ಇಂದಿನ ಡೈಜೆಸ್ಟ್| ನೀವು ಗಮನಿಸಬೇಕಾದ 10 ಇತರ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಕ್ರೀಡೆ ಮತ್ತು ವಾಣಿಜ್ಯ ಸುದ್ದಿಗಳ ಸಂಕ್ಷಿಪ್ತ ನೋಟ

ಬಾದಾಮಿ ಕ್ಷೇತ್ರದಲ್ಲಿ 3 ಕಾಲೇಜು ಆರಂಭಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರಕ್ಕೆ ವಿವಿಧ ಕಾಲೇಜುಗಳ ಮಂಜೂರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮೂರು ಪತ್ರ ಬರೆದಿದ್ದಾರೆ. ಬಾದಾಮಿಯಲ್ಲಿ ತಾಂತ್ರಿಕ ಮಹಾವಿದ್ಯಾಲಯ, ಗುಳೇದಗುಡ್ಡ ಪಟ್ಟಣದಲ್ಲಿ ಪಶುವೈದ್ಯಕೀಯ ಕಾಲೇಜು ಆರಂಭಿಸಲು ಮನವಿ ಮಾಡಿರುವ ಅವರು, ಕೆರೂರು ಪಟ್ಟಣದಲ್ಲಿ ಐಟಿಐ ಕಾಲೇಜು ಆರಂಭಿಸುವಂತೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಜವಳಿ ಪಾರ್ಕ್‌ ನಿರ್ಮಾಣ, ಪವರ್‌ ಲೂಮ್ಸ್ ಸೇರಿದಂತೆ ವಿವಿಧ ಯೋಜನೆ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಒಟ್ಟಾರೆ ಐದು ಪತ್ರ ಬರೆದಿದ್ದರು.

ಜಮ್ಮು-ಕಾಶ್ಮೀರ ಎನ್‌ಕೌಂಟರ್; ಇಬ್ಬರು ಉಗ್ರರ ಹತ್ಯೆ

ಜಮ್ಮು -ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಓರ್ವ ನಾಗರಿಕ ಸಾವನಪ್ಪಿದ್ದಾನೆ ಎಂದು ಭದ್ರತಾ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕುಂದಲನ್ ಗ್ರಾಮದಲ್ಲಿ  ನಡೆದ ಎನ್‌ಕೌಂಟರ್ ಹಾಗೂ ಪ್ರತಿಭಟನೆಯಲ್ಲಿ ಜೈಷ್-ಎ-ಮೊಹಮ್ಮದ್ ಸಂಗಘಟನೆಗೆ ಸೇರಿದ ಇಬ್ಬರು ಉಗ್ರರು ಸಾವನಪ್ಪಿದ್ದು, ಅದರಲ್ಲಿ ಓರ್ವ ಪಾಕಿಸ್ತಾನ ಮೂಲದ  ಜೆಇಎಂ ಮುಖಂಡನಾಗಿದ್ದಾನೆ ಎನ್ನಲಾಗಿದೆ. ಉಗ್ರರು ಅಡಗಿರುವ ಶಂಕೆ ವ್ಯಕ್ತವಾದ ಸಂದರ್ಭದಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿದಾಗ, ಉಗ್ರರು ತಪ್ಪಿಸಿಕೊಳ್ಳಲು ನೆರವಾಗುವಂತೆ ನೂರಾರು ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾರಣ ನಿರ್ಮಾಣವಾಗಿತ್ತು

ತಮಿಳಿನಲ್ಲಿ ನೀಟ್; ಕೃಪಾಂಕ ನೀಡಲು ಮದ್ರಾಸ್ ಹೈಕೋರ್ಟ್ ಸೂಚನೆ

ತಮಿಳು ಭಾಷೆಯಲ್ಲಿ ನೀಟ್ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ 196 ಕೃಪಾಂಕ ನೀಡುವಂತೆ ಸಿಬಿಎಸ್‌ಇಗೆ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ಆದೇಶ ನೀಡಿದೆ. ವೈದ್ಯಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ 49 ಪ್ರಶ್ನೆಗಳನ್ನು ತಪ್ಪಾಗಿ ಭಾಷಾಂತರಿಸಲಾಗಿತ್ತು. ಹೀಗಾಗಿ ಹೈಕೋರ್ಟ್ ಈ ನಿರ್ಧಾರವನ್ನು ಕೈಗೊಂಡಿದೆ. ಭಾಷಾಂತರ ದೋಷವನ್ನು ಉಲ್ಲೇಖಿಸಿ ತಮಿಳು ಮಾಧ್ಯಮ ವಿದ್ಯಾರ್ಥಿಗಳು ಪರಿಹಾರ ಅಂಕ ನೀಡುವಂತೆ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು

ಏಷ್ಯಾ ಆರ್ಚರಿಯಲ್ಲಿ ಭಾರತಕ್ಕೆ ನಾಲ್ಕು ಪದಕ

ಏಷ್ಯಾ ಕಪ್ ವಿಶ್ವ ಶ್ರೇಯಾಂಕಿತ ಸ್ಟೇಜ್ ೩ ಆರ್ಚರಿ (ಬಿಲ್ಲುಗಾರಿಕೆ) ಪಂದ್ಯಾವಳಿಯಲ್ಲಿ ಭಾರತ ಮೂರು ಬೆಳ್ಳಿ ಸೇರಿದಂತೆ ನಾಲ್ಕು ಪದಕಗಳನ್ನು ತನ್ನದಾಗಿಸಿಕೊಂಡಿತು. ಮಂಗಳವಾರ (ಜುಲೈ ೧೦) ಮುಕ್ತಾಯ ಕಂಡ ಸ್ಪರ್ಧಾವಳಿಯಲ್ಲಿ ರಿಕರ್ವ್ ಪುರುಷರ ಟೀಂ ಈವೆಂಟ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು. ಇದಕ್ಕೂ ಮುನ್ನ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ದಿವ್ಯ ದಯಾಳ್ ಬೆಳ್ಳಿ ಪದಕ ಜಯಿಸಿದರು. ಅಂತೆಯೇ, ತೃತೀಯ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಭಾರತ ವನಿತಾ ತಂಡ ಜಪಾನ್ ತಂಡವನ್ನು ೬-೨ರಿಂದ ಮಣಿಸಿತು. ಕೊರಿಯಾ ಎಂಟು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚು ಪದಕಗಳನ್ನು ಗೆದ್ದು ಅಗ್ರಸ್ಥಾನ ಪಡೆದರೆ, ಚೈನೀಸ್ ತೈಪೆ ೨ ಚಿನ್ನ ೧ ಬೆಳ್ಳಿ ಮತ್ತು ೧ ಕಂಚು ಗೆದ್ದು ಎರಡನೇ ಸ್ಥಾನ ಗಳಿಸಿತು. ಭಾರತ ಇವೆರಡರ ನಂತರದ ಸ್ಥಾನ ಗಳಿಸಿತು.

ನಿಷೇಧದ ಭೀತಿಯಲ್ಲಿ ಪಾಕ್ ಕ್ರಿಕೆಟಿಗ ಶೆಹಜಾದ್

ಪಾಕಿಸ್ತಾನದ ಆರಂಭಿಕ ಆಟಗಾರ ಅಹಮದ್ ಶೆಹಜಾದ್ ನಿಷೇಧಿತ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ನಪಾಸಾಗಿದ್ದು ಈಗ ನಿಷೇಧದ ಭೀತಿಗೆ ಸಿಲುಕಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಶೆಹಜಾದ್ ನಿಯಮ ಉಲ್ಲಂಘಿಸಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಂದು ಸಂಜೆಯೊಳಗೆ ಅವರ ವಿರುದ್ಧ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ನಂಬಲರ್ಹ ಮೂಲಗಳು ತಿಳಿಸಿವೆ. ಶೆಹಜಾದ್ ೨೦೧೭ರ ಮಧ್ಯಂತರದಲ್ಲಿ ವೆಸ್ಟ್‌ಇಂಡೀಸ್ ಕೈಗೊಂಡಿದ್ದ ಪಾಕಿಸ್ತಾನ ಪ್ರವಾಸದಲ್ಲಿ ಸ್ಥಾನ ಪಡೆದಿರಲಿಲ್ಲ. ಅಂತೆಯೇ ಕಳೆದ ಅಕ್ಟೋಬರ್‌ನಿಂದ ಪಾಕಿಸ್ತಾನ ಯಾವುದೇ ಏಕದಿನ ಪಂದ್ಯಗಳನ್ನೂ ಆಡಿಲ್ಲ.

ಮಗುವಿನ ದೈಹಿಕ ‘ಸಮಗ್ರತೆ’ ಹಾನಿಗೊಳಿಸುವ ಆಚರಣೆ ಬೇಡ: ಸುಪ್ರೀಂ ಕೋರ್ಟ್

ಯೋನಿ ಬೇಧನ, ಸುನತಿ ಪದ್ದತಿ ಕುರಿತಾಗಿ ಸುಪ್ರೀಂ ಕೋರ್ಟ್ ಪ್ರಶ್ನೆ ಎತ್ತಿದೆ. ಮುಸ್ಲಿಂ ಸೇರಿದಂತೆ ಇತರ ಸಮುದಾಯಗಳಲ್ಲಿ ಜಾರಿಯಲ್ಲಿರುವ ಸುನತಿ ಪದ್ದತಿ ಹಾಗೂ ಯೋನಿ ಬೇಧನ ಮಾಡಿ ಮಗುವಿನ ದೈಹಿಕ ‘ಸಮಗ್ರತೆ’ ಹಾನಿಗೊಳಿಸುವ ಆಚರಣೆಗಳು ಸರಿಯಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಈ ಸಂಬಂಧ ವಿಚಾರಣೆ ನಡೆಸಿದ ಪೀಠ, "ಇಂಥ ಆಚರಣೆ ನಿಷೇಧವಾಗಬೇಕು. ಇವು ಮಕ್ಕಳಿಗೆ ಸರಿಪಡಿಸಲಾಗದ ಹಾನಿ ಉಂಟುಮಾಡಲಿವೆ. ಇಂಥ ಧಾರ್ಮಿಕ ಆಚರಣೆಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಬೆಂಬಲ ಸೂಚಿಸಿದೆ. ಇದೀಗ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಕುರಿತಂತೆ ವಿಚಾರಣೆ ನಡೆಯುತ್ತಿದ್ದು, ಇಂಥ ಆಚರಣೆಗಳು ಪೋಕ್ಸೊ ಕಾಯ್ದೆಯಡಿ ಅಪರಾಧ ಎನಿಸಿಕೊಳ್ಳಲಿವೆ,” ಎಂದು ನ್ಯಾಯಪೀಠ ಹೇಳಿದೆ.

ಬ್ರಹ್ಮಾಸ್ತ್ರ’ ಚಿತ್ರತಂಡದಲ್ಲಿ ನಾಗಾರ್ಜುನ

ಅಯಾನ್‌ ಮುಖರ್ಜಿ ನಿರ್ದೇಶನದ ಸೂಪರ್‌ನ್ಯಾಚುರಲ್‌ ‘ಬ್ರಹ್ಮಾಸ್ತ್ರ’ ಹಿಂದಿ ಚಿತ್ರತಂಡಕ್ಕೆ ತೆಲುಗು ನಟ ನಾಗಾರ್ಜುನ ಸೇರ್ಪಡೆಗೊಂಡಿದ್ದಾರೆ. ಅಮಿತಾಭ್‌ ಬಚ್ಚನ್‌, ಅಲಿಯಾ ಭಟ್‌ ಮತ್ತು ರಣಬೀರ್ ಕಪೂರ್‌ ಚಿತ್ರದ ಇತರೆ ಪ್ರಮುಖ ಕಲಾವಿದರು. ಜೆ ಪಿ ದತ್ತಾ ನಿರ್ದೇಶನದ ‘ಎಲ್‌ಓಸಿ ಕಾರ್ಗಿಲ್‌’ (2013) ನಾಗಾರ್ಜುನ ನಟಿಸಿದ್ದ ಕೊನೆಯ ಹಿಂದಿ ಸಿನಿಮಾ. “ನಾಗಾರ್ಜುನ ಬಾಲಿವುಡ್‌ನಲ್ಲಿ ನಟಿಸಲು ಇಚ್ಛಿಸಿದ್ದರು. ಒಳ್ಳೆಯ ಚಿತ್ರಕಥೆಯನ್ನು ಎದುರು ನೋಡುತ್ತಿದ್ದ ಅವರಿಗೆ ಬ್ರಹ್ಮಾಸ್ತ್ರ ಸಿನಿಮಾ ಸ್ಕ್ರಿಪ್ಟ್‌ ತುಂಬಾ ಇಷ್ಟವಾಗಿದೆ” ಎಂದು ಚಿತ್ರತಂಡದ ಮೂಲಗಳು ಹೇಳಿವೆ.

ಲೋಕಸಭಾ ಚುನಾವಣೆವರೆಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್‌ವೈ ಮುಂದುವರಿಕೆ

ಲೋಕಸಭಾ ಚುನಾವಣೆವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲು ಬಿಎಸ್‌ವೈಗೆ ಹೈಕಮಾಂಡ್‌ ಸೂಚಿಸಿದೆ ಎಂದು ತಿಳಿದುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಶಕ್ತಿಯನ್ನು ಹೆಚ್ಚುವಂತೆ ನೋಡಿಕೊಳ್ಳವ ಅವಶ್ಯಕತೆ ಇದ್ದು, ಬಿಜೆಪಿ ಹೈಕಮಾಂಡ್‌ ಬಿ ಎಸ್‌ ಯಡಿಯೂರಪ್ಪನವರ ಜನಪ್ರೀಯತೆಯನ್ನು ಬಳಸಿಕೊಳ್ಳಲು ತೀರ್ಮಾನಿಸಿದೆ. ಈ ಮೂಲಕ ವೀರಶೈವ-ಲಿಂಗಾಯತರ ಮತಗಳ ಸೆಳೆಯಲು ಬಿಜೆಪಿ ಹೈಕಮಾಂಡ್‌ ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸಲಿದ್ದು, ಲೋಕಸಭೆ ಚುನಾವಣೆ ರಣತಂತ್ರಗಳನ್ನು ಹೆಣೆಯಲಿದ್ದಾರೆಂದು ತಿಳಿದುಬಂದಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶೇ.90ರಷ್ಟು ಅಭ್ಯರ್ಥಿಗಳು ಸೋಲುತ್ತಾರೆಂದ ಬಿಜೆಪಿ ಸಂಸದ!

“ಬಿಜೆಪಿಯ ಬಳಿ ಸರಿಯಾದ ಉದ್ದೇಶ ಹಾಗೂ ನೀತಿಗಳಿಲ್ಲ ಹಾಗೂ ಅದರ ಶೇ 90ರಷ್ಟು ಅಭ್ಯರ್ಥಿಗಳು ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸೋಲಲಿದ್ದಾರೆ,” ಎಂದು ಹರಿಯಾಣ ಕ್ಷೇತ್ರದ ಬಿಜೆಪಿ ಸಂಸದ ರಾಜ್ ಕುಮಾರ್ ಸೈನಿ ಅಭಿಪ್ರಾಯಪಟ್ಟಿದ್ದಾರೆ. ಇದು ಪಕ್ಷಕ್ಕೆ ಮುಜುಗರ ತಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಸಲೀಸು ವಹಿವಾಟು; ಕರ್ನಾಟಕ ರಾಜ್ಯಕ್ಕೆ ಎಂಟನೇ ಸ್ಥಾನ

ಸಲೀಸು ವಹಿವಾಟು ಮಾಡುವ ರಾಜ್ಯಗಳ ಶ್ರೇಯಾಂಕದಲ್ಲಿ ಕರ್ನಾಟಕ 8ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆಂಧ್ರಪ್ರದೇಶ ಸತತ ಎರಡನೇ ವರ್ಷವೂ ಮೊದಲ ಸ್ಥಾನ ಪಡೆದಿದೆ. ತೆಲಂಗಾಣ, ಹರ್ಯಾಣ, ಜಾರ್ಖಂಡ್, ಗುಜರಾತ್, ಛತ್ತಿಸ್ಘಡ, ಮಧ್ಯಪ್ರದೇಶ್ ಮೊದಲ ಏಳು ಸ್ಥಾನ ಪಡೆದಿದೆ. ರಾಜಾಸ್ತಾನ ಮತ್ತು ಪಶ್ಚಿಮ ಬಂಗಾಳ 9 ಮತ್ತು 10ನೇ ಸ್ಥಾನದಲ್ಲಿವೆ. ಪರಿಸರ ನೊಂದಣಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ಕೇಂದ್ರದ ಡಿಪಾರ್ಟ್ಮೆಂಟ್ ಆಫ್ ಇಂಡಸ್ಟ್ರಿಯಲ್ ಪಾಲಿಸಿ ಅಂಡ್ ಪ್ರಮೋಶನ್ (ಡಿಐಪಿಪಿ) ವಿಶ್ವಬ್ಯಾಂಕ್ ಸಹಯೋಗದಲ್ಲಿ ರಾಜ್ಯಗಳನ್ನು ವಿವಿಧ ಮಾನದಂಡಗಳಡಿ ಸಮೀಕ್ಷೆ ಒಳಪಡಿಸಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More