ಸರ್ಕಾರಿ ಬ್ಯಾಂಕ್ ಷೇರುಗಳ ಜಿಗಿತ; ಏರು ಹಾದಿಯಲ್ಲಿ ಸಾಗಿರುವ ಪೇಟೆ

ಶುಭಾರಂಭದೊಂದಿಗೆ ವಹಿವಾಟು ಆರಂಭಿಸಿದ್ದ ಷೇರುಪೇಟೆ ವಾರದ ಎರಡನೇ ದಿನವಾದ ಮಂಗಳವಾರವೂ ಏರುಹಾದಿ ಕಾಯ್ದುಕೊಂಡಿದೆ. ಹಣದುಬ್ಬರ ತಗ್ಗಿರುವುದು, ಕೈಗಾರಿಕಾ ಉತ್ಪನ್ನ ಸೂಚ್ಯಂಕ ಏರಿರುವುದು ಪೇಟೆ ಚೇತರಿಕೆಗೆ ಕಾರಣವಾಗಿದೆ. ಸತತ ಕುಸಿದಿದ್ದ ಪಿಎಸ್ ಬ್ಯಾಂಕ್ ಷೇರುಗಳು ಜಿಗಿದಿವೆ

ದಿನದ ಆರಂಭದಲ್ಲಿ ಕೊಂಚ ಇಳಿದಿದ್ದ ಸೆನ್ಸೆಕ್ಸ್, ನಿಫ್ಟಿ ಕೆಲಹೊತ್ತಿನಲ್ಲೇ ಏರುಹಾದಿಯಲ್ಲಿ ಸಾಗಿವೆ. ಸೋಮವಾರದ ಗರಿಷ್ಠ ಏರಿಕೆಯ ಲಾಭ ನಗದೀಕರಣಕ್ಕೆ ಮುಂದಾದ ಪರಿಣಾಮ ಕೊಂಚ ಇಳಿದ ಸೂಚ್ಯಂಕಗಳು ಖರೀದಿ ಒತ್ತಡದಿಂದ ತ್ವರಿತವಾಗಿ ಜಿಗಿದಿವೆ. ಇಡೀ ಮಾರುಕಟ್ಟೆಯನ್ನು ಏರುಹಾದಿಯಲ್ಲಿ ನಡೆಸಿದ್ದು ಸಾರ್ವಜನಿಕ ವಲಯದ ಬ್ಯಾಂಕುಗಳು. ನಿಫ್ಟಿ ಪಿಎಸ್ ಬ್ಯಾಂಕುಗಳ ಸೂಚ್ಯಂಕ ಶೇ.3ರಷ್ಟು ಜಿಗಿಯಿತು.

ಸೆನ್ಸೆಕ್ಸ್ 110 ಅಂಶ ಏರಿ 33400ರ ಮಟ್ಟ ಕಾಯ್ದುಕೊಂಡಿದ್ದರೆ, ನಿಫ್ಟಿ 10450ರ ಮಟ್ಟ ಕಾಯ್ದುಕೊಂಡಿದೆ. ನಿಫ್ಟಿ ಬ್ಯಾಂಕ್ 260 ಅಂಶ ಏರಿ 25000 ರ ಸಮೀಪಕ್ಕೆ ಜಿಗಿದಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಫಿನ್ ಸರ್ವೀಸ್, ನಿಫ್ಟಿ ಮಿಡ್ ಕ್ಯಾಪ್ 50, ನಿಫ್ಟಿ ಪ್ರೈವೆಟ್ ಬ್ಯಾಂಕ್, ನಿಫ್ಟಿ ಫಾರ್ಮ, ನಿಫ್ಟಿ ಪಿಎಸ್ಇ, ನಿಫ್ಟಿ ರಿಯಾಲ್ಟಿ ಶೇ.0.70-1.50ರಷ್ಟು ಏರಿವೆ. ಹಣದುಬ್ಬರ ತಗ್ಗಿಸುವುದು ಮತ್ತು ಕೈಗಾರಿಕಾ ಉತ್ಪನ್ನ ಸೂಚ್ಯಂಕ ಏರಿರುವುದು ಸಕಾರಾತ್ಮಕ ಬೆಳವಣಿಗೆ, ಹೀಗಾಗಿ ಮಾರುಕಟ್ಟೆ ಮತ್ತಷ್ಟು ಏರುಹಾದಿಯಲ್ಲಿ ಸಾಗಬಹುದು.

ಸತತ ಏರಿದ್ದ ನಿಫ್ಟಿ ಐಟಿ ಸೂಚ್ಯಂಕ ಶೇ.1ರಷ್ಟು ಕುಸಿದಿದೆ. ಮೈಂಡ್ ಟ್ರೀ, ಒರಾಕಲ್ ಫಿನ್ ಸರ್ವೀಸ್, ಎಚ್ಸಿಎಲ್ ಟೆಕ್ , ಇನ್ಫಿಬೀಮ್ ಕಾರ್ಪೊರೆಷನ್, ಟಾಟಾ ಇಲಾಕ್ಸಿ ಶೇ.1-1.50ರಷ್ಟು ಕುಸಿದಿವೆ. ಟೆಕ್ ಮಹಿಂದ್ರ, ಕೆಪಿಐಟಿ ಟೆಕ್ನಾಲಜೀಸ್ ಶೇ.1ರಷ್ಟು ಏರಿವೆ. ಆದರೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಷೇರುಗಳ ಬ್ಲಾಕ್ ಡೀಲ್ ನಡೆದ ಪರಿಣಾಮ ಶೇ.5ರಷ್ಟು ಕುಸಿದಿದೆ. ಹೊಲ್ಡಿಂಗ್ ಕಂಪನಿ ಆಗಿರುವ ಟಾಟಾ ಸನ್ಸ್ 40000 ಕೋಟಿ ಮೌಲ್ಯದ ಟಿಸಿಎಸ್ ಷೇರುಗಳನ್ನು ಮಾರಾಟ ಮಾಡಿ ತನ್ನ ಟಾಟಾ ಟೆಲಿಸರ್ವೀಸ್ ಸಾಲವನ್ನು ತೀರಿಸಲು ಮುಂದಾಗಿದೆ. ಹೀಗಾಗಿ ಟಿಸಿಎಸ್ ಶೇ.5ರಷ್ಟು ಕುಸಿದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಹೊರ ಬಿದ್ದ ನಂತರ ತ್ವರಿತವಾಗಿ ಕುಸಿದಿದ್ದ ಸಾರ್ವಜನಿಕ ವಲಯದ ಷೇರುಗಳು ವರ್ಷದ ಕನಿಷ್ಠ ಮಟ್ಟ ಮುಟ್ಟಿದ ಹಿನ್ನೆಲೆಯಲ್ಲಿ ಮರುಹೂಡಿಕೆ ಆರಂಭವಾಗಿದ್ದು, ಮಂಗಳವಾರ ತೀವ್ರ ಖರೀದಿ ಒತ್ತಡ ಕಂಡುಬಂತು. 7000 ಕೋಟಿ ನಿಷ್ಕ್ರಿಯ ಸಾಲ ವಸೂಲು ಮಾಡಿಕೊಂಡಿರುವ ಬ್ಯಾಂಕ್ ಆಫ್ ಇಂಡಿಯಾ ಶೇ.10ರಷ್ಟು ಜಿಗಿದಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ಈ ಬ್ಯಾಂಕ್ 2000 ಕೋಟಿ ನಿಷ್ಕ್ರಿಯ ಸಾಲ ವಸೂಲು ಮಾಡುವ ನಿರೀಕ್ಷೆ ಇದೆ.

ಬ್ಯಾಂಕ್ ಆಫ್ ಬರೋಡ ಶೇ.7, ಆಂಧ್ರ ಬ್ಯಾಂಕ್ ಶೇ.6.25, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಓರಿಯಂಟಲ್ ಬ್ಯಾಂಕ್ ಶೇ.6, ಸಿಂಡಿಕೇಟ್ ಬ್ಯಾಂಕ್ ಶೇ.5, ಪಿಎನ್ಬಿ ಶೇ.4.50, ಅಲಹಾಬಾದ್ ಬ್ಯಾಂಕ್ ಶೇ.3.75, ಐಡಿಬಿಐ ಮತ್ತು ಎಸ್ಬಿಐ ಶೇ.2ರಷ್ಟು ಏರಿವೆ. ನಿಫ್ಟಿ ಪ್ರೈವೆಟ್ ಬ್ಯಾಂಕ್ ಶೇ.1ರಷ್ಟು ಜಿಗಿದಿದ್ದು, ಕರ್ನಾಟಕ ಬ್ಯಾಂಕ್ ಶೇ.4.50, ಸೌತ್ ಇಂಡಿಯನ್ ಬ್ಯಾಂಕ್ ಶೇ.3, ಆಕ್ಸಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಶೇ.1ರಿಂದ 2ರಷ್ಟು ಏರಿವೆ.

ಇದನ್ನೂ ಓದಿ : ಸರಳ ಹೂಡಿಕೆ ಮಾಡಬೇಕೇ? ತಲೆಯಲ್ಲಿ ಇರಲಿ ಈ ಒಂಬತ್ತು ಮುನ್ನೆಚ್ಚರಿಕೆ

ದಿನದ ವಹಿವಾಟಿನಲ್ಲಿ ಎನ್ಬಿಸಿಸಿ ಶೇ. 5 ರಷ್ಟು ಏರಿದೆ. ವಾಕ್ರಂಗೀ ಶೇ.4.60, ಎಚ್ಪಿಸಿಎಲ್ ಶೇ.4ರಷ್ಟು ಏರಿದೆ. ಜಿಂದಾಲ್ ವರ್ಲ್ಡ್ ವೈಡ್ ಶೇ.20, ಸುಂದರಮ್ ಫಾಸ್ಟನರ್ಸ್ ಶೇ.4, ಇತ್ತೀಚೆಗೆ ಲಿಸ್ಟಾದ ಎಚ್ ಜಿ ಇನ್ಫ್ರಾ ಎಂಜಿನಿಯರಿಂಗ್ ಶೇ.3, ಈರಿಸ್ ಲೈಫ್, ಮಾಸ್ಟೆಕ್ ಶೇ.2ರಷ್ಟು ಏರಿದ್ದು ವರ್ಷದ ಗರಿಷ್ಠ ಮಟ್ಟಕ್ಕೆ ಜಿಗಿದಿವೆ.

ಚಿನ್ನ, ಬೆಳ್ಳಿ ಕೊಂಚ ಇಳಿದಿವೆ. ಕಚ್ಚಾ ತೈಲ ಕೊಂಚ ಏರಿದೆ. ಡಾಲರ್ ವಿರುದ್ದ ರುಪಾಯಿ ಚೇತರಿಸಿದ್ದು 65ಕ್ಕಿಂತ ಕೆಳಕ್ಕಿಳಿದಿದು 64.95ರಲ್ಲಿ ವಹಿವಾಟಾಗುತ್ತಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More