ಸಂಕಲನ | ೮೮ನೇ ಮಹಾಮಜ್ಜನದ ಸುತ್ತ ‘ದಿ ಸ್ಟೇಟ್‌’ ಪ್ರಕಟಿಸಿದ ವಿಶೇಷ ವರದಿಗಳು

ಶ್ರವಣಬೆಳಗೊಳದಲ್ಲಿ ಫೆಬ್ರವರಿ ೧೭ರಿಂದ ೨೫ರವರೆಗೆ ನಡೆದ ಬಾಹುಬಲಿ ಮೂರ್ತಿಯ ೮೮ನೇ ಮಹಾಮಸ್ತಾಕಾಭಿಷೇಕ ಉತ್ಸವ ಸಂಬಂಧ ‘ದಿ ಸ್ಟೇಟ್‌’ ಹತ್ತು ಹಲವು ವರದಿ, ವಿಶೇಷ ಲೇಖನ ಹಾಗೂ ದೃಶ್ಯಾವಳಿಗಳನ್ನು ಪ್ರಕಟಿಸಿತು. ಅವುಗಳ ಒಟ್ಟಾರೆ ಸಂಕಲನ ಇಲ್ಲಿದೆ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು 88ನೇ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ 650 ಮೆಟ್ಟಿಲುಗಳ ವಿಂಧ್ಯಗಿರಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಏರುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಉದ್ಘಾಟನೆ ವೇಳೆ ಸಿಎಂ ಕೂಡ ಕಾಲ್ನಡಿಗೆಯಲ್ಲೇ ಬೆಟ್ಟ ಏರಿದ್ದರು

ಮಧ್ಯಾಹ್ನ 1.35ಕ್ಕೆ ಪ್ರಧಾನಿ ಕಾರ್ಯಕ್ರಮವಿದ್ದರೂ ಬೆಳಗ್ಗೆ 10.45ಕ್ಕೆಲ್ಲ ಮುನಿಗಳು, ಮಾತಾಜಿಯವರನ್ನು ಚಾವುಂಡರಾಯ ವೇದಿಕೆಗೆ ತಂದು ಕೂರಿಸಲಾಗಿತ್ತು. ಪ್ರಧಾನಿ ಆಗಮಿಸಿದಾಗ ಏನೆಲ್ಲ ಸಭಾ ನಡವಳಿಕೆಗಳನ್ನು ನಡೆಸಬೇಕೆಂಬ ಕುರಿತು ಮೂರು ಬಾರಿ ರಿಹರ್ಸಲ್ ನಡೆಸಲಾಯಿತು!

ವಿಂಧ್ಯಗಿರಿ ಬೆಟ್ಟದ ಮೇಲೆ ಭಾನುವಾರ ಬೆಳಗ್ಗೆಯೇ ಅಭಿಷೇಕದ ವಿಧಿಗಳು ಆರಂಭವಾಗಿದ್ದವು. ಯಾವುದೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಧ್ಯಪ್ರವೇಶ ಇಲ್ಲದ ಕಾರಣ ನಿಗದಿತ ಸಮಯಕ್ಕೆ ಎಲ್ಲ ರೀತಿಯ ಅಭಿಷೇಕಗಳು, ಪುಷ್ಪಾರ್ಚನೆ ಮತ್ತು ಮಹಾಮಂಗಳಾರತಿ ಮುಗಿದವು.

ಬಾಹುಬಲಿ ಹಿಂಭಾಗ ನಿರ್ಮಿಸಿರುವ ಅಟ್ಟಣಿಗೆ ಏರಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಜಲಾಭಿಷೇಕ ಆರಂಭವಾಗಿ ಅಂತ್ಯಗೊಳ್ಳುವವರೆಗೂ ಅಲ್ಲಿಂದ ಕದಲಲಿಲ್ಲ. ಅವರು ಕೆಳಗಿಳಿದು ಬಂದಾಗ ಬೆಟ್ಟದ ಮೇಲಿದ್ದ ಸಾರ್ವಜನಿಕರು ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು.

ಶ್ರವಣಬೆಳಗೊಳದ ವಿಂಧ್ಯಗಿರಿಯ ನೆತ್ತಿಯಲ್ಲಿರುವ ಗೊಮ್ಮಟ ಮೂರ್ತಿಗೆ ನಡೆಯುತ್ತಿರುವ ೮೮ನೇ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿ ನೋವು ಇದ್ದಾಗಲೂ ೭೦೦ ಮೆಟ್ಟಿಲುಗಳ ಮೂಲಕ ೪೭೦ ಅಡಿಯ ಬೆಟ್ಟ ಹತ್ತಿ, ಅಭಿಷೇಕ ನೆರವೇರಿಸಿದರು.

ಶನಿವಾರದ ರಣಬಿಸಿಲಲ್ಲಿ ಎಳನೀರು, ಕಬ್ಬಿನ ಹಾಲಿನ ಅಭಿಷೇಕದಲ್ಲಿ ಮಿಂದ ಗೊಮ್ಮಟ ಮೂರ್ತಿ ಸಂಜೆಯ ಬಳಿಕ ಭಕ್ತರು ಹರಿಸಿದ ಕ್ಷೀರ ಪ್ರವಾಹದಲ್ಲಿ ಮುಳುಗಿದ. ೧೨ ವ‍ರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಸಂಭ್ರಮಕ್ಕೆ ಶ್ರವಣಬೆಳಗೊಳದ ವಿಂಧ್ಯಗಿರಿ ತೆರೆದುಕೊಂಡಿದೆ.

ಪ್ರತಿ 12 ವರ್ಷಕ್ಕೊಮ್ಮೆ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಕಣ್ತುಂಬಿಕೊಳ್ಳಲು ದೇಶ- ವಿದೇಶಗಳಿಂದ ಪ್ರವಾಸಿಗರ ದಂಡೇ ವಿಂಧ್ಯಗಿರಿಯತ್ತ ಧಾವಿಸುತ್ತಿದೆ. ಸಾವಿರಾರು ವರ್ಷಗಳಿಂದ ತ್ಯಾಗದ ಜೌಚಿತ್ಯವನ್ನು ಜಗತ್ತಿಗೆ ಸಾರುತ್ತಿರುವ ಬಾಹುಬಲಿ ಮೂರ್ತಿಗೆ ಫೆ.17 ರಿಂದ 25ರವರೆಗೆ ನಡೆಯಲಿರುವ ಮಹಾಮಜ್ಜನದ ಮೊದಲ ದಿನದ ಸಂಭ್ರಮವವನ್ನು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಛಾಯಾಗ್ರಾಹಕ ನೇತ್ರರಾಜು.

ಹನ್ನೆರಡು ವರ್ಷಗಳ ಬಳಿಕ ಶ್ರವಣಬೆಳಗೊಳದಲ್ಲಿ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಕರ್ನಾಟಕದಲ್ಲಿ ಜೈನ ಧರ್ಮದ ಪ್ರಭಾವ, ಸಹಿಷ್ಣುತೆ, ಜೈನ ಸಾಹಿತ್ಯ ಕುರಿತಂತೆ ‘ದಿ ಸ್ಟೇಟ್‌’ ಜೊತೆ ಮಾತನಾಡಿದ್ದಾರೆ ಜೈನ ವಿದ್ವಾಂಸ ಪದ್ಮಪ್ರಸಾದ್‌.

ದಕ್ಷಿಣದ ಜೈನಕಾಶಿ ಶ್ರವಣಬೆಳಗೊಳದಲ್ಲಿ ವೈರಾಗ್ಯಮೂರ್ತಿ ಬಾಹುಬಲಿಯ 88ನೇ ಮಹಾಮಜ್ಜನಕ್ಕೆ ಮುನ್ನಾದಿನವಾದ ಶುಕ್ರವಾರದಂದು ಶ್ರವಣಬೆಳಗೊಳದ ದಿಗಂಬರ ಜೈನಮಠಕ್ಕೆ ಚಿನ್ನಲೇಪಿತ ತಗಡುಗಳಿಂದ ನಿರ್ಮಿಸಿರುವ ಒಂದೂವರೆ ಕೋಟಿ ರು. ವೆಚ್ಚದ ಸ್ವರ್ಣರಥ ಅರ್ಪಣೆಯಾಗಿದೆ.

ಶ್ರವಣಬೆಳಗೊಳದ ಗೊಮ್ಮಟ ಮೂರ್ತಿಗೆ ೧೨ ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುವಾಗಲೆಲ್ಲ, ವೈರಾಗ್ಯಕ್ಕೆ ಮಹಾಸಂಕೇತವಾದ ಬಾಹುಬಲಿಯ ಹೆಸರಿನಲ್ಲಿ ಇಷ್ಟೆಲ್ಲ ಖರ್ಚುವೆಚ್ಚ, ಮಜ್ಜನ, ಮಹೋತ್ಸವ ಬೇಕೇ ಎನ್ನುವುದು ಹಲವು ಕಾಲದಿಂದ ಕೇಳಿಬರುತ್ತಿರುವ ಪ್ರಶ್ನೆ

ಕನ್ನಡದ ಅಪರೂಪದ ಕವಿ, ಸಾಹಿತ್ಯ ಪರಿಚಾರಕ ಜಿ ಪಿ ರಾಜರತ್ನಂ. ಇವರ ‘ನನ್ನ ಜೈನಮತದಧರ್ಮ ಸಾಹಿತ್ಯ ಸೇವೆ’ ಸಂಪುಟಗಳು ಇದಕ್ಕೆ ಉದಾಹರಣೆ. ಸಂಪುಟ ೧ರಲ್ಲಿ ಮಹಾಮಸ್ತಾಕಾಭಿಷೇಕ ಕುರಿತು ಅಧ್ಯಯನ ಮಾಡಿ, ತಮ್ಮ ಅನುಭವವನ್ನು ದಾಖಲಿಸಿರುವ ಲೇಖನವನ್ನು ಆಯ್ದು ಇಲ್ಲಿ ಪ್ರಕಟಿಸುತ್ತಿದ್ದೇವೆ.

ವೈರಾಗ್ಯಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಆರಂಭಕ್ಕೆ ಎರಡು ದಿನ ಮೊದಲೇ ಶ್ರವಣಬೆಳಗೊಳದಲ್ಲಿ ಜೈನ ಧರ್ಮೀಯರ ಕಠಿಣ ವ್ರತದ ಸಾರ್ವಜನಿಕ ದರ್ಶನ ನಡೆಯಿತು. ಮುನಿಶ್ರೀ 108 ಶ್ರೇಯಸಾಗರ ಮಹಾರಾಜಸಲ್ಲೇಖನ ಮೂಲಕ ಸಮಾಧಿ ಮರಣ ಹೊಂದಿದರು.

ಗೊಮ್ಮಟನ ದರ್ಶನಕ್ಕೆ ಈಗ ಸಾವಿರಾರು ಭಕ್ತರು, ಪ್ರವಾಸಿಗರ ದಂಡು ಹರಿದುಬರುತ್ತಿದೆ. ಅವರಲ್ಲಿ ಎಲ್ಲರಿಗೂ ವಿಂಧ್ಯಗಿರಿಯ 650 ಮೆಟ್ಟಿಲುಗಳನ್ನು ಹತ್ತಿ ಬಾಹುಬಲಿಯ ದರ್ಶನ ಮಾಡುವುದು ಕಷ್ಟ. ಅಂಥವರ ನೆರವಿಗಾಗಿಯೇ ಇಲ್ಲಿ ಸಜ್ಜಾಗಿ ನಿಂತಿದ್ದಾರೆ 300 ಕ್ಕೂ ಹೆಚ್ಚು ಡೋಲಿವಾಲಾಗಳು.

ಫೆ.17ರಿಂದ ಆರಂಭವಾಗಲಿರುವ ಮಹಾಮಸ್ತಕಾಭಿಷೇಕ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳ ಲಕ್ಷಾಂತರ ಭಕ್ತರು, ಜೈನ ಮುನಿಗಳು, ಪ್ರವಾಸಿಗರು ಶ್ರವಣಬೆಳಗೊಳದತ್ತ ಮುಖ ಮಾಡಿರುವುದರಿಂದ ಎಲ್ಲಿ ನೋಡಿದರಲ್ಲಿ ಬರೀ ಜನಸಾಗರ. ಈ ಹಬ್ಬಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆ ಲಭ್ಯವಾಗಲಿದೆ.

ಬಲವಂತದ ವರ್ಗಾವಣೆಗೊಂಡು ಕೊನೆಗೆ ಚುನಾವಣಾ ಆಯೋಗದ ಮಧ್ಯಪ್ರವೇಶದಿಂದಾಗಿ ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿದಿರುವ ರೋಹಿಣಿ ಸಿಂಧೂರಿ ಅವರೊಂದಿಗೆ ಜಟಾಪಟಿ ನಡೆಸುವ ಸರದಿ ಈಗ ಶ್ರವಣಬೆಳಗೊಳ ಜೈನ ಮಠದ್ದಾಗಿದೆ

“ನಾವು (ಜೈನರು) ಇದುವರೆಗೂ ಸರ್ಕಾರದಿಂದ ಏನನ್ನೂ ಕೇಳಿಲ್ಲ. ಅಹಿಂಸಾಮೂರ್ತಿ ಬಾಹುಬಲಿ ನೆಲೆಸಿರುವ ಬೆಳಗೊಳದ ಸುತ್ತ 5 ಕಿ.ಮೀ. ಪ್ರದೇಶವನ್ನು ಅಹಿಂಸಾ ವಲಯ ಎಂಬುದಾಗಿ ಘೋಷಿಸಬೇಕು” ಎಂದು ಆಚಾರ್ಯ ಪುಷ್ಪದಂತ ಮಹಾರಾಜ್ ಸರ್ಕಾರಕ್ಕೆ ಮನವಿ ಮಾಡಿದರು.

ಹಿಂಸೆಯಿಲ್ಲದ ಜಗತ್ತಿನ ನಿರ್ಮಾಣಕ್ಕೆ ಬಾಹುಬಲಿಯೇ ಸ್ಫೂರ್ತಿ ಎನ್ನಬಹುದು. ಇಂಥ ತ್ಯಾಗಮೂರ್ತಿಯ ಮಹಾಮಸ್ತಕಾಭಿಷೇಕಕ್ಕಾಗಿ ಶ್ರವಣಬೆಳಗೊಳಕ್ಕೆ ನಡೆದುಬಂದಿರುವ ಮುನಿಗಳ ಜೊತೆ ‘ದಿ ಸ್ಟೇಟ್’ ನಡೆಸಿದ ಮಾತುಕತೆ ಮತ್ತು ‘ತ್ಯಾಗಿನಗರ’ದ ಸುತ್ತಾಟದ ಅನುಭವಗಳು ಇಲ್ಲಿವೆ.

12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕವು ದೇಶದ ಬಹುದೊಡ್ಡ ಧಾರ್ಮಿಕ ಉತ್ಸವಗಳಲ್ಲೊಂದು. ವೈರಾಗ್ಯದಿಂದಷ್ಟೇ ಮುಕ್ತಿ ಸಾಧ್ಯ ಎಂಬ ಸಂದೇಶ ಸಾರುವ ಜೈನಮುನಿಗಳ ದಂಡೇ ಇದೀಗ ಶ್ರವಣಬೆಳಗೊಳದಲ್ಲಿ ಬೀಡುಬಿಟ್ಟಿದೆ. ಅವರ ಜೀವನಕ್ರಮ ಹೇಗಿರುತ್ತದೆ ಗೊತ್ತೇ?

ದಕ್ಷಿಣ ಭಾರತದ ಮಹಾಕುಂಭಮೇಳವೆಂದೇ ಪರಿಗಣಿಸಲಾಗಿರುವ, ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಫೆ.7ರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ, ಮಹಾಮಜ್ಜನ ಆರಂಭವಾಗಿದೆ.

ಮಹಾಮಸ್ತಕಾಭಿಷೇಕವೆಂದರೆ ಧಾರ್ಮಿಕ ವಿಧಿಗಳನ್ನು ನೆರವೇರಿಸುವ ಮಹಾ ಉತ್ಸವ ಮಾತ್ರವಲ್ಲ, ಸ್ಥಳೀಯ ಪ್ರವಾಸೋದ್ಯಮ, ಉದ್ಯೋಗಾವಕಾಶ ಮತ್ತು ಆ ಮೂಲಕ ಆರ್ಥಿಕಾಭಿವೃದ್ಧಿ ಮೂಲಗಳನ್ನು ಹೆಚ್ಚಿಸುವ ವೇದಿಕೆಯೂ ಹೌದು ಎಂಬುದನ್ನು ಸಾಬೀತುಪಡಿಸುತ್ತಿದೆ.

ಐತಿಹಾಸಿಕ ಗರಿಮೆಯುಳ್ಳ ವೈರಾಗ್ಯ ಮೂರ್ತಿ ಬಾಹುಬಲಿಗೆ ಮತ್ತೊಂದು ಮಹಾಮಜ್ಜನ ನೆರವೇರಿಸಲು ಶ್ರವಣಬೆಳಗೊಳ ಸಜ್ಜಾಗಿದೆ. ಈ ಹಿಂದೆ ಮೂರು ಮಹಾ ಉತ್ಸವ ಸಂಘಟಿಸಿ, ಮತ್ತೊಂದರ ಹೊಣೆ ಹೊತ್ತಿರುವ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಉತ್ಸವ ಸಂಘಟನೆ ಮತ್ತು ಅದರ ಔಚಿತ್ಯ ಕುರಿತಂತೆ ‘ದಿ ಸ್ಟೇಟ್’ ಜೊತೆ ಮಾತನಾಡಿದ್ದಾರೆ.

೮೮ನೇ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಚಾಲನೆ ದೊರೆಯಿತು. ಶ್ರವಣಬೆಳಗೊಳದಲ್ಲಿ ಫೆ.7 ರಂದು ನಡೆದ ಭಗವಾನ್ ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕ ಉದ್ಘಾಟನಾ ಸಮಾರಂಭವೂ ಸಂತರ ಮತ್ತು ಗಣ್ಯರ ಹಲವು ಭಾವಗಳ ಪ್ರದರ್ಶನ ವೇದಿಕೆಯಾಯಿತು.

ಫೆಬ್ರವರಿ ೧೭ರಿಂದ ೨೫ರ ವರೆಗೆ ನಡೆಯುವ ಮಹಾಮಸ್ತಕಾಭಿಷೇಕ ಸಂದರ್ಭ ಜನ ಸಾಮಾನ್ಯರಿಗೆ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕೆನ್ನುವುದು ಹಾಸನ ಜಿಲ್ಲಾಡಳಿತದ ಇಂಗಿತ. ಆದರೆ, “ಪರಂಪರೆಯಂತೆಯೇ ಮಜ್ಜನ ನಡೆಯುತ್ತದೆ, ಯಾವ ಬದಲಾವಣೆ ಇಲ್ಲ,” ಎನ್ನುತ್ತಿದೆ ಜೈನ ಮಠ.

ಚಂದ್ರಗಿರಿ- ವಿಂಧ್ಯಗಿರಿ ಎಂಬ ಎರಡು ಬೆಟ್ಟಗಳ ನಡುವಿನ ಪುಟ್ಟ ಊರು ಶ್ರವಣಬೆಳಗೊಳ. ಫೆಬ್ರವರಿ ೧೭ರಿಂದ ಆರಂಭವಾಗಿ ಒಂದು ತಿಂಗಳು ನಡೆಯುವ ಮಹಾಮಸ್ತಕಾಭಿಷೇಕಕ್ಕಾಗಿ ಶ್ರವಣಬೆಳಗೊಳ ಎಂಬ ಪುಟ್ಟ ಪಟ್ಟಣ ‘ಮಹಾನಗರ’ದ ರೂಪ ಪಡೆದುಕೊಳ್ಳುವ ಪರಿಯೇ ಸೋಜಿಗ.

ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಶ್ರವಣಬೆಳಗೊಳದಲ್ಲಿ ಫೆಬ್ರವರಿ ೧ರಿಂದ ಅನ್ವಯವಾಗಿ ಮಾರ್ಚ್ ೧ ರವರೆಗೆ ಎಲ್ಲಾ ಮಾಂಸಹಾರಿ ಹೋಟೆಲ್‌ಗಳನ್ನು ಬಂದ್ ಮಾಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಆದೇಶ ಹೊರಡಿಸಿದೆ. ಈ ನಿರ್ಧಾರ ಎಷ್ಟು ಸರಿ ಎಂಬ ಜಿಜ್ಞಾಸೆಯೂ ಶುರುವಾಗಿದೆ.

ವಿಶ್ವವಿಖ್ಯಾತ ಪ್ರವಾಸಿ ತಾಣ ಶ್ರವಣಬೆಳಗೊಳದ ವಿಂಧ್ಯಗಿರಿಯ ನೆತ್ತಿಯಲ್ಲಿ ಆಕಾಶದೆತ್ತರಕ್ಕೆ ತಲೆ ಎತ್ತಿ ನಿಂತಿದೆ ಬಾಹುಬಲಿಯ ಏಕಶಿಲಾಮೂರ್ತಿ. ಐತಿಹಾಸಿಕ ಗರಿಮೆಯುಳ್ಳ ವೈರಾಗಿ ಮೂರ್ತಿ ಬಾಹುಬಲಿಗೆ ಮತ್ತೊಂದು ಮಹಾಮಜ್ಜನ ನೆರವೇರಿಸಲು ಶ್ರವಣಬೆಳಗೊಳ ಸಜ್ಜಾಗಿದೆ.

ಮಹಾಮಸ್ತಕಾಭಿಷೇಕಕ್ಕೆ ಅನ್ಯ ರಾಜ್ಯದಿಂದ ಪರಿವಾರ ಸಮೇತ ಬಂದ ಅಲೆಮಾರಿ ಕುಟುಂಬಗಳು ದಿನವಿಡೀ ದುಡಿಯುತ್ತಿವೆ. ಸರಿಯಾದ ಊಟವಿಲ್ಲದೇ, ಬಟ್ಟೆಯಿಲ್ಲದೆ ಪಡಿಪಾಟಲು ಪಡುತ್ತಿರುವ ಈ ಜನರನ್ನು ಹಾಸನದ ಶ್ರವಣಬೆಳಗೊಳದಲ್ಲಿ ಹೀನಾಯವಾಗಿ ದುಡಿಸಿಕೊಳ್ಳಲಾಗುತ್ತಿದೆ.

ಕಾವ್ಯ ಮತ್ತು ರಾಜಕಾರಣದ ನಂಟನ್ನು ಊಹಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಅಪೂರ್ವೆನಿಸುವ ಈ ನಂಟವನ್ನು ಹಿರಿಯ ರಾಜಕಾರಣಿ ವೀರಪ್ಪ ಮೊಯಿಲಿಯವರು ಸಾಧ್ಯವಾಗಿಸಿಕೊಂಡವರು. ಅವರು ಇದೀಗ, ಬಾಹುಬಲಿ ಕುರಿತು ‘ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ’ ಮಹಾಕಾವ್ಯ ಪ್ರಕಟಿಸಿದ್ದಾರೆ.

ಸಕ್ರಿಯ ರಾಜಕಾರಣ ಮತ್ತು ಸೃಜನಶೀಲ ಸಾಹಿತ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿರುವ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರ ಮೂರನೇ ಮಹಾಕಾವ್ಯ ‘ಶ್ರೀ ಬಾಹುಬಲಿ ಅಹಿಂಸಾದ್ವಿಗ್ವಿಜಯಂ’ ಶ್ರವಣಬೆಳಗೊಳದಲ್ಲಿ ಬುಧವಾರ ಲೋಕಾರ್ಪಣೆಗೊಂಡಿತು.

ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ 175 ಕೋಟಿ ರೂ. ಅನುದಾನ ನೀಡಿದೆ. ಈ ಮಧ್ಯೆ, ಜೈನ ಮಠ ಭಕ್ತರಿಗೆ ಕಳಶಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ರೂ.ದೇಣಿಗೆ ಸಂಗ್ರಹಿಸುತ್ತಿದೆ ಎನ್ನುವ ಸುದ್ದಿ ಚರ್ಚೆಗೆ ಕಾರಣವಾಗಿದೆ.

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More