ಸಂಕಲನ | ಮಹಾರಾಷ್ಟ್ರ ರೈತರ ಬೃಹತ್ ಕಾಲ್ನಡಿಗೆ ಜಾಥಾ ಕುರಿತ ವರದಿಗಳು

ಸಾಲ ಮನ್ನಾ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರ ರೈತರು ನಡೆಸಿದ ಬೃಹತ್‌ ಕಾಲ್ನಡಿಗೆ ಜಾಥಾ ಯಶಸ್ವಿಯಾಗಿದೆ. ಪ್ರತಿಭಟನೆಗೆ ಮಣಿದ ಸರ್ಕಾರ, ರೈತರ ಬೇಡಿಕೆ ಈಡೇರಿಕೆಗೆ ಒಪ್ಪಿಕೊಂಡಿದೆ. ಈ ಕುರಿತು ‘ದಿ ಸ್ಟೇಟ್‌’ ಪ್ರಕಟಿಸಿದ ಹಲವು ವರದಿಗಳ ಸಂಕಲನ ಇಲ್ಲಿದೆ

ಮಹಾರಾಷ್ಟ್ರದ ರೈತರು ಬರೋಬ್ಬರಿ 180 ಕಿಮೀ ಕಾಲ್ನಡಿಗೆ ಜಾಥಾ ಮಾಡಿ ವಿಧಾನಭವನಕ್ಕೆ ಮುತ್ತಿಗೆ ಹಾಕಿ ಸದ್ಯಕ್ಕೆ ಗೆದ್ದಿದ್ದಾರೆ. ಆದರೆ, ಅನ್ನದಾತರ ಈ ಬೃಹತ್‌ ಪ್ರತಿಭಟನೆಗೆ ಕನ್ನಡ ದಿನಪತ್ರಿಕೆಗಳು ಎಷ್ಟು ಪ್ರಾಮುಖ್ಯತೆ ನೀಡಿವೆ ಎಂಬುದನ್ನು ತಿಳಿಯುವ ಸಣ್ಣ ಪ್ರಯತ್ನವನ್ನು ‘ದಿ ಸ್ಟೇಟ್‌’ ಮಾಡಿದೆ.

24ರ ಹರೆಯದ ಹುಡುಗನೊಬ್ಬ ನಾಸಿಕ್‌ನಿಂದ ಮುಂಬೈನತ್ತ ಸಾಗುತ್ತಿದ್ದ ರೈತರ ಮಹಾಸಾಗರ ಸೇರಿಕೊಂಡು, ತಾನು ಕಂಡ ಶ್ರಮಜೀವಿಗಳ ಪಡಿಪಾಟಲನ್ನು, ನಡಿಗೆಯ ಹೊತ್ತಿನ ಸಂಕಷ್ಟಗಳನ್ನು ದಾಖಲಿಸಿದ್ದಾನೆ. ಈ ಅನುಭವಗಳನ್ನು ‘ದಿ ವೈರ್’ ಜಾಲತಾಣ ಪ್ರಕಟಿಸಿದ್ದು, ಅದರ ಭಾವಸಂಗ್ರಹ ಇಲ್ಲಿದೆ.

ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಗೆಗೆ ಆಗ್ರಹಿಸಿ ಮಹಾರಾಷ್ಟ್ರದ ರೈತರು ಅಖಿಲ ಭಾರತ್ ಕಿಸಾನ್ ಸಭಾ ನೇತೃತ್ವದಲ್ಲಿ ಆರಂಭಿಸಿರುವ ಪಾದಯಾತ್ರೆ ನಾಳೆ ಮುಂಬೈ ತಲುಪಲಿದೆ. ಪ್ರತಿಭಟನೆ ವೇಳೆ ರೈತರು ನೃತ್ಯದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂದಿದೆ.

ಮಹಾರಾಷ್ಟ್ರ ಸರ್ಕಾರ ರೈತರೆದುರು ಮಂಡಿಯೂರಲೇಬೇಕಾದ ಬೃಹತ್ ಪ್ರತಿಭಟನಾ ನಡಿಗೆ ಹಿಂದೆ ಇದ್ದ ಮುಖ್ಯ ವ್ಯಕ್ತಿ ವಿಜು ಕೃಷ್ಣನ್‌. ಅಖಿಲ ಭಾರತ ಕಿಸಾನ್‌ ಸಭಾದ ಜಂಟಿ ಕಾರ್ಯದರ್ಶಿ ಆಗಿರುವ ಕೃಷ್ಣನ್‌, ವಿದ್ಯಾರ್ಥಿ ಆಗಿದ್ದಾಗಿಂದಲೂ ಇಂಥ ದಿಟ್ಟ ಹೋರಾಟಗಳನ್ನು ರೂಪಿಸುತ್ತ ಬಂದಿದ್ದಾರೆ.

ಮುಂಬೈ ತಲುಪಿದ ರೈತರನ್ನು ಭೇಟಿಯಾದ ಸಚಿವ ಚಂದ್ರಕಾಂತ್ ಪಾಟೀಲ್ ಅವರು, ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿದರು. ಆ ಮೂಲಕ, ಸುಮಾರು 50,000 ರೈತರು ನಾಸಿಕ್‌ನಿಂದ ಆರು ದಿನಗಳ ಕಾಲ ನಡೆಸಿದ 180 ಕಿಮೀಗಳ ರೈತರ ಬೃಹತ್ ಪ್ರತಿಭಟನೆ ತೆರೆ ಕಂಡಿದೆ.

ಪ್ರತಿಭಟನಾನಿರತ ರೈತರು ಮುಂಬೈ ತಲುಪಿದ್ದಾರೆ. ಆದರೆ, ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿ ಮುಖಂಡರು ಹಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ, ಮುಖ್ಯಮಂತ್ರಿಯವರು ಸಮಿತಿಯನ್ನೂ ರಚಿಸಿದ್ದಾರೆ. ಸರ್ಕಾರದ ಇಂಥ ನಿರ್ಲಕ್ಷ್ಯದ ಕ್ರಮಕ್ಕೆ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ರೈತರು ಸಾವಿರಾರು ಸಂಖ್ಯೆಯಲ್ಲಿ ನಾಸಿಕ್‌ನಿಂದ ಮುಂಬೈಗೆ ವಿಧಾನಸಭಾ ಮುತ್ತಿಗೆಗಾಗಿ ಮೆರವಣಿಗೆಯಲ್ಲಿ ಬರುತ್ತಿರುವುದು ಟ್ವಿಟರ್‌ನಲ್ಲಿ ಸುದ್ದಿಯಾಗಿದೆ. ಪ್ರತಿಭಟನಾನಿರತ ರೈತ ಮಹಿಳೆಯರ ಹರಿದ ಚಪ್ಪಲಿಗಳು ಮತ್ತು ರಕ್ತಸಿಕ್ತ ಕಾಲುಗಳು ಟ್ವಿಟರ್ ಲೋಕದಲ್ಲಿ ವಿಸ್ಮಯ ಮೂಡಿಸಿದೆ.

ಈ ಬಾರಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹಠ ತೊಟ್ಟಂತೆ ಕಾಣುತ್ತಿರುವ ಮಹಾರಾಷ್ಟ್ರದ ರೈತರು ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನಾ ಜಾಥ ಹಮ್ಮಿಕೊಂಡಿದ್ದು, ಕಳೆದ ಮಂಗಳವಾರ ನಾಸಿಕ್‌ನಿಂದ ಮುಂಬೈನತ್ತ ಹೊರಟ್ಟಿದ್ದಾರೆ.

ಸಂಕಲನ | ಸುಮಿತ್ರಾಬಾಯಿ ಬಾಳ ಕಥನ, ‘ಸೂಲಾಡಿ ಬಂದೋ ತಿರುತಿರುಗೀ’ಯ ೨ ಅಧ್ಯಾಯಗಳು
ಸಂಕಲನ | ರಾಜ್ಯ ರೈತರ ಸಾಲಮನ್ನಾ ವಿವಿಧ ಆಯಾಮಗಳ ವಿಶ್ಲೇಷಣಾ ಲೇಖನಗಳು
ಮೋದಿ ಆಡಳಿತದ ನಾಲ್ಕು ವರ್ಷ | ಹೇಳಿದ್ದೇನು? ಮಾಡಿದ್ದೇನು? ವಿಶ್ಲೇಷಣೆಗಳ ಸರಣಿ ಲೇಖನಗಳು
Editor’s Pick More