ಕುಸಿತದ ಹಾದಿಯಲ್ಲಿ ಷೇರುಪೇಟೆ; ಶೇ.5ರಷ್ಟು ಕುಸಿದ ಇನ್ಫಿ, ಮಿಧಾನಿ ಜಿಗಿತ

ಸಿರಿಯಾ ಮೇಲಿನ ದಾಳಿ ನಂತರ ಉದ್ಭವಿಸಿರುವ ಜಾಗತಿಕ ಕ್ಷೋಭೆ ಹಿನ್ನೆಲೆಯಲ್ಲಿ ಬಹುತೇಕ ಷೇರುಪೇಟೆಗಳು ಕುಸಿದಿವೆ. ಆರಂಭದಲ್ಲಿ 250 ಅಂಶ ಕುಸಿದಿದ್ದ ಸೆನ್ಸೆಕ್ಸ್ ಕೊಂಚ ಚೇತರಿಸಿಕೊಂಡಿದೆ. ನಿಷ್ಕ್ರಿಯ ಸಾಲದ ಪ್ರಮಾಣ ಹೆಚ್ಚಳವಾಗಿರುವ ಕಾರಣ ಪಿಎಸ್ಯು ಬ್ಯಾಂಕುಗಳು ಕುಸಿದಿವೆ

ಸಿರಿಯಾ ಮೇಲಿನ ದಾಳಿಯಿಂದಾಗಿ ಉಂಟಾಗಿರುವ ಜಾಗತಿಕ ಕ್ಷೋಭೆಯು ಬಹುತೇಕ ಷೇರುಪೇಟೆಗಳನ್ನು ಇಳಿಜಾರಿಗೆ ತಂದಿದೆ. ದೇಶೀಯ ಪೇಟೆಯು ಕುಸಿತದ ಹಾದಿಯಲ್ಲಿ ಸಾಗಿದೆ. ದಿನದ ಆರಂಭದಲ್ಲಿ 250 ಅಂಶ ಕುಸಿದಿದ್ದ ಸೆನ್ಸೆಕ್ಸ್ ನಂತರ ಚೇತರಿಸಿಕೊಂಡು 70 ಅಂಶ ಕುಸಿತದೊಂದಿಗೆ ವಹಿವಾಟಾಗುತ್ತಿದೆ. ಒಂದು ಹಂತದಲ್ಲಿ 34000 ಮಟ್ಟದಿಂದ ಕುಸಿದಿದ್ದ ಸೆನ್ಸೆಕ್ಸ್ ಚೇತರಿಕೆ ನಂತರ 34100 ಮಟ್ಟ ಕಾಯ್ದುಕೊಂಡು ವಹಿವಾಟು ನಡೆಸುತ್ತಿದೆ. ನಿಫ್ಟಿ 25 ಅಂಶ ಕುಸಿತದೊಂದಿಗೆ 10450ಮಟ್ಟದಲ್ಲಿ ವಹಿವಾಟಾಗುತ್ತಿದೆ.

ಕಳಪೆ ಫಲಿತಾಂಶ ಪ್ರಕಟಿಸಿದ ಮತ್ತು ಈ ವರ್ಷವಿಡೀ ಗಳಿಕೆಯ ಪ್ರಮಾಣ ತಗ್ಗಿಸಿಕೊಂಡಿರುವ ಇನ್ಫೊಸಿಸ್ ದಿನದ ಆರಂಭದಲ್ಲಿ ಶೇ.6ರಷ್ಟು ಕುಸಿದಿತ್ತು. ನಂತರ ಕೊಂಚ ಚೇತರಿಸಿಕೊಂಡು ಶೇ.4ರಷ್ಟು ಕುಸಿತದೊಂದಿಗೆ ವಹಿವಾಟಾಗುತ್ತಿದೆ. ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೆಂಜ್ ನಲ್ಲಿ ಇನ್ಫೊಸಿಸ್ ಎಡಿಆರ್ ಶೇ.7.7 ಕುಸಿದಿತ್ತು. ಇನ್ಫಿ ಕುಸಿತದೊಂದಿಗೆ ಬಹುತೇಕ ಐಟಿ ವಲಯದ ಷೇರುಗಳು ಇಳಿಜಾರಿಗೆ ಸರಿದಿವೆ.

1:1 ಪ್ರಮಾಣದಲ್ಲಿ ಬೋನಸ್ ಷೇರು ವಿತರಿಸಲು ಆಡಳಿತ ಮಂಡಲಿ ನಿರ್ಧರಿಸಿದ್ದ ಕಾರಮ ಗೃಹ್ ಫೈನಾನ್ಸ್ ಷೇರು ಶೇ.5ರಷ್ಟು ಜಿಗಿದಿದೆ. ಅಲ್ಲದೇ 2 ಮುಖಬೆಲೆಯ ಷೇರಿನ ಮೇಲೆ 3.30 ರುಪಾಯಿ ಡೆವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ವಿಸ್ತೃತ ಮಾರುಕಟ್ಟೆಯ ಬಹುತೇಕ ಸೂಚ್ಯಂಕಗಳು ಇಳಿಜಾರಿನಲ್ಲಿವೆ. ನಿಫ್ಟಿ ಫಾರ್ಮ ಶೇ.1ರಷ್ಟು ಏರಿದೆ. ನಿಫ್ಟಿ ಎಫ್ಎಂಸಿಜಿ, ನಿಫ್ಟಿ ರಿಯಾಲ್ಟಿ, ನಿಫ್ಟಿ ಇನ್ಫ್ರಾ ಸೂಚ್ಯಂಕಗಳು 0.40ರಷ್ಟು ಏರಿವೆ. ನಿಫ್ಟಿ ಪಿಎಸ್ಯು ಬ್ಯಾಂಕ್ ಸೂಚ್ಯಂಕ ಶೇ.1.35ರಷ್ಟು ಕುಸಿದಿದೆ. ನೀರವ್ ಮೋದಿ, ಮೆಹುಲ್ ಚೊಕ್ಸಿ ಹಗರಣದಿಂದಾಗಿ ನಿಷ್ಕ್ರಿಯ ಸಾಲವು ಏರಿಕೆಯಾದ್ದರಿಂದಾಗಿ ಬಹುತೇಕ ಬ್ಯಾಂಕುಗಳ ಷೇರುಗಳು ಕುಸಿದಿವೆ. ಅಲಹಾಬಾದ್ ಬ್ಯಾಂಕ್, ಪಿಎನ್ಬಿ, ಐಡಿಬಿಐ, ಸಿಂಡಿಕೇಟ್ ಬ್ಯಾಂಕ್ ಶೇ.2-3ರಷ್ಟು ಕುಸಿದವು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಓರಿಯಂಟಲ್ ಬ್ಯಾಂಕ್, ಆಂಧ್ರ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಆಂಧ್ರ ಬ್ಯಾಂಕ್, ಎಸ್ಬಿಐ ಹಾಗೂ ಕೆನರಾ ಬ್ಯಾಂಕ್ ಶೇ.1-2ರಷ್ಟು ಇಳಿದಿವೆ. ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಫೆಡರಲ್ ಬ್ಯಾಂಕ್, ಕೊಟಕ್ ಬ್ಯಾಂಕ್ ಶೇ.1ರಷ್ಟು ಕುಸಿದಿವೆ.

ನಿಫ್ಟಿ ಎನರ್ಜಿ, ಸಿಪಿಎಸ್ಇ, ನಿಫ್ಟಿ ಐಟಿ, ನಿಫ್ಟಿ ಆಟೋ, ನಿಫ್ಟಿ ಮೆಟಲ್, ನಿಫ್ಟಿ ಮಿಡಿಯಾ, ನಿಫ್ಟಿ ಪಿಎಸ್ಇ, ನಿಫ್ಟಿ ಸರ್ವೀಸ್ ಸೆಕ್ಟರ್ ಶೇ.0.50ರಿಂದ 1ರಷ್ಟು ಕುಸಿದಿವೆ. ಐಟಿ ವಲಯದ ಇನ್ಫಿಬೀಮ್, ಕೆಪಿಐಟಿ ಟೆಕ್ನಾಲಜೀಸ್, ಟಾಟಾ ಎಲಾಕ್ಸಿ, ವಿಪ್ರೊ ಶೇ.1-3ರಷ್ಟು ಕುಸಿದಿವೆ. ರಿಲಯನ್ಸ್ ಇನ್ಫ್ರಾ, ಎಚ್ಪಿಸಿಎಲ್, ಒಎನ್ಜಿಸಿ, ಗೇಲ್, ರಿಲಯನ್ಸ್ ಇಂಡಸ್ಟ್ರೀಸ್ ಶೇ.1-2ರಷ್ಟು ಕುಸಿದಿವೆ. ಟಾಟಾ ಪವರ್, ಇಂಡಿಯನ್ ಆಯಿಲ್, ಬಿಪಿಸಿಎಲ್ ಶೇ.1ರಷ್ಟು ಕುಸಿದಿವೆ.

ದಿನದ ವಹಿವಾಟಿನಲ್ಲಿ ಐಬಿ ವೆಂಚರ್ಸ್ ಶೇ.13ರಷ್ಟು ಜಿಗಿದಿದೆ. ಸಿಪ್ಲಾ ಶೇ.4, ಗ್ರಾಸಿಂ ಇಂಡಸ್ಟ್ರೀಸ್ ಶೇ.3, ವರ್ಲ್ಪೂಲ್ ಇಂಡಿಯಾ ಶೇ.2.50ರಷ್ಟು ಏರಿವೆ. ವಾಕ್ರಂಗೀ, ಟಾಟಾ ಮೋಟರ್ಸ್, ಕ್ರಾಂಪ್ಟನ್ ಗ್ರೀವ್ಸ್ ಶೇ.3-5ರಷ್ಟು ಕುಸಿದಿವೆ.

ಇತ್ತೀಚೆಗೆ ಲಿಸ್ಟಾದ ಮಿಸ್ರಧಾತು ನಿಗಮ ಶೇ.16ರಷ್ಟು ಜಿಗಿದಿದೆ. ಇಂಡಿಯಾಬುಲ್ಸ್ ವೆಂಚರ್ಸ್ ಶೇ.13, ಜಿಎನ್ಎ ಆಕ್ಸಲ್ಸ್ ಶೇ.7, ಜೆನಿತ್ ಎಕ್ಸ್ಪೊರ್ಟ್ ಶೇ.6, ಮುತ್ತೂಟ್ ಕ್ಯಾಪಿಟಲ್ ಶೇ.4ರಷ್ಟು ಏರಿದ್ದು, ವರ್ಷದ ಗರಿಷ್ಠ ಮಟ್ಟಕ್ಕೇರಿವೆ. ಬ್ರಿಟಾನಿಯಾ ಇಂಡಸ್ಟ್ರೀಸ್, ಎಸ್ಕಾರ್ಟ್ಸ್, ಎಸ್ಆರ್ಎಫ್, ಎಸ್ಕೆಎಸ್ ಮೈಕ್ರೊ ಫಿನಾನ್ಸ್, ವಿಐಪಿ ಇಂಡಸ್ಟ್ರೀಸ್, ಅಶೋಕ್ ಲೇಲ್ಯಾಂಡ್, ಪಿಡಿಲೈಟ್ ಇಂಡಸ್ಟ್ರೀಸ್, ಟೆಕ್ ಮಹಿಂದ್ರಾ, ಏಷಿಯನ್ ಹೊಟೇಲ್ಸ್, ಸುದರ್ಶನ್ ಕೆಮಿಕಲ್ಸ್, ಒರಿಯಂಟ್ ಪ್ರೆಸ್, ಎಲ್ ಜಿ ಬಾಲಕೃಷ್ಣನ್ ಇಂಡಸ್ಟ್ರೀಸ್ ಶೇ.1-4ರಷ್ಟು ಏರಿದ್ದು ವರ್ಷದ ಗರಿಷ್ಠ ಮಟ್ಟಕ್ಕೇರಿವೆ.

ಚಿನ್ನ 100 ರುಪಾಯಿ, ಬೆಳ್ಳಿ 60 ರುಪಾಯಿ ಏರಿದೆ. ಡಾಲರ್ ವಿರುದ್ಧ ರುಪಾಯಿ 22 ಪೈಸೆ ಕುಸಿದಿದ್ದು, 65.43ರಲ್ಲಿ ವಹಿವಾಟಾಗುತ್ತಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More