ಸಂಕಲನ | ಲೋಕ ತಾಯ್ನುಡಿ ದಿನದ ಪ್ರಯುಕ್ತ ‘ದಿ ಸ್ಟೇಟ್‌’ ಪ್ರಕಟಿಸಿದ ಲೇಖನಗಳು

ಫೆಬ್ರವರಿ ೨೧ರಂದು (ಬೆಂಗಾಳಿ ಭಾಷೆಯಲ್ಲಿ ಎಕೂಷೆ ಫೆಬ್ರವರಿ) ಲೋಕ ತಾಯ್ನುಡಿ ದಿನವನ್ನಾಗಿ ಆಚರಿಸಲಾಗುತ್ತದೆ. ಎಕೂಷೆ ಫೆಬ್ರವರಿ ಮಹತ್ವ, ಇತಿಹಾಸ ಸೇರಿದಂತೆ ಭಾಷೆಗಳ ಅಳಿವು-ಉಳಿವಿಗೆ ಸಂಬಂಧಿಸಿದಂತೆ ‘ದಿ ಸ್ಟೇಟ್‌’ ಪ್ರಕಟಿಸಿದ ವಿಶೇಷ ಲೇಖನಗಳ ಸಂಕಲನ ಇಲ್ಲಿದೆ.

ಭೌಗೋಳಿಕ ಗಡಿಗಳು ಈಗ ದಾಟಲಾರದ ಗೋಡೆಗಳಲ್ಲ; ರಾಷ್ಟ್ರದ ಕಲ್ಪನೆಯಂತೆಯೇ ಅವು ಅಮೂರ್ತ. ಹೀಗಾಗಿ, ಕನ್ನಡದ ಸಮಸ್ಯೆ ಕನ್ನಡದ್ದು ಮಾತ್ರವಲ್ಲ. ಕನ್ನಡ ಭಾಷೆ, ಸಂಸ್ಕೃತಿಯನ್ನು ಅಲ್ಪಸಂಖ್ಯಾತ ನೆಲೆಯಲ್ಲಿ ಇರಿಸುವುದರಿಂದ ಒದಗುವ ಸೌಲಭ್ಯದ ಕುರಿತು ನಾವು ಯೋಜಿಸಿಬೇಕಿದೆ. ಇದು ೧೫ ವರ್ಷಗಳ ಹಿಂದೆ ಬರೆದ ‘ಎಕೂಷೆ ಫೆಬ್ರವರಿ’ ಪುಸ್ತಕದ ಮುನ್ನುಡಿಯ ಆಯ್ದಭಾಗ

ತಾಳುವಿಕೆ ಮತ್ತು ತಾಳಿಕೊಳ್ಳುವಿಕೆ ಗುಣಗಳನ್ನು ಮೈಗೂಡಿಸಿಕೊಳ್ಳದಿದ್ದಾಗ ಅಸಹನೆ ತಲೆ ಎತ್ತುತ್ತದೆ. ಶುದ್ಧ ಕನ್ನಡದ ಪ್ರತಿಪಾದಕರು ತಾವು ವೇದಿಕೆಯಲ್ಲಿ ಆಡುವ ಕನ್ನಡವನ್ನೇ ಮನೆಯಲ್ಲಿ ತಂದೆ-ತಾಯಿ, ನಂಟರೊಡನೆ ಆಡುತ್ತೇವೆಯೇ ಎಂದು ಒಮ್ಮೆ ಯೋಚಿಸಬೇಕು ಎನ್ನುವುದು ಕೆ ವಿ ನಾರಾಯಣ ಹಿತನುಡಿ

ದಕ್ಷಿಣ ಕನ್ನಡವನ್ನು ಹೊರತುಪಡಿಸಿ ಕರ್ನಾಟಕದ ಇತರ ಪ್ರಾಂತ್ಯಗಳ ನಿವಾಸಿಗರಿಗೆ ಸರಿಯಾಗಿ ಕನ್ನಡವನ್ನೂ ಮಾತನಾಡಲು ಬರುವುದಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅನಂತಕುಮಾರ್ ಹೆಗಡೆ ಅವರಿಗೆ ಹವ್ಯಕ ಕನ್ನಡದಲ್ಲಿ ಸುರೇಶ್ ಕಂಜರ್ಪಣೆ ಅವರ ಬಹಿರಂಗ ಪತ್ರ

ಭಾಷೆಯ ವೈವಿಧ್ಯವನ್ನು ಅರಿಯುವ ಆಸಕ್ತಿ ಮತ್ತು ಹವ್ಯಾಸದ ಫಲವಾಗಿ ಕುಂದಾಪ್ರ ಕನ್ನಡದ ಬರಹ, ಆಡುಮಾತು, ಹಾಡು, ನುಡಿಗಟ್ಟಿನ ರೂಪದ ಸಾಹಿತ್ಯವನ್ನು ತಂಡವೊಂದು ಸಂಗ್ರಹಿಸಿದೆ. ಅವರ ಈ ವಿಶಿಷ್ಟ ಸಂಗ್ರಹದ ಒಂದು ಭಾಗವನ್ನು ಇಲ್ಲಿ ಪರಿಚಯಿಸಲಾಗಿದೆ. ಇಲ್ಲಿದೆ ನಮ್ಮ ಉಪಭಾಷಾ ಸೊಬಗು

ಪ್ರಮುಖ ಭಾಷೆಗಳನ್ನು ಪಕ್ಕಕ್ಕಿಡೋಣ. ಹವ್ಯಕ ಕನ್ನಡ, ಕುಂದಾಪ್ರ ಕನ್ನಡದಂತಹ ಚಿಕ್ಕಪುಟ್ಟ ಪ್ರಾದೇಶಿಕ ಆಡುಭಾಷೆಗಳೊಳಗೂ ಪ್ರಾದೇಶಿಕ ಭಿನ್ನತೆಯನ್ನು ಕಾಣಬಹುದು. ತಮ್ಮ ಮನೆಮಾತು ಹವ್ಯಕ ಕನ್ನಡವಾಗಿರುವ ಕೌಶಲ್ಯ ಮಂತ್ರಿಗಳ ಗಮನಕ್ಕೆ ಇದು ಬಾರದಿರುವುದು ಆಶ್ಚರ್ಯ

ಭಾಷೆ ಮನುಷ್ಯನ ಅಸ್ಮಿತೆ. ತನ್ನ ದೈನಂದಿನ ಒಳ ಮತ್ತು ಹೊರ ಲೋಕದೊಂದಿಗೆ ಸಂವಹನ ನಡೆಸುವುದೇ ಭಾಷೆಯ ಮೂಲಕ. ಸಾವಿರಾರು ಭಾಷೆಗಳು ಇಂದು ಬಳಕೆಯಲ್ಲಿದ್ದರೂ, ಸಾವಿರಾರು ಭಾಷೆಗಳು ಅಳಿದು ಹೋಗಿವೆ. ಹಲವು ಅಳಿನಂಚಿನಲ್ಲಿವೆ

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More