ಸಂಕಲನ | ಕೇಂದ್ರ ಬಜೆಟ್‌ ಕುರಿತು ವಿಷಯತಜ್ಞರಿಂದ ವಿಶ್ಲೇಷಣಾತ್ಮಕ ಲೇಖನಗಳು

ವಿತ್ತ ಸಚಿವ ಅರುಣ್‌ ಜೇಟ್ಲಿ ಫೆಬ್ರವರಿ ೧ರಂದು ಕೇಂದ್ರ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ಯಾವ ವಲಯಕ್ಕೆ ಆದ್ಯತೆ ನೀಡಲಾಗಿದೆ, ಯಾರಿಗೆ ಅನುಕೂಲ, ಯಾರಿಗೆ ಅನನುಕೂಲ ಎಂಬುದನ್ನು ವಿವರಿಸಿ ‘ದಿ ಸ್ಟೇಟ್‌’ ಹಲವು ವಿಶ್ಲೇಷಣಾತ್ಮಕ ಲೇಖನಗಳನ್ನು ಪ್ರಕಟಿಸಿದೆ. ಆ ಲೇಖನಗಳ ಸಂಕಲನ ಇಲ್ಲಿದೆ

ಭಾರತದ ವಾರ್ಷಿಕ ಬಜೆಟ್ ಎಂದರೆ ಆಡಳಿತಾರೂಢ ಪಕ್ಷದ ಸಾಮಾಜಿಕ ಮತ್ತು ರಾಜಕೀಯ ಆದ್ಯತೆಗಳ ದಿಕ್ಸೂಚಿ. ಆ ಕಾರಣಕ್ಕೆ ಬಜೆಟ್ ತಯಾರಿ ಎಂಬುದು ಒಂದು ದೊಡ್ಡ ಸಾಹಸದ ಕಾರ್ಯ. ಆದರೆ, ಈ ಬಾರಿ ಕೇವಲ ೨೦೧೯ರ ಚುನಾವಣೆ ಗೆಲ್ಲುವುದೊಂದೇ ಬಜೆಟ್ಟಿನ ಪರಮೋದ್ದೇಶವಾದಂತಿದೆ.

ಬಜೆಟ್‌ನಲ್ಲಿ ಘೋಷಿಸಲಾದ ಆರೋಗ್ಯ ವಿಮಾ ಯೋಜನೆ ಹೊಸತೇನಲ್ಲ! ಪ್ರತಿ ಕುಟುಂಬಕ್ಕೆ ಲಕ್ಷ ರು. ವಿಮೆ ಕಲ್ಪಿಸಲಾಗುವುದು ಎಂದು ಕಳೆದ ವರ್ಷವೇ ಜೇಟ್ಲಿ ಹೇಳಿದ್ದರು. ಆದರೆ, ಅನುಷ್ಠಾನಗೊಂಡಿಲ್ಲವಷ್ಟೆ. ಈ ಯೋಜನೆಯ ರೂಪುರೇಷೆ ಅಂತಿಮಗೊಂಡಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿದೆ.

ಅಪನಗದೀಕರಣದ ನಂತರ ದೇಶ ಎದುರಿಸಿದ ಅತಿ ದೊಡ್ಡ ಸಮಸ್ಯೆ ನಿರುದ್ಯೋಗ. ಆರ್ಥಿಕ ಚೇತರಿಕೆಗೆ ಮೂಲದ್ರವ್ಯವಾಗಿರುವ ಉದ್ಯೋಗ ಸೃಷ್ಟಿ ಸರ್ಕಾರಕ್ಕೆ ದೊಡ್ಡ ಸವಾಲು. ಹಾಗಾದರೆ, ವಿತ್ತ ಸಚಿವ ಅರುಣ್ ಜೇಟ್ಲಿಯವರು, ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಏನೇನು ಪರಿಹಾರೋಪಾಯ ನೀಡಿದ್ದಾರೆ?

ಸಾಮಾನ್ಯವಾಗಿ ಒಳ್ಳೆಯ ಆರ್ಥಿಕ ಯೋಜನೆಗಳಲ್ಲಿ ಮಾತಿಗಿಂತ ವಿವರಗಳು ಮುಖ್ಯವಾಗಬೇಕು. ಗುರಿಯನ್ನು ಮುಟ್ಟಲು ದಾರಿಯೂ ಸ್ಪಷ್ಟವಾಗಿರಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ಒಳ್ಳೆಯ ದರ, ಬೆಂಬಲ ಬೆಲೆ ಸಿಗುವಂತಾಗಬೇಕು, ನಿಜ. ಆದರೆ ಅದಕ್ಕೆ ಇಟ್ಟಿರುವ ಹಣ ಕೇವಲ 2,000 ಕೋಟಿ ರುಪಾಯಿ!

ಸಾಮಾಜಿಕ ಒಳಗೊಳ್ಳುವಿಕೆ, ರೈತಾಪಿ ವರ್ಗ, ಬಡವರು, ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, 2014ರ ಮೊದಲ ಬಜೆಟ್ ವೇಳೆಯೇ ಇದನ್ನು ಸಾಕಾರಗೊಳಿಸಿದ್ದರೆ ಇಷ್ಟು ಹೊತ್ತಿಗೆ ಮೋದಿಯವರ ‘ನವ ಭಾರತ’ದ ಕನಸು ಈಡೇರುತ್ತಿತ್ತು, ಅಲ್ಲವೇ?

ಎನ್‌ಡಿಎ ಸರ್ಕಾರದ ಪೂರ್ಣಪ್ರಮಾಣದ ಕೊನೆಯ ಬಜೆಟ್‌ ಎನ್ನುವ ಕಾರಣದಿಂದ ವಿಶೇಷ ಗಮನ ಸೆಳೆದಿದ್ದ ೨೦೧೮-೧೯ರ ಕೇಂದ್ರ ಬಜೆಟ್‌ ದಿಕ್ಸೂಚಿ ಇಲ್ಲದ ನಾವೆಯಂತಿದೆ. ಜನಪ್ರಿಯ ಯೋಜನೆಗಳನ್ನು ರೂಪಿಸಲು ಮುಂದಾದರೂ ಕಾಡುತ್ತಿರುವ ಆರ್ಥಿಕ ಸಮಸ್ಯೆಗಳಿಗೆ ಮಾತ್ರ ಉತ್ತರ ಸಿಕ್ಕಿಲ್ಲ.

ಕಳೆದ ನಾಲ್ಕು ವರ್ಷಗಳ ತಮ್ಮ ಆಡಳಿತ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಎಚ್ಚರಿಕೆಯಿಂದ ಮತ್ತು ಪ್ರಜ್ಞಾಪೂರ್ವಕವಾಗಿ ಕಟ್ಟಿದ್ದು ದೇಶವನ್ನಲ್ಲ; ಬದಲಾಗಿ, ಮೋದಿ ಎಂಬ ತಮ್ಮದೇ ಕಥನವನ್ನು, ತಮ್ಮದೇ ವರ್ಚಸ್ಸನ್ನು. ಈ ಮಾತಿಗೆ, 2018ರ ಕೇಂದ್ರ ಬಜೆಟ್ ತಾಜಾ ನಿದರ್ಶನ.

115 ಜಿಲ್ಲೆಗಳನ್ನು ಮಾದರಿ ಜಿಲ್ಲೆಗಳನ್ನಾಗಿ ಮಾಡಲು ನಿರ್ಧಾರ. ಕ್ಷಯ ಪೀಡಿತರಿಗೆ ಮಾಸಿಕ 500 ರುಪಾಯಿ. ಪ್ರತಿ ಕುಟುಂಬಕ್ಕೆ 5 ಲಕ್ಷ ಮೌಲ್ಯದ ಆರೋಗ್ಯ ವಿಮೆ. ಗಂಗಾ ಶುದ್ಧೀಕರಣಕ್ಕಾಗಿ 187 ಯೋಜನೆ ಮಂಜೂರು. 60 ಕೋಟಿ ಜನಧನ್ ಖಾತೆ ಪ್ರಾರಂಭ. ಕೃಷಿ ಅಭಿವೃದ್ಧಿಗೆ ಆದ್ಯತೆ.

ವಿತ್ತ ಸಚಿವ ಅರುಣ್ ಜೇಟ್ಲಿ ಆದಾಯ ತೆರಿಗೆಯನ್ನು ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ. ಹಳೆಯ ಸ್ಯ್ಟಾಂಡರ್ಡ್ ಡಿಡಕ್ಷನ್ ವ್ಯವಸ್ಥೆ ಜಾರಿಗೆ ತಂದು, ₹40,000ಕ್ಕೆ ಹೆಚ್ಚುವರಿ ಆದಾಯ ತೆರಿಗೆ ವಿನಾಯ್ತಿ ನೀಡಿದ್ದಾರೆ. ವಾಸ್ತವವಾಗಿ ಇದರಿಂದ ತೆರಿಗೆದಾರರಿಗೆ ಯಾವುದೇ ಉಪಯೋಗ ಆಗಿಲ್ಲ!

2019ರ ಚುನಾವಣೆ ಹೊತ್ತಿಗೆ ಮತಬೆಳೆಯ ಫಸಲು ಪಡೆಯಲು ಸಿದ್ಧವಾಗಿರುವ ನರೇಂದ್ರ ಮೋದಿ ಸರ್ಕಾರ, ಅಭಿವೃದ್ಧಿಯ ಕನಸು ಬಿತ್ತಿದೆ. ಡಿಜಿಟಲ್ ಮಂತ್ರ ಬದಿಗೆ ಸರಿಸಿ ಕೃಷಿಕರ ಅಭ್ಯುದಯ ಗುನುಗುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಬಜೆಟ್ ಮಂಡನೆಯಲ್ಲಿ ಜಾಣ್ಮೆ ಮೆರೆದಿದ್ದಾರೆ.

ಅರುಣ್ ಜೇಟ್ಲಿ ಬಜೆಟ್ ಬಗ್ಗೆ ತೀವ್ರ ನಿರಾಸೆ ವ್ಯಕ್ತಪಡಿಸಿರುವ ಷೇರುಪೇಟೆಯಲ್ಲಿ ಶುಕ್ರವಾರ ರಕ್ತದೋಕುಳಿ ನಡೆಯಿತು. ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಶೇ.1ರಿಂದ 6ರಷ್ಟು ಕುಸಿದವು. ರಿಲಯನ್ಸ್ ನಂತಹ ದೈತ್ಯಕಂಪನಿಗಳು ಷೇರುಗಳೂ ಗರಿಷ್ಠ ಕುಸಿದವು.

ಕೃಷಿ ಕ್ಷೇತ್ರಕ್ಕೆ ಈ ಸಲದ ಕೇಂದ್ರ ಬಜೆಟ್‌ನಲ್ಲಿ ಆದ್ಯತೆ ಸಿಕ್ಕಿದೆ. ಆದರೆ, ರೈತರ ಸಾಲ ಮನ್ನಾ ಮಾಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ಮುಂದೆ ಬರಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಎದುರಾಗುವ ಸಂಭವವಿದೆ.

2018-19ನೇ ಸಾಲಿನ ಕೇಂದ್ರ ಬಜೆಟ್ ಒಳ- ಹೊರಗುಗಳನ್ನು ಹಲವು ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳುವ ಲೇಖನಗಳನ್ನು ‘ದಿ ಸ್ಟೇಟ್‌’ ಸರಣಿ ರೂಪದಲ್ಲಿ ಕಟ್ಟಿಕೊಟ್ಟಿದೆ. ಈವರೆಗೆ ನಮ್ಮಲ್ಲಿ ಪ್ರಕಟಗೊಂಡ ಲೇಖನಗಳ ಸಂಕಲನ ಇಲ್ಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More