ಸಂಕಲನ | ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಕುರಿತ ವಿಶೇಷ ವರದಿಗಳು

ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಮೂರು ರಾಜ್ಯಗಳ ಫಲಿತಾಂಶದ ಹಿನ್ನೆಲೆ, ಭವಿಷ್ಯ ರಾಜಕೀಯದ ದಿಕ್ಸೂಚಿ ಕುರಿತು ಹಲವು ಆಯಾಮಗಳಲ್ಲಿ ‘ದಿ ಸ್ಟೇಟ್‌’ ಪ್ರಕಟಿಸಿದ ವರದಿಗಳ ಸಂಕಲನ ಇಲ್ಲಿದೆ

ಈಶಾನ್ಯ ರಾಜ್ಯಗಳಲ್ಲಿ ಎಡಪಕ್ಷಗಳಿಗೆ ಆಗಿರುವ ಹಿನ್ನೆಡೆಯನ್ನು ಸುದೀರ್ಘ ಅಧಿಕಾರದಿಂದ ಎದುರಾಗುವ ಅಡಳಿತ ವಿರೋಧಿ ಅಲೆಗೆ ಆರೋಪಿಸುವುದು ಬಹಳ ಸುಲಭ. ಆದರೆ, ತಮ್ಮದು ‘ಕೇಡರ್ ಬೇಸ್ಡ್ ಪಕ್ಷ’ ಎಂದುಕೊಳ್ಳುವ ಎಡಪಕ್ಷಗಳು ಜನಸಾಮಾನ್ಯರನ್ನು ಏಕೆ ತಾಕುತ್ತಿಲ್ಲ?

ಈಶಾನ್ಯ ಭಾಗದ ಮೂರು ರಾಜ್ಯಗಳಿಗೆ ನಡೆದ ವಿಧಾನಸಭಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಯ ವಿಜಯ ಯಾತ್ರೆ ಮುಂದುವರೆದಿದೆ. ತ್ರಿಪುರಾದಲ್ಲಿ ೨೫ ವರ್ಷಗಳ ಕಾಲ ಆಡಳಿತ ಚುಕ್ಕಾಣಿ ಹಿಡಿದಿದ್ದ ಎಡರಂಗ ನೆಲಕಚ್ಚಿದೆ. ಮೇಘಾಲಯ ಹೊರತುಪಡಿಸಿ, ಕಾಂಗ್ರೆಸ್ ಮತ್ತೆ ಮುಖಭಂಗ ಅನುಭವಿಸಿದೆ.

ಬಿಜೆಪಿಗೆ ತ್ರಿಪುರದಲ್ಲಿ ಅದರದ್ದೇ ಆದ ನೆಲೆ ಇರಲಿಲ್ಲ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಪ್ರತ್ಯೇಕ ರಾಜ್ಯದ ಹೋರಾಟದ ಮುಂಚೂಣಿಯಲ್ಲಿರುವ ಬುಡಕಟ್ಟು ಪಕ್ಷಗಳನ್ನು ಸೇರಿಸಿಕೊಂಡು ಬಿಜೆಪಿ ಚುನಾವಣೆ ಗೆದ್ದಿದೆ. ಇದನ್ನು ಈಶಾನ್ಯದಲ್ಲೂ ಮೋದಿ ಅಲೆಯೆಂದು ವ್ಯಾಖ್ಯಾನಿಸುವುದರಲ್ಲಿ ಅರ್ಥವಿಲ್ಲ.

ಕಾಂಗ್ರೆಸ್ ಜೊತೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಪ್ರಸ್ತಾವವನ್ನು ಸಿಪಿಐ(ಎಂ) ಕೇಂದ್ರ ಸಮಿತಿ ತಿರಸ್ಕರಿಸಿತ್ತು. ತ್ರಿಪುರಾದ ಸೋಲು ಪಕ್ಷದಲ್ಲಿನ ಪೂರ್ವ ಭಾರತದ ಲಾಬಿಯನ್ನು ಇನ್ನಷ್ಟು ಶಿಥಿಲಗೊಳಿಸಿ ಕೇರಳದ ಕಮ್ಯುನಿಷ್ಟರು ಪಕ್ಷದ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡಲಿದೆ.

ಒಂದೆಡೆ ಬಾಂಗ್ಲಾದೇಶದಿಂದ ಎದುರಾಗುತ್ತಿದ್ದ ಬಿಕ್ಕಟ್ಟನ್ನು ಶಮನಗೊಳಿಸಿದ ಹಳೆಬೇರು, ಮತ್ತೊಂದೆಡೆ ಪರಿವರ್ತನೆಯನ್ನು ಬಯಸುತ್ತಿದ್ದ ಹೊಸ ಚಿಗುರು, ಇವೆರಡರ ತಾತ್ವಿಕ ಸಂಘರ್ಷ ತ್ರಿಪುರದಲ್ಲಿ ಮಾಣಿಕ್‍ ಸರ್ಕಾರ್ ಆಡಳಿತವನ್ನು ಅಂತ್ಯಗೊಳಿಸಿತೇ? ‘ಹಿಂದೂಸ್ತಾನ್ ಟೈಮ್ಸ್’ ಒಳನೋಟಗಳು ಹೀಗಿವೆ.

ಹಗರಣಗಳು, ಹದಗೆಟ್ಟ ದೇಶದ ಆರ್ಥಿಕ ಪರಿಸ್ಥಿತಿ ಮತದಾರನ ಮೇಲೆ ಯಾವ ಪರಿಣಾಮವೂ ಬೀರುತ್ತಿಲ್ಲ. ೨೦೧೯ರ ಚುನಾವಣೆಯಲ್ಲೂ ಬಿಜೆಪಿ ಮತ್ತೊಮ್ಮೆ ದೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎನ್ನುವ ವಿಶ್ಲೇಷಣೆ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಕಂಡುಬಂದಿದೆ.

ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಅಧಿಕಾರ ಹಿಡಿಯಲಿರುವ ಬಿಜೆಪಿ ಮೇಘಾಲಯದಲ್ಲಿಯೂ ತಂತ್ರಗಾರಿಕೆಯಿಂದ ಇತರ ಪಕ್ಷಗಳ ಶಾಸಕರನ್ನು ಸೆಳೆದು ಅಲ್ಲಿಯೂ ಸರ್ಕಾರ ರಚಿಸಿದರೆ ಆಶ್ಚರ್ಯವಿಲ್ಲ. ಬಿಜೆಪಿ ೩ ವರ್ಷಗಳ ಹಿಂದೆ ಎಬ್ಬಿಸಿದ ಬದಲಾವಣೆಯ ಅಲೆ ಇನ್ನೂ ಕೆಲಸ ಮಾಡುತ್ತಿದೆಯೆ?

ತ್ರಿಪುರಾದಲ್ಲಿ ಎರಡು ಅಸೆಂಬ್ಲಿ ಮತ್ತು ಇಬ್ಬರು ಮುಖ್ಯಮಂತ್ರಿಗಳಿರುತ್ತಾರೆ. ಒಬ್ಬರು ಸಿಎಂ ಆದರೆ ಮತ್ತೊಬ್ಬರು ಸಿಇಎಂ. ಇಲ್ಲಿ ಸಿಎಂ ಹುದ್ದೆಯಷ್ಟೇ ಸಿಇಎಂ ಹುದ್ದೆ ಪ್ರಭಾವಶಾಲಿ. ಹೀಗಾಗಿ ತ್ರಿಪುರಾದ ಸಂಪೂರ್ಣ ಅಧಿಕಾರ ಬಿಜೆಪಿಗೆ ಬರಬೇಕಾದರೆ 2020 ರ ಟಿಟಿಎಎಡಿಸಿ ಚುನಾವಣೆಯವರೆಗೂ ಕಾಯಬೇಕು.

ಬಿಜೆಪಿಯು ಈಶಾನ್ಯ ರಾಜ್ಯಗಳ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಸ್ವೀಕರಿಸದಿದ್ದರೆ, ಆ ಪಕ್ಷದ ಅತಿರಥ-ಮಹಾರಥರಾದ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಿ ಪ್ರಚಾರ ಮಾಡದಿದ್ದರೆ ಈಗಿನ ಫಲಿತಾಂಶಕ್ಕೆ ಈ ಪರಿಯ ಮಹತ್ವ ಬಂದೊದಗುತ್ತಿರಲಿಲ್ಲ.

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More