ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು  

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು

ದಿನೇಶ್, ಖಂಡ್ರೆ ಪದಗ್ರಹಣ ಇಂದು

ಕಾಂಗ್ರೆಸ್‌ ನೂತನ ಅಧ್ಯಕ್ಷರಾಗಿ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ನಿರ್ಗಮಿತ ಅಧ್ಯಕ್ಷ ಜಿ ಪರಮೇಶ್ವರ, ಪಕ್ಷದ ಮುಖಂಡರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇಂಗ್ಲೆಂಡ್-ಕ್ರೊವೇಷ್ಯಾ ಹಣಾಹಣಿ ಇಂದು

ಪ್ರತಿಷ್ಠಿತ ಫಿಫಾ ವಿಶ್ವಕಪ್ ಪಂದ್ಯಾವಳಿಯ ಎರಡನೇ ಹಾಗೂ ಕೊನೆಯ ಸೆಮಿಫೈನಲ್ ಪಂದ್ಯ ಇಂದು ನಡೆಯಲಿದ್ದು, ಇಂಗ್ಲೆಂಡ್ ಹಾಗೂ ಕ್ರೊವೇಷ್ಯಾ ಮುಖಾಮುಖಿಯಾಗಲಿವೆ. ಲುಜ್ನಿಕಿ ಕ್ರೀಡಾಂಗಣದಲ್ಲಿ ರಾತ್ರಿ ೧೧.೩೦ರಿಂದ ಆರಂಭವಾಗಲಿರುವ ಪಂದ್ಯದಲ್ಲಿ ಕ್ರೊವೇಷ್ಯಾ ಚಾರಿತ್ರಿಕ ಸಾಧನೆ ಮೆರೆಯುವ ವಿಶ್ವಾಸದಲ್ಲಿದೆ. ಫ್ರಾನ್ಸ್ ನೆಲದಲ್ಲಿ ನಡೆದಿದ್ದ ೧೯೯೮ರ ಆವೃತ್ತಿಯಲ್ಲಿ ನಾಲ್ಕರ ಘಟ್ಟ ತಲುಪಿದ್ದುದೇ ಕ್ರೊವೇಷ್ಯಾದ ವಿಶ್ವಕಪ್‌ನಲ್ಲಿನ ಸಾಧನೆ. ಇನ್ನು, ೧೯೯೦ರ ಇಟಲಿ ಆವೃತ್ತಿಯಲ್ಲಿ ನಾಲ್ಕರ ಘಟ್ಟಕ್ಕೇರಿದ್ದ ಆಂಗ್ಲರು, ೧೯೬೬ರಲ್ಲಿ ವಿಶ್ವ ವಿಜೇತರೆನಿಸಿದ್ದರು. ಮೇಲ್ನೋಟಕ್ಕೆ ಗ್ರೇಟ್ ಬ್ರಿಟನ್ ಫೇವರಿಟ್ ಎನಿಸಿದರೂ, ಕ್ರೊವೇಷ್ಯಾ ಅಪಾಯಕಾರಿ ತಂಡವಾಗಿದೆ. ಹ್ಯಾರಿ ಕೇನ್ ಮತ್ತು ಲೂಕಾ ಮಾರ್ಡಿಕ್ ಕ್ರಮವಾಗಿ ಇಂಗ್ಲೆಂಡ್ ಮತ್ತು ಕ್ರೊವೇಷ್ಯಾದ ಅಪಾಯಕಾರಿ ಆಟಗಾರರು.

ರೈತರ ‘ಥ್ಯಾಂಕ್ಸ್‌ ಗಿವಿಂಗ್‌’ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿ

ಪಂಜಾಬ್‌ನ ಮುಕ್ತಾಸರ್‌ ಜಿಲ್ಲೆಯಲ್ಲಿ ಬಿಜೆಪಿ-ಎಸ್‌ಎಡಿ ಜೊತೆಗೂಡಿ ಬುಧವಾರ ಆಯೋಜಿಸಿರುವ ರೈತರ ‘ಥ್ಯಾಂಕ್ಸ್‌ ಗಿವಿಂಗ್‌’ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಮುಂಗಾರಿನಲ್ಲಿ ಬೆಳೆಯಲಾಗುವ ಬೆಳೆಗಳಿಗೆ ಈಚೆಗೆ ಕೇಂದ್ರ ಸರ್ಕಾರವು ಬೆಂಬಲ ಬೆಲೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ಯಾಬಿನೆಟ್ ಆರ್ಥಿಕ ವ್ಯವಹಾರ ಸಮಿತಿಯು ಜುಲೈ ೪ರಂದು ಭತ್ತ ಸೇರಿದಂತೆ ೧೪ ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿತ್ತು. ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ೨೦೦ ರುಪಾಯಿ ಹೆಚ್ಚಿಸಲಾಗಿತ್ತು.

ಸೆಕ್ಶನ್ ೩೭೭ಗೆ ಸಾಂವಿಧಾನಿಕ ಮಾನ್ಯತೆ; ಮುಂದುವರಿದ ಅರ್ಜಿ ವಿಚಾರಣೆ

ಸಲಿಂಗಕಾಮ ಅಪರಾಧ ಎಂದು ಹೇಳುವ ಐಪಿಸಿ ಸೆಕ್ಶನ್‌ನ ಸಾಂವಿಧಾನಿಕ ಮಾನ್ಯತೆ ಪರಿಶೀಲಿಸುವುದುದಾಗಿ ಸುಪ್ರೀಂಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯಲಿದೆ. ಸಲಿಂಗ ಕಾಮಕ್ಕೆ ಅಪರಾಧ ಎಂಬುದನ್ನು ತೊಡೆದುಹಾಕಿ ಕಾನೂನು ಮಾನ್ಯತೆ ಸಿಗಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಮಂಗಳವಾರ ಕೈಗೆತ್ತಿಕೊಂಡಿತ್ತು. ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಇದರ ಜೊತೆಗೆ ಎಲ್‌ಜಿಬಿಟಿ ಸಮುದಾಯದ ಮೂಲಭೂತ ಹಕ್ಕುಗಳನ್ನು ವಿಚಾರಿಸಲಿದೆ.

ಜಾಗತಿಕ ವ್ಯಾಪಾರ ಸಮರಕ್ಕೆ ಇಂದಿನ ಪೇಟೆ ಪ್ರತಿಕ್ರಿಯೆ ದಿಕ್ಸೂಚಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದಿಂದ ಆಮದಾಗುವ ಇನ್ನೂ 200 ಬಿಲಿಯನ್ ಡಾಲರ್ ಸರಕುಗಳ ಮೇಲೆ ಶೇ.10ರಷ್ಟು ಸುಂಕ ಹೇರಲು ನಿರ್ಧರಿಸಿದ್ದು ಜಾಗತಿಕ ವ್ಯಾಪಾರ ಸಮರ ತೀವ್ರಗೊಳ್ಳಲಿದೆ. ಈ ಬೆಳವಣಿಗೆ ದೇಶೀಯ ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈಗಾಗಲೇ ಕುಸಿದಿರುವ ರುಪಾಯಿ ಮೌಲ್ಯ ಮತ್ತಷ್ಟು ಇಳಿಯಲಿದೆ. ಟ್ರಂಪ್ ಸುಂಕ ಹೇರಿಕೆ ನಿರ್ಧಾರಕ್ಕೆ ಬುಧವಾರ ಪೇಟೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಕುತೂಹಲ ಮೂಡಿಸಿದೆ. ಅಮೆರಿಕ ಇತ್ತೀಚೆಗೆ ಚೀನಾದ 34 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಮೇಲೆ ಸುಂಕ ಹೇರಿತ್ತು. ಭಾರತದ ಸರಕುಗಳ ಮೇಲೂ ಸುಂಕ ಹೇರಿದೆ. ರುಪಾಯಿ ಡಾಲರ್ ವಿರುದ್ಧ ಶೇ.8ರಷ್ಟು ಕುಸಿದು 70ರ ಗಡಿ ಸಮೀಪಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More