ಇಂದಿನ ಡೈಜೆಸ್ಟ್| ನೀವು ಗಮನಿಸಬೇಕಾದ 10 ಇತರ ಪ್ರಮುಖ ಸುದ್ದಿಗಳು  

ಇಂದು ಗಮನಿಸಬೇಕಾದ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಕ್ರೀಡೆ ಮತ್ತು ವಾಣಿಜ್ಯ ಸುದ್ದಿಗಳ ಸಂಕ್ಷಿಪ್ತ ನೋಟ  

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಅಧಿಕಾರ ಸ್ವೀಕಾರ

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ಬರ್ ಖಂಡ್ರೆ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಜಿ ಪರಮೇಶ್ವರ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ದಿನೇಶ್, ಪಕ್ಷವನ್ನು ಬಲಿಷ್ಠಗೊಳಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಈ ಕಾರ್ಯಕ್ಕೆ ಎಲ್ಲರ ಬೆಂಬಲ ಅಗತ್ಯ. ಸಚಿವ ಸ್ಥಾನಕ್ಕೆ ಬಹಿರಂಗ ಹೇಳಿಕೆ ನೀಡುವುದು, ಪಕ್ಷ ವಿರೋಧಿ ಚಟುವಟಿಕೆ ನಡೆಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ನಿರ್ಗಮಿತ ಅಧ್ಯಕ್ಷ ಜಿ ಪರಮೇಶ್ವರ ಹಾಗೂ ಪಕ್ಷದ ನಾಯಕರು ಕಾರ್ಯಕ್ರ‌ಮದಲ್ಲಿ ಪಾಲ್ಗೊಂಡಿದ್ದರು.

ರೈತರಿಗಾಗಿ ಕಾಂಗ್ರೆಸ್‌ ಏನನ್ನೂ ಮಾಡಲಿಲ್ಲ: ಮೋದಿ

‘ರೈತರ ಸ್ಥಿತಿಗತಿ ಸುಧಾರಿಸುವುದು ನಮ್ಮ ಆದ್ಯತೆಯ ಕೆಲಸ. ಆದರೆ, ದಶಕಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಪಕ್ಷ ರೈತರನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ’ ಎಂದು ಕಾಂಗ್ರೆಸ್‌ ಹೆಸರು ಪ್ರಸ್ತಾಪಿಸಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್‌ನ ಮುಕ್ತಾಸರ್‌ನಲ್ಲಿ ಬಿಜೆಪಿ-ಎಸ್‌ಎಡಿ ಆಯೋಜಿಸಿದ್ದ ರೈತರ ಧನ್ಯವಾದ ಸಲ್ಲಿಕೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ‘ಕನಿಷ್ಠ ಬೆಂಬಲ ಹೆಚ್ಚಿಸಿದ್ದರಿಂದ (ಎಂಎಸ್‌ಪಿ) ರೈತರು ಈಗ ನೆಮ್ಮದಿಯಿಂದ ಉಸಿರಾಡಬಹುದಾಗಿದೆ. ಉತ್ತಮ ಬೆಲೆ ಪಡೆಯುವುದರ ಜೊತೆಗೆ ಅವರು ಸಮಾಧಾನದಿಂದ ನಿದ್ರಿಸಬಹುದು. ಎಂಎಸ್‌ಪಿ ಹೆಚ್ಚಿಸುತ್ತೇವೆ ಎನ್ನುವ ವಿಚಾರ ಕಾಂಗ್ರೆಸ್‌ಗೆ ಗೊತ್ತಿರಲಿಲ್ಲ. ಇದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಕಾಂಗ್ರೆಸ್‌ ಮುಂದಾಗುತ್ತಿಲ್ಲ. ಏಕೆಂದರೆ ೬೦ ವರ್ಷಗಳಲ್ಲಿ ಅವರು ಏನನ್ನೂ ಮಾಡಲಿಲ್ಲ’ ಎಂದು ಚುಚ್ಚಿದ್ದಾರೆ.

ತಾಜ್ ಮಹಲ್ ಸಂರಕ್ಷಣೆ ವಿಚಾರದಲ್ಲಿ ನಿರ್ಲಕ್ಷ್ಯ- ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ದೇಶದ ಪ್ರಸಿದ್ಧ ಪಾರಂಪರಿಕ ತಾಣ ತಾಜ್ ಮಹಲ್ ರಕ್ಷಣೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಆಡಳಿತ ಸಂಸ್ಥೆಗಳ ನಿರ್ಲಕ್ಷ್ಯವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ತಾಜ್ ಮಹಲ್ ಸಂರಕ್ಷಣೆಗೆ ತೆೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸುಪ್ರೀಂಕೋರ್ಟ್ ಪೀಠಕ್ಕೆ ಉತ್ತರ ನೀಡುವಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಪ್ರೇಮ ಸೌಧದ ಸಂರಕ್ಷಣೆಗೆ ತೆಗೆದುಕೊಂಡಿವ ಕ್ರಮದ ಬಗ್ಗೆ ಸಂಪೂರ್ಣ ವಿವರವನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ರಾಜ್ಯಸಭಾ ಸದಸ್ಯರು ಅಧಿವೇಶನದಲ್ಲಿ ೨೨ ಭಾಷೆಗಳ ಪೈಕಿ ತಮಗಿಷ್ಟವಾದ ಭಾಷೆಯಲ್ಲಿ ಮಾತನಾಡಲು ಅವಕಾಶ

ಇದೇ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರು ಮುಂಗಾರು ಸಂಸತ್ ಅಧಿವೇಶನದಲ್ಲಿ 22 ಭಾಷೆಗಳಲ್ಲಿ ಯಾವ ಭಾಷೆಯಲ್ಲಾದರೂ ಮಾತನಾಡಬಹುದು. ಈ ಕುರಿತು ಮಹತ್ವದ ನಿರ್ಧಾರ ಕೂಗೊಂಡಿರುವ ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರುಸಂವಿಧಾನದಲ್ಲಿ ೮ನೇ ಪರಿಚ್ಚೇದದಲ್ಲಿ ಉಲ್ಲೇಖಿಸಲ್ಪಟ್ಟ ೨೨ ಅಧಿಕೃತ ಭಾಷೆಗಳಲ್ಲಿ ರಾಜ್ಯ ಸಭಾ ಸದಸ್ಯರು ಮಾತನಾಡಲು ಅವಕಾಶ ನೀಡಲಾಗುವುದು ಎಂದಿದ್ದಾರೆ. ಮಾತೃ ಭಾಷೆಯಲ್ಲಿ ಮಾತನಾಡುವುದರಿಂದ ತಮ್ಮ ವಿಚಾರಗಳನ್ನುಚೆನ್ನಾಗಿ ಮಂಡಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಫೇಕ್‌ ವಿಡಿಯೋದಿಂದ ೫೦೦ ಕೋಟಿ ರು. ನಷ್ಟ: ಕೋರ್ಟ್‌ ಮೆಟ್ಟಿಲೇರಿದ ಕಲ್ಯಾಣ್‌ ಜ್ಯುವೆಲರ್ಸ್‌

ಯೂಟ್ಯೂಬ್‌ನಲ್ಲಿ ಫೇಕ್‌ ವಿಡಿಯೋಗಳನ್ನು‌ ಹರಿಯಬಿಟ್ಟಿದ್ದರಿಂದ ೫೦೦ ಕೋಟಿ ರುಪಾಯಿ ನಷ್ಟವಾಗಿದೆ ಎಂದು ಕೇರಳ ಮೂಲದ ಕಲ್ಯಾಣ್‌ ಜ್ಯುವೆಲರ್ಸ್‌ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದೆ. ಪ್ರತಿಸ್ಪರ್ಧಿ ಉದ್ಯಮ ಸಂಸ್ಥೆಗಳು ಕಲ್ಯಾಣ್‌ ಜುವೆಲರ್ಸ್‌ ಬಗ್ಗೆ ಫೇಕ್‌ ವಿಡಿಯೋ ಸೃಷ್ಟಿಸಿ ಜನರಿಗೆ ತಲುಪಿಸುವ ಮೂಲಕ ನಕಾರಾತ್ಮಕ ಭಾವನೆ ಸೃಷ್ಟಿಸಿದ್ದಾರೆ. ಇದರಿಂದ ಭಾರಿ ನಷ್ಟವಾಗಿದೆ ಎಂದು ಹೇಳಿದೆ.

ಉನ್ನಾವೊ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ವಿರುದ್ಧ ಚಾರ್ಜ್ ಸೀಟ್‌

ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಅವರನ್ನು ಆರೋಪಿಯನ್ನಾಗಿಸಿ ಸಿಬಿಐ ಚಾರ್ಜ್ ‌ಸೀಟ್‌ ಸಲ್ಲಿಸಿದೆ. ಕೆಳ ಸಮುದಾಯಕ್ಕೆ ಸೇರಿದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ, ಬಾಲಕಿಯ ತಂದೆಯನ್ನು ಕೊಲೆಗೈದ ಪ್ರಕರಣದಲ್ಲಿ ಶಾಸಕ ಕುಲದೀಪ್‌ ಸಿಂಗ್‌ ವಿರುದ್ಧ ಚಾರ್ಚ್‌ ಸೀಟ್‌ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ಉತ್ತರ ಪ್ರದೇಶದ ಉನ್ನಾವೊದಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಆಡಳಿತಾರೂಢ ಬಿಜೆಪಿ ಶಾಸಕ ಹಾಗೂ ಅವರ ಸಹೋದರರನ್ನು ಸಿಬಿಐ ಬಂಧಿಸಿತ್ತು.

ಮೋದಿ ವಿದೇಶ ಪ್ರವಾಸ ದಾಖಲೆ ಗಿನ್ನೆಸ್ ಪಟ್ಟಿಗೆ ಸೇರಬೇಕೆಂದು ಪತ್ರಬರೆದ ಗೋವಾ ಕಾಂಗ್ರೆಸ್

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಮಾಡಿದ ವಿದೇಶ ಪ್ರವಾಸ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಸೇರಬೇಕಾದ ದಾಖಲೆ ಎಂದು ಗೋವಾ ಕಾಂಗ್ರೆಸ್ ನಾಯಕರು ಗಿನ್ನೆಸ್ ಕಮಿಟಿಗೆ ಪತ್ರ ಬರೆದಿದ್ದಾರೆ. ಈವರೆಗೆ ೩೫ ಕೋಟಿ ರೂಗಳಷ್ಟು ಖರ್ಚು ಮಾಡಿ ೫೨ ದೇಶಗಳಿಗೆ ೪೧ ಬಾರಿ ಪ್ರವಾಸ ಕೈಗೊಂಡಿರುವ ಮೋದಿಯವರ ಹೆಸರು ಗಿನ್ನೆಸ್ ದಾಖಲೆಗೆ ಸೇರಬೇಕು ಎಂದು ಗೋವಾ ಪ್ರದೇಶ್ ಕಾಂಗ್ರೆಸ್ ಕಮಿಟಿಯ ಸಂಕಲ್ಪ್ ಅಮೋನ್ಕರ್ ಹೇಳಿದ್ದಾರೆ.

ಬಿಎಸ್ಎನ್ಎಲ್ ಆ್ಯಪ್ ಆಧಾರಿತ ಇಂಟರ್ನೆಟ್ ಟೆಲಿಫೋನ್ ಕರೆ ಸೌಲಭ್ಯ ಪ್ರಾರಂಭ

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ದೇಶದ ಮೊದಲ ಇಂಟರ್ನೆಟ್ ಟೆಲಿಫೋನ್ ಸೇವೆಯನ್ನು ಆರಂಭಿಸಿದೆ. ಬಿಎಸ್ಎನ್ಎಲ್ ಗ್ರಾಹಕರು ಆ್ಯಪ್ ಬಳಸಿ ದೇಶದಲ್ಲಿರುವ ಯಾವುದೇ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಇದುವರೆಗೆ ಇದ್ದ ಆ್ಯಪ್ ಆಧಾರಿತ ಕರೆ ವ್ಯವಸ್ಥೆಯು ಆಯಾ ಸಂಪರ್ಕದ ಸಂಖ್ಯೆಗಳಿಗೆ ಮಾತ್ರ ಕರೆ ಮಾಡಬಹುದಿತ್ತು. ಬಿಎಸ್ಎನ್ಎಲ್ ಇಂಟರ್ನೆಟ್ ಟೆಲಿಫೋನಿಕ್ ಸೌಲಭ್ಯದಿಂದ ಎಲ್ಲಾ ಸಂಖ್ಯೆಗಳಿಗೂ ಕರೆ ಮಾಡಬಹುದಾಗಿದೆ. ಇದು ದೂರಸಂಪರ್ಕ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿಗೆ ನಾಂದಿ ಹಾಡಲಿದೆ. ಕುಸಿಯುತ್ತಿರುವ ಬಿಎಸ್ಎನ್ಎಲ್ ಮಾರುಕಟ್ಟೆ ಪಾಲನ್ನು ವೃದ್ಧಿಸಿಕೊಳ್ಳಲು ಇದು ಅನುಕೂಲವಾಗಲಿದೆ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.

ರಜನಿ, ಅಕ್ಷಯ್‌ ‘2.0’ ಸಿನಿಮಾ ನವೆಂಬರ್‌ 29ಕ್ಕೆ

ಶಂಕರ್ ನಿರ್ದೇಶನದ ಬಹುನಿರೀಕ್ಷಿತ ‘2.0’ ತಮಿಳು-ಹಿಂದಿ ದ್ವಿಭಾಷಾ ಸಿನಿಮಾದ ಬಿಡುಗಡೆ ದಿನಾಂಕ 2018, ನವೆಂಬರ್‌ 29ಕ್ಕೆ ನಿಗದಿಯಾಗಿದೆ. ರಜನೀಕಾಂತ್‌ ಮತ್ತು ಅಕ್ಷಯ್ ‌ಕುಮಾರ್‌ ಅಭಿನಯದ ಚಿತ್ರದ ಬಜೆಟ್‌ ನಾನೂರು ಕೋಟಿ ರೂಪಾಯಿ ದಾಟಿದೆ. ನಿರ್ದೇಶಕ ಶಂಕರ್ ಇಂದು ಟ್ವಿಟರ್‌ನಲ್ಲಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. 2010ರ ಬ್ಲಾಕ್‌ ಬಸ್ಟರ್‌ ಸಿನಿಮಾ ‘ಎಂಧಿರನ್‌’ ಸರಣಿಯಿದು. ಬಿಡುಗಡೆಗೆ ಮುನ್ನವೇ ಝೀ ಸಂಸ್ಥೆಯವರು 110 ಕೋಟಿ ರೂಪಾಯಿಗೆ ಚಿತ್ರದ ಸ್ಯಾಟಲೈಟ್‌ ಹಕ್ಕು ಖರೀದಿಸಿದ್ದಾರೆ. ಎ ಆರ್ ರೆಹಮಾನ್‌ ಸಂಗೀತ ಸಂಯೋಜನೆಯ ಚಿತ್ರದ ಇತರೆ ತಾರಾಬಳಗದಲ್ಲಿ ಅಮಿ ಜಾಕ್ಸನ್‌, ಸುಧಾನ್ಶು ಪಾಂಡೆ, ಆದಿಲ್ ಹುಸೇನ್‌, ಕಲಾಭವನ್‌ ಷಹಜಹಾನ್‌, ರಿಯಾಜ್ ಖಾನ್ ಇತರರಿದ್ದಾರೆ.

ಭಾರತ ಹಾಕಿ ತಂಡಕ್ಕೆ ಟಾಪ್ ಯೋಜನೆಯಡಿ ತಿಂಗಳ ಭತ್ಯೆ

ಭಾರತ ರಾಷ್ಟ್ರೀಯ ಹಾಕಿ ತಂಡ ಇದೇ ಮೊದಲ ಬಾರಿಗೆ ತಿಂಗಳ ಭತ್ಯೆ ಪಡೆಯಲಿದೆ. ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್) ಕ್ರೀಡಾ ಸಚಿವಾಲಯದಿಂದ ಕಳೆದ ವರ್ಷವೇ ಶುರುವಾಗಿದ್ದು, ಈ ಯೋಜನೆಯಡಿ ಭಾರತ ಹಾಕಿ ತಂಡ ಆರ್ಥಿಕ ನೆರವು ಗಳಿಸಲಿದೆ. ಕನ್ನಡಿಗ ಎಸ್ ವಿ ಸುನೀಲ್ ಸೇರಿದಂತೆ ಭಾರತ ಹಾಕಿ ತಂಡದ ಪ್ರತೀ ೧೮ ಮಂದಿ ಆಟಗಾರರೂ ತಿಂಗಳಿಗೆ ₹ ೫೦ ಸಾವಿರ ತಿಂಗಳ ಭತ್ಯೆ ಪಡೆಯಲಿದ್ದಾರೆ. ಮಿಷನ್ ಒಲಿಂಪಿಕ್ಸ್ ಸೆಲ್ (ಎಂಒಸಿ) ಭಾರತ ತಂಡದ ತಿಂಗಳ ಭತ್ಯೆಗೆ ಅನುಮೋದನೆ ನೀಡಿದೆ. ಮುಂಬರಲಿರುವ ವಿಶ್ವಕಪ್ ಹಾಗೂ ಏಷ್ಯಾಡ್ ಕೂಟಗಳಲ್ಲಿ ನೀಡುವ ಪ್ರದರ್ಶನದ ಮೇಲೆ ವನಿತಾ ಹಾಕಿ ತಂಡಕ್ಕೂ ಭತ್ಯೆ ನೀಡುವ ಕುರಿತು ನಿರ್ಧರಿಸಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More