ಪೇಟೆಯಲ್ಲಿ ಗೂಳಿ ಓಟ ಆಭಾದಿತ; ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿ ಇನ್ಫಿ ಜಿಗಿತ

ಸತತ ಆರನೇ ದಿನವೂ ಷೇರುಪೇಟೆ ಏರುಹಾದಿಯಲ್ಲಿ ಸಾಗಿದ್ದು ಗೂಳಿ ಹಿಡಿತ ಸಾಧಿಸಿದೆ. ಸೆನ್ಸೆಕ್ಸ್ ನಿರ್ಣಾಯಕ 34000 ಅಂಶ ದಾಟಿದೆ. ಉತ್ತಮ ಫಲಿತಾಂಶ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಇನ್ಫೊಸಿಸ್ ಶೇ.4ರಷ್ಟು ಜಿಗಿದಿದೆ. ಬುಧವಾರ ಇಳಿದ ಒಎಂಸಿ ಷೇರುಗಳು ಮರಳಿ ಏರಿವೆ

ಸತತ ಕುಸಿತದ ನಂತರ ಈಗ ಪೇಟೆ ಮೇಲೆ ಗೂಳಿ ಹಿಡಿತ ಸಾಧಿಸಿದೆ. ಸತತ ಆರು ವಹಿವಾಟು ದಿನಗಳೂ ಏರಿಕೆ ದಾಖಲಿಸಿರುವ ಪೇಟೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯು ಉತ್ಸಾಹ ಮೂಡಿಸಿದೆ. 160 ಅಂಶ ಏರಿಕೆಯೊಂದಿಗೆ ಸೆನ್ಸೆಕ್ಸ್ 34100ರ ಗಡಿದಾಟಿದೆ., 41.50 ಅಂಶ ಏರಿಕೆಯೊಂದಿಗೆ ನಿಫ್ಟಿ 10450ರ ನಿರ್ಣಾಯಕ ಮಟ್ಟದಾಟಿದೆ.

ಐಟಿ ದೈತ್ಯ ಇನ್ಫೊಸಿಸ್ ಶುಕ್ರವಾರ ಫಲಿತಾಂಶ ಪ್ರಕಟಿಸಲಿದ್ದು, ಶೇ.4ರಷ್ಟು ಏರಿದೆ. ನಿಫ್ಟಿ ಐಟಿ ಸೂಚ್ಯಂಕ ಗರಿಷ್ಠ ಅಂದರೆ ಶೇ.3.2ರಷ್ಟು ಏರಿತು. ಟಿಸಿಎಸ್, ಎಚ್ಸಿಎಲ್ ಟೆಕ್ನಾಲಜೀಸ್, ಟೆಕ್ ಮಹಿಂದ್ರ ಶೇ.4ರಷ್ಟು ಏರಿವೆ. ಟಾಟಾ ಇಲಾಕ್ಸಿ, ಒರಾಕಲ್ ಫೈನಾನ್ಸ್, ಕೆಪಿಐಟಿ ಟೆಕ್ನಾಲಜೀಸ್, ಮೈಂಡ್ ಟ್ರೀ, ವಿಪ್ರೊ, ಶೇ.1-3ರಷ್ಟು ಏರಿದವು.

ನಿಫ್ಟಿ ವ್ಯಾಲ್ಯೂ 20, ನಿಫ್ಟಿ ಸರ್ವಿಸ್ ಸೆಕ್ಟರ್ ಶೇ.1ರಷ್ಟು ಏರಿತು. ನಿಫ್ಟಿ ಕ್ವಾಲಿಟಿ 30, ನಿಫ್ಟಿ ಪ್ರೈವೆಟ್ ಬ್ಯಾಂಕ್, ನಿಫ್ಟಿ ಫಿನ್ ಸರ್ವೀಸ್, ನಿಫ್ಟಿ ಫಿಫ್ಟಿ50, ನಿಫ್ಟಿ ಬ್ಯಾಂಕ್, ನಿಫ್ಟಿ 100, ನಿಫ್ಟಿ 200, ನಿಫ್ಟಿ 500 ಶೇ.0.60ರಷ್ಟು ಏರಿದವು. ನಿಫ್ಟಿ ರಿಯಾಲ್ಟಿ, ನಿಫ್ಟಿ ಮೆಟಲ್, ನಿಫ್ಟಿ ಪಿಎಸ್ ಯು ಬ್ಯಾಂಕ್, ನಿಫ್ಟಿ ಫಾರ್ಮ ಶೇ.1ರಿಂದ 2ರಷ್ಟು ಕುಸಿದವು. ನಿಫ್ಟಿ ಎಂಎನ್ಸಿ, ನಿಫ್ಟಿ ಫಾರ್ಮ, ನಿಫ್ಟಿ ಕಮಾಡಿಟೀಸ್, ನಿಫ್ಟಿ ಗ್ರೋತ್ ಶೇ.0.50ರಿಂದ 1ರಷ್ಟು ಕುಸಿದವು.

ಸಾರ್ವಜನಿಕ ವಲಯದ ಬ್ಯಾಂಕುಗಳ ಅಸ್ಥಿರತೆ ಮುಂದುವರೆದಿದೆ. ದಿನ ಬಿಟ್ಟು ದಿನ ಏರಿಳಿಯುತ್ತಿವೆ. ಹೂಡಿಕೆದಾರರಲ್ಲಿ ಇನ್ನೂ ವಿಶ್ವಾಸದ ಕೊರತೆ ಇರುವುದೇ ಕಾರಣ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ತನಿಖೆ ತಾರ್ಕಿಕ ಅಂತ್ಯಕ್ಕೆ ಬರುವವರೆಗೂ ಈ ಅಸ್ಥಿರತೆ ಮುಂದುವರೆಯಲಿದೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಚೇತರಿಸಿಕೊಳ್ಳಲು ವಿಫಲವಾಗಿದೆ. ದಿನದ ವಹಿವಾಟಿನಲ್ಲಿ ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕುಗಳು ಕುಸಿದವು. ಯೂನಿಯ್ ಬ್ಯಾಂಕ್ ಆಫ್ ಇಂಡಿಯಾ, ಓರಿಯಂಟಲ್ ಬ್ಯಾಂಕ್, ಆಂಧ್ರ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಎಸ್ಬಿಐ, ಬ್ಯಾಂಕ್ ಆಫ್ ಬರೋಡ, ಐಡಿಬಿಐ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಪಿಎನ್ಬಿ, ಇಂಡಿಯನ್ ಬ್ಯಾಂಕ್ ಶೇ.1ರಿಂದ 3ರಷ್ಟು ಕುಸಿದವು.

ಶಿಖಾ ಶರ್ಮ ಅವರು ಅವಧಿಗೆ ಮುನ್ನ ಸಿಇಒ ಹುದ್ದೆ ತೊರೆಯುವುದಾಗಿ ಪ್ರಕಟಿಸಿದ ನಂತರ ಆಕ್ಸಿಸ್ ಬ್ಯಾಂಕ್ ಇದುವರೆಗೆ ಶೇ.10 ರಷ್ಟು ಏರಿಕೆ ಕಂಡಿದೆ. ದಿನದ ವಹಿವಾಟಿನಲ್ಲಿ ಶೇ.2ರಷ್ಟು ಏರಿದೆ. ಐಸಿಐಸಿಐ ಬ್ಯಾಂಕ್, ಕೊಟಕ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಶೇ.0.50-1ರಷ್ಟು ಏರಿವೆ.

ರಿಯಲ್ ಎಸ್ಟೇಟ್ ವಲಯವೂ ಏರಿಳಿತದ ವಹಿವಾಟು ನಡೆಸುತ್ತಿದೆ. ವಾರದ ಆರಂಭದಲ್ಲಿ ಏರಿದ್ದ ರಿಯಾಲ್ಟಿ ಷೇರುಗಳು ದಿನದ ವಹಿವಾಟಿನಲ್ಲಿ ಕುಸಿದವು. ಯೂನಿಟೆಕ್, ಇಂಡಿಯಾಬುಲ್ಸ್ ರಿಯಲ್ ಎಸ್ಟೇಟ್, ಎಚ್ಡಿಐಎಲ್, ಒಬೆರಾಯ್ ರಿಯಾಲ್ಟಿ, ಡಿಎಲ್ಎಫ್, ಪ್ರೆಸ್ಟೀಜ್ ಎಸ್ಟೇಟ್, ಡೆಲ್ಟಾ ಕಾರ್ಪ್ ಶೇ.1-3ರಷ್ಟು ಕುಸಿದಿವೆ. ದಿನದ ವಹಿವಾಟಿನಲ್ಲಿ ಫ್ಯೂಚರ್ ರಿಟೇಲ್ಸ್ ಶೇ.5ರಷ್ಟು ಏರಿದೆ. ಹನಿವೆಲ್ ಆಟೋಮೆಷನ್ ಶೇ.4ರಷ್ಟು ಏರಿದೆ. ಜೆನಿತ್ ಎಕ್ಸ್ಪೊರ್ಟ್ ಶೇ.20ರಷ್ಟು ಜಿಗಿದಿದೆ. ಟಾಟಾ ಸ್ಪಾಂಜ್ ಶೇ.8, ಜೆನ್ಸಾರ್ ಟೆಕ್ ಶೇ.6, ಕದ್ರಾ ಕನ್ಸ್ಟ್ರಕ್ಷನ್ ಶೇ.5, ಫಸ್ಟ್ ಸೋರ್ಸ್ ಶೇ.4 ರಷ್ಟು ಏರಿ ವರ್ಷದ ಗರಿಷ್ಠ ಮಟ್ಟ ಮುಟ್ಟಿವೆ. ಎಂಆರ್ಎಫ್ 76,600ರ ಗಡಿದಾಟಿದೆ.

ಇದನ್ನೂ ಓದಿ : ಹೂಡಿಕೆ ಮಾಡಬೇಕೇ? ಫಂಡ್ ಮ್ಯಾನೇಜರ್‌ಗಳನ್ನು ಫಾಲೋ ಮಾಡಿ

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಿಂದಾಗಿ ಬುಧವಾರದ ವಹಿವಾಟಿನಲ್ಲಿ ಶೇ.8ರಷ್ಟು ಕುಸಿದಿದ್ದ ತೈಲ ಮಾರುಕಟ್ಟೆ ಕಂಪನಿಗಳು ಕೊಂಚ ಚೇರಿಸಿಕೊಂಡವು. ಆದರೆ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ದರ ಏರುಹಾದಿಯಲ್ಲೇ ಸಾಗಿದರೆ ತೈಲ ಮಾರುಕಟ್ಟೆ ಕಂಪನಿಗಳಷ್ಟೇ ಅಲ್ಲದೇ ಪೂರಕ ವಲಯದ ಕಂಪನಿಗಳ ಷೇರುಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಮಾರುಕಟ್ಟೆ ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದೆ. ಮಾರ್ಚ್ ತಿಂಗಳ ಹಣದುಬ್ಬರ ಅಂಕಿ ಅಂಶ ಮತ್ತು ಫೆಬ್ರವರಿ ತಿಂಗಳ ಕೈಗಾರಿಕಾ ಉತ್ಪನ್ನ ಸೂಚ್ಯಂಕ ಅಂಕಿ ಅಂಶಗಳು ಪ್ರಕಟವಾದ ನಂತರ ಮಾರುಕಟ್ಟೆ ಸಾಗಲು ದಿಕ್ಸೂಚಿ ಸಿಗಬಹುದು.

ಚಿನಿವಾರ ಪೇಟೆಯಲ್ಲಿ ಬುಧವಾರ ಜಿಗಿದ್ದಿದ್ದ ಚಿನ್ನ200 ರುಪಾಯಿ ಕುಸಿದಿದೆ. ಬೆಳ್ಳಿ ಸ್ಥಿರವಾಗಿದೆ. ಕಚ್ಚಾ ತೈಲ ಶೇ.1.33ರಷ್ಟು ಏರಿದೆ. ಡಾಲರ್ ವಿರುದ್ಧ ರುಪಾಯಿ 65.25ರಲ್ಲಿ ವಹಿವಾಟಾಗಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More