ಮಾರುಕಟ್ಟೆ ನಿರೀಕ್ಷೆ ಮೀರಿ ₹7,340 ಕೋಟಿ ಲಾಭ ದಾಖಲಿಸಿದ ಟಿಸಿಎಸ್

100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರುವ ಮೊದಲ ಭಾರತೀಯ ಕಂಪನಿಯಾಗಿರುವ ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಮೊದಲ ತ್ರೈಮಾಸಿಕದಲ್ಲಿ ₹7,340 ಕೋಟಿ ಲಾಭ ದಾಖಲಿಸಿದೆ. ರುಪಾಯಿ ವಿರುದ್ಧ ಡಾಲರ್ ಮೌಲ್ಯ ಹೆಚ್ಚಳವೂ ಟಿಸಿಎಸ್‌ಗೆ ವರವಾಗಿ ಪರಿಣಮಿಸಿದೆ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ (ಟಿಸಿಎಸ್) ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ.24ರಷ್ಟು ಹೆಚ್ಚಳವಾಗಿದೆ. ಸಂಸ್ಥೆಯ ಉತ್ತರ ಅಮೆರಿಕ ವಹಿವಾಟು ಹಿಂದಿನ 12 ತ್ರೈಮಾಸಿಕಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ.

ಮೊದಲ ತ್ರೈಮಾಸಿಕದಲ್ಲಿ 6,965 ಕೋಟಿ ನಿವ್ವಳ ಲಾಭ, 33,997 ಕೋಟಿ ಆದಾಯ ಮತ್ತು ಎಬಿಟಾ ಶೇ.24.45ರಷ್ಟಾಗಬಹುದು ಎಂದು ಮಾರುಕಟ್ಟೆ ನಿರೀಕ್ಷಿಸಿತ್ತು. ಮಾರುಕಟ್ಟೆ ನಿರೀಕ್ಷೆಯನ್ನು ಮೀರಿಸಿರುವ ಟಿಸಿಎಸ್, 7340 ಕೋಟಿ ನಿವ್ವಳ ಲಾಭ, 34,261 ಕೋಟಿ ಆದಾಯ ಮತ್ತು ಎಬಿಟಾ ಶೇ.25.4ರಷ್ಟು ದಾಖಲಿಸಿದೆ.

ಕಾರ್ಯಾಚರಣೆ ಲಾಭಾಂಶ ಅಂತರ ಶೇ.25 ಮತ್ತು ನಿವ್ವಳ ನಗದು ಶೇ.10.3.7ರಷ್ಟಾಗಿದೆ. ಪ್ರತಿ ಷೇರಿನ ಗಳಿಕೆ ಶೇ.26.1ರಷ್ಟು ಏರಿದ್ದು 19.17 ರುಪಾಯಿಗೆ ಏರಿದೆ. ಕಂಪನಿಯ ಆದಾಯವು ಶೇ.16ರಷ್ಟು ಹೆಚ್ಚಳವಾಗಿದ್ದು, 35,486 ಕೋಟಿಗೆ ಏರಿದೆ. ಮಧ್ಯಂತರ ಲಾಭಾಂಶವನ್ನು ಪ್ರತಿ ಷೇರಿಗೆ 4 ರುಪಾಯಿ ಘೋಷಿಸಿದೆ.

ಉತ್ತರ ಅಮೆರಿಕದ ವಹಿವಾಟು ಕಳೆದ ಮೂರು ವರ್ಷಗಳ ಪೈಕಿ ಈ ತ್ರೈಮಾಸಿಕದಲ್ಲಿ ಗರಿಷ್ಠ ಪ್ರಮಾಣಕ್ಕೇರಿದೆ. ಬ್ಯಾಂಕಿಂಗ್, ಫೈನಾನ್ಷಿಯಲ್ ಸರ್ವಿಸ್ ಮತ್ತು ಇನ್ಶೂರೆನ್ಸ್ (ಬಿಎಫ್ಎಸ್ಐ) ವಲಯದಲ್ಲಿ ವಹಿವಾಟು ಹೆಚ್ಚಿದೆ. ಉತ್ತರ ಅಮೆರಿಕವು ಟಿಸಿಎಸ್‌ನ ಅತಿದೊಡ್ಡ ಮಾರುಕಟ್ಟೆಯಾಗಿದೆ.

ಇದನ್ನೂ ಓದಿ : ಭಾರತದ ಮೊದಲ 100 ಬಿಲಿಯನ್ ಡಾಲರ್ ಕಂಪನಿ ಎನಿಸಿ ಇತಿಹಾಸ ಸೃಷ್ಟಿಸಿದ ಟಿಸಿಎಸ್

“ಬಿಎಫ್ಎಸ್ಐ ವಲಯದ ವಹಿವಾಟು 11,789 ಕೋಟಿಯಿಂದ 13,463 ಕೋಟಿಗೆ ಏರಿದೆ. ನಮ್ಮ ಬ್ಯಾಂಕಿಂಗ್ ವಲಯವು ಪ್ರಸಕ್ತ ತ್ರೈಮಾಸಿಕದಲ್ಲಿ ಚೇತರಿಸಿಕೊಂಡಿದೆ. ಉಳಿದಂತೆ, ವಲಯಗಳಲ್ಲೂ ಚೇತರಿಕೆ ಮುಂದಿನಂತಿದೆ,” ಎಂದು ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥ್ ತಿಳಿಸಿದ್ದಾರೆ.

“ಡಾಲರ್ ವಿರುದ್ಧ ರುಪಾಯಿ ಶೇ.4ರಷ್ಟು ಕುಸಿದಿರುವುದು ವೇತನ ಹೆಚ್ಚಳದಿಂದಾದ ಹೊರೆಯನ್ನು ತಗ್ಗಿಸಿದೆ,” ಎಂದು ಚೀಫ್ ಫೈನಾನ್ಷಿಯಲ್ ಆಫೀಸರ್ ರಾಮಕೃಷ್ಣನ್ ಹೇಳಿದ್ದಾರೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More