಗ್ಗಿದ್ದರಿಂದಾಗಿ ಇದುವರೆಗೂ ಬಡ್ಡಿದರ ತಗ್ಗಿಸಿಕೊಂಡು ಬಂದಿದ್ದ ಆರ್‌ಬಿಐ, ಮುಂದಿನ ಹಣಕಾಸು ಪರಾಮರ್ಶೆ ಬಡ್ಡಿದರ ಏರಿಸುವ ಸಾಧ್ಯತೆ ಇದೆ. 2017ರ ಮಾರ್ಚ್ ತಿಂಗಳಲ್ಲಿ 3.8ರಷ್ಟಿದ್ದ ಹಣದುಬ್ಬರ ನಂತರ ಜೂನ್ ತಿಂಗಳಲ್ಲಿ ಶೇ.1.54ಕ್ಕೆ ತಗ್ಗಿತ್ತು. ನಂತರ ನಿಧಾನಗತಿಯಲ್ಲಿ ಏರುತ್ತ ಬಂದು ಡಿಸೆಂಬರ್-ಜನವರಿಯಲ್ಲಿ ಶೇ.5ರ ಗಡಿ ದಾಟಿತ್ತು.

ಇದನ್ನೂ ಓದಿ : ಆರ್‌ಬಿಐ ಬಡ್ಡಿದರ ಏರಿಸೋ ಸಾಧ್ಯತೆ ಹೆಚ್ಚಿದೆ, ಅದಕ್ಕೆ ಕಾರಣ ಏನು ನಿಮಗೆ ಗೊತ್ತೇ?

ಹಣದುಬ್ಬರ ಏರಿಕೆಗೆ ಪ್ರಮುಖವಾಗಿ ಇಂಧನ ಮತ್ತು ಆಹಾರ ಪದಾರ್ಥಗಳ ಏರಿಕೆ ಕಾರಣವಾಗಿದೆ. ಒಂದು ಹಂತದಲ್ಲಿ ಆಹಾರ ಪರಾರ್ಥಗಳ ದರ ಇಳಿದಿದ್ದರೂ ಇಂಧನ ಮತ್ತು ಪೂರಕ ದರಗಳು ಮಾತ್ರ ಏರುತ್ತಲೇ ಇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಮಧ್ಯಮಾವಧಿಯಲ್ಲಿ ಏರುಹಾದಿಯಲ್ಲೇ ಸಾಗುವ ನಿರೀಕ್ಷೆ ಇದ್ದು, ಹಣದುಬ್ಬರವೂ ಏರಲಿದೆ ಎಂಬ ಅಂದಾಜು ಮಾಡಲಾಗಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More