ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು

ದಿನೇಶ್ ಗುಂಡೂರಾವ್‌, ಈಶ್ವರ್‌ ಖಂಡ್ರೆ ದೆಹಲಿಗೆ

ಕಾಂಗ್ರೆಸ್‌ ನಿಯೋಜಿತ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರು ಮಂಗಳವಾರ ದೆಹಲಿಗೆ ತೆರಳಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಬುಧವಾರ ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ದಿನೇಶ್‌ ಗುಂಡೂರಾವ್‌ ಹಾಗೂ ಈಶ್ವರ್‌ ಖಂಡ್ರೆ ಅವರ ಪದಗ್ರಹಣ ಸಮಾರಂಭ ನಡೆಯಲಿದೆ.

ಫೈನಲ್ ಕನಸಿನಲ್ಲಿ ಬೆಲ್ಜಿಯಂ, ಫ್ರಾನ್ಸ್

ಪ್ರತಿಷ್ಠಿತ ಫಿಫಾ ವಿಶ್ವಕಪ್ ಪಂದ್ಯಾವಳಿಯ ಮೊದಲ ಸೆಮಿಫೈನಲ್‌ ಇಂದು ನಡೆಯಲಿದ್ದು, ಬಲಾಢ್ಯ ಬೆಲ್ಜಿಯಂ ಮತ್ತು ಫ್ರಾನ್ಸ್ ಫೈನಲ್ ಗುರಿ ಹೊತ್ತು ಕಣಕ್ಕಿಳಿಯುತ್ತಿವೆ. ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ನಡೆಗೆ ಹೆಸರಾಗಿರುವ ಫ್ರಾನ್ಸ್, ಬೆಲ್ಜಿಯಂ ಮಣಿಸುವ ವಿಶ್ವಾಸದಲ್ಲಿದೆ. ರೆಡ್ ಡೆವಿಲ್ಸ್ ಎಂದೇ ಕರೆಯಲಾಗುವ ಬೆಲ್ಜಿಯಂ ಕೂಡಾ ಆಕ್ರಮಣಶೀಲ ಪ್ರವೃತ್ತಿಯದ್ದಾಗಿರುವ ಹಿನ್ನೆಲೆಯಲ್ಲಿ ವಿಶ್ವ ಫುಟ್ಬಾಲ್ ಪ್ರೇಮಿಗಳನ್ನು ಕೌತುಕಕ್ಕೆ ದೂಡಿದೆ. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ರಾತ್ರಿ ೧೧.೩೦ರಿಂದ  ಶುರುವಾಗಲಿರುವ ಪಂದ್ಯದಲ್ಲಿ ಆಂಟನಿ ಗ್ರೀಜ್‌ಮನ್, ಪಾಲ್ ಪೋಗ್ಬಾ, ಕಲಿಯಾನ್ ಎಂಬಾಪೆಯಂಥ ದಿಗ್ಗಜರು ಫ್ರಾನ್ಸ್‌ನ ಬಲವಾಗಿದ್ದರೆ, ರೊಮೆಲು ಲುಕಾಕು, ಈಡನ್ ಹಜಾರ್ಡ್‌ರಂಥವರು ಬೆಲ್ಜಿಯಂ ಕನಸು ನನಸಾಗಿಸಲು ಅಣಿಯಾಗಿದ್ದಾರೆ.

ಹಸಿರು ಪೀಠಕ್ಕೆ ಹೆದ್ದಾರಿ ನಿರ್ಮಾಣದ ಪರ್ಯಾಯ ಮಾಹಿತಿ ನೀಡಲು ರಾಜ್ಯಕ್ಕೆ ಇಂದು ಕೊನೆಯ ದಿನ

ಮುಂಬರುವ ಹೆದ್ದಾರಿ ಯೋಜನೆಗಳಿಗೆ ಕರ್ನಾಟಕವು ಸುಮಾರು 7.35 ಲಕ್ಷ ಮರಗಳು ಕತ್ತರಿಸಲಿದೆ. ಈ ಸಂಬಂಧ ಈಗಾಗಲೇ ಕತ್ತರಿಸಿರುವ ಮರಗಳ ಬದಲಾಗಿ ಕಾಡು ಉಳಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಏನು ಮಾಡಿದೆ ಎಂದು ರಾಷ್ಟ್ರೀಯ ಹಸಿರು ಪೀಠ ಪ್ರಶ್ನಿಸಿ ೫೦,೦೦೦ ರೂಪಾಯಿಗಳ ದಂಡ ವಿಧಿಸಿತ್ತು. ಈಗ ಮುಂದೆ ಕೈಗೊಳ್ಳುತ್ತಿರುವ ಹೆದ್ದಾರಿ ನಿರ್ಮಿಸುವ ಯೋಜನೆಗಳಿಗೆ ಪರಿಹಾರ ಮಾರ್ಗವಾಗಿ ಸರ್ಕಾರ ಹಸಿರು ಪೀಠಕ್ಕೆ ಇಂದು ಮಾಹಿತಿ ನೀಡಲು ಕೊನೆಯದಿನವಾಗಿದೆ. ಇವುಗಳಲ್ಲಿ ಹೆಚ್ಚಿನವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿವೆ.

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ತ್ರೈಮಾಸಿಕ ಫಲಿತಾಂಶ

ಐಟಿ ದೈತ್ಯ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಮೊದಲ ತ್ರೈಮಾಸಿಕದ ಫಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು ಷೇರು ಪೇಟೆ ಮತ್ತು ಇಡೀ ಐಟಿ ಉದ್ಯಮ ಕಾತರದಿಂದ ಕಾಯುತ್ತಿವೆ. ಈಗಾಗಲೇ ದೇಶದ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಇರುವ ಕಂಪನಿ ಆಗಿ ಉದಯಿಸಿರುವ ಟಿಸಿಎಸ್ ಫಲಿತಾಂಶವು ಐಟಿ ಉದ್ಯಮದ ಗಳಿಕೆಯ ದಿಕ್ಸೂಚಿ ಆಗಲಿದೆ. ಬ್ಯಾಂಕಿಂಗ್, ಫೈನಾನ್ಸಿಯಲ್ ಸರ್ವೀಸಸ್ ಮತ್ತು ಇನ್ಶುರೆನ್ಸ್ (ಬಿಎಫ್ಎಸ್ಐ) ವಲಯದಲ್ಲಿ ಹೆಚ್ಚಿನ ಆದಾಯ ನಿರೀಕ್ಷೆ ಮಾಡಲಾಗಿದೆ. ರಾಜೇಶ್ ಗೋಪಿನಾಥ್ ಚುಕ್ಕಾಣಿ ಹಿಡಿದ ನಂತರ ಈ ವಲಯದಲ್ಲಿ ಹೆಚ್ಚಿನ ಆದಾಯ ಬರುತ್ತಿದೆ. ಸಿಇಒ ರಾಜೇಶ್ ಗೋಪಿನಾಥ್ ಸಹ ಎಲ್ಲಾ ವಲಯಗಳಲ್ಲಿ ಹೆಚ್ಚಿನ ಗಳಿಕೆಯ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಹೂಡಿಕೆದಾರರು ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಮುಂದಿನ ಹೂಡಿಕೆ ನಿರ್ಧಾರ ಟಿಸಿಎಸ್ ಫಲಿತಾಂಶವನ್ನು ಆಧರಿಸಿರುತ್ತದೆ.

ಅರ್ಜಿ ವಿಚಾರಣೆ ಇತ್ಯರ್ಥಕ್ಕೆ ಮತ್ತೆ ಸುಪ್ರೀಂ ಕೋರ್ಟ್‌ಗೆ ಆಪ್ ಮೊರೆ

ಸರ್ಕಾರದ ಅಧಿಕಾರದಲ್ಲಿ ಮೂಗು ತೂರಿಸದಂತೆ ಲೆಫ್ಟಿನೆಂಟ್ ಜನರಲ್ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಇದೀಗ, ಪ್ರಮುಖ ಸೇವಾ ವಿಚಾರ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ತ್ವರಿತವಾಗಿ ಇತ್ಯರ್ಥಗೊಳಿಸಬೇಕು ಎಂದು ಕೋರಿ ಆಪ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಇಂದು ಮನವಿ ಸಲ್ಲಿಸಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More