ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ಪ್ರಮುಖ ಸುದ್ದಿಗಳು

ಇಂದಿನ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಪರಿಷತ್ ಚುನಾವಣೆ; ಇಂದು ಮತ ಎಣಿಕೆ

ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಇದೇ 12ರಂದು ಬೆಳಿಗ್ಗೆ 8ರಿಂದ ನಗರದ ಆರ್‌ ಸಿ ಕಾಲೇಜಿನಲ್ಲಿ ನಡೆಯಲಿದೆ. ಪದವೀಧರರ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳಿದ್ದು, ಪ್ರಮುಖವಾಗಿ ಬಿಜೆಪಿಯ ಅ ದೇವೇಗೌಡ, ಜೆಡಿಎಸ್‌ನ ಅಚ್ಚೇಗೌಡ ಶಿವಣ್ಣ ಹಾಗೂ ಕಾಂಗ್ರೆಸ್‌ನ ರಾಮೋಜಿ ಗೌಡ ಅವರ ಭವಿಷ್ಯ ನಿರ್ಧಾರವಾಗಲಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ವೈ ಎ ನಾರಾಯಣಸ್ವಾಮಿ (ಬಿಜೆಪಿ), ರಮೇಶ್‌ ಬಾಬು (ಜೆಡಿಎಸ್‌) ಹಾಗೂ ಎಂ ರಾಮಪ್ಪ (ಕಾಂಗ್ರೆಸ್‌) ಅವರ ಭವಿಷ್ಯ ನಿರ್ಧಾರವಾಗಲಿದೆ.

ಯುಎಸ್ ಓಪನ್ ಪ್ರಶಸ್ತಿ ಮೇಲೆ ಅಜಯ್ ಕಣ್ಣು

ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಅಜಯ್ ಜಯರಾಂ ಮಂಗಳವಾರದಿಂದ (ಜೂನ್ ೧೨) ಶುರುವಾಗುತ್ತಿರುವ ಅಮೆರಿಕ ಓಪನ್ ವಿಶ್ವ ಟೂರ್ ಸೂಪರ್ ೩೦೦ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸುವ ಗುರಿ ಹೊತ್ತಿದ್ದಾರೆ. ಹಾಲಿ ಚಾಂಪಿಯನ್ ಎಚ್ ಎಸ್ ಪ್ರಣಯ್ ಹಾಗೂ ಎರಡು ವರ್ಷಗಳ ಹಿಂದೆ ರನ್ನರ್‌ಅಪ್ ಆಗಿದ್ದ ಪರುಪಳ್ಳಿ ಕಶ್ಯಪ್ ಈ ಬಾರಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಮುಂಬರಲಿರುವ ಏಷ್ಯಾಡ್ ಸೇರಿದಂತೆ ಅದಕ್ಕೂ ಮುನ್ನ ನಡೆಯಲಿರುವ ಮಲೇಷಿಯಾ ಓಪನ್, ಇಂಡೋನೇಷ್ಯಾ ಓಪನ್‌ಗೆ ಹೆಚ್ಚು ತಯಾರಿ ನಡೆಸಲು ಈ ಇಬ್ಬರು ಆಟಗಾರರೂ ಯುಎಸ್ ಓಪನ್‌ನಿಂದ ಹಿಮ್ಮೆಟ್ಟಿದ್ದಾರೆ. ಅಂತೆಯೇ, ಸ್ಟಾರ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಮತ್ತು ಪಿ ವಿ ಸಿಂಧು ಕೂಡಾ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲ. ಮಹಿಳೆಯರ ವಿಭಾಗದಲ್ಲಿ ಅನುರಾ ಪ್ರಭು ದೇಸಾಯಿ ಭಾರತದ ಪ್ರಮುಖ ಸ್ಪರ್ಧಿಯಾಗಿದ್ದಾರೆ.

ಸಿಂಗಪುರದಲ್ಲಿ ಟ್ರಂಪ್-ಕಿಮ್ ಶೃಂಗಸಭೆ

ಇಂದು ಸಿಂಗಪುರದಲ್ಲಿ ನಡೆಯುವ ಮಾತುಕತೆಗಾಗಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಿದ್ಧರಾಗಿದ್ದಾರೆ. ಇದೇ ಪ್ರಥಮ ಬಾರಿಗೆ ನಡೆಯುತ್ತಿರುವ ಉಭಯ ದೇಶಗಳ ನಾಯಕರ ಈ ಮಾತುಕತೆ ಜಗತ್ತಿನ ಗಮನ ಸೆಳೆದಿದೆ. ಪರಮಾಣು ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು ಎರಡು ರಾಷ್ಟ್ರಗಳು ಸಿದ್ದತೆ ನಡೆಸಿವೆ. ಪರಮಾಣು ಶಸ್ತ್ರಗಳು ಇಲ್ಲದಂತೆ ಮಾಡಲು ಈ ಎರಡು ರಾಷ್ಟ್ರಗಳ ನಡುವಿನ ಮಾತುಕತೆ ಇಡೀ ಜಗತ್ತಿಗೆ ಮುಖ್ಯವಾಗಲಿದೆ.

ಬ್ರೆಜಿಲ್ ಮೇಲೆ ಗೋಲ್ಡ್ ಮನ್ ಸ್ಯಾಕ್ ಬೆಟ್ಟಿಂಗ್!

ಈ ವಾರ ಆರಂಭವಾಗಲಿರುವ ಫಿಫಾ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬ್ರೆಜಿಲ್ ಕಪ್ ಗೆಲ್ಲಲಿದೆ; ಹೀಗಂತ ಗೋಲ್ಡ್ ಮನ್ ಸ್ಯಾಕ್ ಇನ್ಕಾರ್ಪ್ ಭವಿಷ್ಯ ನುಡಿದಿದೆ. ಅಮೆರಿಕ, ಭಾರತ ಸೇರಿದಂತೆ ಪ್ರಮುಖ ದೇಶಗಳ‌ ಜಿಡಿಪಿ, ಕಂಪನಿಗಳ ಲಾಭಾಂಶದ ಬಗ್ಗೆ ಭವಿಷ್ಯ ನುಡಿಯುವ ಗೋಲ್ಡ್ ಮನ್ ಸ್ಯಾಕ್ ಅಂಕಿಅಂಶಗಳು, ಆಟಗಾರರ ತಾಂತ್ರಿಕ ವಿಶ್ಲೇಷಣೆ, ಅರ್ಥಮಾಪನಶಾಸ್ರ ಆಧರಿಸಿ ಈ ಭವಿಷ್ಯ ಹೇಳಿದೆ. ಒಂದು ದಶಲಕ್ಷ ಸಿಮ್ಯುಲೇಶನ್‌, ಎರಡು ಲಕ್ಷ ಅಂಕಿಅಂಶ ಮತ್ತು ಆಟಗಾರರ ಇತ್ತೀಚಿನ ಸಾಧನೆ ಆಧರಿಸಿ ಬ್ರೆಜಿಲ್ ಗೆಲ್ಲಲಿದೆ ಎಂದು ಹೇಳಿದೆ. ಅಂದಹಾಗೆ 2014ರಲ್ಲಿ ಸಹ ಗೋಲ್ಡ್ ಮನ್ ಸ್ಯಾಕ್ ಬ್ರೆಜಿಲ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಬ್ರೆಜಿಲ್ ಚಾಂಪಿಯನ್‌ ಜರ್ಮನಿಯ ವಿರುದ್ಧ7-1 ಅಂತರದಲ್ಲಿ ಸೋತಿತ್ತು. ಅದೇನೆ ಬೆಟ್ಟಿಂಗ್ ಪ್ರಿಯರು ಈ ಭವಿಷ್ಯದ ಮೇಲೆ ಹೂಡಿಕೆ ಮಾಡುತ್ತಾರಾ ಅನ್ನೋದು ಕುತೂಹಲಕಾರಿ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More