ಸುಂಕ ಹೇರಿದ ಅಮೆರಿಕ ವಿರುದ್ಧದ ಸಂಘರ್ಷಕ್ಕೆ ವೇದಿಕೆಯಾದ ಜಿ7 ಶೃಂಗಸಭೆ

ಕಬ್ಬಿಣ, ಅಲ್ಯೂಮಿನಿಯಂ ಮೇಲೆ ಭಾರಿ ತೆರಿಗೆ ಹೇರಿ ಆಕ್ರೋಶಕ್ಕೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಮಿತ್ರರಾಷ್ಟ್ರಗಳೊಂದಿಗೆ ಸಂಘರ್ಷ ಎದುರಿಸಲು ಜಿ7 ಶೃಂಗಸಭೆಯೇ ವೇದಿಕೆಯಾಗಿದೆ. ಸೌಹಾರ್ದತೆಗಿಂತ ಮಾತಿನ ಈಟಿಯಿಂದ ಪರಸ್ಪರ ಇರಿಯುವ ಪ್ರಯತ್ನ ಇಲ್ಲಿ ನಡೆದಿದೆ

ಕಬ್ಬಿಣ ಮತ್ತು ಅಲ್ಯೂಮಿನಿಯಂ ಮೇಲೆ ಭಾರಿ ಸುಂಕ ಹೇರಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಭುಗಿಲೆದಿದ್ದ ಆಕ್ರೋಶವನ್ನು ಪ್ರದರ್ಶಿಸಲು ಜಿ7 ಶೃಂಗಸಭೆ ವೇದಿಕೆಯಾಗಿ ಮಾರ್ಪಟ್ಟಿದೆ.

“ಟ್ರಂಪ್ ತಾವು ಪ್ರತ್ಯೇಕವಾಗಲು ಬಯಸಿದರೆ, ಇತರ ಆರು ದೇಶಗಳು ಅಗತ್ಯಬಿದ್ದರೆ ತಮ್ಮದೇ ಆದ ಒಪ್ಪಂದ ಮಾಡಿಕೊಳ್ಳುತ್ತವೆ,” ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮಾರ್ಕೆಲ್ ಬೆದರಿಕೆ ಹಾಕಿದ್ದಾರೆ. ಆದರೆ, “ನಾವು ಜಿ7 ರಾಷ್ಟ್ರಗಳ ನಡುವಿನ ಅನ್ಯಾಯದ ವ್ಯಾಪಾರ ವಹಿವಾಟು ಸರಿಪಡಿಸಿಕೊಳ್ಳಲು ಬಯಸುತ್ತೇವೆ. ಅದು ಸಾಧ್ಯವಾಗಲಿಲ್ಲವಾದರೆ, ಅದಕ್ಕಿಂತಲೂ ಉತ್ತಮ ನಿರ್ಧಾರ ಕೈಗೊಳ್ಳುತ್ತವೆ,” ಎಂದು ಟ್ರಂಪ್ ಟ್ವೀಟ್ ಮಾಡಿ ಪ್ರತಿಏಟು ನೀಡಿದ್ದಾರೆ.

ಕಬ್ಬಿಣ ಮತ್ತು ಅಲ್ಯೂಮಿನಿಯಂ ಮೇಲೆ ಭಾರಿ ತೆರಿಗೆ ಹೇರಿರುವ ಬಗ್ಗೆ ಅಮೆರಿಕ ಮಿತ್ರ ರಾಷ್ಟ್ರಗಳು ಸೇರಿದಂತೆ ಬಹುತೇಕ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಸುಂಕ ಹೇರಿಕೆ ನಂತರ ಇದೇ ಮೊದಲ ಬಾರಿಗೆ ಜಿ7 ರಾಷ್ಟ್ರಗಳ ನಾಯಕರು ಒಂದೆಡೆ ಸೇರುತ್ತಿದ್ದಾರೆ. ಈ ನಡುವೆ ಪರಸ್ಪರ ಟ್ವೀಟ್‌ಗಳ ಮೂಲಕ ಕಾದಾಡಿದ್ದರೂ ಈಗ ನಡೆಸಲಿರುವ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆಗಳು ನಿರ್ಣಾಯಕವಾಗಲಿವೆ. ಟ್ರಂಪ್ ಸದ್ಯಕ್ಕೆ ಸುಂಕ ತಗ್ಗಿಸುವ ಉಮೇದಿನಲ್ಲೇನೂ ಇಲ್ಲ. ಆದರೆ, ಸುಂಕ ಹೇರಿಕೆ ಮಾಡಿದ್ದರಿಂದ ಮಿತ್ರರಾಷ್ಟ್ರಗಳಿಗೆ ಉಂಟಾಗಿರುವ ಅಸಮಾಧಾನವನ್ನಂತೂ ತಗ್ಗಿಸಲು ಪ್ರಯತ್ನಿಸಬಹುದು. ಆದರೆ, ಶೃಂಗಸಭೆಗೆ ಬರುವ ಮುನ್ನ ಅವರ ಟ್ವೀಟ್ ನೋಡಿದರೆ ಅವರೂ ಸಂಘರ್ಷದ ಹಾದಿಯಲ್ಲೇ ಹೆಜ್ಜೆ ಇಡಲು ಸಿದ್ಧರಾದಂತಿದೆ.

ಬೃಹತ್ ಕೈಗಾರಿಕಾ ರಾಷ್ಟ್ರವಾಗಿರುವ ರಷ್ಯಾ ಸಹ ಜಿ7 ಶೃಂಗಸಭೆಯಲ್ಲಿ ಭಾಗಿಯಾಗಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಕ್ರೆಮಿಯಾ ವಶಪಡಿಸಿಕೊಂಡ ನಂತರ ಜಿ8 ಸಮೂಹದಿಂದ ರಷ್ಯಾವನ್ನು ಹೊರಹಾಕಲಾಗಿದೆ. ಹೀಗಾಗಿ 2014ರಿಂದೀಚೆಗೆ ಇದು ಜಿ7 ಸಮೂಹವಾಗಿದೆ.

ಕೆನಡಾ, ಯುಎಸ್, ಯುಕೆ, ಫ್ರಾನ್ಸ್, ಇಟಲಿ, ಜಪಾನ್ ಮತ್ತು ಜರ್ಮನಿ ದೇಶಗಳನ್ನೊಳಗೊಂಡ ಜಿ7 ಸಮೂಹದ ದೇಶಗಳ ಶೃಂಗಸಭೆ ಕೆನಡಾದ ಕ್ಯೂಬೆಕ್‌ನ ಲಾಮಲ್ಬಾಯ್ ನಗರದಲ್ಲಿ ನಡೆಯುತ್ತಿದೆ. ಈ ಏಳು ದೇಶಗಳು ಜಗತ್ತಿನ ಶೇ.60ರಷ್ಟು ಸಂಪತ್ತನ್ನು ಹೊಂದಿವೆ. ಪ್ರತಿವರ್ಷ ಶೃಂಗಸಭೆ ಸೇರಿ ಜಾಗತಿಕ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸುತ್ತವೆ. ಆದರೆ, ಈ ಶೃಂಗಸಭೆಯ ಮುಖ್ಯ ಉದ್ದೇಶವೇ ಸಮೂಹದ ಆರ್ಥಿಕ ಹಿತಾಸಕ್ತಿ ಕಾಪಾಡಿಕೊಳ್ಳುವುದಾಗಿದೆ.

ಸಮಾವೇಶಕ್ಕೆ ಆಗಮಿಸಿದಾಗ ಮಾತನಾಡಿದ ಟ್ರಂಪ್, “ಶೃಂಗ ಸಮಾವೇಶದ ಗಾತ್ರವು ಕುಗ್ಗಿರುವ ಬಗ್ಗೆ ನನಗೆ ವಿಷಾದವಿದೆ. ನಿಮಗೆ ಇಷ್ಟವಾಗಲಿ ಬಿಡಲಿ ಅಥವಾ ಇದು ರಾಜಕೀಯವಾಗಿ ತಪ್ಪಿರಲಿ, ಆದರೆ, ಜಿ7 ಆಳಲಿಕ್ಕೊಂದು ವಿಶ್ವವಿದೆ. ಈ ಹಿಂದೆ ಜಿ8 ಎನ್ನುತ್ತಿದ್ದೆವು. ಆದರೆ, ರಷ್ಯಾವನ್ನು ಹೊರಹಾಕಲಾಗಿದೆ. ರಷ್ಯಾ ವಾಪಸು ಜಿ8 ಸಮೂಹಕ್ಕೆ ಮರಳಲು ಬಿಡಬೇಕು,” ಎಂದರು.

ಅಮೆರಿಕ ಅಧ್ಯಕ್ಷ ಟ್ರಂಪ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮಾರ್ಕನ್ ನಡುವೆ ಸಂತಸ ಸಂಭ್ರಮಗಳ ವಿನಿಮಯ ನಿರೀಕ್ಷಿಸಲಾಗಿತ್ತಾದರೂ ಅಂತಹದ್ದೇನೂ ನಡೆದಿಲ್ಲ. ಟ್ವೀಟ್ ಮಾಡಿರುವ ಮಾರ್ಕನ್, "ಟ್ರಂಪ್ ತಾವು ಪ್ರತ್ಯೇಕ ಆಗಬಯಸಿದರೆ, ಇತರ ಆರು ದೇಶಗಳು ಅಗತ್ಯಬಿದ್ದರೆ ತಮ್ಮದೇ ಆದ ಒಪ್ಪಂದ ಮಾಡಿಕೊಳ್ಳುತ್ತವೆ. ಏಕೆಂದರೆ ಈ ಆರು ರಾಷ್ಟ್ರಗಳು ಮೌಲ್ಯಗಳನ್ನು ಪ್ರತಿನಿಧಿಸುತ್ತಿವೆ. ಈ ರಾಷ್ಟ್ರಗಳು ಪ್ರತಿನಿಧಿಸುತ್ತಿರುವ ಆರ್ಥಿಕ ಮಾರುಕಟ್ಟೆಗೆ ಐತಿಹಾಸಿಕ ಹಿನ್ನೆಲೆ ಇದೆ. ಆದ್ದರಿಂದಲೇ ಅವು ನಿಜವಾದ ಅಂತಾರಾಷ್ಟ್ರೀಯ ಶಕ್ತಿಯಾಗಿವೆ,” ಎಂದು ಕಟುವಾಗಿ ಹೇಳಿದ್ದಾರೆ.

‘ಬ್ರೊಮಾನ್ಸ್’ ಮೂಲಕ ಟ್ರಂಪ್ ಅವರನ್ನು ಆಕರ್ಷಿಸಲು ಯತ್ನಿಸಿದ್ದ ಆತಿಥೇಯ ನಾಯಕ ಜಸ್ಟಿನ್ ಟ್ರುಡೌ ಸಹ ಇತ್ತೀಚೆಗೆ ಟ್ರಂಪ್ ಜೊತೆಗೆ ಸಂಘರ್ಷದ ಹಾದಿಯಲ್ಲಿದ್ದಾರೆ. ನಾರ್ತ್ ಅಮೆರಿಕ ಫ್ರೀ ಟ್ರೇಡ್ ಅಗ್ರೀಮೆಂಟ್ (ನಾಫ್ಟ) ಮಾತುಕತೆ ಸ್ಥಗಿತಗೊಂಡ ನಂತರ ಈ ಸಂಘರ್ಷ ಮತ್ತಷ್ಟು ಬಿಗಿಗೊಂಡಿದೆ. ಕಬ್ಬಿಣ ಮತ್ತು ಅಲ್ಯೂಮಿನಿಯಂ ಮೇಲೆ ಸುಂಕ ಹೇರುವುದನ್ನು ರಾಷ್ಟ್ರೀಯ ಸುರಕ್ಷತೆ ಎಂದು ಸಮರ್ಥಿಸಿಕೊಳ್ಳುತ್ತಿರುವ ಟ್ರಂಪ್ ನಡೆ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ ಟ್ರುಡೌ.

ಇದನ್ನೂ ಓದಿ : ಭಾರತದ ಆರ್ಥಿಕತೆಯನ್ನು ಹದಗೆಡಿಸಲಿದೆ ಅಮೆರಿಕ-ಇರಾನ್ ಜಿದ್ದಾಜಿದ್ದಿ!

ಯುಕೆ ಪ್ರಧಾನಿ ಥೆರೆಸಾ ಮೇ ಅಮೆರಿಕದ ಬಗ್ಗೆ ಮೃದುನೀತಿ ತಳೆದಿದ್ದು, ಶಾಂತಿಮಂತ್ರದ ಹಾದಿಯಲ್ಲಿದ್ದಾರೆ. ಯುಎಸ್ ಹೇರಿರುವ ಸುಂಕದ ಬಗ್ಗೆ ಸೇಡಿನ ಮನೋಭಾವ ಪ್ರದರ್ಶಿಸುವುದನ್ನು ಯೂರೋಪ್ ಯೂನಿಯನ್ ನಿಗ್ರಹಿಸಿಕೊಳ್ಳಬೇಕು ಎಂದಿದ್ದಾರೆ. ಮಾರ್ಕನ್ ಮತ್ತು ಟ್ರುಡೌ ಜೊತೆ ಟ್ರಂಪ್ ದ್ವಿಪಕ್ಷೀಯ ಮಾತುಕತೆ ನಡೆಸಿದರಾದರೂ ಥೆರೆಸಾ ಮೇಗೆ ಅದು ಸಾಧ್ಯವಾಗಿರಲಿಲ್ಲ. ಆದರೆ, ಅದು ಟ್ರಂಪ್ ಜೊತೆಗಿನ ಅಸಮಾಧಾನವಲ್ಲ ಎಂಬುದನ್ನು ಒತ್ತಿಹೇಳಲು ಅವರು ಯತ್ನಿಸಿದ್ದರು.

ತಡವಾಗಿ ಬಂದಿಳಿದ ಟ್ರಂಪ್, ಶನಿವಾರ ಮುಂಜಾನೆಯೇ ಸಿಂಗಪುರಕ್ಕೆ ತೆರಳುತ್ತಿದ್ದಾರೆ ಮತ್ತು ಅಲ್ಲಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಯುನ್ ಜೊತೆಗೆ ಪ್ರಮುಖ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More