ವಿಡಿಯೋ ಸ್ಟೋರಿ | ಉ.ಪ್ರದೇಶದ ೧೩ ಜಿಲ್ಲೆಯಲ್ಲಿ ಮುಂದುವರಿದ ಧೂಳಿನ ಬಿರುಗಾಳಿ

ಉ.ಪ್ರದೇಶದ ೧೩ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಧೂಳಿನ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ (ಜೂ.4) ಬಿರುಗಾಳಿ ಅಬ್ಬರಿಸಿದ್ದು, ಮಂಗಳವಾರವೂ ಮುಂದುವರಿಯಲಿದೆ ಎಂಬ ಎಚ್ಚರಿಕೆಯ ಸುದ್ದಿ ಹೊರಬಿದ್ದಿದೆ. ಇದರಿಂದ ಜನ ಆತಂಕದಲ್ಲಿದ್ದಾರೆ

ಉತ್ತರ ಪ್ರದೇಶದಲ್ಲಿ ಧೂಳಿನ ಬಿರುಗಾಳಿ ಹೆಚ್ಚುತ್ತಲೇ ಇದೆ. ಜೂನ್ ಮೊದಲ ದಿನವೇ ಧೂಳಿನ ಬಿರುಗಾಳಿ ಬೀಸಿ ೧೭ ಜನ ಮೃತಪಟ್ಟಿದ್ದು, ೧೧ ಮಂದಿ ಗಾಯಗೊಂಡಿದ್ದರು. ಉತ್ತರಾಖಂಡ್‌ನಲ್ಲಿ ನಾಲ್ಕು ಜನ ಮೃತಪಟ್ಟಿದ್ದರು. ಮೇ ತಿಂಗಳಿಂದಲೂ ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರದಲ್ಲಿ ಧೂಳಿನ ಬಿರುಗಾಳಿಯಿಂದಾಗಿ ಸಾವಿನ ಸಂಖ್ಯೆ ಏರುತ್ತಿದೆ. ಉತ್ತರ ಪ್ರದೇಶದ ೧೩ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಧೂಳಿನ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಭಾನುವಾರ ಎಚ್ಚರಿಸಿದೆ.

ಬಾಂದಾ, ಚಿತ್ರಕೂಟ, ಫತೇಪುರ, ಹಾರ್ಡೋಯ್, ಶಹ್‌ಜಹಾನ್‌ಪುರ, ಪಿಲಿಭಿಟ್, ಬರೇಲಿ, ರಾಂಪುರ, ಮೊರದಾಬಾದ್, ಮೀರತ್‌, ಬಿಜ್ನೋರ್‌, ಮುಜಫರ್‌ ನಗರ ಹಾಗೂ ಶರಣ್‌ಪುರದಲ್ಲಿ ಧೂಳಿನ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನ ವೈಪರೀತ್ಯಗಳು ಹೆಚ್ಚುತ್ತಲೇ ಇದೆ. ಪರಿಣಾಮವಾಗಿ, ಧೂಳಿನ ಬಿರುಗಾಳಿಯಾಗುತ್ತಿರುವುದಾಗಿ ಹವಾಮಾನ ತಜ್ಞರು ತಿಳಿಸಿದ್ದಾರೆ. “ಜಗತ್ತಿನಾದ್ಯಂತ ಧೂಳಿನ ಬಿರುಗಾಳಿಯ ತೀವ್ರತೆ ಹೆಚ್ಚುತ್ತಿದೆ. ತಾಪಮಾನ ಏರಿಕೆಯೇ ಧೂಳಿನ ಬಿರುಗಾಳಿಗೆ ಕಾರಣ ಎನ್ನುವುದನ್ನು ಅಧ್ಯಯನಗಳು ಸೂಚಿಸುತ್ತವೆ. ತಾಪಮಾನ ಏರಿಕೆಯಿಂದಾಗಿ ಉಷ್ಣಗಾಳಿ ಉಂಟಾಗುವುದಲ್ಲದೆ, ಧೂಳಿನ ಬಿರುಗಾಳಿಯೂ ಉಂಟಾಗುತ್ತದೆ,” ಎಂದು ಕೇಂದ್ರ ಪರಿಸರ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಚಂದ್ರ ಭೂಷಣ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಓಕಿ ಚಂಡಮಾರುತದ ಕಾರಣ ಮುಂಬೈನಲ್ಲಿ ಭಾರಿ ಗಾತ್ರದ ಆಲಿಕಲ್ಲು ಮಳೆ ಸುರಿಯಿತೇ?

ಮೇ ೨೯ರಂದು ಧೂಳಿನ ಬಿರುಗಾಳಿಯಿಂದಾಗಿ ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶದಲ್ಲಿ ೪೬ ಜನ ಮೃತಪಟ್ಟಿದ್ದರು. ಜಾರ್ಖಂಡ್‌ನಲ್ಲಿ ೧೨ ಜನ ಮೃತಪಟ್ಟಿದ್ದು, ೨೮ ಮಂದಿ ಗಾಯಗೊಂಡಿದ್ದರು. ಉತ್ತರ ಪ್ರದೇಶದಲ್ಲಿ ೧೫ ಜನ ಮೃತಪಟ್ಟು, ೧೦ ಜನ ಗಾಯಗೊಂಡಿದ್ದರು. ಬಿಹಾರದಲ್ಲಿ ೧೯ ಜನ ಮೃತಪಟ್ಟಿದ್ದರು. ಮೇ ತಿಂಗಳಲ್ಲಿ ಮೂರು ಬಾರಿ ಧೂಳಿನ ಬಿರುಗಾಳಿ ಬೀಸಿ ಉತ್ತರ ಪ್ರದೇಶದಲ್ಲಿ ೧೩೦ ಜನ ಮೃತಪಟ್ಟಿದ್ದರು. ಮೇ ೧೩ರಂದು ಉತ್ತರ ಪ್ರದೇಶದ ಬರೇಲಿ, ಬಾರಬಂಕಿ, ಬುಲಂದ್‌ಶಹರ್‌, ಲಖೀಂಪುರ್‌ಖಿರಿ ಸೇರಿ ಒಟ್ಟು ೩೯ ಜನ ಮೃತಪಟ್ಟಿದ್ದು, ಮೇ ೯ರಂದು ೧೮ ಜನ ಮೃತಪಟ್ಟಿದ್ದರು, ೨೭ ಜನ ಗಾಯಗೊಂಡಿದ್ದರು. ಈಗಾಗಲೇ ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯಂತೆ ಉತ್ತರ ಪ್ರದೇಶ ಸೇರಿ ಕೆಲವು ರಾಜ್ಯಗಳಲ್ಲಿ ಧೂಳಿನ ಬಿರುಗಾಳಿಯಿಂದ ಪ್ರಾಣಹಾನಿಯಾಗಿದ್ದು, ಇನ್ನಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More