ನೀರು ಗುಣಮಟ್ಟ ಸೂಚ್ಯಂಕದಲ್ಲಿ ೧೨೨ ದೇಶಗಳ ಪೈಕಿ ಭಾರತಕ್ಕೆ ೧೨೦ನೇ ಸ್ಥಾನ!

ನೀತಿ ಆಯೋಗದ ವರದಿ ಪ್ರಕಾರ, ಭಾರತ ಪ್ರಸ್ತುತ ಅತ್ಯಂತ ಭೀಕರ ನೀರಿನ ಸಮಸ್ಯೆ ಎದುರಿಸುತ್ತಿದೆ. ೬೦೦ ಮಿಲಿಯನ್ ಭಾರತೀಯರು ಅತೀವ ನೀರಿನ ಅಭಾವ ಎದುರಿಸುತ್ತಿದ್ದಾರೆ. ವರ್ಷಕ್ಕೆ ಎರಡು ಲಕ್ಷ ಜನರು ಬಳಸಲು ಶುದ್ಧ ನೀರಿಲ್ಲದೆ ಜೀವ ಬಿಡುತ್ತಿದ್ದು, ೨೦೩೦ರ ಹೊತ್ತಿಗೆ ಇದು ಎರಡು ಪಟ್ಟಾಗಲಿದೆ!

ಭಾರತದ ಕೆಲ ಕಡೆಗಳಲ್ಲಿ ಈ ಬಾರಿಯ ಮಳೆ ನೋಡಿದರೆ ಸಾಕಷ್ಟು ಮಳೆಯಾದ ಸಮಾಧಾನವಾಗುತ್ತದೆ. ಆದರೆ, ನೀತಿ ಆಯೋಗದ ವರದಿ ಪ್ರಕಾರ, ಭಾರತ ಪ್ರಸ್ತುತ ಅತ್ಯಂತ ಭೀಕರ ನೀರಿನ ಸಮಸ್ಯೆ ಎದುರಿಸುತ್ತಿದೆ. ೬೦೦ ಮಿಲಿಯನ್ ಭಾರತೀಯರು ಅತೀವ ನೀರಿನ ಅಭಾವ ಎದುರಿಸುತ್ತಿದ್ದಾರೆ. ವರ್ಷಕ್ಕೆ ಎರಡು ಲಕ್ಷ ಜನರು ಬಳಸಲು ಶುದ್ಧ ನೀರಿಲ್ಲದೆ ಸಾಯುತ್ತಿದ್ದಾರೆ. ದೇಶದ ನೀರಿನ ಬೇಡಿಕೆ ೨೦೩೦ರ ಹೊತ್ತಿಗೆ ಎರಡು ಪಟ್ಟಾಗುತ್ತದೆ, ಆಗ ದೇಶದ ಪರಿಸ್ಥಿತಿ ಇನ್ನೂ ಹದಗೆಡಲಿದೆ. ಇದರರ್ಥ, ೧೦ ಲಕ್ಷ ಜನರು ನೀರಿನ ಸಮಸ್ಯೆ ಎದುರಿಸಲಿದ್ದಾರೆ. ಇದರಿಂದ ದೇಶದ ಒಟ್ಟು ರಾಷ್ಟ್ರೀಯ ಉತ್ನನ್ನದ ಮೇಲೆ ಪರಿಣಾಮ ಬೀರಲಿದೆ.

ಇತ್ತೀಚೆಗೆ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಬಿಡುಗಡೆಗೊಳಿಸಿದ ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕದ (Composite Water Management Index) ಪ್ರಕಾರ, ೨೧ ಪ್ರಮುಖ ನಗರಗಳ ಅಂತರ್ಜಲ ಪ್ರಮಾಣ ೨೦೨೦ರ ವೇಳೆಗೆ ಖಾಲಿಯಾಗಲಿದೆ; ಇದರಿಂದ ೧೦ ಲಕ್ಷ ಜನರ ಮೇಲೆ ಪರಿಣಾಮ ಬೀರಲಿದೆ. ದೇಶದ ೭೦ ಪ್ರತಿಶತದಷ್ಟು ನೀರು ಕಲುಷಿತಗೊಂಡಿದೆ. ಇದು ಜಗತ್ತಿನ ನೀರು ಗುಣಮಟ್ಟ ಸೂಚ್ಯಂಕದಲ್ಲಿ ಭಾರತವನ್ನು ೧೨೨ ದೇಶಗಳ ಪೈಕಿ ೧೨೦ಕ್ಕೆ ತಂದು ನಿಲ್ಲಿಸಿದೆ.

ಇದನ್ನೂ ಓದಿ : ತುಮಕೂರಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಚುರುಕು; ಹೆಚ್ಚು ನೀರು ಸಂಗ್ರಹದ ಗುರಿ

ನೀರು ನಿರ್ವಹಣೆ, ಅಂತರ್ಜಲದ ಮಟ್ಟ, ನೀರು ಮರುಪೂರಣ, ನೀರಾವರಿ, ಕೃಷಿ ವಿಧಾನ, ಕುಡಿಯುವ ನೀರು, ಸ್ಥಳೀಯ ಆಡಳಿತದ ಆಧಾರದ ಮೇಲೆ ನೀತಿ ಆಯೋಗ ಎಲ್ಲ ರಾಜ್ಯಗಳನ್ನು ಸೂಚ್ಯಂಕದಡಿ ಪಟ್ಟಿ ಮಾಡಿದೆ. ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶದ ನೀರು ಮರುಪೂರಣ ಹಾಗೂ ಸಂರಕ್ಷಣೆಯ ಉತ್ತಮ ಮಾದರಿಗಳನ್ನು ಅನುಸರಿಸಿವೆ ಎನ್ನಲಾಗಿದೆ. ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಲ್ಲಿ, 2016-17ರಲ್ಲಿ ತ್ರಿಪುರವನ್ನು ಉತ್ತಮ ರಾಜ್ಯವೆಂದು ಘೋಷಿಸಲಾಗಿದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಹರಿಯಾಣ ರಾಜ್ಯಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಇವು 600 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿವೆ. ನೀರು ನಿರ್ವಹಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ರಾಜ್ಯಗಳು ಭಾರತದ ಕೃಷಿ ಉತ್ಪಾದನೆಯಲ್ಲಿ ಶೇ.20-30ರಷ್ಟು ಪಾಲನ್ನು ಹೊಂದಿವೆ. ಸೂಚ್ಯಂಕದ ಮೇಲಿನ ಈ ರಾಜ್ಯಗಳ ಕಳಪೆ ಪ್ರದರ್ಶನವು ದೇಶದ ಮೇಲೆ ಎರಗಲಿರುವ ನೀರಿನ ಅಭಾವವನ್ನು ತೋರುತ್ತಿದೆ ಎಂದು ವರದಿ ಹೇಳಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More