ಪ್ರಧಾನಿ ತಾಯಿಯ ಫೋಟೋಶಾಪ್ ಫೋಟೋ ಟ್ವೀಟಿಸಿ ವಿವಾದ ಸೃಷ್ಟಿಸಿದ ಮಂತ್ರಿ

ಬಿಜೆಪಿಯ ನಾಯಕರು ಆಗಾಗ ಪ್ರತಿಪಕ್ಷಗಳ ನಾಯಕರ ಮೇಲೆ ದಾಳಿ ನಡೆಸುವುದಕ್ಕೆ ವಿವಿಧ ತಂತ್ರ ಬಳಸುತ್ತಾರೆ. ಅಂಥದ್ದೇ ಒಂದು ತಂತ್ರ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕೀಟಲೆ, ವ್ಯಂಗ್ಯ, ಟೀಕೆಗೆ ಗುರಿಯಾಗಿ ಬಿಜೆಪಿಗೆ ತಿರುಗುಬಾಣವಾಗಿದೆ. ಅದು ಪ್ರಧಾನಿ ಮೋದಿಯವರ ತಾಯಿಯ ಚಿತ್ರ

ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ ೨೦೧೪ರ ಮೇ ತಿಂಗಳಲ್ಲಿ ಗಾಂಧಿನಗರದಲ್ಲಿ ಮತ ಚಲಾಯಿಸುವುದಕ್ಕೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದರು. ಆಗ ತೆಗೆದ ಫೋಟೋವನ್ನು ಬಳಸಿಕೊಂಡು ಕೇಂದ್ರ ಮಂತ್ರಿ ವಿಜಯ್‌ ಸಂಪ್ಲಾ ಒಂದು ಟ್ವೀಟ್‌ ಮಾಡಿದ್ದು, ಈಗ ಚರ್ಚೆ ಹುಟ್ಟುಹಾಕಿದೆ.

ಸಂಪ್ಲಾ ತಮ್ಮ ಟ್ವೀಟ್‌ನಲ್ಲಿ, "ನಮ್ಮ ಪ್ರೀತಿಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ತಾಯಿ ಇಂದಿಗೂ ಆಟೋದಲ್ಲಿ ಸಂಚರಿಸುತ್ತಾರೆ. ಆದರೆ, ರಾಹುಲ್‌ ಗಾಂಧಿಯವರ ತಾಯಿ ವಿಶ್ವದ ನಾಲ್ಕನೇ ಶ್ರೀಮಂತ ರಾಜಕಾರಣಿ,'' ಎಂದು ಕಾಂಗ್ರೆಸ್‌ ನಾಯಕಿಯ ಕಾಲೆಳೆಯುವ ಯತ್ನ ಮಾಡಿದರು.

ವಿಜಯ್‌ ಸಂಪ್ಲಾ ಅವರ ಟ್ವೀಟ್‌ ಅನ್ನು ಅನೇಕರು ಗೇಲಿ ಮಾಡಿದರು. ಹಲವರು ಟೀಕೆ ಮಾಡಿದರು. ಜೊತೆಗೆ ಫೋಟೊ ಅಧಿಕೃತತೆ ಬಗ್ಗೆಯೂ ಚರ್ಚೆಗಳು ಆರಂಭವಾದವು.

ಹೆಚ್ಚು ಚರ್ಚೆಯಾಗಿದ್ದು, ಆಟೋದಲ್ಲಿ ಒಬ್ಬರೇ ಇದ್ದು, ಹೀರಾಬೆನ್‌ ಅವರ ಬಲಗೈಯನ್ನು ಒಂದು ಕೈ ಹಿಡಿದಿದ್ದು, ಆದರೆ ಆ ಕೈಯಿರುವ ದೇಹವೇ ಕಾಣಿಸುತ್ತಿಲ್ಲ ಎಂಬುದು. ಹಾಗಾಗಿ, ಇದು ಫೋಟೋಶಾಪ್‌ ಮಾಡಲಾದ ಚಿತ್ರವೆಂದು ಅನೇಕರು ಟೀಕಿಸಿದ್ದು, ಆಗೋಚರ ದೇಹದ ಕುರಿತು ಅನೇಕರು ಹಾಸ್ಯ ಮಾಡಿದ್ದಾರೆ.

ಕೆಲವರು ಆ ಕೈಗಳನ್ನು "ಗೋಡ್ಸೆ ಕೈಗಳು,” ಎಂದೂ, ಕೆಲವರು “ಭೂತವೊಂದು ಹೀರಾ ಬೆನ್‌ ಕೈಹಿಡಿದಿದೆ,” ಎಂದೂ ಟ್ವೀಟ್‌ ಮಾಡಿದ್ದಾರೆ.

ಜೊತೆಗೆ ವಿವಿಧ ರಾಜಕೀಯ ಸಂದರ್ಭಗಳಲ್ಲಿ ಭಾವನಾತ್ಮಕವಾಗಿ ಪ್ರಭಾವಿಸುವುದಕ್ಕೆ ಮೋದಿಯವರ ತಾಯಿಯನ್ನು ಎಳೆದುತರುವ ಬಗ್ಗೆಯೂ ಅನೇಕರು ಟೀಕಿಸಿದ್ದಾರೆ. ಹಾಗೆಯೇ, ಭಾರತದ ಅತ್ಯಂತ ಉನ್ನತ ಹುದ್ದೆಯಲ್ಲಿರುವ ಮಗ, ತನ್ನ ತಾಯಿಗೆ ಮೂಲ ಅಗತ್ಯಗಳನ್ನು ನೀಡಲಾರರೇ? ತನ್ನ ತಾಯಿಯನ್ನು ಕಾಳಜಿ ಮಾಡಲಾರರೇ ಎಂದೂ ಕಾಲೆಳೆದಿದ್ದಾರೆ.

ಪಿಟಿಎ ಚಿತ್ರಸಂಗ್ರಹದಲ್ಲಿ ಹೀರಾಬೆನ್‌ ಅವರ ಫೋಟೋ

ಬಹಳಷ್ಟು ಮಂದಿ ಇದು ಫೋಟೋಶಾಪ್‌ ಮಾಡಿದ ಚಿತ್ರವೆಂದೇ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. ಆದರೆ, ಈ ಚಿತ್ರದ ಮೂಲವನ್ನು ಹುಡುಕಿದರೆ, ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾದ ಫೋಟೋಗ್ರಾಫರ್‌ ಸೆರೆಹಿಡಿದ ಚಿತ್ರ ಇದು ಎಂದು ತಿಳಿದುಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More