ತನಿಖಾ ವರದಿಗಳಿಗಾಗಿ ನ್ಯೂಯಾರ್ಕ್‌ ಟೈಮ್ಸ್‌, ನ್ಯೂಯಾರ್ಕರ್‌ಗೆ ಪುಲಿಟ್ಜರ್‌

ಅಮೆರಿಕದ ಪ್ರತಿಷ್ಠಿತ ಪತ್ರಿಕಾ ಪ್ರಶಸ್ತಿಯನ್ನು ಜಗತ್ತಿನ ಗಮನ ಸೆಳೆದ ಲೈಂಗಿಕ ಶೋಷಣೆಯ ಪ್ರಕರಣ ಮತ್ತು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಪಾತ್ರ ಕುರಿತು ತನಿಖೆ ನಡೆಸಿದ ಪತ್ರಿಕೆಗಳು ಪಡೆದುಕೊಂಡಿದ್ದು, ಮಾಧ್ಯಮ ಜಗತ್ತಿನಲ್ಲಿ ಹೊಸ ಭರವಸೆಗಳನ್ನು ಹುಟ್ಟುಹಾಕಿದೆ

ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಕಲೆ ವಿಭಾಗಗಳಲ್ಲಿ ಪ್ರಸ್ತುತ ಸಾಲಿನ ಪುಲಿಟ್ಜರ್‌ ಪ್ರಶಸ್ತಿ ಘೋಷಣೆಯಾಗಿದೆ. ಅಮೆರಿಕವನ್ನಷ್ಟೇ ಅಲ್ಲ, ಜಗತ್ತನ್ನೇ ಅಲುಗಾಡಿಸಿದ ಹಾರ್ವೆ ವೀನ್‌ಸ್ಟಿನ್‌ ಲೈಂಗಿಕ ಶೋಷಣೆ ಮತ್ತು ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪವನ್ನು ತನಿಖೆ ಮಾಡಿದ ವರದಿಗಳಿಗೆ ಪ್ರಶಸ್ತಿಗಳು ಲಭಿಸಿವೆ.

ಸಾರ್ವಜನಿಕ ಸೇವೆ ವಿಭಾಗದಲ್ಲಿ ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಜೋಡಿ ಕ್ಯಾಂಟರ್‌ ಮತ್ತು ಮೆಗಾ ಟುಹೇ ಮತ್ತು ‘ದಿ ನ್ಯೂಯಾರ್ಕರ್‌’ ಪತ್ರಿಕೆಯ ರೋನಾನ್‌ ಫಾರೋ ವರದಿಗಳಿಗೆ ಪ್ರಶಸ್ತಿ ಲಭಿಸಿದೆ.

ಹಾಲಿವುಡ್‌ನ ಪ್ರಭಾವಿ ನಿರ್ಮಾಪಕರು ನಡೆಸಿದ ಶೋಷಣೆಯನ್ನು ಮತ್ತು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಶೋಷಣೆ ಕುರಿತು ಯಾವುದೇ ಹೇಳಿಕೆ ನೀಡದಂತೆ ಮೌನವಾಗಿಸಿದ್ದನ್ನು ತಮ್ಮ ವರದಿಯ ಮೂಲಕ ಬಯಲಿಗೆಳೆದಿದ್ದರು. ಈ ವರದಿಗಳು ಜಗತ್ತಿನಾದ್ಯಂತ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ತಮ್ಮ ಅನುಭವ ಹೇಳಿಕೊಳ್ಳುವುದಕ್ಕೆ ಪ್ರೇರಣೆಯಾಯಿತು.

ನ್ಯಾಷನಲ್‌ ರಿಪೋರ್ಟಿಂಗ್‌ ವಿಭಾಗದಲ್ಲಿ ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಮತ್ತು ‘ದಿ ವಾಷಿಂಗ್ಟನ್‌ ಪೋಸ್ಟ್‌’ ಸಿಬ್ಬಂದಿ ೨೦೧೬ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಪಾತ್ರ, ಡೊನಾಲ್ಡ್‌ ಟ್ರಂಪ್‌ ಪರ ನಡೆದ ಪ್ರಚಾರದಲ್ಲಿ ಪಾಲ್ಗೊಳ್ಳುವಿಕೆಯನ್ನು ತನಿಖೆ ಮಾಡಿದ್ದಕ್ಕೆ ಪುಲಿಟ್ಜರ್‌ ಪ್ರಶಸ್ತಿ ಲಭಿಸಿದೆ.

ಕ್ಯಾಲಿಫೋರ್ನಿಯಾದ ದಿ ಪ್ರೆಸ್‌ ಡೆಮೊಕ್ರೇಟ್‌ ಬ್ರೇಕಿಂಗ್‌ ನ್ಯೂಸ್‌ ಪ್ರಶಸ್ತಿಯನ್ನು, ‘ದಿ ಅರಿಜೋನಾ ರಿಪಬ್ಲಿಕ್‌’ ಮತ್ತು ಎಕ್ಸ್‌ಪ್ಲೇನೇಟರಿ ಪ್ರಶಸ್ತಿಯನ್ನು ‘ಯುಎಸ್‌ಎ ನೆಟ್‌ವರ್ಕ್‌’, ಅಂತಾರಾಷ್ಟ್ರೀಯ ವರದಿಗಾರಿಕೆಯ ಪ್ರಶಸ್ತಿಯನ್ನು ರಾಯಟರ್ಸ್‌ ಪಡೆದುಕೊಂಡಿವೆ.

ಇದನ್ನೂ ಓದಿ : ೨೦೧೭ರ ಹಾಲಿವುಡ್‌ #MeToo ಅಭಿಯಾನ ೨೦೧೮ರಲ್ಲಿ ಭಾರತದಲ್ಲೂ ಶುರುವಾಯಿತೇ?

ಕಲೆಯ ವಿಭಾಗದಲ್ಲಿ ಆಂಡ್ರ್ಯೂ ಸೀನ್‌ ಗ್ರೀರ್‌ ಕಾದಂಬರಿ 'ಲೆಸ್‌', ಮಾರ್ಟಿನಾ ಮಯೋಕ್‌ ಅವರ ನಾಟಕ 'ಕಾಸ್ಟ್‌ ಆಫ್‌ ಲೀವಿಂಗ್‌', ಜ್ಯಾಕ್‌ ಇ ಡೇವಿಸ್‌ ಅವರ 'ದಿ ಗಲ್ಫ್‌: ದಿ ಮೇಕಿಂಗ್‌ ಆಫ್‌ ಆನ್‌ ಅಮೆರಿಕನ್‌ ಸೀ' ಐತಿಹಾಸಿಕ ಕೃತಿ, ಕ್ಯಾರೋಲಿನ್‌ ಫ್ರೇಸರ್‌ ಅವರ 'ಪ್ರೈರಿ ಫೈರ್ಸ್‌: ದಿ ಅಮೆರಿಕನ್‌ ಡ್ರೀಮ್ಸ್‌ ಅಫ್‌ ಲಾರಾ ಇಂಗಲ್ಸ್‌ ವೈಲ್ಡರ್‌' ಜೀವನ ಚರಿತ್ರೆ, ಫ್ರಾಂಕ್‌ ಬಿಡಾರ್ಟ್‌ ಅವರ 'ಹಾಫ್‌-ಲೈಟ್‌' ಕವನ ಸಂಕಲನ, ಜೇಮ್ಸ್‌ ಫಾರ್ಮನ್‌ ಜೂನಿಯರ್‌ ಅವರ 'ಲಾಕಿಂಗ್‌ ಅಪ್‌ ಅವರ್‌ ಓನ್‌: ಕ್ರೈಮ್‌ ಅಂಡ್‌ ಪನಿಷ್ಮೆಂಟ್‌ ಇನ್ ಬ್ಲಾಕ್‌ ಅಮೆರಿಕ' ಮತ್ತು ಕೆಂಡ್ರಿಕ್‌ ಲಾಮರ್‌ ಅವರ 'ಡ್ಯಾಮ್‌' ಸಂಗೀತ ಆಲ್ಬಮ್‌ಗೆ ಪುಲಿಟ್ಜರ್‌ ಪ್ರಶಸ್ತಿ ಸಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More