ಅಫ್ಘಾನಿಸ್ತಾನದ ಬಗ್ಲಾನ್‌ನಲ್ಲಿ ತಾಲಿಬಾನಿ ಉಗ್ರರಿಂದ ಆರು ಭಾರತೀಯರ ಅಪಹರಣ

ಅಫ್ಘಾನಿಸ್ತಾನದಲ್ಲಿನ ಬಗ್ಲಾನ್ ಪ್ರಾಂತ್ಯದಲ್ಲಿರುವ ವಿದ್ಯುತ್ ಸ್ಥಾವರಗಳಿಗೆ ಹಾಗೂ ಭಾರತೀಯ ಮೂಲ ಸೌಕರ್ಯಗಳ ಬೃಹತ್ ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಭಾರತೀಯ ತಂತ್ರಜ್ಞರು ಸೇರಿದಂತೆ ಓರ್ವ ಅಫ್ಘಾನಿ ನಾಗರಿಕನನ್ನು ಭಾನುವಾರ ತಾಲಿಬಾನಿ ಉಗ್ರರು ಅಪಹರಿಸಿದ್ದಾರೆ

ಅಫ್ಘಾನಿಸ್ತಾನದ ಬಗ್ಲಾನ್ ಪ್ರಾಂತ್ಯದಲ್ಲಿರುವ ವಿದ್ಯುತ್ ಸ್ಥಾವರಗಳಿಗೆ ಹಾಗೂ ಭಾರತೀಯ ಮೂಲಸೌಕರ್ಯಗಳ ಬೃಹತ್ ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಭಾರತೀಯ ತಂತ್ರಜ್ಞರು ಸೇರಿದಂತೆ ಓರ್ವ ಅಫ್ಘಾನಿ ನಾಗರಿಕನನ್ನು ಭಾನುವಾರ ಅಪಹರಿಸಲಾಗಿದೆ. ಅಪಹರಿಸಿದವರನ್ನು ವ್ಯಕ್ತಿಯನ್ನು ಶಂಕಿತ ತಾಲಿಬಾನಿಗಳೆಂದು ಹೇಳಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪತ್ರಿಕಾ ಪ್ರಕಟಣೆಯ ಪ್ರಕಾರ ಭಾರತದ ಆರ್‌ಪಿಜಿ ಗ್ರೂಪ್‌ನ ಕೆಇಸಿ ಇಂಟರ್‌ನ್ಯಾಷನಲ್ ಕಂಪನಿಗೆ ಕೆಲಸ ಮಾಡುತ್ತಿದ್ದ ಆರು ಭಾರತೀಯರನ್ನು ಹಾಗೂ ಒಬ್ಬ ಅಫ್ಘಾನಿಯನ್ನು ಅಪರಿಚಿತ ಬಂದೂಕುಧಾರಿಗಳು ಅಪಹರಿಸಿದ್ದಾರೆ. ಕೆಲ ಮಾಧ್ಯಮಗಳು ಏಳು ಜನರನ್ನು ಅಪಹರಿಸಲಾಗಿದೆ ಎಂದು ವರದಿ ಮಾಡಿವೆ.

‘‘ಅಫ್ಘಾನಿಸ್ತಾನದಲ್ಲಿ ಭಾರತೀಯರ ಅಪಹರಣವಾಗಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ. ಅಫ್ಘಾನ್ ಅಧಿಕಾರಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಹಾಗೂ ಹೆಚ್ಚಿನ ಮಾಹಿತಿಗಳನ್ನು ಪಡೆಯುತ್ತಿದ್ದೇವೆ,’’ ಎಂದು ಭಾರತೀಯ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಆರ್‌ಪಿಜಿ ಎಂಟರ್‌ಪ್ರೈಸ್‌ನ ಚೇರ್‌ಮೆನ್ ಹರ್ಷ ಗೋಯೆಂಕಾ ಟ್ವೀಟಿಸಿ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಅಪಹರಿಸಲಾದ ಏಳು ಜನರನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಕೆಇಸಿ ಇಂಟರ್‌ನ್ಯಾಷನಲ್ ಸಿಇಒ ಮಾತನಾಡಿ, “ಎಲ್ಲ ಏಳು ಜನರನ್ನು ಸುರಕ್ಷಿತವಾಗಿ ವಾಪಸು ಕರೆಸಿಕೊಳ್ಳಲಾಗುವುದು,” ಎಂದಿದ್ದಾರೆ.

‘ಟೋಲೋ ನ್ಯೂಸ್’ ವರದಿಯ ಪ್ರಕಾರ, ಆಫ್ಘಾನ್ ಸರ್ಕಾರಿ ಅಧಿಕಾರಿಗಳೆಂದು ಭಾವಿಸಿ ಭಾರತೀಯ ತಂತ್ರಜ್ಞರನ್ನು ಅಪಹರಿಸಲಾಗಿದೆ ಎನ್ನಲಾಗಿದೆ. ಅಫ್ಘಾನ್ ಸುದ್ದಿವಾಹಿನಿಯ ಪ್ರಕಾರ, ಅಫ್ಘಾನ್ ಗವರ್ನರ್ ಅಬ್ದುಲ್ಲೈ ನೆಮಥಿ ಅವರು ತಾಲಿಬಾನಿ ಸ್ಥಳೀಯ ನಾಯಕರುಗಳೊಂದಿಗೆ ಮಾತಾಡಿದ್ದು, ಬಂಧಿತರನ್ನು ಬಿಡುಗಡೆಗೊಳಿಸಲಾಗುವುದು ಎಂದು ತಾಲಿಬಾನ್ ಸಂಘಟನೆಯು ಸಂದೇಶ ಕಳುಹಿಸಿದೆ ಎನ್ನಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More