ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ಪ್ರಮುಖ ಸುದ್ದಿಗಳು   

ಇಂದಿನ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ   

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಮೊದಲ ಸಭೆ ಗುರುವಾರ ಸಂಜೆ 4ರ ಹೊತ್ತಿಗೆ ನಡೆಯಲಿದ್ದು, ನಿಗಮ-ಮಂಡಳಿಗಳ ಹಂಚಿಕೆ ಸೇರಿ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ ಪರಮೇಶ್ವರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಗಳ ಉಸ್ತುವಾರಿ ಹಂಚಿಕೆ, ನಿಗಮ ಮಂಡಳಿಗಳಲ್ಲಿ ಸ್ಥಾನ ಹಂಚಿಕೆ, ಬಜೆಟ್ ಮತ್ತು ಸಾಮಾನ್ಯ ಕಾರ್ಯಕ್ರಮ, ರೈತರ ಸಾಲಮನ್ನಾ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.

ಪ್ರಧಾನಿಯನ್ನು ಭೇಟಿ ಮಾಡಲಿದ್ದಾರೆ ಮಹದಾಯಿ-ಕಳಸಾ ಬಂಡೂರಿ ಹೋರಾಟಗಾರರು

ಮಹದಾಯಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಹಾಗೂ ಕರ್ನಾಟಕ ರಾಜ್ಯಗಳ ವಾಜ್ಯಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮಹದಾಯಿ ಹೋರಾಟಗಾರರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬುಧವಾರ ಹುಬ್ಬಳ್ಳಿಯಿಂದ ಹೊರಟಿದ್ದು, ಇಂದು ಪ್ರಧಾನಿಯನ್ನು ಭೇಟಿ ಮಾಡಲಿದ್ದಾರೆ. ಕರ್ನಾಟಕಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಪ್ರಧಾನಿಯವರಿಗೆ ಮನವರಿಕೆ ಮಾಡಲಾಗುವುದು ಎಂದು ಹೋರಾಟಗಾರರು ಹೇಳಿದ್ದಾರೆ.

ಇಂದು ಫಿಫಾ ವಿಶ್ವಕಪ್‌ಗೆ ಅಧಿಕೃತ ಚಾಲನೆ

ಪ್ರತಿಷ್ಠಿತ ಫಿಫಾ ವಿಶ್ವಕಪ್ ಪಂದ್ಯಾವಳಿಗೆ ಗುರುವಾರ (ಜೂನ್ ೧೪) ರಷ್ಯಾದಲ್ಲಿ ಅಧಿಕೃತ ಚಾಲನೆ ಸಿಗಲಿದೆ. ಹನ್ನೆರಡು ಸುಸಜ್ಜಿತ ಕ್ರೀಡಾಂಗಣದಲ್ಲಿ ನಡೆಯಲಿರುವ ೬೪ ಪಂದ್ಯಗಳು ಈ ಬಾರಿಯ ವಿಶ್ವ ಚಾಂಪಿಯನ್ ಯಾರೆಂಬುದನ್ನು ನಿರ್ಧರಿಸಲಿವೆ. ಒಟ್ಟು ೩೨ ತಂಡಗಳು ಪ್ರಶಸ್ತಿಗಾಗಿ ಸೆಣಸುತ್ತಿವೆ. ಜೂನ್ ೨೮ರವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದ್ದರೆ, ಜೂನ್ ೩೦ರಿಂದ ಜುಲೈ ೩ರವರೆಗೆ ನಾಕೌಟ್ ಪಂದ್ಯಗಳು ಜರುಗಲಿವೆ. ಅಂತೆಯೇ ೬ ಮತ್ತು ೭ರಂದು ಕ್ವಾರ್ಟರ್‌ಫೈನಲ್ ಪಂದ್ಯಗಳು ನಡೆದರೆ, ೧೦ ಹಾಗೂ ೧೧ರಂದು ಸೆಮಿಫೈನಲ್ ಹಾಗೂ ೧೫ರಂದು ಅಂತಿಮ ಕಾದಾಟ ಜರುಗಲಿದೆ. ಅಂದಹಾಗೆ, ಈ ಟೂರ್ನಿಯ ಉದ್ಘಾಟನಾ ಸಮಾರಂಭ ಭಾರತೀಯ ಕಾಲಮಾನ ಸಂಜೆ ೬.೩೦ರಿಂದ ಶುರುವಾಗಲಿದ್ದು, ಸೋನಿ ನೆಟ್ವರ್ಕ್‌ನಲ್ಲಿ ನೇರ ಪ್ರಸಾರದ ಸವಿ ಸವಿಯಬಹುದಾಗಿದೆ. ರಾತ್ರಿ ೮.೩೦ಕ್ಕೆ ಟೂರ್ನಿಯ ಮೊಟ್ಟಮೊದಲ ಪಂದ್ಯ ಆರಂಭವಾಗಲಿದೆ.

ವೀರಶೈವ-ಲಿಂಗಾಯತ ಸಂಧಾನ ವಿಚಾರ; ವೀರಶೈವ ಮಹಾಸಭಾದಿಂದ ಸಭೆ ಸಾಧ್ಯತೆ

ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ವೀರಶೈವ ಹಾಗೂ ಲಿಂಗಾಯತ ಸಮುದಾಯದ ನಡುವಿನ ಭಿನ್ನಾಪ್ರಾಯಗಳು ಮುಗಿದು ಪರಸ್ಪರ ಒಂದಾಗಲು ವೇದಿಕೆ ಸಜ್ಜಾಗಿದೆ. ಈ ಸಂಬಂಧ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲು ಇಂದು ಅಖಿಲ ಭಾರತ ವೀರಶೈವ ಮಹಾಸಭಾ ಸಭೆ ಕರೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಭಾಗವಹಿಸುವಂತೆ ಲಿಂಗಾಯತ ಬಣದ ಪ್ರಮುಖರಾದ ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ, ಎಂ ಬಿ ಪಾಟೀಲ, ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮತ್ತಿತರರ ಜೊತೆ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತುಕತೆ ನಡೆಸಿದ್ದಾರೆಂದು ವೀರಶೈವ ಮಹಾಸಭಾ ಮೂಲಗಳು ತಿಳಿಸಿವೆ. ಆದರೆ, ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಸ್‌ ಎಂ ಜಾಮದಾರ್, "ಈ ಸಂಬಂಧ ನಮಗೆ ಯಾರಿಂದಲೂ ಯಾವುದೇ ಪ್ರಸ್ತಾಪ ಬಂದಿಲ್ಲ. ಒಂದು ವೇಳೆ ಸಭೆಗೆ ಕರೆದರೆ ಆ ಬಗ್ಗೆ ಯೋಚಿಸಲಾಗುವುದು,” ಎಂದಿದ್ದಾರೆ.

ಅಭಿವೃದ್ಧಿ ಚರ್ಚೆಗೆ ಹಾಸನ ಅಧಿಕಾರಿಗಳ ಸಭೆ ಕರೆದ ಎಚ್ ಡಿ ರೇವಣ್ಣ

ಹಾಸನ ಜಿಲ್ಲೆಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದೂರದೃಷ್ಟಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ನಗರ ಅಧಿಕಾರಿಗಳ ಕತೆ ಸಮಾಲೋಚಿಸಲು ಸಚಿವ ಎಚ್ ಡಿ ರೇವಣ್ಣ ಇಂದು ಸಭೆ ಕರೆದಿದ್ದಾರೆ. ಎರಡು ದಿನಗಳ ಸಭೆ ಆಯೋಸಿರುವ ರೇವಣ್ಣ ಅವರು, ತುರ್ತು ಸಮಸ್ಯೆಗಳ ಶೀಘ್ರ ಇತ್ಯರ್ಥ, ಹೊಸ ಯೋಜನೆಗಳ ಅನುಷ್ಠಾನ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More