ಸಂಕಲನ | ಕೋಮು ಗಲಭೆ ಪ್ರಕರಣಗಳ ಸುತ್ತ ‘ದಿ ಸ್ಟೇಟ್‌’ ಪ್ರಕಟಿಸಿದ ವಿಶೇಷ ಲೇಖನಗಳು

ಬಾಬರಿ ಮಸೀದಿ ಧ್ವಂಸಕ್ಕೆ 25 ವರ್ಷ ತುಂಬಿದ ಸಂದರ್ಭ, ಚಿಕ್ಕಮಗಳೂರಿನ ದತ್ತಮಾಲಾ ಜಯಂತಿ, ಹುಣಸೂರಿನ ಹನುಮ ಜಯಂತಿ ವೇಳೆ ಉಂಟಾದ ಪ್ರಕ್ಷುಬ್ದತೆ ಹಾಗೂ ಪರೇಶ್‌ ಮೆಸ್ತಾ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾದ ಕೋಮು ಗಲಭೆ ಸುತ್ತಲಿನ ವರದಿಗಳ ಸಂಕಲನವಿದು

ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ಹೊಣೆಗಾರಿಕೆ ಪತ್ರಕರ್ತರ ಮೇಲೂ ಇರುತ್ತದೆ. ಹಾಗಾಗಿ ಒಂದು ಸುದ್ದಿಯನ್ನು ಪ್ರಕಟಿಸುವಾಗ ಅದರಿಂದ ಯಾವುದೇ ಧರ್ಮ ಅಥವಾ ಸಮುದಾಯವನ್ನು ಕೆರಳಿಸದಂತೆ ಎಚ್ಚರವಹಿಸಬೇಕಾದುದು ತೀರಾ ಅಗತ್ಯ. ಈ ಹಿನ್ನೆಲೆಯಲ್ಲಿ ಕನ್ನಡದ ೫ ಪತ್ರಿಕೆಗಳನ್ನು ಆರಿಸಿಕೊಂಡು ವಿಶ್ಲೇಷಣೆ ಮಾಡುವ ಪ್ರಯತ್ನ ಮಾಡಿದ್ದೇವೆ.

ಶಿಕ್ಷಣ, ಆರೋಗ್ಯ ಮಾಫಿಯಾ, ರಿಯಲ್ ಎಸ್ಟೇಟ್ ದಂಧೆ, ಪಶ್ಚಿಮಘಟ್ಟದ ಪರಿಸರ ನಾಶ, ನದಿ ತಿರುವು ಯೋಜನೆ, ಮಲೆಕುಡಿಯರ ಸಹಿತ ತಳವರ್ಗದ ಜನ ಎದುರಿಸುತ್ತಿರುವ ಸಮಸ್ಯೆಗಳು ಇಲ್ಲಿ ಪರಿಹಾರಕ್ಕಾಗಿ ಕಾದು ಕುಳಿತಿವೆ. ಆದರೆ ಇದ್ಯಾವುದೂ ಚುನಾವಣಾ ವಿಷಯ ಆಗದಿರುವುದು ವಿಪರ್ಯಾಸ.

ಹೊನ್ನಾವರ ಮತ್ತು ಉತ್ತರ ಕನ್ನಡ ಜಿಲ್ಲೆಯ ಇತರ ಭಾಗದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗೆ ಕಾರಣಗಳನ್ನು ಹುಡುಕುವ ಜತೆಗೆ ಪರೇಶ್‌ ಮೇಸ್ತಾನ ಸಾವಿಗೂ ಉತ್ತರ ಹುಡುಕಬೇಕಿದೆ. ಚಂದಾವರದ ಗಲಾಟೆಯಿಂದ ಹೊನ್ನಾವರದ ಶನೇಶ್ವರನ ಉಗಮದವರೆಗಿನ ಟೋಟಲ್‌ ರೀಕಾಲ್‌ ಇಲ್ಲಿದೆ.

ಇನ್ನೂ ಪರಿಪಕ್ವವಾಗಬೇಕಾದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಮತೀಯ ಶಕ್ತಿಗಳು ಯಾವೆಲ್ಲ ರೀತಿಯಲ್ಲಿ ಪ್ರಭಾವ ಬೀರುತ್ತಿವೆ ಎಂಬುದಕ್ಕೆ ಸಾಕ್ಷಿ ಉತ್ತರ ಕನ್ನಡ ಜಿಲ್ಲೆ. ಅಲ್ಲಿನ ವಿದ್ಯಾರ್ಥಿಗಳನ್ನು ಮತೀಯವಾದ ಆವರಿಸಿಕೊಳ್ಳುತ್ತಿರುವುದಕ್ಕೆ ಪುರಾವೆಯಂತಿವೆ ಈ ಎರಡು ನಿದರ್ಶನಗಳು.

ಆತ ಉತ್ತರ ಕನ್ನಡದ ಸಿದ್ದಾಪುರದಲ್ಲಿ ಹಾಸಿಗೆ ಅಂಗಡಿ ಮಾಡಿ ಬದುಕು ಸಾಗಿಸುತ್ತಿದ್ದ. ಹಿಂದೂ, ಮುಸಲ್ಮಾನ ಎನ್ನದೆ ಎಲ್ಲ ಕೋಮಿನವರು ಆತ ಮಾಡಿದ ಹಾಸಿಗೆಯ ಮೇಲೆ ನೆಮ್ಮದಿಯ ರಾತ್ರಿಗಳನ್ನು ಕಳೆದಿದ್ದರು. ಆದರೀಗ ಕೋಮುದ್ವೇಷಕ್ಕೆ ಅಂಗಡಿಗೆ ಬೆಂಕಿ ಇಡಲಾಗಿದೆ. ಇಲ್ಲಿದೆ ಆತನ ನೋವಿನ ಕತೆ.

ಉತ್ತರ ಕನ್ನಡ ಜಿಲ್ಲೆ ಕೋಮು-ದಳ್ಳುರಿಯಲ್ಲಿ ಸಿಲುಕಿದ್ದರೂ ರಾಜ್ಯದ ಮೊದಲ ಮಹಿಳಾ ಪೊಲೀಸ್‌ ಮಹಾ ನಿರ್ದೇಶಕಿ ನೀಲ್ಮಣಿ ಎನ್‌ ರಾಜು ಅವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಇದೀಗ ಪರೇಶ್‌ ಮೇಸ್ತಾ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ಹಸ್ತಾಂತರಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೆರೆಡು ವಾರಗಳಿಂದ ಸಂಭವಿಸುತ್ತಿರುವ ಘಟನಾವಳಿ ಎಲ್ಲರಿಗೂ ನೋವು ತರುವಂಥವು. ಪರೇಶ್ ಮೇಸ್ತ ಸಾವಿಗಾಗಿ ಜಿಲ್ಲೆಯಾದ್ಯಂತ ಜನ ಕಂಬನಿ ಮಿಡಿದಿದ್ದಾರೆ. ಈ ಹೊತ್ತಿನಲ್ಲಿ ಅಮಾಯಕರು ಅನುಭವಿಸುತ್ತಿರುವ ಸಂಕಟ ಎಂಥದ್ದು? ಇಲ್ಲಿವೆ ಕಂಬನಿಯ ಕತೆಗಳು.

ಚುನಾವಣೆಗಳು ಮತ್ತು ರಾಜ್ಯದಲ್ಲಿ ಸಂಭವಿಸಿರುವ ಪ್ರಮುಖ ಕೋಮು ಹಿಂಸಾಚಾರಗಳ ಕುರಿತ ಮಾಹಿತಿ ತಾಳೆ ಹಾಕಿದರೆ, ಬಿಜೆಪಿಯ ಚುನಾವಣಾ ಗೆಲುವಿಗೂ ಮತ್ತು ರಾಜ್ಯದಲ್ಲಿ ಈವರೆಗೆ ಸಂಭವಿಸಿರುವ ಬಹುತೇಕ ಕೋಮು ಹಿಂಸಾಚಾರಗಳಿಗೂ ಇರುವ ನಂಟು ಕಣ್ಣಿಗೆ ರಾಚದೆ ಇರದು.

ಕೋಮುವಾದಿ ರಾಜಕೀಯ ಹುನ್ನಾರಗಳ ವಿರುದ್ಧ ಹೋರಾಡಿ, ನಾಡಿನ ಸೌಹಾರ್ದ ಪರಂಪರೆಯನ್ನು ಪೊರೆದುಕೊಳ್ಳುವ ಸದಾಶಯದಿಂದ ಹುಟ್ಟಿ,15ರ ಹರೆಯದಲ್ಲಿರುವ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ತನ್ನ ಶಕ್ತಿ, ವ್ಯಾಪ್ತಿ ವಿಸ್ತರಣೆಯ ಕನಸು ಕಾಣುತ್ತಿದೆ

ಈ ಬಾರಿ ದತ್ತ ಜಯಂತಿ ಮತ್ತು ಈದ್‌ ಮಿಲಾದ್‌ ಒಂದೇ ದಿನ ಬಂದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕೋಮು ಸೌಹಾರ್ದತೆ ಕಾಪಾಡುವಲ್ಲಿ ಚಿಕ್ಕಮಗಳೂರು ಪೊಲೀಸರು ಸಫಲರಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಎಸ್ಪಿ ಅಣ್ಣಾಮಲೈ ಮತ್ತು ಸತೀಶ್‌ ಆಚಾರ್ಯ ಜುಗಲ್‌ಬಂದಿ.

ಶನಿವಾರ ಈದ್ ಮಿಲಾದ್ ಮತ್ತು ಶೋಭಾಯಾತ್ರೆ ಎರಡೂ ಒಂದೇ ದಿನ ಇದ್ದರೂ ಶಾಂತಿಯುತವಾಗಿ ನಡೆದಿತ್ತು. ಆದರೆ ಭಾನುವಾರ ದತ್ತಜಯಂತಿ ವೇಳೆ ಮತ್ತೆ ಗದ್ದಲ ನಡೆದಿದೆ. ಪರಿಣಾಮವಾಗಿ, ಅಂಗಡಿ-ಮುಂಗಟ್ಟು ಮುಚ್ಚಿದ ಚಿಕ್ಕಮಗಳೂರಿನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.

ಒಂದು ದಿನದ ಅಂತರದಲ್ಲಿ ಈದ್ ಮಿಲಾದ್ ಮತ್ತು ಹನುಮ ಜಯಂತಿ ಬಂದದ್ದು ಹುಣಸೂರು ಪ್ರಕ್ಷುಬ್ಧತೆಗೆ ಕಾರಣ ಎನ್ನುವುದು ಮೇಲ್ನೋಟವಷ್ಟೆ. ಧಾರ್ಮಿಕ ಮನಸ್ಸುಗಳಲ್ಲಿ ಸುಡು-ಕಿಡಿ ಹಚ್ಚಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಹಿತಾಸಕ್ತ ರಾಜಕಾರಣಿಗಳ ಮೇಲಾಟ ನಡೆದಿರುವುದು ಒಳಮರ್ಮ

ಪ್ರತಾಪ್‌ ಸಿಂಹ ಅವರು ತಾವೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತು ದರ್ಪ ತೋರಿದರೋ ಅಥವಾ ತಮಗಿರುವ ಅಧಿಕಾರದಿಂದಲೇ ಹಾಗೆ ವರ್ತಿಸಿದರೋ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಆದರೆ, ಸಾಮಾನ್ಯನೊಬ್ಬ ಹೀಗೆ ಮಾಡಿದ್ದರೆ ಅವನಿಗೆ ಆಗುತ್ತಿದ್ದ ಶಿಕ್ಷೆ ಏನು? ಇಲ್ಲಿದೆ ವಿವರ

ಹುಣಸೂರಿನ ಹನುಮ ಜಯಂತಿಗೆ ಹೊರಟಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ಪೊಲೀಸರು ತಡೆದರು. ನಿಷೇದಾಜ್ಞೆ ಇರುವ ಕಾರಣ ಪಟ್ಟಣ ಪ್ರವೇಶ ನಿರಾಕರಿಸಿದರು. ಆದರೆ ಈ ವೇಳೆಯಲ್ಲಿ ಸಂಸದರು ವರ್ತಿಸಿದ ರೀತಿ ಪೊಲೀಸರನ್ನೇ ಬೆಚ್ಚಿಬೀಳಿಸುವಂತಿತ್ತು. ಅಸಲಿಗೆ ಆಗಿದ್ದೇನು? ಇಲ್ಲಿದೆ ವಿಡಿಯೋ

ಯಾದಗಿರಿ ನಗರದಲ್ಲಿ ಮಂಗಳವಾರ ನಡೆದ ವಿರಾಟ್‌ ಹಿಂದೂ ಸಮಾವೇಶದಲ್ಲಿ ಬಿಜೆಪಿ ಶಾಸಕರೊಬ್ಬರು ಪ್ರಚೋದನಕಾರಿ ಭಾಷಣ ಮಾಡಿದರು. ಇದಕ್ಕೆ ಪೊಲೀಸರು ಮೂಕಸಾಕ್ಷಿಯಾಗಿದ್ದು, ಶಾಸಕರ ವಿರುದ್ಧ ಯಾವುದೇ ಪ್ರಕರಣ ದಾಖಲಾಗದೆ ಇರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಯಾದಗಿರಿಯಲ್ಲಿ ಡಿ.೧೨ರಂದು ನಡೆದ ಹಿಂದೂ ವಿರಾಟ್‌ ಸಮಾವೇಶದಲ್ಲಿ ತೆಲಂಗಾಣ ಶಾಸಕ ರಾಜಾಸಿಂಗ್‌ ಅವರ ಪ್ರಚೋದನಾಕಾರಿ ಭಾಷಣವನ್ನು ‘ದಿ ಸ್ಟೇಟ್‌’ ವರದಿ ಮಾಡಿತ್ತು. ವರದಿ ಗಮನಿಸಿದ ಯಾದಗಿರಿ ಜಿಲ್ಲಾ ಪೊಲೀಸರು ಶಾಸಕ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ

ಬಾಬರಿ ಮಸೀದಿಗೆ ಸಂಬಂಧಿಸಿದಂತೆ ಅಯೋಧ್ಯೆಯ ಆಸ್ತಿ ಹಕ್ಕುದಾರಿಕೆ ಕುರಿತ ವಿವಾದವನ್ನು ಸುಪ್ರೀಂ ವಿಚಾರಣೆಗೆ ಎತ್ತಿಕೊಂಡಿರುವ ಹಿನ್ನೆಲೆಯಲ್ಲಿ, ಸಂಸತ್ತಿನ ಅಷ್ಟಿಷ್ಟು ಚರ್ಚೆಯ ಬಳಿಕ ಬಹುತೇಕ ಮೂಲೆಗೆ ಸೇರಿದ್ದ ಲೆಬರ್ಹಾನ್ ಆಯೋಗದ ವರದಿ ಮತ್ತೆ ಮಹತ್ವ ಪಡೆದುಕೊಂಡು ಮುನ್ನೆಲೆಗೆ ಬಂದಿದೆ

ದೇಶದ ಸಾಮಾಜಿಕ ಮತ್ತು ರಾಜಕೀಯ ಹಂದರವನ್ನೇ ಘಾಸಿಗೊಳಿಸಿದ, ಛಿದ್ರಗೊಳಿಸಿದ ಬಾಬರಿ ಮಸೀದಿ ಧ್ವಂಸ ಘಟನೆಗೆ ಈಗ ಇಪ್ಪತ್ತೈದು ತುಂಬಿದೆ. ಈ ನೆಲದ ಸಹಿಷ್ಣತೆ ಮತ್ತು ಸಹಜೀವನಕ್ಕೆ ಪೆಟ್ಟು ಕೊಟ್ಟ ಕಿಡಿಗೇಡಿತನ ಇನ್ನಾದರೂ ವಿವೇಕದ ಕಡೆ ಹೆಜ್ಜೆ ಹಾಕುತ್ತದೆ ಎಂಬ ನಿರೀಕ್ಷೆ ಕಾಣುತ್ತಿಲ್ಲ!

ಬಾಬರಿ ಮಸೀದಿ ಧ್ವಂಸ ನಂತರ ದೇಶದಲ್ಲಿ ಕೋಮು ಸೌಹಾರ್ದತೆ ವಿಷಮಿಸಿತು. ಆದರೆ, ಅಯೋಧ್ಯೆಯ ರಾಮನ ರಕ್ಷಣೆಗೆ ಹಾಕಿರುವ ಮುಳ್ಳು ತಂತಿಬೇಲಿ ದುರಸ್ತಿ ಮಾಡುವವರು ಅಬ್ದುಲ್ ವಾಹೀದ್‌. ರಾಮ ಲಲ್ಲಾಗೆ ಬಟ್ಟೆ ಹೊಲಿಯುವುದು ಟೈಲರ್ ಸಾದಿಕ್‌ ಅಲಿ. ಇದು ಅಯೋಧ್ಯೆಯ ಸಹಬಾಳ್ವೆ.

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More