ರಾಹುಲ್ ಲೇವಡಿಗೆ ಒಳಗಾದ ‘ಶಿಕಂಜಿ’, ‘ಢಾಬಾವಾಲಾ’ ಪದಗಳ ಹಿಂದಿನ ಸತ್ಯ ಗೊತ್ತೇ?

“ಕೋಕೋ ಕೋಲಾ ಮಾಲೀಕ ಅಮೆರಿಕದಲ್ಲಿ ‘ಶಿಕಂಜಿ’ (ಪಾನೀಯ) ಮಾರುತ್ತಿದ್ದರು, ಮೆಕ್‌ಡೊನಾಲ್ಡ್ ಕಂಪನಿ ಮಾಲೀಕ ಹಿಂದೆ ಢಾಬಾ ಮಾಡಿಕೊಂಡಿದ್ದರು,” ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಮಾತನ್ನು ಸುಳ್ಳು ಎಂಬ ಕಾರಣಕ್ಕೆ ಗೇಲಿ ಮಾಡಲಾಯಿತು. ಆದರೆ ಆ ಮಾತಿನ ಹಿಂದಿನ ಸತ್ಯ ಇಲ್ಲಿದೆ

ರಾಹುಲ್ ಗಾಂಧಿ ಅವರ ವ್ಯಕ್ತಿತ್ವ ಹರಣವನ್ನು ಸಂದರ್ಭ ಸಿಕ್ಕಾಗೆಲ್ಲ ಮಾಡುತ್ತಲೇ ಬರುವುದು ಸಹಜ ಎಂಬಂತಾಗಿದೆ. ಸೋಮವಾರ ನವದೆಹಲಿಯಲ್ಲಿ, ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಲೋಕಸಭಾ ಚುನಾವಣಾ ಉದ್ದೇಶಿಸಿ ಮಾತಾಡಿದ ರಾಹುಲ್ ಗಾಂಧಿ, ಕೋಕೋ ಕೋಲಾ ಹಾಗೂ ಮೆಕ್‌ಡೊನಾಲ್ಡ್ ಕಂಪನಿಗಳ ಮಾಲೀಕರು ಹಿಂದೆ ಏನಾಗಿದ್ದರು ಎಂಬ ಬಗ್ಗೆ ಆಡಿದ ಮಾತುಗಳು ಕೂಡ ಅದೇ ಕಾರಣಕ್ಕೆ ಬಳಕೆಯಾಗಿವೆ ಕೂಡ.

ರಾಹುಲ್ ಅವರು ಕೋಕ ಕೋಲಾ ಕಂಪನಿಯ ಮಾಲೀಕ ಹಿಂದೆ ಏನಾಗಿದ್ದರು ಎಂದು ಯಾರಾಗಿದರೂ ಗೊತ್ತೇ? ಎಂದು ಕೇಳುತ್ತಾರೆ. ಸ್ವತಃ ಅವರೇ ಉತ್ತರಿಸುತ್ತ, “ಕೋಲಾ ಮಾಲೀಕ ಅಮೆರಿಕದಲ್ಲಿ ‘ಶಿಕಂಜಿ’ (ಪಾನೀಯ) ಮಾರುತ್ತಿದ್ದರು, ಅದೇ ರೀತಿ ಮೆಕ್‌ಡೊನಾಲ್ಡ್ ಕಂಪನಿ ಮಾಲೀಕ ಹಿಂದೆ ಢಾಬಾ ಮಾಡಿಕೊಂಡಿದ್ದರು,” ಎಂದಿದ್ದಾರೆ, ವಿರೋಧಿಗಳಿಗೆ ಇಷ್ಟೇ ಸಾಕಾಯಿತು. ಈ ಮಾತುಗಳು ಸುಳ್ಳು ಎಂದು ರಾಹುಲ್ ಅವರನ್ನು ಟ್ರೋಲ್ ಮಾಡಲಾಯಿತು. ನಿಜವಾಗಿಯೂ ಆ ಕಂಪನಿಗಳ ಮಾಲೀಕರು ಏನಾಗಿದ್ದರು? ಆ ಈರ್ವರ ಮೂಲ ಕೆದಕಿದರೆ ಸತ್ಯಾಂಶ ಹೊರಬೀಳುತ್ತದೆ.

ಕೋಲಾ ಪಾನೀಯವನ್ನು ತಯಾರಿಸಿದ ಹಾಗೂ ದೊಡ್ಡ ಕಂಪನಿಯಾಗಿ ಬೆಳೆಸಿದ ಜಾನ್ ಪೆಂಬರ್ಟನ್ ಔಷಧಿಗಳನ್ನು ತಯಾರಿಸುತ್ತಿದ್ದ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಪ್ರಕಾರ, ಆತ ಎರಡನೇ ಮಹಾಯುದ್ಧದ ಸಮಯದಲ್ಲಿ ಸೇನೆ ಸೇರುತ್ತಾನೆ. ಅಲ್ಲಿ ಆತನಿಗೆ ಗಾಯವಾದಾಗ ‘ಮಾರ್ಪೈನ್’ ಔಷಧಿಯನ್ನು ಸೇವಿಸುತ್ತಾನೆ. ಆ ಔಷಧಿ ಅವನಿಗೆ ವ್ಯಸನವಾಗಿ ಅಮಲಿನಲ್ಲಿ ತೊಂದರೆ ಅನುಭವಿಸುತ್ತಾನೆ. ಹೇಗಾದರೂ ಮಾಡಿ ಅದರಿಂದ ಹೊರಬಂದು ಇದಕ್ಕೆ ಪರಿಣಾಮಕಾರಿಯಾದ ಪರ್ಯಾಯ ಮಾರ್ಗ ಕಂಡುಹಿಡಿಯಬೇಕೆಂದು ಯೋಚಿಸುತ್ತಾನೆ. ಆಗ ಆತನ ತಲೆಗೆ ಬಂದದ್ದು ಶರಬತ್ ತಯಾರಿಸುವ ಯೋಚನೆ. ಕೋಕಾ ಹಾಗೂ ವೈನ್ ಸೇರಿಸಿ ಹೊಸ ರುಚಿಯನ್ನು ತನ್ನ ಪಾನೀಯಕ್ಕೆ ಕೊಡುತ್ತಾನೆ. ಅದನ್ನು ‘ಫ್ರೆಂಚ್ ವೈನ್ ಕೋಕಾ’ ಎಂದು ಕರೆಯುತ್ತಾನೆ. ಅಷ್ಟರಲ್ಲಿ ೧೮೮೬ರಲ್ಲಿ ಅಂಟ್ಲಾಂಟಾ ನಗರದಲ್ಲಿ ವೈನ್ ಮಾರುವುದನ್ನು ನಿಷೇಧಿಸಲಾಗುತ್ತದೆ. ತನ್ನ ಪಾನೀಯ ಮಾರಾಟವಾಗಲು ನಿಷೇಧ ಹೇರಿರುವುದು ಕಾರಣವಾಗಬಹುದು ಎಂದು ತಾನು ತಯಾರಿಸಿದ ಪಾನೀಯಕ್ಕೆ ‘ವೈನ್’ ಎಂದು ಹೇಳದೆ, ಕೋಕ ಕೋಲಾ ಎಂದು ಹೆಸರಿಡುತ್ತಾನೆ. ಅಲ್ಲದೆ, ರುಚಿಯಲ್ಲಿ ಅಲ್ಪ ವ್ಯತ್ಯಾಸ ಮಾಡುತ್ತಾನೆ. ಅಲ್ಪ ಪ್ರಮಾಣದಲ್ಲಿ ವೈನ್‌ಗೆ ಸಕ್ಕರೆ ನೀರನ್ನು ಸೇರಿಸುತ್ತಾನೆ. ಅಲ್ಲಿಂದ ಮಾರುವ ಹೊಸ ತಂತ್ರಗಾರಿಕೆಯನ್ನು ಹುಟ್ಟುಹಾಕುತ್ತಾನೆ. ಮುಂದೆ ಅದು ಕೋಕ ಕೋಲಾ ಜಗತ್ತಿನಾದ್ಯಂತ ಬೆಳೆದು ಬಂದ ರೀತಿ ಎಲ್ಲರಿಗೆ ಗೊತ್ತಿರುವಂಥದ್ದು.

ಉತ್ತರ ಭಾರತದಲ್ಲಿ ಶರಬತ್‌ಗೆ ಶಿಕಂಜಿ ಎಂದು ಹೇಳುತ್ತಾರೆ. ರಾಹುಲ್ ನಿನ್ನೆಯ ಭಾಷಣದಲ್ಲಿ ಜನರನ್ನು ಉದ್ದೇಶಿಸಿ ಮಾತಾಡುವಾಗ ಈ ಸಾಧಕರು ಬೆಳೆದುಬಂದ ಹಾದಿಯನ್ನು ಉದಾಹರಿಸಲು ಮುಂದಾಗುತ್ತಾರೆ. ವೀಕ್ಷಕ ವರ್ಗವನ್ನು ಗಮನದಲ್ಲಿಟ್ಟುಕೊಂಡು ಪೆಂಬರ್ಟನ್ ಹಾಗೂ ಮೆಕ್‌ಡೊನಾಲ್ಡ್ ಅವರು ಏನಾಗಿದ್ದರು ಎಂದು ವಿವರಿಸಿದ್ದು ಒಂದು ಅರ್ಥದಲ್ಲಿ ಸರಿಯೇ ಎನ್ನಬಹುದು.

ಇನ್ನು, ಮೆಕ್‌ಡೊನಾಲ್ಡ್ ಕಂಪನಿ ಬೆಳೆದು ಬಂದ ರೀತಿಯನ್ನು ನೋಡುವುದಾದರೆ, ಆತ ಹಾಟ್ ಡಾಗ್ ಸ್ಟ್ಯಾಂಡ್ ಹೆಸರಿನಲ್ಲಿ ಚಿಕ್ಕ ಗೂಡಂಗಡಿ ತೆರೆದಿದ್ದ. ರಾಹುಲ್ ಹೇಳಿದಂತೆ ಆತ ಢಾಬಾವಾಲಾ. ಅಂದರೆ, ಆ ಪ್ರದೇಶದಲ್ಲಿ ಆತ ನಮ್ಮ ಢಾಬಾವಾಲನ ಸ್ಥಿತಿಗತಿ ಹೊಂದಿರುವ ಮನುಷ್ಯ. ಮೆಕ್‌ಡೊನಾಲ್ಡ್ ಕಂಪನಿಯನ್ನು ರಿಚರ್ಡ್ ಹಾಗೂ ಮೊರೀಸ್ ಮೆಕ್‌ಡೊನಾಲ್ಡ್ ಎಂಬುವವರು ಆರಂಭಿಸುತ್ತಾರೆ. ಆನಂತರದಲ್ಲಿ ಇವರಿರ್ವರೂ ರೆಸ್ಟೋರೆಂಟ್ ಆರಂಭಿಸಿ, ಬರ್ಗರ್ ಹಾಗೂ ಮಿಲ್ಕ್ ಶೇಕ್ ಮಾಡಲು ಆರಂಭಿಸುತ್ತಾರೆ.

ಈ ಭಾಷಣದ ನಂತರ, ಟ್ವಿಟ್ಟರ್‌ನಲ್ಲಿ ರಾಹುಲ್ ಅವರನ್ನು ಲೇವಡಿ ಮಾಡುವ ಉದ್ದೇಶದಿಂದ ಟ್ರಾಲ್ ಮಾಡಲಾಗಿದೆ. ವಿಕಿಪೀಡಿಯಾ ವಿಶ್ವಕೋಶದಲ್ಲೂ (ಇಂಗ್ಲಿಷ್) ರಾಹುಲ್ ಗಾಂಧಿಯವರು ಮಾತಾಡಿದ ಮೇಲೆ ಕೋಕ ಕೋಲಾ ತಯಾರಿಸಿದ ಜಾನ್ ಪೆಂಬರ್ಟನ್ ಪ್ರೊಫೈಲನ್ನು ಹಠಾತ್ತನೆ ಎಡಿಟ್ ಮಾಡಲಾಗಿದೆ. ಕೆಲ ಅಂಶಗಳನ್ನು ಡಿಲೀಟ್ ಮಾಡಿ ಕೆಲ ಅಂಶಗಳನ್ನು ಸೇರಿಸಲಾಗಿದೆ. ಉದ್ದೇಶಪೂರ್ವಕವಾಗಿಯೇ ರಾಹುಲ್ ಗಾಂಧಿಯವರನ್ನು ಪೇಚಿಗೆ ಸಿಲುಕಿಸುವ ಕೆಲಸ ಇಲ್ಲಿಯೂ ನಡೆದಿದೆ ಎನ್ನಬಹುದು.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More