ಲೈಂಗಿಕ ಅಲ್ಪಸಂಖ್ಯಾತರ ಸಂವಿಧಾನಿಕ ಮಾನ್ಯತೆ ಸುತ್ತ ನಡೆದ ಕಾನೂನು ಹೋರಾಟಗಳು

ಸಾಮಾನ್ಯ ಹೆಣ್ಣು ಗಂಡುಗಳ ಹೊರತಾಗಿ ಸಲಿಂಗ ಪ್ರೇಮವನ್ನು ಸಮಾಜವಿನ್ನೂ ಒಪ್ಪಿಕೊಂಡಿಲ್ಲ. ಕಾನೂನು ಕೂಡ ಮಾನ್ಯ ಮಾಡಿಲ್ಲ. ಈಗ ಸೆಕ್ಷನ್ 377 ಕಾನೂನನ್ನು ರದ್ದುಗೊಳಿಸಬೇಕೆಂದು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ಕೈಗೆತ್ತಿಕೊಂಡಿದೆ. ಈ ಕುರಿತು ಕಾನೂನು ಹೋರಾಟಗಳ ಪಟ್ಟಿ ಇಲ್ಲಿದೆ

ಸಾಮಾನ್ಯ ಹೆಣ್ಣು ಗಂಡುಗಳ ಹೊರತಾಗಿ ಇತರ ಮನಸ್ಸಿನವರ ಖಾಸಗಿ ಜೀವನ ಸಾರ್ವತ್ರಿಕವಾಗಿ ಕಾನೂನಿನ ಮಾನ್ಯತೆ ಪಡೆದುಕೊಂಡಿಲ್ಲ. ತೃತೀಯಲಿಂಗಿಗಳು, ಸಲಿಂಗಿಗಳು ಸೇರಿದಂತೆ ಈ ಅಲ್ಪಸಂಖ್ಯಾತ ವರ್ಗ ದಶಕಗಳಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಲೇ ಬಂದಿದೆ. 2013 ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗಿಗಳ ನಡುವಿನ ಲೈಂಗಿಕತೆ ಅಪರಾಧ ಎಂದು ತೀರ್ಪು ನೀಡಿತ್ತು. ಆ ಕಾರಣವಾಗಿ ಸೆಕ್ಷನ್ 377 ಕಾನೂನನ್ನು ರದ್ದುಗೊಳಿಸಬೇಕೆಂದು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಮೂರ್ತಿಗಳು ಮಂಗಳವಾರ ಕೈಗೆತ್ತಿಕೊಂಡಿದ್ದು, ಈ ವಿಚಾರಣೆ ಕುರಿತಂತೆ ಇಂದು ತೀರ್ಪು ಹೊರಬೀಳಲಿದೆ.

ಸೆಕ್ಷನ್ ೩೭೭ ಹೇಳುವುದೇನು?

  • ಬ್ರೀಟಿಷರ ಕಾಲದಲ್ಲಿ ೧೮೬೧ ರಲ್ಲಿ ಸೆಕ್ಷನ್ ೩೭೭ ರಚನೆಗೊಂಡಿತು. ೧೫೩೩ ಭಿಕ್ಷಾಟನಾ ನಿಷೇಧ ಕಾಯಿದೆಯು ಈ ಕಾನೂನನ್ನು ತರಲು ಮಾದರಿಯಾಗಿದೆ. ಇದು ಹೇಳುವಂತೆ ಸಲಿಂಗಿಗಳು ಲೈಂಗಿಕ ಕ್ರಿಯೆ ನಡೆಸುವುದನ್ನು ಒಳಗೊಂಡಂತೆ ಪ್ರಕೃತಿಗೆ ವಿರುದ್ದವಾದ ಯಾವುದೇ ರೀತಿಯ ಲೈಂಗಿಕ ಕ್ರಿಯೆಗಳನ್ನು ನಡೆಸುವುದು ಅಪರಾಧ. ಒಂದು ವೇಳೆ ಅಪರಾಧ ನಡೆದಿದ್ದಲ್ಲಿ ೧೦ ವರ್ಷ ಜೈಲು ಶಿಕ್ಷೆ ಹಾಗೂ ಪ್ರಕರಣದ ಆಧಾರದ ಮೇಲೆ ದಂಡವನ್ನು ವಿಧಿಸಲಾಗುವುದು.
  • ಕಳೆದ ೧೭ ವರ್ಷಗಳಿಂದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಕಾನೂನು ಹೋರಾಟಗಳು ನಡೆಯುತ್ತಲೇ ಇವೆ. ೨೦೦೧ ರಲ್ಲಿ ಸಲಿಂಗಿಗಳ ಹಕ್ಕುಗಳಿಗಾಗಿ ದುಡಿಯುತ್ತಿರುವ ನಾಝ್ ಫೌಂಡೇಶನ್ ಹೆಸರಿನ ಸರ್ಕಾರೇತರ ಸಂಘಟನೆಯು ಪ್ರಾಪ್ತ ವಯಸ್ಸಿನ ಸಲಿಂಗಿಗಳ ನಡುವೆ ನಡೆಯುವ ಲೈಂಗಿಕ ಕ್ರಿಯೆಯನ್ನು ಕಾನೂನುಬದ್ಧಗೊಳಿಸಬೇಕೆಂದು ದೆಹಲಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿತು.
  • 2004 ಸೆಪ್ಟೆಂಬರ್‌ನಲ್ಲಿ ನಾಝ್ ಫೌಂಡೇಶನ್ ಸಲ್ಲಿಸಿದ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿ ಸಲಿಂಗ ಲೈಂಗಿಕ ಸಂಬಂಧವನ್ನು ಅಪರಾಧವಲ್ಲ ಎಂದು ಹೇಳಲು ಸಾದ್ಯವಿಲ್ಲ ಎಂದಿತ್ತು. ಅದೇ ತಿಂಗಳಲ್ಲಿ ಸಲಿಂಗ ಹಕ್ಕುಗಳ ಕಾರ್ಯಕರ್ತರೊಬ್ಬರು ಅರ್ಜಿಯನ್ನು ಮರುಪರಿಶೀಲಿಸುವಂತೆ ಮರು ದಾವೆ ಹೂಡುತ್ತಾರೆ. ನವೆಂಬರ್ ೩ ರಲ್ಲಿ ಹೈಕೋರ್ಟ್ ಮತ್ತೆ ಮರುಪರಿಶೀಲನಾ ಅರ್ಜಿಯನ್ನು ತಳ್ಳಿಹಾಕುತ್ತದೆ. ಈ ಬೆಳವಣಿಗೆಗಳು ನಿರಂತರವಾಗಿ ನಡೆಯುತ್ತಿದಂತೆ ಅದೇ ಅರ್ಜಿದಾರ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾರೆ. ೨೦೦೬ರಲ್ಲಿ ಸುಪ್ರೀಂ ಕೋರ್ಟ್ ಅರ್ಜಿಯನ್ನು ಪರಿಶೀಲಿಸಿ ದೆಹಲಿ ಹೈಕೋರ್ಟ್‌ಗೆ ಮತ್ತೊಮ್ಮೆ ಅರ್ಜಿಯನ್ನು ಪರಿಗಣಿಸುವಂತೆ ಆದೇಶಿಸುತ್ತದೆ.
  • ಸಲಿಂಗ ವಿವಾಹವನ್ನು ಮಾನ್ಯ ಮಾಡುವ ವಿಷಯವನ್ನು ವಿರೋಧಿಸಿ ಬಿಜೆಪಿ ಶಾಸಕ ಒ ಪಿ ಸಿಂಘಲ್ ಅವರು ಸಲ್ಲಿಸಿದ ಅರ್ಜಿಯನ್ನುದೆಹಲಿ ಹೈಕೋರ್ಟ್ ಗಣನೆಗೆ ಪರಿಗಣಿಸಿ ಈ ವಿಚಾರಣೆಯಲ್ಲಿ ಅಳವಡಿಸಿದೆ.
  • ೨೦೦೮ ರ ಸೆಪ್ಟೆಂಬರ್ 26 ರಂದು ಆರೋಗ್ಯ ಮತ್ತು ಗೃಹ ಸಚಿವಾಲಯಗಳು ಸಲ್ಲಿಸಿದ ವಿರೋಧಾತ್ಮಕ ಅಫಿಡವಿಟ್ಗಳ ದೃಷ್ಟಿಯಿಂದ ಸಲಿಂಗ ಸಂಬಂಧದ ಬಗೆಗೆ ಇಬ್ಬಗೆಯ ಅಭಿಪ್ರಾಯ ಹೊಂದಿರುವ ಕೇಂದ್ರದ ನಿಲುವನ್ನು ದೆಹಲಿ ಹೈಕೋರ್ಟ್ ಅಲ್ಲಗಳೆಯುತ್ತದೆ.
  • ಅದರ ಒಂದು ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರವು ೨೦೦೮ ಸೆ ೨೬ರಂದು ಸಲಿಂಗ ವಿವಾಹವು ಅನೈತಿಕ, ವ್ಯತಿರಿಕ್ತ ಮನಸ್ಸಿನ ಪ್ರತಿಫಲನವಾಗಿದೆ. ಇದರಿಂದ ನೈತಿಕ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತದೆ.
  • ೨೦೦೮ ರ ಅಕ್ಟೋಬರ್ ೧೫ ರಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ವೈಜ್ಞಾನಿಕವಾಗಿ ಸಲಿಂಗ ಲೈಂಗಿಕ ಕ್ರಿಯೆಯನ್ನು ಸಮರ್ಥಿಸಿಕೊಳ್ಳುವಂತೆ ಆಧಾರ ನೀಡಲಿ ಎಂದು ಹೇಳುತ್ತದೆ. ಅದೇ ವರ್ಷದ ನವೆಂಬರ್ ೭ ರಂದು ದೆಹಲಿ ಹೈಕೋರ್ಟ್ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ಎತ್ತಿ ಹಿಡಿದು ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡುತ್ತದೆ. ಈ ತೀರ್ಪನ್ನು ಪ್ರಶ್ನಿಸಿ ಕೆಲ ಅರ್ಜಿಗಳು ಸುಪ್ರೀಂ ಕೋರ್ಟ್ ಮೆಟ್ಟೆಲೇರುತ್ತವೆ. ಆದರೆ ದೆಹಲಿ ನ್ಯಾಯಾಲಯದ ತೀರ್ಪಿನ ಕುರಿತು ಸುಪ್ರಿಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಗಳು ಬಂದಿದ್ದವು.
  • 2013ರ ಡಿಸೆಂಬರ್‌ 11ರಂದು ಈ ತೀರ್ಪಿಗೆ ಸಂಬಂಧಿಸಿದಂತೆ ಮರುವಿಚಾರಣೆ ನಡೆಸಿದ್ದ ಸುಪ್ರಿಂ ಕೋರ್ಟ್‌, ಕಾಯ್ದೆಯ ತಿದ್ದುಪಡಿ ಸಂಸತ್ತಿಗೆ ಸಂಬಂಧಿಸಿದ ವಿಷಯವೇ ಹೊರತು ನ್ಯಾಯಾಂಗ ವ್ಯವಸ್ಥೆಯದ್ದಲ್ಲ ಎಂದು ತೀರ್ಪು ನೀಡಿತ್ತು. ದೆಹಲಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಜಾಗೊಳಿಸಿತ್ತು.
ಇದನ್ನೂ ಓದಿ : ಅಕ್ಕೈ ಪದ್ಮಶಾಲಿ ಮನದ ಮಾತು | ಈಗಲಾದರೂ ಸೆಕ್ಷನ್ 377 ತಿದ್ದುಪಡಿ ಆಗಲಿ
  • 2016ರ ಫೆ.ತಿಂಗಳಲ್ಲಿ ನಾಝ್‌ ಫೌಂಡೇಷನ್‌, ಅಕೈ ಪದ್ಮಶಾಲಿ ಹಾಗೂ ಮತ್ತಿತರರು ಸುಪ್ರಿಂ ಕೋರ್ಟ್‌ನಲ್ಲಿ 2013ರ ತೀರ್ಪಿನ ಕುರಿತು ಪರಾಮರ್ಶಾ ಅರ್ಜಿಯನ್ನು (ಕ್ಯುರೇಟಿವ್‌ ಪಿಟಿಷನ್‌) ದಾಖಲಿಸಿದ್ದರು. ಸುಪ್ರಿಂ ಕೋರ್ಟ್‌ನ ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ಟಿ. ಎಸ್‌. ಠಾಕೂರ್‌ ನೇತೃತ್ವದಲ್ಲಿ ಮೂರು ಜನ ನ್ಯಾಯಮೂರ್ತಿಗಳ ಪೀಠ ಈ ಕುರಿತು ವಿಚಾರಣೆ ನಡೆಸಿತ್ತು. ಸೆಕ್ಷನ್‌ 377ಗೆ ಸಂಬಂಧಿಸಿದಂತೆ 8 ಆದೇಶ ಪರಾಮರ್ಶಾ ಅರ್ಜಿಗಳು ದಾಖಲಾಗಿದ್ದು, 5 ನ್ಯಾಯಾಧೀಶರ ಪೀಠವು ಈ ಅರ್ಜಿಗಳನ್ನು ಹೊಸದಾಗಿ ಮರುಪರಿಶೀಲಿಸಲಾಗುವುದು ಎಂದು ಹೇಳಿತ್ತು.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More