ಬಿಜೆಪಿ ಸಂಸದೆ ಫುಲೆ ಮಾತು| ನ್ಯಾಯಾಧೀಶರೇ ಹೇಳಿದ್ದಾರೆ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು!

ಸಂವಿಧಾನ ಇದ್ದಿದ್ದರಿಂದಲೇ ನಾನು ಈಗ ಸಂಸದೆಯಾಗಲು ಸಾಧ್ಯವಾಗಿರುವುದು, ಹಾಗಿರುವಾಗ ಸಂವಿಧಾನವನ್ನೇ ಬದಲಾಯಿಸಲು ಹೊರಟ ನಮ್ಮ ಪಕ್ಷದವರ ನಡೆ ಖಂಡಿಸುತ್ತೇನೆ” ಎಂದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರುದ್ಧದ ಬಿಜೆಪಿ ಹೆಜ್ಜೆಗಳನ್ನು ತಿರಸ್ಕರಿಸುತ್ತಲೇ ಬಂದಿರುವ ಸಾವಿತ್ರಿ ಬಾಯಿ ಪುಲೆ 

ನಾಥ ಪಂಥದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಂದು ಕಡೆ. ಉತ್ತರಪ್ರದೇಶದ ಬಹರೇಚ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿದ್ದ ದಲಿತೆ ಸಾವಿತ್ರಿಬಾಯಿ ಪುಲೆ ಮತ್ತೊಂದು ಕಡೆ. ಪುಲೆಯವರು ಕೆಳವರ್ಗದ ದಲಿತರಿಗೆ ದನಿಯಾದವರು. ಆದರೆ ಮೇಲ್ವರ್ಗದ ಪಕ್ಷದ ಲೇಬಲ್‌ನಿಂದ ಹೊರಬರುವ ಒಂದು ತಂತ್ರವಾಗಿ ಬಿಜೆಪಿಯಿಂದ ಪುಲೆಯವರಿಗೆ ಮೀಸಲಾತಿ ಹೆಸರಲ್ಲಿ ಸ್ಥಾನ ಸಿಕ್ಕಿತು.

“ಅಂಬೇಡ್ಕರ್ ಅವರು ಸೇರಿ ರೂಪುಗೊಂಡ ಸಂವಿಧಾನ ಇದ್ದಿದ್ದರಿಂದಲೇ ನಾನು ಈಗ ಸಂಸದೆಯಾಗಲು ಸಾಧ್ಯವಾಗಿರುವುದು, ಹಾಗಿರುವಾಗ ಸಂವಿಧಾನವನ್ನೇ ಮರುವ್ಯಾಖ್ಯಾನಿಸಲು, ಬದಲಾಯಿಸಲು ಹೊರಟ ನಮ್ಮ(ಬಿಜೆಪಿ) ಪಕ್ಷದವರ ನಡೆಯನ್ನು ಖಂಡಿಸುತ್ತೇನೆ” ಎಂದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರುದ್ಧದ ಬಿಜೆಪಿಯ ಹೆಜ್ಜೆಗಳನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಯಾವುದೇ ಸರ್ಕಾರಿ ನೌಕರರು ಅಥವಾ ವ್ಯಕ್ತಿಗಳ ವಿರುದ್ಧ ದೂರು ದಾಖಲಾದರೆ ಅಪಾದಿತರನ್ನು ತಕ್ಷಣ ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚಿನ ತೀರ್ಪಿನ ವಿರುದ್ಧ ದೇಶಾದ್ಯಂತ ದಲಿತರ ಪ್ರತಿಭಟನೆಗಳು ನಡೆದಾಗ ದಲಿತರನ್ನು ಬಂಧಿಸಲಾಯಿತು. ಆದರೆ ಉತ್ತರ ಪ್ರದೇಶದಲ್ಲಿ ಕೆಲ ಕಡೆ ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿದಾಗ ಪುಲೆ ಪ್ರತಿನಿಧಿಸಿದ್ದ ಬಹರೀಚ್‌ನ ಮತಿಯಾಲ ಗ್ರಾಮದಲ್ಲೂ ಅಂಬೇಡ್ಕರ್ ಪ್ರತಿಮೆಗೆ ವಿಸ್ಕಿಯನ್ನು ಸುರಿದು ಅವಮಾನ ಮಾಡಿದಾಗ, ಬಿಜೆಪಿ ಸರ್ಕಾರ ಯಾರನ್ನೂ ಬಂಧಿಸದೇ ಇದುದ್ದನ್ನು ವಿರೋಧಿಸಿದ್ದಾರೆ. ದಲಿತರ ಮನೆಯಲ್ಲಿ ಊಟ ಮಾಡಿ ಎಂದು ಕರೆ ಕೊಡುವ ಬಿಜೆಪಿಗರನ್ನು ಹಾಗು ಅವರ ಮನೆಯಲ್ಲಿ ಊಟ ಮಾಡಿ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ತಮ್ಮ ಪಕ್ಷದ ನಾಯಕರನ್ನುಟೀಕಿಸಿದ್ದಾರೆ.

ದಲಿತರಿಗೂ ತಮ್ಮ ಪಕ್ಷದಲ್ಲಿ ಸ್ಥಾನಮಾನ ಕೊಡಲಾಗಿದೆ ಎಂದು ಹೇಳಿಕೊಂಡು ತಿರುಗಲು ಹಾಗು ಪಕ್ಷದ ಸಮಾವೇಶಗಳಲ್ಲಿ ಪುಲೆಯವರನ್ನು ಮತತಂತ್ರವಾಗಿ ಬಳಸಲಾಗಿದೆ. ಇದೇ ಕಾರಣದಿಂದ ಉಡುಪಿಯ ಒಂದು ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದರು.

ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆಯವರು ಈ ಹಿಂದೆ ಹೇಳಿದಂತೆ ಸಂವಿಧಾನ ಬದಲಾಯಿಸಬೇಕು ಎಂಬುದನ್ನು ಗಮದಲ್ಲಿಟ್ಟುಕೊಂಡು ಹಾಗೂ ಇತ್ತೀಚಿನ ಕೆಲ ಬೆಳವಣಿಗೆಯನ್ನಿಟ್ಟುಕೊಂಡು ಸಾವಿತ್ರಿಬಾಯಿ ಪುಲೆಯವರು ವೈರ್ ಸುದ್ದಿ ತಾಣಕ್ಕೆ ಸಂದರ್ಶನವನ್ನು ನೀಡಿದ್ದಾರೆ. ಮೀಸಲಾತಿ ಹಾಗೂ ಸಂವಿಧಾನ ಕುರಿತಾಗ ಬಿಜೆಪಿಗರಲ್ಲಿರುವ ನಿಲುವುಗಳಿಂದ ಮುಂದಾಗುವ ಪರಿಣಾಮಗಳನ್ನಿಟ್ಟುಕೊಂಡು ಪಕ್ಷವನ್ನು ಪ್ರಶ್ನಿಸಿದ್ದಾರೆ. ಆದರೆ ಒಮ್ಮೆ ಅಲಿಘಡ್ ವಿಶ್ವವಿದ್ಯಾಲಯದಲ್ಲಿ ಪಾಕಿಸ್ತಾನ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಬಾವಚಿತ್ರವನ್ನು ತೆಗೆದುಹಾಕಬೇಕೆಂದು ವಿವಾದವಾದಾಗ ಜಿನ್ನಾ ಅವರನ್ನು ಮಹಾಪುರುಷ ಎಂದು ಪುಲೆ ಬಣ್ಣಿಸಿದ್ದರು. ಜಿನ್ನಾ ಕುರಿತಾಗಿ ಬಿಜೆಪಿ ಹಾಗು ಆರೆಸ್ಸೆಸ್ಸಿಗರಲ್ಲಿ ಇರುವ ವ್ಯತಿರಿಕ್ತ ನಿಲುವು ಪಕ್ಷದೊಳಗೆ ಪುಲೆ ವಿವಾದಕ್ಕೀಡಾದರು. ಇದರ ಹೊರತಾಗಿ ಕಳೆದ ಏಪ್ರಿಲ್ ೧ ರಲ್ಲಿ ಲಕ್ನೋದಲ್ಲಿ ಸಂವಿಧಾನ ಉಳಿಸಿ(Save the Indian Constitution)ಜಾಥಾದಲ್ಲಿ ಭಾಗವಹಿಸಿದ್ದರು.

‘ದಿ ವೈರ್’ ಪ್ರಕಟಿಸಿದಂತೆ ಕೇಳಿದ ಕೆಲ ಪ್ರಶ್ನೆಗಳಿಗೆ ಸಾಧ್ವಿ ಉತ್ತರಿಸಲು ನಿರಾಕರಿಸಿದ್ದಾರೆ.

  • ಮೋದಿ ಅವರ ನಾಲ್ಕು ವರ್ಷದ ಅಧಿಕಾರಾವಧಿಯನ್ನು ಹೇಗೆ ನೋಡುತ್ತೀರಿ?
  • ಬಹುಜನ ಸಮಾಜ ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರಿದುದರ ಹಿಂದಿನ ಕಾರಣ?
  • ಜಿನ್ನಾ ಅವರ ಫೋಟೋ ಎಲ್ಲೆಡೆ ಹಾಕುವ ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ ನಿಲ್ಲುತ್ತೀರೆ?
  • ಪ್ರಧಾನಿ ಮೋದಿಯವರ ನಾಯಕತ್ವದ ಬಗ್ಗೆ ಏನು ಹೇಳುತ್ತೀರಿ?

ಅವತ್ತು ಏಪ್ರಿಲ್ ೧ ರ ಜಾಥಾದಲ್ಲಿ ನೀವು ಹೇಳುತ್ತೀರಿ ಸಂವಿಧಾನ ಅಪಾಯದಲ್ಲಿದೆ ಎಂದು, ಆದರೆ ಕೇಂದ್ರದಲ್ಲಿ ಹಾಗು ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇರುವಾಗ ಸಂವಿಧಾನಕ್ಕೆ ಅಪಾಯ ಬರುವುದೆಲ್ಲಿ?

ರೇಡಿಯೋ, ಪತ್ರಿಕೆಗಳು ಮತ್ತು ದೂರದರ್ಶನ ಮಾಧ್ಯಮದ ಮೂಲಕ ನೀವು ಎಲ್ಲರೂ ಕೇಳಿರಬಹುದು, ಸಂವಿಧಾನವನ್ನು ಬದಲಾಯಿಸಲು ನಾವು ಇಲ್ಲಿದ್ದೇವೆ ಅಥವಾ ಅದನ್ನು ಪರಿಶೀಲಿಸಲಾಗುವುದು ಎಂದು, ಮತ್ತು ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಲಾಗುವುದು ಎಂಬೆಲ್ಲಾ ಮಾತುಗಳನ್ನು (ಹಿರಿಯ ಬಿಜೆಪಿ ನಾಯಕ) ಸುಬ್ರಮಣಿಯನ್ ಸ್ವಾಮಿ ಹೇಳಿದ್ದನ್ನು ಕೇಳಿರಬಹುದು. ಇದು ನಡೆದರೆ, ಬಹುಜನ ಸಮಾಜವು ಅದರ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುತ್ತದೆ.

ಇಂದು ಬಹುಜನ ಸಮುದಾಯದವರು ಬ್ಲಾಕ್ ಅಧ್ಯಕ್ಷರಾಗಲು, ಮುಖ್ಯಮಂತ್ರಿಯಾಗಲು, ಪ್ರಧಾನಿ, ರಾಷ್ಟ್ರಪತಿಯಾಗುವ ಎಲ್ಲ ಅವಕಾಶಗಳನ್ನು ಹೊಂದಿದ್ದಾರೆ ಅದು ಸಾಧ್ಯವಾದದ್ದು ಬಾಬಾ ಸಾಹೇಬರ ಸಂವಿಧಾನದಿಂದ, ಅವರು ತಂದ ಮಿಸಲಾತಿಯಿಂದ. ಇದರ ನಡುವೆ ಸಂವಿಧಾನ ಹಾಗೂ ಮೀಸಲಾತಿ ಕೊನೆಗಾಣಿಸಲು ಪಿತೂರಿ ನಡೆಸಲಾಗುತ್ತಿದೆ.

ನಾವಷ್ಟೇ ಅಲ್ಲ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ಇಂದು ದಲಿತ ಹೆಣ್ಣು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಸುಡಲಾಗುತ್ತಿದೆ. ಬಹುಜನ ಸಮುದಾಯದವರು ಕುದುರೆ ಓಡಿಸಿದರೆ ಅಂತಹವರನ್ನು ಕೆಳಗಿಳಿಸಿ ಶೂಟ್ ಮಾಡಲಾಗುತ್ತದೆ. ಹಳ್ಳಿಗಳನ್ನು ಸುಡಲಾಗುತ್ತದೆ. ಅಂಬೇಡ್ಕರ್ ಪ್ರತಿಮೆಯನ್ನು ಕೆಡವಿದವರನ್ನು ಬಂಧಿಸುವುದಿರಲಿ ಅಪರಾಧಿಗಳನ್ನು ವಿರೋಧಿಸಿ ಮಾತಾಡಿದವರನ್ನು ಬಂಧಿಸಲಾಗುತ್ತದೆ.

ಎಪ್ರೀಲ್ ೨ ರಂದು ಬಹುಜನ ಸಮಾಜದವರು ಭಾರತ್ ಬಂದ್ ಕರೆಯುತ್ತಾರೆ. ಆದರೆ ಅಂದು ಸಂವಿಧಾನ ವಿರೋಧಿ, ಬಹುಜನ ಸಮುದಾಯ ವಿರೋಧಿ, ಮೀಸಲಾತಿ ವಿರೋಧಿಗಳು ಅವರ ವಿರುದ್ಧ ನಿಂತರು. ಎಷ್ಟೋ ಜನರು ಬಲಿಯಾದರು. ಜಗತ್ತಿನಲ್ಲೇ ಉತ್ತಮ ಸಂವಿಧಾನ ಭಾರತದ್ದು, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಬಡತನವನ್ನು ನಿರ್ಮೂಲನೆ ಮಾಡಬಹುದಿತ್ತು ಆದರೆ ಸಂವಿಧಾನವನ್ನೇ ಅಳಿಸಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಜಾತಿ ಆಧಾರಿತ ಗಣತಿಯಿಂದ ಕೆಳವರ್ಗದವರ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಬಹುಜ ಸಮುದಾಯದವರಿಗೆ ದಿನದ ಒಂದು ಹೊತ್ತಿನ ಬ್ರೆಡ್ ಗಳಿಸಲು ಕಷ್ಟಪಡಬೇಕಾಗಿದೆ. ಅವರಿಗೆ ಬದುಕಲು ಸರಿಯಾದ ಸ್ಥಾನಮಾನ ಇಲ್ಲ. ಜುಗ್ಗಿಯಲ್ಲಿ(ಸ್ಲಂ) ಅವರ ಬದುಕು.

ನೀವು ನಿಮ್ಮ ಪಕ್ಷದ ಸದಸ್ಯೆಯಾಗಿ ನಿಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧವೇ ಹೋರಾಡಬೇಕಿದೆಯೇ?

ನಾನು ಬಹರೀಚ್ ಮೀಸಲಾತಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ, ಮೊದಲು ನಾನು ಅಂಬೇಡ್ಕರ್ ನೀಡಿದ ಸಂವಿಧಾನಕ್ಕೆ ಧನ್ಯವಾದ ಹೇಳುತ್ತೇನೆ. ನಾನು ಎಂಪಿಯಾಗಿ ಸಂಸತ್ತಿನಲ್ಲೂ ಬಹುಜನ ಸಮಾಜದವರಿಗೆ ಆದ ಅನ್ಯಾಯದ ಬಗ್ಗೆ ದನಿ ಎತ್ತಿದ್ದೇನೆ. ನಾನು ಅವರ ಪರವಾಗಿ ದನಿ ಎತ್ತದೇ ಇದ್ದರೆ ಅದು ಅರ್ಥಹೀನವಾಗುತ್ತದೆ. ಸಂಸದೆಯಾಗಿ ನಾನು ಮುಂದುವರೆಯಬೇಕೆಂದರೆ ದಲಿತ ಸಮುದಾಯಕ್ಕಾಗಿ ನಾನು ಶ್ರಮಿಸಬೇಕಾಗಿದೆ.

ನಿಮ್ಮ ಪಕ್ಷದ ಜೊತೆ ನೀವು ಬಹುಕಾಲದಿಂದ ಇದ್ದೀರಿ, ಅದೇ ಪಕ್ಷ ಬಹುಜನ ಸಮಾಜ ಲಾಭಕ್ಕಾಗಿ ಕೆಲಸ ಮಾಡುತ್ತದೆ ಎಂದು ಅನಿಸುತ್ತದೆಯೇ?

ನಾನು ಹೇಳುತ್ತೇನೆ ಪಕ್ಷ ಮಾತ್ರ ಬಹುಜನ ಸಮಾಜದ ಒಳಿತಿಗಾಗಿ ಅವರ ಹಕ್ಕುಗಳಿಗಾಗಿ ಮಾತಾಡುತ್ತದೆ, ಅವರಿಗೆ ಆಹಾರ, ಬಟ್ಟೆ, ಮನೆ ಕಲ್ಪಿಸುವವರು ಮಾತ್ರ ದೇಶವನ್ನು ಆಳುವವರು.

ಉತ್ತರಪ್ರದೇಶದಲ್ಲಿ ನಿಮ್ಮ ಪಕ್ಷದ ವಿರುದ್ಧ ವಿರೋಧಪಕ್ಷಗಳು(ಸಮಾಜವಾದಿ ಹಾಗು ಬಿಎಸ್‌ಪಿ) ಬಹುದೊಡ್ಡದಾಗಿ ಮೈತ್ರಿ ಮಾಡಿಕೊಳ್ಳುತ್ತಿವೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಈ ಪ್ರಶ್ನೆ ಅವರಿಗೆ ಕೇಳಿದ್ದರೆ ಒಳ್ಳೆಯದಿತ್ತು. ಆದರೆ ಸಿದ್ದಾಂತಗಳು ಒಂದಾಗಬೇಕು. ಎಲ್ಲಾ ಪಕ್ಷಗಳು ಬಹುಜನ ಸಮಾಜದ ಬಗ್ಗೆ ಆಸಕ್ತಿ ತೋರಬೇಕು. ನನಗೆ ಎಲ್ಲ ಪಕ್ಷಗಳು ದೇಶದಲ್ಲಿ ಸಂವಿಧಾನವನ್ನು ಸರಿಯಾಗಿ ಜಾರಿಗೊಳಿಸಲು ಶ್ರಮಿಸಬೇಕು.

ನೀವು ಹೇಗೆ ರಾಜಕೀಯಕ್ಕೆ ಪ್ರವೇಶ ಪಡೆದಿರಿ?

ನಾನು ಎಂಟನೇ ತರಗತಿಯಲ್ಲಿದ್ದಾಗ ಸ್ಕಾಲರ್‌ಶಿಪ್ ಬಂತು. ಅದು ಶಾಲೆಯ ಪ್ರಿನ್ಸಿಪಾಲರ ಅಕೌಂಟ್‌ಗೆ ಕ್ರೆಡಿಟ್ ಆಯಿತು. ಅದು ನನಗೆ ಸಿಗಲಿಲ್ಲ. ಅದನ್ನು ವಾಪಾಸ್ ನನಗೆ ಕೊಡುವಂತೆ ಕೇಳಿದೆ. ಆದರೆ ನನ್ನನ್ನು ಶಾಲೆಯಿಂದ ಹೊರಕಳಿಸಲಾಯಿತು, ಮೂರು ವರ್ಷಗಳ ಕಾಲ ಟ್ರಾನ್ಸ್‌ಫರ್ ಸರ್ಟಿಫೀಕೇಟ್ ಹಾಗೂ ಮಾರ್ಕ್ಸ್ ಕಾರ್ಡ್‌ಗಳನ್ನು ಕೊಡಲೇ ಇಲ್ಲ. ಇದಾದ ಬಳಿಕ ಜನತಾ ದರ್ಬಾರಿನಲ್ಲಿ ನಾನು ಪಾಲ್ಗೊಂಡೆ. ಅಲ್ಲಿ ಮುಖ್ಯಮಂತ್ರಿ ಮಾಯಾವತಿಯವರನ್ನು ಕಂಡೆ. ಅವರಿಂದ ನಾನು ರಾಜಕೀಯಕ್ಕೆ ಪ್ರವೇಶ ಹೊಂದಲು ಸ್ಫೂರ್ತಿ ಪಡೆದುಕೊಂಡೆ. ಇಂದು ನಾನು ಅಂಬೇಡ್ಕರ್, ಕಾನ್ಶಿರಾಮ್, ಶಾಹುಜಿ ಮಹಾರಾಜ್, ಜ್ಯೋತಿ ಬಾ ಪುಲೆಯವರಿಂದ ಬಹುಜನ ಸಮುದಾಯಕ್ಕೆ ಹೋರಾಡಲು ಸ್ಫೂರ್ತಿ ಪಡೆದುಕೊಂಡೆ. ಮೂರು ಬಾರಿ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿ ಆಯ್ಕೆಯಾಗಿದ್ದೇನೆ. ಒಮ್ಮೆ ಕೌನ್ಸಿಲರ್ ಆಗಿ ಈಗ ಸಂಸದೆಯಾಗಿದ್ದೇನೆ. ಆದರೆ ನನಗೆ ನನ್ನದೇ ಎಂದು ಹೇಲುವ ಯಾವುದೇ ಭೂಮಿ ಇಲ್ಲ, ಬ್ಯಾಂಕ್‌ನಲ್ಲಿ ಬ್ಯಾಲೆನ್ಸ್ ಕೂಡ ಇಲ್ಲ. ಮುಂದೆ ಸಂಸದೆಯಾಗಿಯೇ ಇರುತ್ತೇನೊ ಇಲ್ಲವೋ ಎಂದು ಗೊತ್ತಿಲ್ಲ,

ಇದನ್ನೂ ಓದಿ : ಕೇಂದ್ರದ ಆನ್‌ಲೈನ್ ಮಾಧ್ಯಮ ನಿಯಂತ್ರಣ ಯತ್ನ ಪ್ರಜಾಪ್ರಭುತ್ವ ವಿರೋಧಿ ನಡೆ

ಉ.ಪ್ರದಲ್ಲಿ ಉಳಿದ ಪಕ್ಷಗಳು ಬಹುಜನ ಸಮಾಜದ ಸುತ್ತ ಸುತ್ತುತ್ತಿರುತ್ತವೆ. ಅದರಲ್ಲಿ ಮುಂದೆ ಯಾರಾದರೂ ನೀವು ಆ ಪಕ್ಷ ಸೇರಬೇಕೆಂದು ಬಯಸಿದ್ದರೇ?

ನಾನು ಯಾವುದೇ ಪಕ್ಷ ಸಮುದಾಯದ ಪರವಾಗಿ ಅವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರೆ ಅಂತಹವರನ್ನು ಗೌರವಿಸುತ್ತೇನೆ.

ನಿಮ್ಮ ಪಕ್ಷದ ನಾಯಕರ ಹೊರತಾಗಿ ಪ್ರಧಾನಿ ಮೋದಿಯವರು ಸಂವಿಧಾನ ರಕ್ಷಿಸುದದರ ಕುರಿತಾಗಿ ಮಾತಾಡುತ್ತಾರೆ, ನೀವು ಯಾಕೆ ಸಂವಿಧಾನ ಅಪಾಯದಲ್ಲಿದೆ ಎಂದು ಯೋಚಿಸುತ್ತೀರಿ?

ನಾನಷ್ಟೇ ಅಲ್ಲ, ಸುಪ್ರೀಂನ ನ್ಯಾಯಾಧೀಶರು ಅದನ್ನೇ ಹೇಳುತ್ತಿದ್ದಾರೆ, ನಾಯಕರು ಚುನಾವಣೆಯಲ್ಲಿ ಗೆದ್ದು ಪ್ರಮಾಣವಚನ ಸ್ವೀಕರಿಸುವಾಗ ಯಾವುದೇ ತಾರತಮ್ಯ ಮಾಡುವುದಿಲ್ಲ, ಸಂವಿದಾನವನ್ನು ಪಾಲಿಸುತ್ತೇವೆ ಎಂದು ಹೇಳಿಕೊಳ್ಳುತ್ತಾರೆ, ಆದರೆ ಅದಕ್ಕೆ ಬದ್ಧವಾಗಿ ನಿಲ್ಲಲು ಸೋಲುತ್ತಾರೆ. ಈ ಕಾರಣವಾಗಿ ಬಹುಜನ ಸಮುದಾಯದವರು ಎರಡೆರಡು ಬಾರಿ ಯೋಚಿಸಬೇಕಿದೆ.

ನಿಮ್ಮ ವಿರೋಧಿಗಳು ನೀವು ನಾಲ್ಕು ವರ್ಷ ಸುಮ್ಮನಿದ್ದು ಈಗ, ಚುನಾವಣೆಯ ಸಮಯದಲ್ಲಿ ಬಿಜೆಪಿ ವಿರುದ್ಧ ಮಾತಾಡುತ್ತೀದ್ದಿರೆಂದು ಆರೋಪಿಸುತ್ತಿದ್ದಾರಲ್ಲಾ?

ನನ್ನ ವಿರೋಧಿಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ೨೦೧೨ರಲ್ಲಿ ಎಂಎಲ್‌ಎ ಬಹುಜನ ಸಮಾಜದ ಅನ್ಯಾಯ ಹಾಗೂ ಶೋಷಣೆಯ ವಿರುದ್ಧ ಮಾತಾಡುತ್ತಿದ್ದೇನೆ. ಅದನ್ನು ಹೀಗೆ ಮುಂದುವರೆಸುತ್ತೇನೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More