ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಷ್ಟ್ರೀಯ, ಅಂತರಾಷ್ಟ್ರೀಯ ಸುದ್ದಿಗಳ ಸಂಕ್ಷಿಪ್ತ ನೋಟ

ಕೇಂದ್ರದ ಸಾಧನೆ ಕುರಿತ ಕನ್ನಡ ಅವತರಣಿಕೆ ಬಿಡುಗಡೆ

ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆಗಳ ಕುರಿತಾದ 'ಶುದ್ಧ ನಡೆ-ಸೂಕ್ತ ವಿಕಾಸ್' ಎಂಬ ಕನ್ನಡ ಅವತರಣಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಇಂದು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಎನ್ ರವಿಕುಮಾರ್ ಸೇರಿದಂತೆ ಶಾಸಕರು ಹಾಗೂ ಸಂಸದರು ಭಾಗಿಯಾಗಲಿದ್ದಾರೆ.

ಶ್ರವಣಬೆಳಗೊಳದಲ್ಲಿ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನ ಆರಂಭ

ಜೈನಕಾಶಿ ಶ್ರವಣಬೆಳಗೊಳದಲ್ಲಿ ಇಂದಿನಿಂದ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಜೂ.೨೪, ೨೫ ಹಾಗೂ ೨೬ರಂದು ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಮ್ಮೇಳನ ನಡೆಯುತ್ತಿದ್ದು, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ, ಷ ಶೆಟ್ಟರ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಪ್ರಶಸ್ತಿ ರೇಸ್‌ನಲ್ಲಿ ಜೊಕೊವಿಚ್-ಫೆಡರರ್

ವಿಶ್ವದ ಅಗ್ರ ಕ್ರಮಾಂಕಿತ ಆಟಗಾರ ರೋಜರ್ ಫೆಡರರ್ ೧೨ನೇ ಬಾರಿಗೆ ಹ್ಯಾಲೆ ಓಪನ್ ಟೆನಿಸ್ ಚಾಂಪಿಯನ್‌ಶಿಪ್‌ ಫೈನಲ್‌ ತಲುಪಿದ್ದು, ಇಂದು ಪ್ರಶಸ್ತಿ ಸುತ್ತಿನಲ್ಲಿ ಕ್ರೊವೇಷಿಯಾ ಆಟಗಾರ ಬೊರ್ನಾ ಕಾರಿಕ್ ವಿರುದ್ಧ ಸೆಣಸಲಿದ್ದಾರೆ. ಅಮೆರಿಕದ ಅರ್ಹತಾ ಆಟಗಾರ ಡೆನಿಸ್ ಕುಡ್ಲಾ ವಿರುದ್ಧ ನಿನ್ನೆ ಸೆಮಿಫೈನಲ್‌ನಲ್ಲಿ ೭-೫ (೭/೧), ೭-೫ ಸೆಟ್‌ಗಳಿಂದ ಜಯಿಸುವುದರೊಂದಿಗೆ ಹುಲ್ಲು ಅಂಕಣದಲ್ಲಿನ ಜಯದ ಅಭಿಯಾನವನ್ನು ೨೦ನೇ ಪಂದ್ಯಕ್ಕೆ ವಿಸ್ತರಿಸಿದರು. ಜರ್ಮನ್ ನೆಲದಲ್ಲಿ ೧೦ನೇ ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿದ್ದಾರೆ. ಇನ್ನು, ಕ್ವೀನ್ಸ್‌ಕ್ಲಬ್ ಓಪನ್‌ನಲ್ಲಿ ಪ್ರಶಸ್ತಿ ಸುತ್ತಿಗೇರಿರುವ ನೊವಾಕ್ ಜೊಕೊವಿಚ್, ಋತುವಿನಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪಿದ್ದಾರೆ. ಇಂದು ನಡೆಯಲಿರುವ ಅಂತಿಮ ಸುತ್ತಿನಲ್ಲಿ ಸರ್ಬಿಯಾ ಆಟಗಾರ ಜೊಕೊವಿಚ್, ಅಗ್ರ ಕ್ರಮಾಂಕಿತ ಆಟಗಾರ ಕ್ರೊವೇಷಿಯಾದ ಮರಿನ್ ಸಿಲಿಕ್ ವಿರುದ್ಧ ಸೆಣಸಲಿದ್ದು, ವರ್ಷದ ಮೊದಲ ಪ್ರಶಸ್ತಿಗಾಗಿ  ಹೋರಾಡಲಿದ್ದಾರೆ. ಜೊಕೊವಿಚ್-ಸಿಲಿಕ್ ಪಂದ್ಯ ಸಂಜೆ ೭.೦೦ರ ಹೊತ್ತಿಗೆ ಶುರುವಾಗಲಿದ್ದರೆ,  sಸಂಜೆ ೪.೩೦ಕ್ಕೆ ಆರಂಭವಾಗುವ ನಿರೀಕ್ಷೆ ಇದೆ.

ಫಿಫಾ ವಿಶ್ವಕಪ್: ಹ್ಯಾರಿ, ರಾಡ್ರಿಗಸ್‌ ಪ್ರಮುಖ ಆಕರ್ಷಣೆ

ಫಿಫಾ ವಿಶ್ವಕಪ್ ಪಂದ್ಯಾವಳಿಯ ಎರಡನೇ ಭಾನುವಾರದಂದು (ಜೂನ್ ೨೪) ಜೇಮ್ಸ್ ರಾಡ್ರಿಗ್ಸ್ ಹಾಗೂ ಹ್ಯಾರಿ ಕೇನ್ ಮೇಲೆ ಎಲ್ಲರ ಗಮನ ಹರಿದಿದೆ. ಸಂಜೆ ೫.೩೦ಕ್ಕೆ ನಿಜ್ನಿ ನೊವ್‌ಗೊರೊದ್ ಕ್ರೀಡಾಂಗಣದಲ್ಲಿ ನಡೆಯಲಿರುವ ದಿನದ ಮೊದಲ ಪಂದ್ಯದಲ್ಲಿ ಜಿ ಗುಂಪಿನಲ್ಲಿ ಇಂಗ್ಲೆಂಡ್ ಮತ್ತು ಪನಾಮ ಸೆಣಸುತ್ತಿದ್ದು, ಹ್ಯಾರಿ ಕೇನ್ ಸಾರಥ್ಯದ ಇಂಗ್ಲೆಂಡ್ ಪ್ರೀಕ್ವಾರ್ಟರ್‌ ತಲುಪುವ ಗುರಿ ಹೊತ್ತಿದೆ. ಅಂತೆಯೇ, ಮೊದಲ ಪಂದ್ಯದ ಗೆಲುವಿನ ಅಲೆಯಲ್ಲಿರುವ ಜಪಾನ್, ಎಕ್ಟೆರಿನ್‌ಬರ್ಗ್‌ ಅರೇನಾದಲ್ಲಿ ರಾತ್ರಿ ೮.೩೦ರಿಂದ ಆರಂಭವಾಗಲಿರುವ ಎಚ್ ಗುಂಪಿನ ದಿನದ ಎರಡನೇ ಪಂದ್ಯದಲ್ಲಿ ಸೆನೆಗಲ್ ಎದುರು ಸೆಣಸಲಿವೆ. ಕಜಾನ್ ಅರೇನಾದಲ್ಲಿ ರಾತ್ರಿ ೧೧.೩೦ಕ್ಕೆ ಆರಂಭವಾಗಲಿರುವ ಎಚ್ ಗುಂಪಿನ ದಿನದ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಪೋಲೆಂಡ್ ಮತ್ತು ಕೊಲಂಬಿಯಾ ಕಣಕ್ಕಿಳಿಯುತ್ತಿವೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ವಿಫಲವಾಗಿರುವ ಕೊಲಂಬಿಯಾಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More