ಜನಸ್ನೇಹಿ ಜಿಎಸ್ಟಿ ವ್ಯವಸ್ಥೆಗಾಗಿ ಕಾಯ್ದೆ ತಿದ್ದುಪಡಿಗೆ ಸಮಿತಿ ಶಿಫಾರಸು

ಸಂಕೀರ್ಣವಾಗಿರುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಸರಳ ಮತ್ತು ಜನಸ್ನೇಹಿ ವ್ಯವಸ್ಥೆಯನ್ನಾಗಿ ರೂಪಿಸಲು ರಚಿಸಿದ್ದ ಸಮಿತಿಯು 46 ಪ್ರಮುಖ ತಿದ್ದುಪಡಿ ಶಿಫಾರಸು ಮಾಡಿದೆ. ತಿದ್ದುಪಡಿ ನಂತರ ತೆರಿಗೆ ಮಾಹಿತಿ ಸಲ್ಲಿಕೆ, ಪಾವತಿ, ಮರುಪಾವತಿ ಎಲ್ಲವೂ ಸರಳ ಮತ್ತು ಸುಲಲಿತವಾಗಲಿವೆ

ಅತ್ಯಂತ ಸಂಕೀರ್ಣವಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯನ್ನು ಸರಳ ಮತ್ತು ಜನಸ್ನೇಹಿ ವ್ಯವಸ್ಥೆಯಾಗಿ ರೂಪಿಸಲು ರಚಿಸಲಾಗಿದ್ದ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿಯು 46 ವರ್ಗಗಳಲ್ಲಿ ತಿದ್ದುಪಡಿಗೆ ಸೂಚಿಸಿದೆ. ತಿದ್ದುಪಡಿ ನಂತರ ಜಿಎಸ್ಟಿ ಹೊರೆರಹಿತ ಮತ್ತು ಸರಳ ವ್ಯವಸ್ಥೆ ಆಗುವುದಲ್ಲದೆ, ತೆರಿಗೆ ವ್ಯಾಪ್ತಿಗೆ ಮತ್ತಷ್ಟು ವ್ಯಾಪಾರ ಸಂಸ್ಥೆಗಳು ಬರಲಿವೆ. ಅಂದರೆ, ದೀರ್ಘಕಾಲದಲ್ಲಿ ಈ ಸರಳ ವ್ಯವಸ್ಥೆಯಿಂದ ಹೆಚ್ಚಿನ ಆದಾಯ ತೆರಿಗೆ ಸಂಗ್ರಹವಾಗಲಿದೆ.

ತೆರಿಗೆ ವಿವರ ಸಲ್ಲಿಸಲು ಹೊಸ ವಿಧಾನ, ಕಂಪೋಸಿಟ್ ಸ್ಕೀಮ್ ಆಯ್ಕೆ ಮಾಡಿಕೊಳ್ಳಲು ಸೇವೆ ಒದಗಿಸುವ ಹೆಚ್ಚು ಮಂದಿಗೆ ಅವಕಾಶ ನೀಡುವುದು ತಿದ್ದುಪಡಿಗಳಲ್ಲಿ ಪ್ರಮುಖವಾಗಿವೆ. ಈ ಶಿಫಾರಸುಗಳ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಸಲ್ಲಿಸಲು ಜುಲೈ 15ರವರೆಗೆ ಅವಕಾಶ ಇದೆ.

ಸಾರ್ವಜನಿಕರ ಅಭಿಪ್ರಾಯ ಸಂಗ್ರಹದ ನಂತರ ಜುಲೈ 21ರಂದು ಅಂತಿಮ ಶಿಫಾರಸುಗಳನ್ನು ಸರಕು ಮತ್ತು ಸೇವಾ ಮಂಡಳಿಗೆ ಸಲ್ಲಿಸಲಾಗುತ್ತದೆ. ಅದಾದ ನಂತರ ಪರಿಷ್ಕೃತ ಕೇಂದ್ರೀಯ ಜಿಎಸ್ಟಿ ಕಾಯ್ದೆ 2017ಕ್ಕೆ ಸಂಪುಟ ಒಪ್ಪಿಗೆ ನೀಡಲಿದ್ದು, ಅಂತಿಮವಾಗಿ ಸಂಸತ್ತಿನಲ್ಲಿ ಅನುಮೋದನೆ ಪಡೆಯಬೇಕಿದೆ. ತೆರಿಗೆ ವಿವರ ಸಲ್ಲಿಕೆ ಸಮಿತಿಯು ಪ್ರಸ್ತಾಪಿಸಿ, ಜಿಎಸ್ಟಿ ಮಂಡಳಿ ಮೇ 4ರಂದು ಅನುಮೋದಿಸಿರುವ ನೂತನ ತೆರಿಗೆ ಸಲ್ಲಿಕೆ ವಿಧಾನವನ್ನು ಕಾಯ್ದೆಗೆ ಸೇರಿಸುವ ನಿರೀಕ್ಷೆ ಇದೆ.

ನೋಂದಣಿಯಾಗದ ಸಂಸ್ಥೆಗಳಿಂದ ಸರಕು ಖರೀದಿಸಿದಾಗ ರಿವರ್ಸ್ ಚಾರ್ಜ್ ಆಧಾರದ ಮೇಲೆ ತೆರಿಗೆ ಪಾವತಿಸುವುದು ಕಡ್ಡಾಯವೆಂಬ ಜಿಎಸ್ಟಿ ಕಾಯ್ದೆಯ ಸೆಕ್ಷನ್ 9ರ ಸಬ್ ಸೆಕ್ಷನ್ (4) ಅನ್ನು ರದ್ದು ಮಾಡಲು ಸಮಿತಿಯು ಸಿಫಾರಸು ಮಾಡಿದೆ. ಸದ್ಯಕ್ಕೆ ರಿವರ್ಸ್ ಚಾರ್ಜ್ ಆಧಾರದ ಮೇಲೆ ತೆರಿಗೆ ಪಾವತಿಸುವುದನ್ನು ಸೆಪ್ಟೆಂಬರ್ 30ರವರೆಗೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಆದರೆ, ನೋಂದಾಯಿಸಿದ ಸಂಸ್ಥೆಗಳಿಂದ ಸರಕು ಖರೀದಿಸಿದ ಸಂಸ್ಥೆಗಳಿಗೆ ಮುಂದಿನ ಹಂತದಲ್ಲಿ ತೆರಿಗೆ ವಿಧಿಸುವ ಅಧಿಕಾರವನ್ನು ಜಿಎಸ್ಟಿ ಮಂಡಳಿಗೆ ನೀಡಲು ಸಮಿತಿ ಶಿಫಾರಸು ಮಾಡಿದೆ.

ಜಿಎಸ್ಟಿ ಮಂಡಳಿ ವರ್ಷಾರಂಭದಲ್ಲಿ ನಿರ್ಧರಿಸಿದಂತೆ 1.5 ಕೋಟಿ ರುಪಾಯಿ ವಹಿವಾಟು ಇರುವವರು ಕಂಪೋಸಿಟ್ ಸ್ಕೀಮ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಕಂಪೋಸಿಟ್ ಸ್ಕೀಮ್ ಆಯ್ಕೆ ಮಾಡಿಕೊಳ್ಳಲು ವಹಿವಾಟು ಮಿತಿ 1 ಕೋಟಿ ರುಪಾಯಿ ಇತ್ತು. ಕಾಂಪೊಸಿಟ್ ವ್ಯವಸ್ಥೆಯು ಸಣ್ಣ ವಹಿವಾಟುದಾರರಿಗೆ ಮೂರು ತಿಂಗಳಿಗೊಮ್ಮೆ ವಿವರ ಸಲ್ಲಿಕೆ ಮತ್ತು ಒಂದಂಕಿ ತೆರಿಗೆ ದರ ವಿಧಿಸಲಾಗುತ್ತಿದೆ. ಆದರೆ, ಈ ಸ್ಕೀಮ್ ಆಯ್ಕೆ ಮಾಡಿಕೊಂಡ ವ್ಯಾಪಾರಿಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವ ಅವಕಾಶ ಇಲ್ಲ.

ಇದನ್ನೂ ಓದಿ : ಜಿಎಸ್ಟಿ ವ್ಯವಸ್ಥೆ ತೆರಿಗೆ ಸ್ನೇಹಿ ವ್ಯವಸ್ಥೆ ಅಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದೇಕೆ?

ಸರ್ಕಾರವು ಕಾಂಪೊಸಿಟ್ ಸ್ಕೀಮ್ ಅಡಿಯಲ್ಲಿ ಹೆಚ್ಚು ವ್ಯಾಪಾರಿಗಳನ್ನು ತರಲು ಶಿಫಾರಸು ಮಾಡಿತ್ತು. ಸದ್ಯಕ್ಕೆ ರೆಸ್ಟೊರಂಟ್ ಸೇವೆಗಳು ಮಾತ್ರ ಈ ಸ್ಕೀಮ್ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವ ಅವಕಾಶವನ್ನು ವಿಸ್ತರಿಸಲಾಗಿದೆ. ಡಂಪರ್ಸ್, ಟ್ರಕ್ ಮತ್ತಿತರ ವಿಶೇಷ ಉದ್ದೇಶಕ್ಕಾಗಿರುವ ಮೋಟಾರ್ ವಾಹನಗಳಿಗೂ ವಿಸ್ತರಿಸಲಾಗಿದೆ.

ಉದ್ದೇಶಿತ ತಿದ್ದುಪಡಿಗಳಳನ್ನು ತೆರಿಗೆದಾರರ ಸ್ನೇಹಿ ಎಂದು ಕರೆದಿರುವ ಸಮಿತಿಯು, ಸಿಜಿಎಸ್ಟಿ ಸೆಕ್ಷನ್ 24ಕ್ಕೆ ತಿದ್ದುಪಡಿ ಸೂಚಿಸಿದ್ದು, ಆದಾಯ ಮೂಲದಲ್ಲೇ ತೆರಿಗೆ ಕಡಿತ ಮಾಡಲು ಇ-ಕಾಮರ್ಸ್ ಸಂಸ್ಥೆಗಳು ನೋದಾಯಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಮೂಲದಲ್ಲೇ ತೆರಿಗೆ ಕಡಿತ ಮಾಡದ ಇ-ಕಾರ್ಮಸ್ ಸಂಸ್ಥೆಗಳು ವಾರ್ಷಿಕ 20 ಲಕ್ಷ ವಹಿವಾಟು ಮೀರದಿದ್ದರೆ ಅಂತಹ ಸಂಸ್ಥೆಗಳು ನೊಂದಾಯಿಸಿಕೊಳ್ಳುವ ಅಗತ್ಯ ಇಲ್ಲ. ಅನುಸರಣೆ ಹೊರೆ ತಪ್ಪಿಸುವ ಸಲುವಾಗಿ ವಿತ್ತೀಯ ವರ್ಷದಲ್ಲಿ ಹಲವು ಇನ್ವಾಯ್ಸ್ ನೀಡುವ ಬದಲಿಗೆ, ಸಮಗ್ರ ಕ್ರೆಟಿಡ್/ಡೆಬಿಟ್ ನೋಟ್ ನೀಡಲು ಸಲಹೆ ನೀಡಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More