ಸಂಕಲನ | ಕೇಂದ್ರದ ಬಜೆಟ್‌ಗೆ ಮುನ್ನೋಟದಂತಿರುವ ವಿಶೇಷ ಸರಣಿ 

2018-19ನೇ ಸಾಲಿನ ಕೇಂದ್ರ ಬಜೆಟ್ ಒಳ- ಹೊರಗುಗಳನ್ನು ಹಲವು ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳುವ ಲೇಖನಗಳನ್ನು ‘ದಿ ಸ್ಟೇಟ್‌’ ಸರಣಿ ರೂಪದಲ್ಲಿ ಕಟ್ಟಿಕೊಟ್ಟಿದೆ. ಈವರೆಗೆ ನಮ್ಮಲ್ಲಿ ಪ್ರಕಟಗೊಂಡ ಲೇಖನಗಳ ಸಂಕಲನ ಇಲ್ಲಿದೆ.

ಭಾರತದ ವಾರ್ಷಿಕ ಬಜೆಟ್ ಎಂದರೆ ಆಡಳಿತಾರೂಢ ಪಕ್ಷದ ಸಾಮಾಜಿಕ ಮತ್ತು ರಾಜಕೀಯ ಆದ್ಯತೆಗಳ ದಿಕ್ಸೂಚಿ. ಆ ಕಾರಣಕ್ಕೆ ಬಜೆಟ್ ತಯಾರಿ ಎಂಬುದು ಒಂದು ದೊಡ್ಡ ಸಾಹಸದ ಕಾರ್ಯ. ಆದರೆ, ಈ ಬಾರಿ ಕೇವಲ ೨೦೧೯ರ ಚುನಾವಣೆ ಗೆಲ್ಲುವುದೊಂದೇ ಬಜೆಟ್ಟಿನ ಪರಮೋದ್ದೇಶವಾದಂತಿದೆ.

2018-19ನೇ ಸಾಲಿನ ಬಜೆಟ್ ಸಿದ್ಧತೆ ಭರದಿಂದ ನಡೆದಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಎಲ್ಲಾ ಭಾಗೀದಾರರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆಯನ್ನು ಬಿರುಸಿನಿಂದ ನಡೆಸುತ್ತಿದ್ದಾರೆ. ಬಜೆಟ್ ಒಳ- ಹೊರಗುಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಜೆಟ್ ಸರಣಿಯ ಮೊದಲ ಕಂತು ಇದು

ಸರ್ಕಾರದ ಸಾಲ ಹೆಚ್ಚುತ್ತಿದೆ ಎಂದರೆ ಹಣಕಾಸು ನಿರ್ವಹಣೆ ಸಮರ್ಪಕವಾಗಿಲ್ಲ ಎಂದೇ ಅರ್ಥ. ದೇಶದ ಸಾಲಕ್ಕೂ ನಮ್ಮ ಕುಟುಂಬಗಳ ಸಾಲಕ್ಕೂ ವ್ಯತ್ಯಾಸ ಏನಿಲ್ಲ. ಪಡೆದ ಸಾಲಕ್ಕೆ ಬಡ್ಡಿ ತೆರಲೇ ಬೇಕು. ಸಾಲದ ಹೊರೆ ಹೆಚ್ಚಾದರೆ ದೇಶದ್ದಾಗಲೀ, ಕುಟುಂಬದ್ದಾಗಲೀ ಅಭಿವೃದ್ಧಿ ಕುಂಠಿತವಾಗುತ್ತದೆ.

ಅಪನಗದೀಕರಣದಿಂದ ತೀವ್ರ ಸಂಕಷ್ಟ ಎದುರಿಸಿದ್ದು ಕೃಷಿ ವಲಯ. ಕೃಷಿ ಉತ್ಪನ್ನಗಳ ದರ ಕುಸಿದು ಕೃಷಿಕರು ನಷ್ಟ ಅನುಭವಿಸಿದರು. ಪ್ರಕೃತಿ ವಿಕೋಪಗಳಿಂದ ಸಂಕಷ್ಟ ಎದುರಿಸುವ ರೈತರಿಗೆ ಸುಸ್ಥಿರ ಅಭಿವೃದ್ಧಿ ಜೊತೆಗೆ ಸುಸ್ಥಿರ ಆರ್ಥಿಕತೆ ರೂಪಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಒತ್ತು ನೀಡಬೇಕಿದೆ.

ಬಜೆಟ್ ಸಿದ್ಧಪಡಿಸುವಾಗ ಹಣದುಬ್ಬರ ನಿಯಂತ್ರಣದಲ್ಲಿದ್ದರೆ ಹಣಕಾಸು ಸಚಿವರ ಕೆಲಸ ಸುಲಭವಾಗಿ, ಲಭ್ಯ ಸಂಪನ್ಮೂಲಗಳ ವಿನಿಯೋಜನೆಗೆ ವಿಸ್ತೃತ ಅವಕಾಶ ಸಿಗುತ್ತದೆ. ಸದ್ಯ ಹಣದುಬ್ಬರ ಶೇ.5ರ ಗಡಿ ದಾಟಿದ್ದು, ವಿತ್ತ ಸಚಿವರು ಸಂಪನ್ಮೂಲ ಹಂಚಿಕೆ ವಿನಿಯೋಜನೆಗೆ ಹೆಚ್ಚಿನ ಕಸರತ್ತು ಮಾಡಬೇಕಾಗಿದೆ.

ತ್ವರಿತ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಹೊರ ಹೊಮ್ಮುತ್ತಿರುವ ಭಾರತ ಅದಕ್ಕಾಗಿ ಹೆಮ್ಮೆ ಪಡಬೇಕಾಗಿಲ್ಲ. ವಾಸ್ತವಿಕ ಅಭಿವೃದ್ಧಿಯ ಮಾನದಂಡವಾಗಿರುವ ಮಾನವ ಅಭಿವೃದ್ಧಿಯಲ್ಲಿ 131ನೇ ಶ್ರೇಣಿಗೆ ಇಳಿದಿದೆ. ಬಜೆಟ್ ಮಂಡಿಸುವ ಮುನ್ನ ವಿತ್ತ ಸಚಿವ ಜೇಟ್ಲಿ ಇತ್ತ ಗಮನಿಸಬೇಕು

2022ರ ವೇಳೆಗೆ ಸರ್ವರಿಗೂ ಸೂರು ಒದಗಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ, ಕೈಗೆಟಕುವ ವಸತಿ ಘಟಕಗಳಿಗೂ ಭಾರಿ ತೆರಿಗೆ ಹೇರುತ್ತಿದೆ. ಜಿಎಸ್ಟಿ ಅಡಿಯಲ್ಲಿ ಕೈಗೆಟಕುವ ವಸತಿ ಘಟಕಗಳಿಗೆ ಸೇವಾ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು. ಆಗ ಮಾತ್ರ ಉದ್ದೇಶಿತ ಗುರಿ ಸಾಧ್ಯವಾಗಬಹುದು

ಆದಾಯ ತೆರಿಗೆ ವಿನಾಯ್ತಿ ನಿರೀಕ್ಷೆ ಇಟ್ಟುಕೊಂಡು ವೇತನವರ್ಗ ಬಜೆಟ್‌ಗಾಗಿ ಕಾಯುತ್ತಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಆರ್ಥಿಕತೆಗೆ ಚೇತರಿಕೆ ನೀಡಲು ಮಾತ್ರವಲ್ಲ, 2019ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ವಿನಾಯ್ತಿ ನೀಡುವ ನಿರೀಕ್ಷೆ ಇದೆ.

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More