ಅಭಿಪ್ರಾಯ | ನ್ಯಾಯಮೂರ್ತಿಗಳು ಬರೆದಿರುವ ಪತ್ರದಲ್ಲಿ ಹೇಳದೆ ಉಳಿದಿದ್ದೆಷ್ಟು?

ತಮ್ಮ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಿಜೆಐ ವಿಫಲರಾಗಿದ್ದಾರೆ. ಇದಲ್ಲದೆ, ಹಿರಿಯ ನ್ಯಾಯಮೂರ್ತಿಗಳನ್ನು ಗಂಭೀರವಾಗಿ ಪರಿಗಣಿಸದ ಕಾರಣ ಅವರು ತಮ್ಮ ದೂರನ್ನು ಹೇಳಿಕೊಳ್ಳಲು ಬೇರಾವುದೇ ಮಾರ್ಗ ಉಳಿಯಲಿಲ್ಲ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತಿದೆ

ಹಿರಿತನದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಾಧೀಶರ ನಂತರದ ಸ್ಥಾನದಲ್ಲಿರುವ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಇಂದು ನಡೆಸಿದ ಪತ್ರಿಕಾಗೋಷ್ಠಿ ಹಾಗೂ ಮುಖ್ಯ ನ್ಯಾಯಾಮೂರ್ತಿಗಳಿಗೆ ಅವರು ಬರೆದಿರುವ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದು ಸಹಜವಾಗಿಯೇ ಈ ಸಾಂವಿಧಾನಿಕ ಸಂಸ್ಥೆಯೆಡೆಗೆ (ಸುಪ್ರೀಂ ಕೋರ್ಟ್‌) ಸಾಕಷ್ಟು ಕುತೂಹಲ, ಆತಂಕ ಹಾಗೂ ಭಯಕ್ಕೆ ಕಾರಣವಾಗಿದೆ. ಅಲ್ಲದೆ, ಈ ಸನ್ನಿವೇಶವನ್ನು ನಿಭಾಯಿಸುವ ಅದರ ಸಾಮರ್ಥ್ಯದ ಬಗ್ಗೆಯೂ ಗಮನಸೆಳೆಯಲಿದೆ.

ನ್ಯಾಯಮೂರ್ತಿಗಳು ತಮ್ಮ ವೃತ್ತಿಯ ಬಗ್ಗೆ ಅಥವಾ ತಾವು ಪ್ರತಿನಿಧಿಸುತ್ತಿರುವ ಸಂಸ್ಥೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಆದರೆ, ನ್ಯಾಯಮೂರ್ತಿಗಳಾದ ಚೆಲಮೇಶ್ವರ್, ಗೊಗೊಯ್, ಜೊಸೆಫ್‌ ಮತ್ತು ಲೋಕೂರ್ ಅವರು ಬರೆದಿರುವ ಪತ್ರವು, ಮುಖ್ಯ ನ್ಯಾಯಮೂರ್ತಿಯವರು ಆಡಳಿತಾತ್ಮಕ ವಿಚಾರದಲ್ಲಿ ನಡೆದುಬಂದಿರುವ ಸಂಪ್ರದಾಯವನ್ನು ಪಾಲಿಸುತ್ತಿಲ್ಲ ಎನ್ನುವುದನ್ನು ಸೂಚಿಸುತ್ತಿದೆ. ಆಡಳಿತಾತ್ಮಕ ನಿರ್ಧಾರಗಳು ನ್ಯಾಯಿಕ ನಿರ್ಧಾರಗಳ ಮೇಲೆಯೂ ಪರಿಣಾಮ ಬೀರಬಲ್ಲಂತಹವು; ಮುಂದುವರೆದು, ಯಾವ ಪೀಠ ಪ್ರಕರಣವನ್ನು ಆಲಿಸುತ್ತದೆ ಎನ್ನುವುದು ಫಲಿತಾಂಶದ ಮೇಲೆಯೂ ಪ್ರಭಾವ ಬೀರುತ್ತದೆ. ಮುಖ್ಯನ್ಯಾಯಮೂರ್ತಿಯವರು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ನಿಯಮಾವಳಿಗಳ ಕುರಿತಾದ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ಬದಲಾಗಿ ಮತ್ತೊಂದು ಪೀಠಕ್ಕೆ ಏಕಪಕ್ಷೀಯವಾಗಿ ಬದಲಾಯಿಸಿದ್ದರ ಬಗ್ಗೆ ಈ ನ್ಯಾಯಮೂರ್ತಿಗಳು ಅಸಂತುಷ್ಟರಾಗಿದ್ದರು ಎನ್ನುವುದನ್ನು ಪತ್ರ ತಿಳಿಸುತ್ತದೆ. ಅಲ್ಲದೆ, ನ್ಯಾಯಮೂರ್ತಿ ಗೊಗೊಯ್‌ ಅವರು ಪತ್ರಿಕಾಗೋಷ್ಠಿಯಲ್ಲಿ, ನ್ಯಾಯಮೂರ್ತಿ ಲೋಯಾ ಅವರ ಪ್ರಕರಣದ ವಿಚಾರಣೆಯನ್ನು ಹಿರಿಯ ನ್ಯಾಯಮೂರ್ತಿಗಳಿಂದ ಹೊರತಾದ ಪೀಠಕ್ಕೆ ನೀಡಿರುವುದರ ಬಗ್ಗೆಯೂ ತಾವುಗಳು ಮುಖ್ಯ ನ್ಯಾಯಮೂರ್ತಿಗಳಲ್ಲಿ ಪ್ರಸ್ತಾಪಿಸಿರುವ ಬಗ್ಗೆ ಹೇಳಿದ್ದಾರೆ.

ನ್ಯಾಯವಾದಿ ಹರೀಶ್ ಬಿ ನರಸಪ್ಪ
ಇದನ್ನೂ ಓದಿ : ಬಂಡಾಯವೆದ್ದ ನ್ಯಾಯಮೂರ್ತಿಗಳು ಸಿಜೆಐಗೆ ಬರೆದ ಪತ್ರದಲ್ಲಿ ಏನಿದೆ?

ಪತ್ರಿಕಾಗೋಷ್ಠಿ ಮತ್ತು ಪತ್ರ ಎರಡು ವಿಷಯಗಳನ್ನು ಹೇಳುತ್ತವೆ: ಮೊದಲನೆಯದು, ಪ್ರಮುಖ ವಿಷಯಗಳಲ್ಲಿ ತಮ್ಮ ಹಿರಿಯ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮುಖ್ಯ ನ್ಯಾಯಮೂರ್ತಿಗಳು ವಿಫಲರಾಗಿದ್ದಾರೆ ಎನ್ನುವುದು, ಎರಡನೆಯದು ಈ ವಿಚಾರದಿಂದ ಉಂಟಾಗಿರುವ ತೀವ್ರ ಅಸಂತೋಷ. ಇದಲ್ಲದೆ, ಹಿರಿಯ ನ್ಯಾಯಮೂರ್ತಿಗಳನ್ನು ಒತ್ತರಿಸಲಾಗಿದ್ದ ಕಾರಣ ಅವರು ದೂರನ್ನು ಹೇಳಿಕೊಳ್ಳಲು ಬೇರಾವುದೇ ಮಾರ್ಗ ಉಳಿಯಲಿಲ್ಲ ಎನ್ನುವುದು. ದೊಡ್ಡ ಅತಂಕವೆಂದರೆ, ಈ ಪತ್ರವು ಅದು ಹೇಳುತ್ತಿರುವುದಕ್ಕಿಂತಲೂ ಹೆಚ್ಚಿನದನ್ನು ಅಡಗಿಸಿಕೊಂಡಿದೆಯೇ ಎನ್ನುವುದು; ಹಾಗಿದ್ದಲ್ಲಿ, ಅದನ್ನು ನಾವು ಪರಿಹರಿಸುವುದು ಹೇಗೆ?

ಲೇಖಕರು, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More