ವಿಡಿಯೋ| ಸ್ಯಾಂಡ್ ಬಾಕ್ಸ್ ಸ್ಟಾರ್ಟ್ಅಪ್ ಲಿವಿಂಗ್ ಲ್ಯಾಬೊರೇಟರಿ

ಹುಬ್ಬಳ್ಳಿಯಲ್ಲಿ ಮೈತಳೆದಿರುವ ಸ್ಯಾಂಡ್ ಬಾಕ್ಸ್ ಲಿವಿಂಗ್ ಲ್ಯಾಬೊರೇಟರಿಯು ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿನ ನವೋದ್ಯಮ ಸಾಹಸಿಗರಿಗೆ ಪ್ರೋತ್ಸಾಹ ನೀಡಲಿದೆ. ಭಾರತದ ಅತಿದೊಡ್ಡ ಇನ್ಕ್ಯುಬೇಷನ್ ಸೆಂಟರ್ ಎಂಬ ಹೆಗ್ಗಳಿಕೆ ಪಡೆದಿರುವ ಲಿವಿಂಗ್ ಲ್ಯಾಬೊರೇಟರಿಯು ನವೋದ್ಯಮಿಗಳಿಗೆ ಬೇಕಾದ ತಾಂತ್ರಿಕ ಜ್ಞಾನದ ಅಗತ್ಯಗಳ ಜತೆಗೆ ಮೂಲಭೂತ ಸೌಲಭ್ಯಗಳನ್ನುಒದಗಿಸುತ್ತಿದೆ. ಹೊಸದೊಂದು ಚಿಂತನೆಯು ವಿವಿಧ ಹಂತಗಳಲ್ಲಿ ರೂಪತಳೆಯಲು ಬೇಕಾದ ಸಲಕರಣೆಗಳು ಇಲ್ಲಿ ಲಭ್ಯ. ಲಿವಿಂಗ್ ಲ್ಯಾಬೊರೇಟರಿಯು ನವೋದ್ಯಮದ ನಾಳಿನ ಭವಿಷ್ಯದ ಚಿಂತನೆಯೊಂದಿಗೆ ರೂಪುಗೊಂಡಿದೆ. ನಾಳಿನ ಭವಿಷ್ಯವನ್ನು ಬದಲಿಸುವ, ಗ್ರಾಮೀಣ, ಅರೆನಗರ ಪ್ರದೇಶಗಳ ಜನರ ಬದುಕನ್ನು ಹಸನಾಗಿಸುವ ದೂರದೃಷ್ಟಿಯಿಂದ ಡಾ. ಗುರುರಾಜ್ ದೇಶ್ ದೇಶಪಾಂಡೆ ಇಲ್ಲಿ ಕನಸೊಂದನ್ನು ಬಿತ್ತಿದ್ದಾರೆ. ಅದೀಗಾಗಲೇ ಸಾಕಾರ ರೂಪ ಪಡೆಯುತ್ತಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More