ಸಂಕಲನ | ೨ಜಿ ಸ್ಪೆಕ್ಟ್ರಮ್‌ ಪ್ರಕರಣ ಖುಲಾಸೆ ಸಂಬಂಧದ ಸಮಗ್ರ ವರದಿಗಳು

ಯುಪಿಎ ಸರ್ಕಾರಾವಧಿಯಲ್ಲಿ ದೇಶದಲ್ಲೇ ದೊಡ್ಡ ಸಂಚಲನ ಸೃಷ್ಟಿಸಿದ್ದ ೨ಜಿ ಸ್ಪೆಕ್ಟ್ರಮ್‌ ಹಗರಣ ಸಂಬಂಧ ಎಲ್ಲ ಆರೋಪಿತರು ನಿರಾಪರಾಧಿಗಳು ಎಂದು ದೆಹಲಿ ವಿಶೇ‍ಷ ನ್ಯಾಯಾಲಯ ಪ್ರಕರಣ ವಜಾಗೊಳಿಸಿದೆ. ಈ ಪ್ರಕರಣದ ಸುತ್ತ ‘ಸ್ಟೇಟ್‌’ ಹಲವು ಆಯಾಮಗಳಲ್ಲಿ ಪ್ರಕಟಿಸಿದ ವಿಶೇಷ ವರದಿಗಳು ಇಲ್ಲಿವೆ

ನೋಟು ರದ್ದತಿಯಿಂದ ಆದ ನಷ್ಟದ ಅಂಕಿ-ಅಂಶ ಒಟ್ಟು ಮಾಡಿದರೆ ಅತಿದೊಡ್ಡ ಹಗರಣವೊಂದು ಎದುರಾಗುತ್ತಿತ್ತು. 2ಜಿ ಹಗರಣದಲ್ಲಿ ನಷ್ಟ ಆಗಿದೆ ಎನ್ನಲಾಗಿದ್ದು 1.76 ಲಕ್ಷ ಕೋಟಿ. ನೋಟು ರದ್ದತಿ ನಷ್ಟಕ್ಕೆ ಬಂದರೆ ೨ಜಿಯ 1.76ರ ಪಕ್ಕ ಹತ್ತಕ್ಕಿಂತ ಹೆಚ್ಚು ಸೊನ್ನೆ ಸೇರಿಸಬೇಕಾಗುತ್ತದೇನೋ!

ಹಗರಣದ ಕುರಿತು ಅಂದಿನ ಮಹಾ ಲೆಕ್ಕಪಾಲ ವಿನೋದ್ ರಾಯ್‌ಗೆ ಮಾಹಿತಿ ನೀಡಿದ್ದೇ ಆಂಧ್ರದ ಕಾಂಗ್ರೆಸ್ ಸಂಸದರೊಬ್ಬರು! ಹಾಗಾದರೆ ರಾಯ್ ಅವರನ್ನು ವಿರೋಧಪಕ್ಷದ ನೆಚ್ಚಿನ ವ್ಯಕ್ತಿಯನ್ನಾಗಿ ಮಾಡಿದ ಈ 1.76 ಲಕ್ಷ ಕೋಟಿ ರುಪಾಯಿ ಮೊತ್ತದ ಹಗರಣ ನಿಜಕ್ಕೂ ಏನು? ಅಸಲಿಗೆ ನಡೆದಿದ್ದೇನು?

ರಾಷ್ಟ್ರ ರಾಜಕಾರಣದಲ್ಲಿ ಭ್ರಷ್ಟಾಚಾರ ವಿರುದ್ಧದ ಮಾತು ಮೊದಲ ಆದ್ಯತೆಯಾಗಿ ಮತ್ತೆ ಕಾಣಿಸಿಕೊಂಡಿದೆ. ಇದನ್ನು ಬಿಜೆಪಿ ಕಾಂಗ್ರೆಸ್ ವಿರುದ್ಧದ ಅಸ್ತ್ರವಾಗಿ ಬಳಸಿಕೊಂಡು ಯಶಸ್ವಿ ಕೂಡ ಆಗಿತ್ತು. ಆದರೆ ಗುರುವಾರ ಹೊರಬಿದ್ದ 2ಜಿ ತೀರ್ಪಿನಿಂದ ಪರೋಕ್ಷವಾಗಿ ಬಿಜೆಪಿಗೆ ಹೊಡೆತ ಬಿದ್ದಂತಾಗಿದೆ

ಇಡೀ ೨ಜಿ ಹಗರಣದ ಹೂರಣ ಹೊರಗೆ ಬಂದಿದ್ದೇ ಕೇಂದ್ರದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀರಾ ಅವರ ದೂರವಾಣಿ ಕರೆಗಳನ್ನು ಟ್ಯಾಪ್‌ ಮಾಡಿದ್ದರ ಪರಿಣಾಮವಾಗಿ. ಆದರೆ ರಾಡಿಯಾ ಅವರ ಕರ್ನಾಟಕ ನಂಟು ಮಾತ್ರ ಹೆಚ್ಚೂಕಡಿಮೆ ರಹಸ್ಯವಾಗಿಯೇ ಉಳಿದಿದೆ ಎಂಬುದು ಗಮನಾರ್ಹ

ರಾಜಕೀಯ ಚಕ್ರ ಮತ್ತೊಂದು ಸುತ್ತು ಸುತ್ತಿ ನಿಂತಿದೆ. ಏಪ್ರಿಲ್‌ ವೇಳೆಗೆ ಚುನಾವಣೆಗೆ ಹೋಗುವ ರಾಜ್ಯದ ಮೇಲೆ ‘2 ಜಿ ಖುಲಾಸೆ’ ಯಾವ ಪರಿಣಾಮ ಬೀರಬಹುದೆನ್ನುವ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಕಳೆದ ಚುನಾವಣೆಯಲ್ಲಿ ಬೀರದ ಪರಿಣಾಮ ಈಗ ಬೀರುವುದು ಸಾಧ್ಯವೇ ಎಂದು ಕೇಳಲೂಬಹುದು

ಸಾಕ್ಷ್ಯಾಧಾರಗಳ ಕೊರತೆಯಿಂದ 2ಜಿ ಹಗರಣದ ಎಲ್ಲ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ವಿರುದ್ಧ ದಾಳಿ ಮಾಡಲು ತನ್ನ ಬಳಿ ಇದ್ದ ಪ್ರಮುಖ ಅಸ್ತ್ರವೊಂದು ಬಿಜೆಪಿ ಕಳೆದುಕೊಂಡಂತಾಗಿದೆ. ಜೊತೆಗೆ ಈ ತೀರ್ಪು ಮಹತ್ವದ ರಾಜಕೀಯ ಬೆಳವಣಿಗೆಗೂ ಕಾರಣ ಆಗಬಲ್ಲದು

ಗುರುವಾರ ಬೆಳಿಗ್ಗೆ ಪ್ರಕಟವಾಗಿರುವ ಬಹುಕೋಟಿ 2ಜಿ ಹಗರಣದ ತೀರ್ಪುನ್ನು ಕಟುವಾದ ಪದಗಳಿಂದ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ. ನ್ಯಾಯಮೂರ್ತಿ ಸೈನಿ ನೀಡಿರುವ ತೀರ್ಪು ಅತ್ಯಂತ ಕೆಟ್ಟದಾಗಿದೆ, ಮೇಲ್ಮನವಿ ಸಲ್ಲಿಸಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದಿದ್ದಾರೆ

ಭಾರತದ ಆರ್ಥಿಕ ಮತ್ತು ನೈತಿಕ ವಿಶ್ವಾಸಾರ್ಹತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದ ಬಹು ಕೋಟಿ 2ಜಿ ಹಗರಣದ ನಿರ್ಣಾಯಕ ತೀರ್ಪು ಹೊರಬಿದ್ದಿದೆ. ಎಲ್ಲಾ ಆರೋಪಿಗಳನ್ನು ವಿಶೇಷ ನ್ಯಾಯಾಲಯ ಖುಲಾಸಿಗೊಳಿಸಿದೆ. ಈ ಬಗ್ಗೆ ಯಾವ ನಾಯಕರು ಏನು ಹೇಳಿದ್ದಾರೆ?

ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ದೊಡ್ಡದು ಎಂದು ಹೇಳಲಾಗಿರುವ 2ಜಿ ತರಂಗ ಗುಚ್ಛ ಹಂಚಿಕೆ ಹಗರಣದ ಅಂತಿಮ ತೀರ್ಪು ಗುರುವಾರ ಪ್ರಕಟವಾಗಿದ್ದು, ಮಾಜಿ ಸಚಿವ ಎ ರಾಜಾ, ರಾಜ್ಯಸಭಾ ಸದಸ್ಯೆ ಕನಿಮೋಳಿ ಸೇರಿ ಎಲ್ಲ ಆರೋಪಿಗಳನ್ನೂ ದೆಹಲಿ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More