ಪ್ರವಾಸಿಗರು ಬರದಂತೆ ಕರೆ ಕೊಟ್ಟ ಶಿಮ್ಲಾದಲ್ಲಿ ನೀರಿಗೆ ನಿಜಕ್ಕೂ ದೈನೇಸಿ ಸ್ಥಿತಿ

ಗಿರಿಶಿಖರಗಳ ನಡುವಿರುವ ಹಿಮಾಚಲ ಪ್ರದೇಶದ ಪರಿಸ್ಥಿತಿ ಹದಗೆಟ್ಟಿದೆ. ಕುಡಿಯುವ ನೀರಿಲ್ಲದೆ ಜನರು ಪ್ರತಿಭಟನೆಗಿಳಿದಿದ್ದಾರೆ. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಜನರ ದೈನೇಸಿ ಸ್ಥಿತಿ ನೋಡಿ ಸ್ವತಃ ಹೈಕೋರ್ಟ್ ಮುಂದಾಳತ್ವ ವಹಿಸಿ ಶಿಮ್ಲಾ ನಗರ ಪಾಲಿಕೆಗೆ ನಿರ್ದೇಶನಗಳನ್ನು ಆದೇಶಿಸಿದೆ

ಗಿರಿಗಳ ರಾಣಿ ಎಂದು ಕರೆಸಿಕೊಳ್ಳುತ್ತಿದ್ದ ಶಿಮ್ಲಾ ಈಗ ತೀವ್ರ ನೀರಿನ ಬರದಲ್ಲಿ ಬೇಯುತ್ತಿದೆ. ಗಿರಿಶಿಖರಗಳ ನಡುವಿರುವ ಹಿಮಾಚಲ ಪ್ರದೇಶದ ಪರಿಸ್ಥಿತಿ ಹದಗೆಟ್ಟಿದೆ. ಕುಡಿಯುವ ನೀರಿಲ್ಲದೇ ಜನರು ಪ್ರತಿಭಟನೆಗಿಳಿದಿದ್ದಾರೆ. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಜನರ ದೈನೇಸಿ ಸ್ಥಿತಿ ನೋಡಿ ಸ್ವತಃ ಹೈಕೋರ್ಟ್ ಮುಂದಾಳತ್ವ ವಹಿಸಿ ಶಿಮ್ಲಾ ನಗರ ಪಾಲಿಕೆಗೆ ನಿರ್ದೇಶನಗಳನ್ನು ಆದೇಶಿಸಿದೆ. ಒಂದು ಕೊಡದಷ್ಟು ನೀರನ್ನು ಪಡೆಯಲೂ ಸಹ ಸರ್ಕಾರ ಜನರನ್ನು ನೇಮಿಸಿದೆ.

ನೀರಿನ ಸಮಸ್ಯೆ ಈ ಬಾರಿ ಮಾತ್ರ ಉಲ್ಬಣಿಸಿಲ್ಲ. ಹಲವು ವರ್ಷಗಳಿಂದ ಇದ್ದ ಈ ಸಮಸ್ಯೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಮಯದಲ್ಲಿ ಶಿಮ್ಲಾಗೆ ಹೋಗುವ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿರುವುದರಿಂದ ಅಲ್ಲಿನ ಸರ್ಕಾರ ಪ್ರವಾಸಿಗರು ಬರದಂತೆ ಕರೆ ನೀಡಿದೆ. ಜನರು ಸಹ ವಾಟ್ಸ್ಯಾಪ್ ಗ್ರೂಪ್‌ಗಳನ್ನು ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ನೀರಿನ ಸಮಸ್ಯೆಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿವೆ.

ಕೆಲ ದಿನಗಳವರೆಗೆ ಮನೆ ಕಟ್ಟದಂತೆ, ಕಾರು ಇತರ ವಾಹನಗಳನ್ನು ತೊಳೆಯದಂತೆ ಸ್ಥಳೀಯರಿಗೆ ಹೇಳಲಾಗಿದೆ. ಹೋಟೆಲ್‌ಗಳಲ್ಲಿ ಪಾತ್ರೆ ತೊಳೆಯಲು ನೀರಿಲ್ಲದೇ ಪ್ಲಾಸ್ಟಿಕ್ ತಟ್ಟೆಗಳಲ್ಲಿ ಆಹಾರ ನೀಡಲಾಗುತ್ತಿದೆ. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಅಧಿಕೃತ ನಿವಾಸಗಳನ್ನು ಹೊರತುಪಡಿಸಿ, ಗಣ್ಯರು, ನ್ಯಾಯಾಧೀಶರು, ಸಚಿವರು, ಶಾಸಕರು, ಅಧಿಕಾರಿಗಳು ವಾಸಿಸುವ ಪ್ರದೇಶಗಳಿಗೆ ಮತ್ತು ಖಾಸಗಿ ಸಂಕೀರ್ಣಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬಾರದು ಎಂದು ಅಲ್ಲಿನ ಸರ್ಕಾರ ಎಚ್ಚರಿಸಿದೆ. ಅಲ್ಲಿನ ೨ ಲಕ್ಷ ಜನಸಂಖ್ಯೆಗೆ ದಿನಕ್ಕೆ ೪೮ ಲಕ್ಷ ಲೀಟರ್ ನೀರು ಅವಶ್ಯಕತೆ ಇದೆ. ಆದರೆ, ನೀರಿಲ್ಲದ ಕಾರಣಕ್ಕೆ ಕೇವಲ ೧೮ ರಿಂದ ೨೦ ಲಕ್ಷ ಲೀಟರ್ ನೀರನ್ನು ಮಾತ್ರ ಸರಬರಾಜು ಮಾಡಲಾಗುತ್ತಿದೆ.

ಶಿಮ್ಲಾದಲ್ಲಿನ ನೀರಿನ ಸಮಸ್ಯೆಗೆ ಅತಿಯಾದ ಅರಣ್ಯೀಕರಣವೇ ಕಾರಣ. ನೀರನ್ನು ಎತ್ತಲು ಭೂಮಿಯ ಆಳದಿಂದ ಪಂಪಿಂಗ್ ಮಾಡಬೇಕಾಗಿದೆ. ಸೇಬು ಅಲ್ಲಿನ ಪ್ರಮುಖ ಬೆಳೆ. ಅದು ಹೆಚ್ಚು ನೀರನ್ನು ಬಯಸುವ ಬೆಳೆಯಾಗಿದೆ. ರೋಗ ಬಾರದಂತೆ ತಡೆಯಲು ತಿಂಗಳಿಗೆ ಎರಡು ಬಾರಿ ರಾಸಾಯನಿಕ ಸಿಂಪಡನೆ ಮಾಡಬೇಕಿದೆ. ಈ ಪೆಸ್ಟಿಸೈಡ್ಸ್ ಸಿಂಪಡನೆಗೆ ೩೦ ಮಿಲಿಯನ್‌ ಲೀಟರ್‌ನಷ್ಟು ನೀರು ಬಳಕೆಯಾಗುವುದರಿಂದ ನೀರು ಎಗ್ಗಿಲ್ಲದೇ ಬಳಕೆಯಾಗುತ್ತಿದೆ. ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಲೇ ಇದೆ. ಹಿಮಾಲಯದ ಸರಣಿಗಳಲ್ಲಿ ಹರಿಯುವ ನದಿಗಳಲ್ಲಿ ಕೈಗೆತ್ತಿಕೊಂಡಿರುವ ಬೃಹತ್‌ ಜಲವಿದ್ಯುತ್‌ ಯೋಜನೆಗಳೇ ಈ ನೀರಿನ ಅಭಾವಕ್ಕೆ ಕಾರಣ ಇನ್ನೊಂದು ಕಾರಣ. ಮುಂಬರುವ ದಿನಗಳ ಈ ಸಮಸ್ಯೆ ಹಿಮಾಲಯದ ಇತರೇ ಪ್ರದೇಶಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ ಎಂದು ಪರಿಸರ ಸಂರಕ್ಷಣಾ ಸಂಸ್ಥೆ ಹಿಮಾಧಾರ ಎಚ್ಚರಿಸಿದೆ. ಪ್ರಸ್ತುತ ಶಿಮ್ಲಾಗೆ ಕೋಟ್ ಬರಾಂಡಿ, ಜಾಗ್ರೋತಿ, ಬೀನ್ ಕೆರೆಗಳಿಂದ ಹಾಗೂ ಚುರಾತ್ ನಾಲೆಯಿಂದ ನೀರನ್ನು ಬಳಸಿಕೊಳ್ಳಲಾಗುತ್ತಿದೆ.

ಬ್ರಿಟಿಷರ ಕಾಲದ ಪೈಪ್ ಲೈನ್‌ಗಳೇ ಇನ್ನೂ ಅಲ್ಲಿ ಜೀವಂತವಾಗಿದ್ದು, ಅವು ಸವಕಲುಗೊಂಡು ಸೋರಿಕೆಯಾಗುತ್ತಿವೆ. ಒಳಚರಂಡಿ ವ್ಯವಸ್ಥೆಯೂ ಸೋರಿಕೆಗೊಂಡು ಕೊಳಕು ನೀರು ಕೆರೆಯನ್ನು ಸೇರಿ ಜನರ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಕೆರೆಯನ್ನು ಮುಚ್ಚಲಾಗಿದೆ. ಹೀಗೆ ನೀರು ಇಂಗಿಸುವ ಮೂಲಗಳು ಕಾರಣಾಂತರಗಳಿಂದ ಮುಚ್ಚಿಹೋಗುತ್ತಿವೆ. ಜನಸಂಖ್ಯೆ ಅತಿಯಾಗಿ ನೀರು ಹಂಚಿಕೆ ವ್ಯವಸ್ಥೆ ಸರಿಯಾಗಿಲ್ಲ.

ಹಿಮಾಲಯದಿಂದ ಹರಿದು ಬರುವ ನೀರೇ ಪ್ರಮುಖ ಆಧಾರವಾಗಿರುವ ಶಿಮ್ಲಾದಲ್ಲಿ ನಾಗರಿಕರು ನೀರು ಮರುಪೂರಣದ ಬಗ್ಗೆ ಎಚ್ಚರ ವಹಿಸಿದಂತೆ ಕಾಣುತ್ತಿಲ್ಲ. ಭವಿಷ್ಯಕ್ಕಾಗುವಂತೆ ನೀರನ್ನು ಭೂಮಿಗೆ ಇಂಗಿಸಿದ್ದರೆ ಈಗ ಉಪಯೋಗಕ್ಕೆ ಬರುತ್ತಿತ್ತು. ಈ ಸಮಸ್ಯೆಯಿಂದ ಮೇಲೇಳಲು ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಮೂಲ ಸೌಕರ್ಯಗಳನ್ನು ಹೊಸದಾಗಿ ಅಭಿವೃದ್ದಿಪಡಿಸಬೇಕಿದೆ.

ಇದನ್ನೂ ಓದಿ : ಕೊಡಗಿನ ಅರಣ್ಯ ಅಧಿಕಾರಿಗಳನ್ನು ಕಂಗೆಡಿಸುತ್ತಿದೆ ಕಾಡಿನ ಬೇಸಿಗೆ ಬೆಂಕಿ

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಚಿಕ್ಕ ಜಿಲ್ಲೆ. ಆ ರಾಜ್ಯದಲ್ಲಿರುವ ಅರಣ್ಯ ಪ್ರದೇಶವೂ ತುಂಬಾ ಕಡಿಮೆ. ಹಾಗಾಗಿ ಅರಣ್ಯ ಸಂಪನ್ಮೂಲಗಳು ಹೇರಳವಾಗಿ ಬಳಕೆಯಾಗುತ್ತಿದೆ. ಹೀಗಾಗಿ ಹವಾಮಾನ ಬದಲಾವಣೆ, ಅರಣ್ಯ ನಾಶ ಪ್ರಮುಖ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ, ಎಲ್ಲಾ ಹಿಮಾಲಯ ರಾಜ್ಯಗಳಲ್ಲಿ ಕಡಿಮೆ ಹಸಿರು ಇರುವ ಕಾರಣ, ಅದರ ಕಾಡುಗಳನ್ನು ಹೆಚ್ಚು ಕಾಪಾಡಿಕೊಳ್ಳಲು ಅಗತ್ಯವಾಗಿತ್ತು. ಇತ್ತೀಚಿನ ರಾಜ್ಯ ಅರಣ್ಯ ವರದಿ (ಎಸ್ಎಫ್ಆರ್) -2017 ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಕೇವಲ 15,100 ಚದರ ಕಿಮೀ (27.12 ಶೇಕಡ) ಪ್ರದೇಶವಿದೆ. ಹೆಚ್ಚು ಜನಸಂಖ್ಯೆಯುಳ್ಳ ಉತ್ತರಾಖಂಡ ರಾಜ್ಯದಲ್ಲಿ 24,295 ಚದರ ಕಿಮೀ (45.43 ಶೇಕಡ) ಕಾಡಿದೆ. ಅರುಣಾಚಲ ಪ್ರದೇಶ (79.96 ಶೇ), ಮಿಜೋರಾಮ್ (86.87 ಶೇ), ಮಣಿಪುರ (77.69 ಶೇ.), ಮೇಘಾಲಯ (76.45 ಶೇ.), ನಾಗಾಲ್ಯಾಂಡ್ (75.33 ಶೇ.) ಮತ್ತು ಅಸ್ಸಾಂನ ಪರ್ವತ ಜಿಲ್ಲೆಗಳು (67.91 ಶೇ.) ಅರಣ್ಯ ಹೊಂದಿವೆ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More