ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ರಾಮ್ ಜೇಠ್ಮಲಾನಿ ಅರ್ಜಿ

ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವ ರಾಮ್‌ ಜೇಠ್ಮಲಾನಿ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿರುವ ಕರ್ನಾಟಕ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿದ್ದಾರೆ. ಇದು ಸಾಂವಿಧಾನಕ ಅಧಿಕಾರದ ದುರುಪಯೋಗ ಎನ್ನುವುದು ಅವರ ವಾದ. ಈ ಕುರಿತು ನಾಳೆ (ಮೇ 18) ಅವರು ವಾದ ಮಂಡಿಸಲಿದ್ದಾರೆ

ಕರ್ನಾಟಕ ರಾಜ್ಯ ರಾಜಕಾರಣ ದಿನದಿನವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ಕರ್ನಾಟಕ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ್ದಾರೆ. ರಾಜ್ಯಪಾಲರ ಆದೇಶ ಸಾಂವಿಧಾನಿಕ ಅಧಿಕಾರದ ದುರುಪಯೋಗ ಎಂದು ಪ್ರಶ್ನಿಸಿರುವ ಅವರು, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠವು ನಾಳೆ (ಮೇ 18) ವಾದ ಮಂಡಿಸುವಂತೆ ಜೇಠ್ಮಲಾನಿ ಅವರಿಗೆ ತಿಳಿಸಿದೆ.

“ಇದು ಸಾಂವಿಧಾನಿಕ ಅಧಿಕಾರದ ದುರುಪಯೋಗ. ಈ ನಡೆಯಿಂದಾಗಿ ರಾಜ್ಯಪಾಲರು ಹೊಂದಿರುವ ಸಾಂವಿಧಾನಿಕ ಹಕ್ಕುಗಳಿಗೆ ಅಗೌರವ ಸೂಚಿಸಿದಂತಾಗಿದೆ. ಭ್ರಷ್ಟಾಚಾರ ನಡೆಸಲು ತಾವೇ ಆಹ್ವಾನ ನೀಡಿದ್ದಾರೆ,” ಎಂದು ಆರೋಪಿಸಿರುವ ರಾಮ್ ಜೇಠ್ಮಲಾನಿ, ರಾಜ್ಯಪಾಲರ ನಿರ್ಧಾರ ವೈಯಕ್ತಿಕವಾಗಿ ತಮಗೆ ನೋವುಂಟುಮಾಡಿದೆ, ತಾವು ಯಾವ ಪಕ್ಷದ ಪರ ಅಥವಾ ವಿರೋಧವಾಗಿಯೂ ನ್ಯಾಯಾಲಯದಲ್ಲಿ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಮ್ ಜೇಠ್ಮಲಾನಿ ಅವರ ಪ್ರವೇಶ ಕಾನೂನಾತ್ಮಕ ಹೋರಾಟಕ್ಕೆ ಹೊಸ ಆಯಾಮ ನೀಡಿದಂತಾಗಿದೆ ಎಂದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ : ಸರ್ಕಾರ ರಚನೆ ಕಸರತ್ತು; ಮಧ್ಯರಾತ್ರಿಯ ಸುಪ್ರೀಂ ವಿಚಾರಣೆಯಲ್ಲಿ ಆಗಿದ್ದೇನು?

ನ್ಯಾಯಮೂರ್ತಿ ಎ ಕೆ ಸಿಕ್ರಿ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ವಿಶೇಷ ನ್ಯಾಯಪೀಠದ ಎದುರು ನಾಳೆ (ಮೇ 18) ವಾದ ಮಂಡಿಸುವಂತೆ ಜೇಠ್ಮಲಾನಿ ಅವರಿಗೆ ಅವಕಾಶ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಮುಖಂಡರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಆದರೆ, ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರ ಪ್ರಮಾಣ ವಚನಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರಾದ ಎಸ್ ಎ ಬೋಬ್ಡೆ ಮತ್ತು ಅಶೋಕ್ ಭೂಷಣ್‌ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿತ್ತು. ಸರ್ಕಾರ ರಚನೆಯ ಬಗೆಗಿನ ಕಾಗದ ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಅಟಾರ್ನಿ ಜನರಲ್ ಯಡಿಯೂರಪ್ಪನವರಿಗೆ ಸೂಚಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More