ಇನ್ಫೊಸಿಸ್ ಕುಸಿತ, ನಿಫ್ಟಿ ಮೆಟಲ್ ಸೂಚ್ಯಂಕ ಜಿಗಿತ, ಏರುಹಾದಿಯಲ್ಲಿ ವಿಸ್ತೃತ ಪೇಟೆ

ನಿರೀಕ್ಷಿತ ಫಲಿತಾಂಶ ನೀಡದ ಕಾರಣ ಇನ್ಫೊಸಿಸ್ ಕುಸಿತದ ಹಾದಿಯಲ್ಲಿದೆ. ಮಾರಾಟ ಒತ್ತಡ ಹೆಚ್ಚಿದ್ದು ಶೇ.1.50ರಷ್ಟು ಕುಸಿದಿದೆ. ಸೆನ್ಸೆಕ್ಸ್ ಸತತ ಏರಿಕೆ ಕಾಯ್ದುಕೊಂಡಿದ್ದು, ಏರಿಳಿತದ ನಡುವೆ ನೂರಂಶ ಏರಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಚೇತರಿಕೆಯ ಹಾದಿಯಲ್ಲಿ ಸಾಗಿವೆ

ಆರಂಭದಲ್ಲಿ ಏರಿಳಿತ ಕಂಡ ವಿಸ್ತೃತ ಪೇಟೆ ಏರುಹಾದಿಯಲ್ಲಿ ಸಾಗಿದೆ. ಸೆನ್ಸೆಕ್ಸ್ ನೂರಂಶ ಏರಿದ್ದು 34400ರ ಮಟ್ಟ ಕಾಯ್ದುಕೊಂಡಿದೆ. ನಿಫ್ಟಿ 24 ಅಂಶ ಏರಿದ್ದು 10550ರ ಮಟ್ಟ ಕಾಯ್ದುಕೊಂಡು ವಹಿವಾಟು ನಡೆಸುತ್ತಿದೆ. ಇನ್ಫೊಸಿಸ್ ಲಾಭಾಂಶ ಕುಸಿದ ಕಾರಣ ಸತತ ಏರಿದ್ದ ನಿಫ್ಟಿ ಸೂಚ್ಯಂಕ ಕುಸಿತದ ಹಾದಿಯಲ್ಲಿದೆ. ಇನ್ಫೊಸಿಸ್ ಶೇ.1.50ರಷ್ಟು ಕುಸಿದಿದೆ. ಇನ್ಫಿಬೀಮ್, ವಿಪ್ರೊ, ಟೆಕ್ ಮಹಿಂದ್ರ, ಟಿಸಿಎಸ್ ಶೇ.1ರಷ್ಟು ಇಳಿದಿವೆ. ಎಚ್ಸಿಎಲ್ ಟೆಕ್, ಮೈಂಡ್ ಟ್ರೀ, ಟಾಟಾ ಎಲಾಕ್ಸಿ ಏರುಹಾದಿಯಲ್ಲಿದ್ದು ಶೇ.1ರಷ್ಟು ಏರಿವೆ.

ಸಾರ್ವಜನಿಕ ವಲಯದ ಬ್ಯಾಂಕುಗಳು ಚೇತರಿಸಿಕೊಳ್ಳುತ್ತಿವೆ. ನಿಫ್ಟಿ ಪಿಎಸ್ಯು ಬ್ಯಾಂಕ್ ಸೂಚ್ಯಂಕ ಶೇ.0.75ರಷ್ಟು ಏರಿದೆ. ಬ್ಯಾಂಕ್ ಆಫ್ ಇಂಡಿಯಾ, ಎಸ್ಬಿಐ, ಒರಿಯಂಟಲ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಪಿಎನ್ಬಿ, ಆಂಧ್ರ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಶೇ.1ರಷ್ಟು ಏರಿವೆ. ನಿಫ್ಟಿ ಪ್ರೈವೆಟ್ ಬ್ಯಾಂಕ್ ಸೂಚ್ಯಂಕ ಕೊಂಚ ಏರಿದೆ. ಆದರೆ, ಆಕ್ಸಿಸ್ ಬ್ಯಾಂಕ್, ಕೊಟಕ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಶೇ.0.50ರಷ್ಟು ಕುಸಿದಿವೆ. ಸೌತ್ ಇಂಡಿಯನ್ ಬ್ಯಾಂಕ್ ಶೇ.2ರಷ್ಟು ಏರಿದೆ. ಐಸಿಐಸಿಐ ಬ್ಯಾಂಕ್, ಐಡಿಎಫ್ಸಿ ಬ್ಯಾಂಕ್, ಯೆಸ್ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಶೇ.0.50-1ರಷ್ಟು ಏರಿವೆ.

ಎಂವಿವಿಎನ್ಎಲ್ ನಿಂದ 3577 ಕೋಟಿ ಮೌಲ್ಯದ ಕಾಮಗಾರಿ ಗುತ್ತಿಗೆ ಪಡೆದ ಕಾರಣ ಬಜಾಜ್ ಎಲೆಕ್ಟ್ರಿಕಲ್ ಶೇ.7ರಷ್ಟು ಜಿಗಿದಿದೆ. ಚೀನಾದ ಜಿಡಿಪಿ ಅಂಕಿಅಂಶಗಳು ಹೊರಬಿದ್ದಿದ್ದು ಮಾರ್ಚ್ ತಿಂಗಳಿಗೆ ಅಂತ್ಯಗೊಂಡ ವರ್ಷದಲ್ಲಿ ಶೇ.6.8ರಷ್ಟು ಅಭಿವೃದ್ಧಿ ದಾಖಲಿಸಿದೆ.

ಅದಾನಿ ಪೊರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಜೋನ್ (ಎಪಿಎಸ್ಇಝಡ್) ಇಂಡಿಯನ್ ಆಯಿಲ್ ಕಾರ್ಪೊರೆಷನ್ ಜತೆ ದ್ರವೀಕೃತ ನೈಸರ್ಗಿಕ ಅನಿಲ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡ ಕಾರಣ ಶೇ.2ರಷ್ಟು ಜಿಗಿದಿದೆ. ಒಪ್ಪಂದ ಪ್ರಕಾರ, ಐಒಸಿ ಮುಂದಿನ 20 ವರ್ಷಗಳ ಕಾಲ ವಾಕ್ಷಿಕ 3 ದಶಲಕ್ಷ ಟನ್ ಪಡೆಯಲಿದೆ.

ದಿನದ ವಹಿವಾಟಿನಲ್ಲಿ ಫ್ಯೂಚರ್ ರಿಟೇಲ್ ಶೇ.4ರಷ್ಟು ಏರಿದೆ. ಇಂಡಿಯಾ ಹೊಟೇಲ್ಸ್, ನ್ಯಾಟ್ಕೊ ಫಾರ್ಮ, ಸಿಂಫೊನಿ, ಪವರ್ ಗ್ರಿಡ್ ಶೇ.3ರಷ್ಟು ಏರಿವೆ. ವಾಕ್ರಂಗೀ ಶೇ.5, ಇಂಡಿಯಾ ಬುಲ್ಸ್ ವೆಂಚರ್ಸ್ ಶೇ.3, ಬಂಧನ್ ಬ್ಯಾಂಕ್ ಶೇ.2, ಭಾರತಿ ಇನ್ಫ್ರಾಟೆಲ್, ಸನ್ ಫಾರ್ಮ ಶೇ.1ರಷ್ಟು ಇಳಿದಿವೆ.

ಇದನ್ನೂ ಓದಿ : ಉಗಾದಿ ವಿಶೇಷ | ಹೊಸ ವರ್ಷದಲ್ಲಿ ಹೂಡಿಕೆ ಮಾಡಿ ವರ್ಷವಿಡೀ ಹರ್ಷಪಡಿ

ಈ ಮುಂಗಾರಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ವರದಿಯನ್ನು ಮಾರುಕಟ್ಟೆ ಅರಗಿಸಿಕೊಂಡಿದೆ. ಸಾಮಾನ್ಯವಾಗಿ ಸಾಧಾರಣ ಮಳೆ ಎಂಬ ಅಂದಾಜು ಮಾಡಿದಾಗಲೆಲ್ಲ ಕೃಷಿಯಾಧಾರಿತ ಉದ್ಯಮಗಳ ಷೇರುಗಳು ಕೊಂಚ ಇಳಿಯುತ್ತಿದ್ದವು. ಆದರೆ, ಈ ಬಾರಿ ಅಂತಹ ಇಳಿಕೆ ಕಂಡುಬಂದಿಲ್ಲ. ಕೇಂದ್ರ ಸರ್ಕಾರ ಕೃಷಿ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸಿರುವ ಕಾರಣ ಈಗಾಗಲೇ ಕೃಷಿಯಾಧಾರಿತ ಉದ್ಯಮಗಳ ಷೇರುಗಳು ಒಂದು ಸುತ್ತು ಏರಿಕೆ ಕಂಡಿವೆ. ಒಂದು ವೇಳೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಈ ವಲಯದ ಷೇರುಗಳು ಕುಸಿಯುತ್ತವೆ.

ಚಿನಿವಾರ ಪೇಟೆಯಲ್ಲಿ ಚಿನ್ನ ಸ್ಥಿರವಾಗಿದೆ. ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಏರಿಕೆ ನಿರೀಕ್ಷಿಸಲಾಗಿದೆ. ಬೆಳ್ಳಿಯು ಸ್ಥಿರವಾಗಿದೆ. ಡಾಲರ್ ವಿರುದ್ದ ರುಪಾಯಿ ಕುಸಿತ ಮುಂದುವರೆದಿದೆ. ಸೋಮವಾರದ ವಹಿವಾಟಿನಲ್ಲಿ 29 ಪೈಸೆ ಕುಸಿದಿದ್ದ ರುಪಾಯಿ ಮಂಗಳವಾರದ ವಹಿವಾಟಿನಲ್ಲಿ 5 ಪೈಸೆ ಕುಸಿದಿದೆ. ಈಗ 65.55ಕ್ಕೆ ಇಳಿದು ವಹಿವಾಟು ನಡೆಸುತ್ತಿದೆ. ಈ ಮಾಸಾಂತ್ಯಕ್ಕೆ 66 ರುಪಾಯಿಗೆ ಕುಸಿಯುವ ಸಾಧ್ಯತೆ ಇದೆ. ಕಚ್ಚಾ ತೈಲ ಶೇ.0.25ರಷ್ಟು ಏರಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More