ಮೊಬೈಲ್, ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ

ಬ್ಯಾಂಕ್ ಖಾತೆ, ಸಿಮ್, ಪಾಸ್‌ಪೋರ್ಟ್ ಸೇರಿದಂತೆ ಹಲವು ಸೇವೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಮೊದಲು ಮೊಬೈಲ್, ಬ್ಯಾಂಕ್ ಖಾತೆಗಳಿಗೆ ಮಾ.31ರೊಳಗಾಗಿ ಆಧಾರ್ ಲಿಂಕ್ ಮಾಡುವಂತೆ ಆದೇಶಿಸಲಾಗಿತ್ತು

ಬ್ಯಾಂಕ್ ಖಾತೆ, ಮೊಬೈಲ್ ಹಾಗೂ ಪಾಸ್‌ಪೋರ್ಟ್ ಸೇರಿದಂತೆ ಹಲವು ಸೇವೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಮೊದಲು ಮೊಬೈಲ್ ಹಾಗೂ ಬ್ಯಾಂಕ್ ಖಾತೆಗಳಿಗೆ ಮಾ.31ರೊಳಗಾಗಿ ಆಧಾರ್ ಲಿಂಕ್ ಮಾಡುವಂತೆ ಆದೇಶಿಸಲಾಗಿತ್ತಾದರೂ ಆಧಾರ್ ಕಾಯಿದೆ ಕ್ರಮಬದ್ಧವೇ ಎಂಬುದರ ಕುರಿತು ನ್ಯಾಯಾಲಯ ಸ್ಪಷ್ಟ ನಿಲುವಿಗೆ ಬರುವ ತನಕ ಆಧಾರ್ ಲಿಂಕ್ ಮಾಡಲು ಅವಕಾಶವನ್ನು ವಿಸ್ತರಿಸಲಾಗಿತ್ತು.

ಆದರೆ, ಸಮಾಜಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಲು ಹಾಗೂ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಿಂದೆಯೇ ಆದೇಶ ನೀಡಿದೆ. ಖಾಸಗಿ ಹಾಗೂ ಸಾರ್ವಜನಿಕ ಸೇವೆಗಳಿಗೆ ಆಧಾರ್ ಲಿಂಕ್ ಮಾಡಲು ಸೂಚಿಸಿರುವ ಸರಕಾರದ ನಿಲುವು ಖಾಸಗಿ ಸ್ವಾತಂತ್ರ್ಯಕ್ಕೆ ತೊಂದರೆ ಉಂಟುಮಾಡಲಿದೆಯೇ ಎಂಬುದರ ಕುರಿತು ನ್ಯಾಯಾಲಯ ಸ್ಪಷ್ಟ ಮಾಡುವವರೆಗೆ ಸದ್ಯ ಆಧಾರ್ ಸಂಖ್ಯೆಯನ್ನು ಖಾಸಗಿ ಸೇವೆಗಳಿಗೆ ಲಿಂಕ್ ಮಾಡುವ ಅಗತ್ಯವಿಲ್ಲವೆಂದು ನ್ಯಾಯಪೀಠ ಆದೇಶಿಸಿದೆ.

ಆಧಾರ್ ವಿರೋಧಿ ಅರ್ಜಿದಾರರು ಹಾಗೂ ತಂತ್ರಜ್ಞಾನ ಪರಿಣಿತರು ಆಧಾರ್‌ ಕಾರ್ಡ್‌ ಹಾಗೂ ಮಾಹಿತಿಗಳ ಗೌಪ್ಯತೆ ಹಾಗೂ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಆಧಾರ್ ಕಡ್ಡಾಯಗೊಳಿಸುವುದು ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿತ್ತು. 2017ರ ಅಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಖಾಸಗಿತನದ ಹಕ್ಕನ್ನು ಎತ್ತಿಹಿಡಿದು, ಆಧಾರ್ ಕಾಯಿದೆಯನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದೆಂದು ತಿಳಿಸಿತ್ತು. ಈ ಕುರಿತು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ ಸರಕಾರ, ಖಾಸಗಿತನದ ಹಕ್ಕು ಮೂಲಭೂತ ಹಕ್ಕಾಗಿದ್ದರೂ ಆ ಹಕ್ಕು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದಿತ್ತು.

ಇದನ್ನೂ ಓದಿ : ಸ್ಟೇಟ್ ಆಫ್ ದಿ ನೇಶನ್ | ಆಧಾರ್ ಅಂಕಿ-ಅಂಶ ಸೋರಿಕೆ ಬಗ್ಗೆ ಆತಂಕವೇಕೆ ಗೊತ್ತೇ?

ಭಾರತದ ಆಧಾರ್‌ ಕಾರ್ಡ್ ಗುರುತಿನ ಚೀಟಿಯು ಇಂದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಬಯೋಮೆಟ್ರಿಕ್ ಮಾಹಿತಿ ದಾಖಲೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ಆಧಾರ್ ಕಡ್ಡಾಯಗೊಳಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದು, ಆದಾಯ ತೆರಿಗೆ ನೋಂದಣಿಯಿಂದ ಆರಂಭಿಸಿ, ಮೊಬೈಲ್ ಸಿಮ್‍ಕಾರ್ಡ್ ಖರೀದಿ, ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ಸೇರಿ ಬಹುತೇಕ ಸೇವೆಗಳಿಗೂ ಆಧಾರ್ ಕಡ್ಡಾಯಗೊಳಿಸಲಾಗಿತ್ತು. ಜನಕಲ್ಯಾಣ ಯೋಜನೆಗಳು, ಪಿಂಚಣಿ ಹಾಗೂ ಉದ್ಯೋಗ ಯೋಜನೆಗಳಿಗೂ ಆಧಾರ್ ಕಡ್ಡಾಯ ಮಾಡಿತ್ತು. ಆದರೆ, ಅಂತಿಮ ತೀರ್ಪು ಬರುವವರೆಗೆ ಈ ಎಲ್ಲವಕ್ಕೂ ಕೋರ್ಟ್ ತಡೆ ನೀಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More