ಸಂಕಲನ | ಪೇಯ್ಡ್ ನ್ಯೂಸ್ ಸುತ್ತ ‘ದಿ ಸ್ಟೇಟ್’ ಪ್ರಕಟಿಸಿದ ವಿಶೇಷ ವರದಿಗಳು

ಚುನಾವಣೆ ಸಮೀಪಿಸುತ್ತಿದ್ದಂತೆ ಮಾಧ್ಯಮ ಕ್ಷೇತ್ರದಲ್ಲಿ ಪೇಯ್ಡ್‌ ನ್ಯೂಸ್‌ ಚರ್ಚೆ ವ್ಯಾಪಕವಾಗುತ್ತದೆ. ರಾಜಕಾರಣಿಗಳು ಮತ್ತು ಮಾಧ್ಯಮಗಳ ಒಳಒಪ್ಪಂದದಲ್ಲೇ ವ್ಯವಹಾರ ನಡೆಯುತ್ತದೆ. ಇಂಥ ಪೇಯ್ಡ್‌ ನ್ಯೂಸ್‌‌ ಬಗ್ಗೆ ‘ದಿ ಸ್ಟೇಟ್‌’ ಪ್ರಕಟಿಸಿದ ವಿಶೇಷ ವರದಿಗಳು ಸಂಕಲನ ಇಲ್ಲಿದೆ

ಚುನಾವಣೆ ಸಮೀಪಿಸುತ್ತಿದ್ದಂತೆ ಮಾಧ್ಯಮ ಕ್ಷೇತ್ರದಲ್ಲಿ ಪೇಯ್ಡ್‌ ನ್ಯೂಸ್‌ ಚರ್ಚೆ ವ್ಯಾಪಕವಾಗುತ್ತದೆ. ರಾಜಕಾರಣಿಗಳು ಮತ್ತು ಮಾಧ್ಯಮಗಳ ಒಳಒಪ್ಪಂದದಲ್ಲೇ ವ್ಯವಹಾರ ನಡೆಯುತ್ತದೆ. ಇಂಥ ಪೇಯ್ಡ್‌ ನ್ಯೂಸ್‌‌ ಬಗ್ಗೆ ಬಹಿರಂಗ ಚರ್ಚೆ ಆರಂಭವಾಗಿದ್ದು ೨೦೦೯ರ ಸಾರ್ವತ್ರಿಕ ಚುನಾವಣೆಯಲ್ಲಿ.

ಪ್ರಜಾಪ್ರಭುತ್ವಕ್ಕೆ ಮಾರಕವಾದ ಪೇಯ್ಡ್‌ ನ್ಯೂಸ್‌, ಹಲವು ಮಾಧ್ಯಮಗಳ ಪಾಲಿಗೆ ಕಾಮಧೇನು. ಪ್ಯಾಕೇಜ್‌ ಲೆಕ್ಕದಲ್ಲಿ ಸುದ್ದಿ ಪ್ರಕಟಿಸಲು ಮುಂದಾಗುವ ಮಾಧ್ಯಮಗಳು ಪೇಯ್ಡ್‌ ನ್ಯೂಸ್‌ ಅನ್ನು ಕೋಟ್ಯಂತರ ರು. ಮಾರುಕಟ್ಟೆ ಆಗಿಸಿವೆ. ಹಣ ನೀಡದಿದ್ದಕ್ಕೆ ಸುದ್ದಿ ಪ್ರಕಟಿಸಿದ ನಿರ್ಧಾರ ಮಾಡಿದ್ದೂ ಇದೆ

ಪೇಯ್ಡ್‌ ನ್ಯೂಸ್‌ ಹಾವಳಿಯಿಂದ ಮಾಧ್ಯಮಗಳ ಮೂಗುದಾರ ಹಣಬಲ ಹೊಂದಿರುವ ರಾಜಕಾರಣಿಗಳಿಗೆ ಹಸ್ತಾಂತರವಾಗಿದೆ. ಮಾಧ್ಯಮಗಳಲ್ಲೂ ಕಾರ್ಪೊರೆಟ್ ವ್ಯವಸ್ಥೆ ಬಂದಿದ್ದರಿಂದ ಪೇಯ್ಡ್‌ ನ್ಯೂಸ್‌ ಹಾವಳಿ ಹೆಚ್ಚಾಗಿದೆ ಎನ್ನುವ ಮಾತಿದೆ. ಈ ಬಗ್ಗೆ‌ ಮಾಧ್ಯಮ, ಪತ್ರಕರ್ತ, ರಾಜಕಾರಣಿಗಳ ನಿಲುವು ಏನಿರಬಹುದು?

ಪೇಯ್ಡ್‌‌ ನ್ಯೂಸ್‌ ನಿರ್ಬಂಧಿಸಲು ಚುನಾವಣಾ ಆಯೋಗದ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂಬುದಕ್ಕೆ ಈಚೆಗೆ ದಾಖಲಾಗಿರುವ ಪ್ರಕರಣಗಳೇ ಸಾಕ್ಷಿ. ಅಸಹಾಯಕತೆ ವ್ಯಕ್ತಪಡಿಸುವ ಆಯೋಗ, ಲಗಾಮು ಇಲ್ಲದ ಮಾಧ್ಯಮಗಳು ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಿವೆ ಎಂಬುದು ವಾಸ್ತವ

ತಮ್ಮ ಕಾರ್ಯಕ್ಷೇತ್ರ, ವ್ಯಾಪ್ತಿ ಮತ್ತು ಬದ್ಧತೆಯಿಂದ ವಿಮುಖಗೊಳ್ಳುತ್ತಿರುವ ಭಾರತೀಯ ಮಾಧ್ಯಮಗಳನ್ನು ಎಚ್ಚರಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ. ಈ ಮಧ್ಯೆ, ಮಾಧ್ಯಮಗಳನ್ನು ಅಗ್ನಿಪರೀಕ್ಷೆಗೆ ಒಡ್ಡಿರುವ ಪೇಯ್ಡ್‌ ನ್ಯೂಸ್‌ ಪಿಡುಗನ್ನು ನಿಯಂತ್ರಿಸುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More