ಆಹಾರ ಪದಾರ್ಥಗಳ ದರ ಇಳಿಕೆ; ತಗ್ಗಿದ ಆಗಸ್ಟ್ ತಿಂಗಳ ಸಗಟುದರ ಹಣದುಬ್ಬರ

ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆ ನಡುವೆಯೂ ಸಗಟು ದರ ಹಣದುಬ್ಬರ ತಗ್ಗಿದೆ. ಬಹುತೇಕ ಆಹಾರ ಪದಾರ್ಥ ದರ ಕುಸಿದಿತ್ತು. ಆದರೆ, ದೀರ್ಘಾವಧಿ ದರ ಆಧರಿಸಿದ ಪ್ರಮುಖ ಹಣದುಬ್ಬರ ಮಾತ್ರ ಆಗಸ್ಟ್‌ನಲ್ಲಿ ಶೇ.5ರಷ್ಟಿದೆ! ಅಂದರೆ, ಬಡ್ಡಿದರ ಏರಿಕೆ ಸಾಧ್ಯತೆ ಹೆಚ್ಚಿದೆ

ಪೆಟ್ರೋಲ್ ಮತ್ತು ಡಿಸೇಲ್ ದರ ದೇಶೀಯ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೆ ಏರಿದ್ದರೂ ಆಗಸ್ಟ್ ತಿಂಗಳ ಸಗಟುದರ ಹಣದುಬ್ಬರ (ಡಬ್ಲ್ಯೂಪಿಐ) ಶೇ.4.53ಕ್ಕೆ ಇಳಿದಿದೆ. ಜುಲೈ ತಿಂಗಳಲ್ಲಿ ಶೇ.5.09 ಇತ್ತು. ಕಳೆದ ವರ್ಷದ ಅವಧಿಯಲ್ಲಿ ಶೇ.3.24ರಷ್ಟಿತ್ತು. ವಾರಾಂತ್ಯದಲ್ಲಿ ಬಿಡುಗಡೆ ಮಾಡಿದ್ದ ಚಿಲ್ಲರೆ ದರ ಹಣದುಬ್ಬರವು (ಸಿಪಿಐ) ಶೇ.4ರ ಮಟ್ಟದಿಂದ ಕುಸಿದಿತ್ತು.

ಜುಲೈ ತಿಂಗಳಲ್ಲಿ ಶೇ.2.03ರಷ್ಟು ತಗ್ಗಿದ್ದ ಆಹಾರ ಪದಾರ್ಧಗಳ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ.4.04ರಷ್ಟು ತಗ್ಗಿದೆ. ಆಗಸ್ಟ್ ತಿಂಗಳಲ್ಲಿ ಇಂಧನಗಳ ಹಣದುಬ್ಬರ ಶೇ.17.73ರಷ್ಟಿದೆ. ಎಲ್ಪಿಜಿ ಶೇ.46.08, ಡಿಸೇಲ್ ಶೇ.19.90 ಮತ್ತು ಪೆಟ್ರೋಲ್ ಶೇ.16.30ರಷ್ಟು ಹಣದುಬ್ಬರ ಏರಿದೆ. ಆಹಾರ ಪದಾರ್ಥಗಳ ಪೈಕಿ ಆಲೂಗಡ್ಡೆ ಗರಿಷ್ಠ ಪ್ರಮಾಣದಲ್ಲಿ ಅಂದರೆ, ಶೇ.74.89ರಷ್ಟು ಏರಿದೆ. ಆದರೆ, ಈರುಳ್ಳಿ ಮತ್ತು ಹಣ್ಣುಗಳ ಹಣದುಬ್ಬರ ಇಳಿಕೆಯು ಕ್ರಮವಾಗಿ ಶೇ.26.80 ಮತ್ತು ಶೇ.16.40ರಷ್ಟಾಗಿದೆ. ಧಾನ್ಯಗಳ ಹಣದುಬ್ಬರ ಇಳಿಕೆಯು ಮುಂದುವರಿದಿದ್ದು, ಆಗಸ್ಟ್‌ನಲ್ಲಿ ಶೇ.14.23ಕ್ಕೆ ಇಳಿದಿದೆ.

ಆದರೆ, ದೀರ್ಘಾವಧಿ ಬೆಲೆ ಏರಿಕೆಯನ್ನು ಆಧರಿಸಿದ ಪ್ರಮುಖ ಹಣದುಬ್ಬರ (ಕೋರ್ ಇನ್ಫ್ಲೆಷನ್) ಮಾತ್ರ ಜುಲೈ ತಿಂಗಳಲ್ಲಿ ಶೇ.4.8ರಷ್ಟು ಇದ್ದದ್ದು ಆಗಸ್ಟ್‌ನಲ್ಲಿ ಶೇ.5ಕ್ಕೆ ಏರಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ನಿಗದಿ ಮಾಡುವಾಗ ಕೋರ್ ಇನ್ಫ್ಲೆಷನ್ ಅನ್ನು ಪರಿಗಣಿಸುತ್ತದೆ. ಹೀಗಾಗಿ, ಅಕ್ಟೋಬರ್ ತಿಂಗಳ ಹಣಕಾಸು ನೀತಿ ಪರಾಮರ್ಶೆ ವೇಳೆ ಮತ್ತೊಂದು ಸುತ್ತು ಬಡ್ಡಿದರ ಏರಿಸುವ ಸಾಧ್ಯತೆ ಇದೆ ಎಂದು ಬಹುತೇಕ ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ : ಜುಲೈ ತಿಂಗಳಲ್ಲಿ ಶೇ.4.17ಕ್ಕೆ ತಗ್ಗಿದ ಚಿಲ್ಲರೆದರ ಹಣದುಬ್ಬರ

ಈಗಾಗಲೇ ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ಸತತವಾಗಿ ಎರಡು ಬಾರಿ ತಲಾ 25 ಮೂಲ ಅಂಶಗಳಷ್ಟು ಬಡ್ಡಿದರ ಏರಿಸಲಾಗಿದೆ. ಈಗಾಗಲೇ ರೆಪೊದರ ಶೇ.6.50ರಷ್ಟಿದೆ. ಅಕ್ಟೋಬರ್ ತಿಂಗಳಲ್ಲಿ 25 ಮೂಲ ಅಂಶ ಏರಿಸುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ವಿತ್ತೀಯ ವಿವೇಕ ಪಾಲನೆ ಮಾಡಬೇಕಿರುವುದರಿಂದ ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಕಡಿತ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಸದ್ಯಕ್ಕೆ ತಗ್ಗುವ ಸಾಧ್ಯತೆ ಇಲ್ಲ. ಬರುವ ದಿನಗಳಲ್ಲಿ ದರ ಮತ್ತಷ್ಟು ಏರಿ ಹಣದುಬ್ಬರವು ಏರಬಹುದು. ಈ ಹಿನ್ನೆಲೆಯಲ್ಲಿ ಧೀರ್ಘಾವಧಿಯಲ್ಲಿ ಹಣದುಬ್ಬರ ನಿಯಂತ್ರಣದಲ್ಲಿಡಲು ಆರ್ಬಿಐ ಬಡ್ಡಿದರ ಏರಿಕೆ ಮಾಡುವುದು ಅನಿವಾರ್ಯವಾಗುತ್ತದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More