ಯಾರ ಭಾವನೆಗಳಿಗಾದರೂ ನೋವು ಮಾಡಿದ್ದರೆ ಮನ್ನಿಸಿ ಎಂದ ನ್ಯಾ.ಚಲಮೇಶ್ವರ್

ಇಂದು ನಿವೃತ್ತರಾಗಲಿರುವ ನ್ಯಾಯಮೂರ್ತಿ ಚಲಮೇಶ್ವರ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ವೃತ್ತಿ ಜೀವನದ ಕೊನೆಯ ದಿನವನ್ನು ಕಳೆದಿದ್ದಾರೆ. ಈ ಸಂದರ್ಭ ನ್ಯಾಯಮೂರ್ತಿ ಶಾಂತಿ ಭೂಷಣ್ ಚೆಲಮೇಶ್ವರ ಅವರ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದಾರೆ

ಶುಕ್ರವಾರ ನಿವೃತ್ತರಾಗಲಿರುವ ನ್ಯಾಯಮೂರ್ತಿ ಚಲಮೇಶ್ವರ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ವೃತ್ತಿಜೀವನದ ಕೊನೆಯ ದಿನವನ್ನು ಕಳೆದರು. ಈ ಸಂದರ್ಭ ನ್ಯಾಯಮೂರ್ತಿ ಶಾಂತಿ ಭೂಷಣ್ ಅವರು ಚಲಮೇಶ್ವರ ಕುರಿತು ಭಾವನಾತ್ಮಕವಾಗಿ ಮಾತನಾಡಿದರು.

ಶಾಂತಿ ಭೂಷಣ್ ಅವರು ಹಿರಿಯ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ಹೇಳಿದ ಮಾತುಗಳು ಭಾವಪೂರ್ಣವಾಗಿದ್ದವು. ಚಲಮೇಶ್ವರ ಅವರ ಧೈರ್ಯ, ನೀತಿ, ನ್ಯಾಯ ತೀರ್ಮಾನಗಳ ಕುರಿತು ಮಾತನಾಡಿದ ಅವರು, ನ್ಯಾಯಾಲಯ ನೀಡಿದ ಶ್ರೇಷ್ಠ ನ್ಯಾಯಮೂರ್ತಿ ಎಂದು ಶ್ಲಾಘಿಸಿದ್ದಾರೆ. ನ್ಯಾಯಮೂರ್ತಿ ಎಚ್ ಆರ್ ಖನ್ನಾ ಅವರ ಜೊತೆ ಚಲಮೇಶ್ವರ ಅವರನ್ನು ಹೋಲಿಸಿದ ಭೂಷಣ್ ಅವರು, “ನ್ಯಾಯಮೂರ್ತಿ ಖನ್ನಾ ಎರಡನೇ ಕೊಠಡಿಯಲ್ಲಿ ಕೂರುತ್ತಿದ್ದರು. ಅವರ ಕುರಿತು ಇಂದಿಗೂ ದೇಶದ ಜನ ಮಾತನಾಡುತ್ತಾರೆ. ಅವರ ಭಾವಚಿತ್ರ ಇಲ್ಲಿದೆ. ನಿಮ್ಮ ಭಾವಚಿತ್ರವೂ ಕೋರ್ಟ್‌ನ ಎರಡನೇ ಕೋಣೆಯನ್ನು ಶೀಘ್ರವೇ ಅಲಂಕರಿಸಲಿದೆ ಎಂಬುದರ ಕುರಿತು ನನಗೆ ಭರವಸೆ ಇದೆ,” ಎಂದರು.

ದಿಟ್ಟ ಮತ್ತು ಘನತೆಯುಕ್ತ ವೃತ್ತಿಜೀವನವನ್ನು ಕಳೆದ ಚಲಮೇಶ್ವರ್ ಜೊತೆಗಿನ ತಮ್ಮ ವಕೀಲ ವೃತ್ತಿಯ ದಿನಗಳನ್ನೂ ಶಾಂತಿ ಭೂಷಣ್ ನೆನಪಿಸಿಕೊಂಡರು. “ನಾನು ೧೯೪೩ರಿಂದ ಹೈಕೋರ್ಟಿಗೆ ಹೋಗಲಾರಂಭಿಸಿದೆ. ಸುಪ್ರೀಂ ಕೋರ್ಟ್ ಸ್ಥಾಪಿಸುವ ಮೊದಲು ಫೆಡರಲ್ ನ್ಯಾಯಾಲಯಕ್ಕೂ ಹಾಜರಾಗಿದ್ದೆ. ಕಳೆದ ೫೨ ವರ್ಷಗಳಿಂದ ಈ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದೇನೆ. ಹಲವಾರು ಐತಿಹಾಸಿಕ ತೀರ್ಪುಗಳಿಗೆ ಸಾಕ್ಷಿಯಾಗಿದ್ದೇನೆ. ಜಗತ್ತಿನಲ್ಲಿಯೇ ಸರ್ವೋಚ್ಚ ನ್ಯಾಯಾಲಯ ಬಲಿಷ್ಠ ಶಕ್ತಿಯಾಗಿ ಬೆಳೆಯುವುದನ್ನು ನಾನು ಕಂಡಿದ್ದೇನೆ,” ಎಂದರು.

“ಸಂವಿಧಾನ ರಚಿಸಿದವರು ರೂಪಿಸಿದ ರೀತಿಯಲ್ಲಿಯೇ ಮುಂದೆಯೂ ನ್ಯಾಯಾಲಯ ಕಾರ್ಯನಿರ್ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ. ನಿಮ್ಮ ನಿವೃತ್ತ ಜೀವನ ಸುಖವಾಗಿರಲಿ. ನಿಮ್ಮ ಸೇವೆಗಾಗಿ ಈ ದೇಶದ ಜನ ಆಭಾರಿಗಳಾಗಿದ್ದಾರೆ,” ಎಂದರು.

ಇದನ್ನೂ ಓದಿ : ನ್ಯಾ.ಚಲಮೇಶ್ವರ್ ನ್ಯಾಯಾಲಯದಲ್ಲಿನ ಸನ್ಯಾಸಿ: ನಿವೃತ್ತ ಸಿಜೆಐ ವೆಂಕಟಾಚಲಯ್ಯ

ವೃತ್ತಿಜೀವನದ ಕೊನೆಯ ದಿನದ ಸಂದರ್ಭ ಮಾತನಾಡಿದ ನ್ಯಾಯಮೂರ್ತಿ ಚಲಮೇಶ್ವರ, “ಕಳೆದ ೧೦ ವರ್ಷ ಮತ್ತು ೬ ತಿಂಗಳಲ್ಲಿ ನಾನು ಕೆಲವೊಮ್ಮೆ ಕೋಪ ಮತ್ತು ಅವಿವೇಕತನದಿಂದ ವರ್ತಿಸಿದ್ದರೆ, ಅದು ಉದ್ದೇಶಪೂರ್ವಕವಾದ ವರ್ತನೆಯಲ್ಲ ಅಥವಾ ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ದ್ವೇಷವಿರಲಿಲ್ಲ. ಆ ಕೋಪದ ಹಿಂದೆ ತಯಾರಿಯ ಕೊರರತೆಯೋ ಇತರ ಕಾರಣವೋ ಇದ್ದವು. ಯಾರ ಭಾವನೆಗಳಿಗಾದರೂ ನಾನು ನೋವು ಮಾಡಿದ್ದರೆ ಮನ್ನಿಸಿ,” ಎಂದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚಲಮೇಶ್ವರ ಅವರಿಗೆ ಮೇ ೧೮ ವೃತ್ತಿಜೀವನದ ಕೊನೆಯ ದಿನ. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್‌ನಿಂದ ಆಯೋಜಿಸಲು ತೀರ್ಮಾನಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನು ಆರಂಭದಲ್ಲಿ ಅವರು ನಿರಾಕರಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More