ದೊಂಬಿ ಹತ್ಯೆ/ ಹಲ್ಲೆ | ದಿ ಸ್ಟ್ರೇಟ್‌ ಟ್ರ್ಯಾಕರ್‌

 • ಸೆಪ್ಟೆಂಬರ್‌ ೧೩, ೨೦೧೮
 • ಇಂಫಾಲಾ, ಮಣಿಪುರ್

ವಾಹನಕಳ್ಳನೆಂದು ಬಗೆದು ಇಂಫಾಲ ಸಮೀಪದ ಲಿಲಾಂಗ್‌ ಹಾರೀಬಿಯ ೨೬ ವರ್ಷದ ಮಹಮ್ಮದ್‌ ಫಾರೂಕ್‌ ಖಾನ್‌ ಎಂಬಾತನನ್ನು ದೊಂಬಿ ಹಲ್ಲೆ ನಡೆಸಿ ಹತ್ಯೆ ಮಾಡಲಾಯಿತು. ಫಾರೂಕ್‌ ಮತ್ತಿಬ್ಬರು ಕಾರಿನಲ್ಲಿ ಸಂಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೊಲೀಸರ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ

ಸುದ್ದಿ ಹರಡಿದ ಮಾಧ್ಯಮ: ಸಾಮಾಜಿಕ ಜಾಲತಾಣ | ಪರಿಣಾಮ: ೫ ಬಂಧನ | ಮಾಹಿತಿ ಆಧಾರ: ಇಂಡಿಯನ್‌ ಎಕ್ಸ್‌ಪ್ರೆಸ್‌

 • ಸೆಪ್ಟೆಂಬರ್ ೪, ೨೦೧೮
 • ಮುಕುಂದೂರು, ದೆಹಲಿ

ಹದಿನಾರು ವರ್ಷದ ಮುಸ್ಲಿಮ್‌ ಸಮುದಾಯದ ಬಾಲಕ ಕಳವು ಮಾಡಿದ್ದಾನೆಂದು ಆರೋಪಿಸಿ ತೀವ್ರವಾಗಿ ಹಲ್ಲೆ ನಡೆಸಲಾಗಿತ್ತು. ಹಗ್ಗದಿಂದ ಬಿಗಿದು, ಕಟ್ಟಿಗೆ ಹಲಗೆಯಿಂದ ಹಲ್ಲೆ ನಡೆದಿತ್ತು. ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.

ಸುದ್ದಿ ಹರಡದಿ ಮಾಧ್ಯಮ: ಸಾಮಾಜಿಕ ಜಾಲತಾಣ | ಪರಿಣಾಮ: ೬ ಬಂಧನ | ಮಾಹಿತಿ: ದಿ ಹಿಂದು

 • ಆಗಸ್ಟ್‌, 30, 2018
 • ಬರೇಲಿ, ಉತ್ತರ ಪ್ರದೇಶ

ಎಮ್ಮೆ ಕಳ್ಳನೆಂದು ಆರೋಪಿಸಿ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಭೋಲಾಪುರ-ಹುದೊಲಿಯಾ ಸಮೀಪ 20 ವರ್ಷದ ಮುಸ್ಲಿಂ ಯುವಕನ ಮೇಲೆ ಗುಂಪೊಂದು ದಾಳಿ ಮಾಡಿದ್ದು, ಇದರ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಇದು.

ಸುದ್ಧಿ ಹರಡಿದ ಮಾಧ್ಯಮ : ವಾಟ್ಸಾಪ್‌ | ಪರಿಣಾಮ: ದಾಳಿಕೋರರ ಮೇಲೆ ಎಫ್‌ಐಆರ್ ದಾಖಲು | ಮಾಹಿತಿ ಆಧಾರ: ಇಂಡಿಯನ್‌ ಎಕ್ಸ್‌ಪ್ರೆಸ್‌

 • ಆಗಷ್ಟ್‌, 17, 2018
 • ಬಿಶ್ವನಾಥ, ಆಸ್ಸಾಂ

ಹಸುಗಳ ಕಳ್ಳರೆಂದು ಸಂಶಯ ವ್ಯಕ್ತಪಡಿಸಿ ಆಸ್ಸಾಂನ ಬಿಸ್ವನಾಥ ಜಿಲ್ಲೆಯಲ್ಲಿ ನಾಲ್ವರು ವ್ಯಕ್ತಿಗಳ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದ್ದು, ಗಾಯಗೊಂಡ ವ್ಯಕ್ತಿಗಳಲ್ಲಿ ದೆಬೆನ್‌ ರಾಜಬೊಂಗ್ಸಿ (35) ಎಂಬ ವ್ಯಕ್ತಿಯು ಮೃತಪಟ್ಟಿರುವ ಘಟನೆ ಇದು.

ಸುದ್ಧಿ ಹರಡಿದ ಮಾಧ್ಯಮ: ವಾಟ್ಸಾಪ್‌ | ಪರಿಣಾಮ : 11 ಆರೋಪಿಗಳ ಬಂಧನ | ಮಾಹಿತಿ ಆಧಾರ : ಇಂಡಿಯನ್‌ ಎಕ್ಸ್‌ಪ್ರೆಸ್‌

ಆಗಸ್ಟ್‌ 08, 2018

ಸಿಂಘ್ವಾರ್, ದಿಂಡೋರಿ ಜಿಲ್ಲೆ ಮಧ್ಯಪ್ರದೇಶ

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಸಿಂಘ್ವಾರ್‌ ಗ್ರಾಮದಲ್ಲಿ ಮಕ್ಕಳ ಕಳ್ಳನೆಂದು ಆರೋಪಿಸಿ 27 ವರ್ಷದ ಮಾನಸಿಕ ಅಸ್ವಸ್ಥನೊಬ್ಬನ ಮೇಲೆ ಯುವಕರ ಗುಂಪು ದಾಳಿ ನಡೆಸಿದ ಪರಿಣಾಮ ಅಸ್ವಸ್ಥ ಯುವಕ ಮೃತಪಟ್ಟ ಘಟನೆ

ಸುದ್ಧಿ ಹರಡಿದ ಮಾಧ್ಯಮ: ವಾಟ್ಸಾಪ್‌ | ಪರಿಣಾಮ: 12 ಜನರ ಬಂಧನ | ಮಾಹಿತಿ ಆಧಾರ : ಇಂಡಿಯನ್‌ ಎಕ್ಸ್‌ಪ್ರೆಸ್‌

 • ಜುಲೈ 21, 2018
 • ಸಿಂಗ್ರೌಲಿ, ಮೋರ್ವಾ, ಮಧ್ಯ ಪ್ರದೇಶ

ಮಕ್ಕಳ ಕಳುವಿನ ವದಂತಿಯಿಂದಾದ ಇನ್ನೊಂದು ಅನಾಹುತವಿದು. ಮಾನಸಿಕ ಅಸ್ವಸ್ಥೆಯೊಬ್ಬರನ್ನು ಮಕ್ಕಳ ಕಳ್ಳಿಯೆಂದು ಭಾವಿಸಿ ಸ್ಥಳೀಯರು ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ 25 ವರ್ಷದ ಯುವತಿ ಸ್ಥಳದಲ್ಲೇ ಮೃತಪಟ್ಟರು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ:9 ಬಂಧನ | ಮಾಹಿತಿ ಆಧಾರ: ಟೈಮ್ಸ್ ಆಫ್ ಇಂಡಿಯಾ

 • ಜುಲೈ ೧೩, ೨೦೧೮
 • ಮುರ್ಕಿ, ಬೀದರ್‌ ಜಿಲ್ಲೆ, ಕರ್ನಾಟಕ

ಮಕ್ಕಳ ಕಳ್ಳರು ಎಂದು ಭಾವಿಸಿ ನಾಲ್ಕು ಜನರ ಮೇಲೆ ಹಲ್ಲೆ ನಡೆಸಲಾಯಿತು. ಈ ಪೈಕಿ ಟೆಕಿಯೊಬ್ಬನ್ನು ಸತ್ತು, ಜೊತೆಗೆ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಟೆಕಿ ಪ್ರಯಾಣಿಸುತ್ತಿದ್ದ ಕಾರನ್ನು ಸಂಪೂರ್ಣ ಜಖಂಗೊಳಿಸಲಾಗಿತ್ತು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: ೪೨ ಬಂಧನ | ಮಾಹಿತಿ ಆಧಾರ: ಇಂಡಿಯನ್‌ ಎಕ್ಸ್‌ಪ್ರೆಸ್‌

 • ಜುಲೈ ೨೦, ೨೦೧೮
 • ಆಳ್ವಾರ್‌, ರಾಜಸ್ಥಾನ

ಗೋವು ಸಾಗಿಸುತ್ತಿರುವರೆಂದು ಆರೋಪಿಸಿ ರಾಮಘಡದ ಗ್ರಾಮಸ್ಥರು ಇಪ್ಪತ್ತೆಂಟು ವರ್ಷದ ರಕ್‌ಬರ್‌ಖಾನ್‌ ಮತ್ತು ಆತನೊಂದಿಗೆ ಇದ್ದವನ ಮೇಲೆ ಹಲ್ಲೆ ನಡೆಸಿದ್ದರು. ರಕ್‌ಬರ್‌ಖಾನ್‌ ಗಂಭೀರವಾಗಿ ಗಾಯಗೊಂಡು ಅಸುನೀಗಿದ.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: ೩ ಬಂಧನ | ಮಾಹಿತಿ ಆಧಾರ: ನ್ಯೂಸ್‌ನೇಷನ್‌

 • ಜೂನ್‌ ೨೮, ೨೦೧೮
 • ಅಹ್ಮದಾಬಾದ್‌, ಗುಜರಾತ್‌

ನಲವತ್ತು ವರ್ಷದ ಭಿಕ್ಷುಕಿ ಶಾಂತಾದೇವಿಯನ್ನು ಮಗುವಿನ ಅಪಹರಣಕ್ಕೆ ಬಂದವಳೆಂದು ಬಗೆದು ದೊಡ್ಡ ಗುಂಪು ಸಾರ್ವಜನಿಕವಾಗಿ ಹಲ್ಲೆ ನಡೆಸಿ, ಸಾವಿಗೆ ಕಾರಣವಾಯಿತು. ಆಟೋದಲ್ಲಿ ತೆರಳುತ್ತಿದ್ದಾಗ, ನೂರಾರು ಜನರ ಗುಂಪು ಬೆನ್ನು ಹತ್ತಿ ಹಲ್ಲೆ ನಡೆಸಿತ್ತು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: ೨೩ ಬಂಧನ | ಮಾಹಿತಿ ಆಧಾರ: ದಿ ನ್ಯಾಷನಲ್‌

 • ಜೂನ್‌ ೧೪, ೨೦೧೮
 • ಪನಿಮುರ್‌, ದಿಮೋ ಅಸಾವ್‌, ಅಸ್ಸಾಮ್‌

ಪಾನ್‌ ಶಾಪಿನ ಮುಂದೆ ಕೂತಿದ್ದ ಮಹಿಳೆಯನ್ನು ಗ್ರಾಮಸ್ಥ ಸಂಘಟನೆಯೊಂದ ಸದಸ್ಯರು ಎಳೆದೊಯ್ದು ಮಕ್ಕಳ ಕಳ್ಳಿ ಎಂದು ಆರೋಪಿಸಿ ಹಲ್ಲೆ ನಡೆಸಿದ್ದರು. ಕೊಲೆಗೈದು ಕ್ವಾರಿಯೊಂದರಲ್ಲಿ ಆಕೆಯ ದೇಹವನ್ನು ಎಸೆದಿದ್ದರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು.

ಸುದ್ದಿ ಹರಡಿದ ಮಾಧ್ಯಮ:ಸಾಮಾಜಿಕ ಜಾಲತಾಣ | ಪರಿಣಾಮ: ೭ ಬಂಧನ | ಮಾಹಿತಿ ಆಧಾರ: ನೆನೌ.ಇನ್‌

 • ಮೇ ೧೮, ೨೦೧೮
 • ನಾಗದಿಹ್‌, ಪೂರ್ವಸಿಘ್‌ಭೂಮ್‌, ಜಾರ್ಖಂಡ್‌

ಮಕ್ಕಳು ಕಳ್ಳರು ಎಂದು ಸುಳ್ಳು ಸುದ್ದಿ ನಂಬಿದ ನಾಗದಿಹ್‌ ಗ್ರಾಮದ ಜನ ಉತ್ತಮ್‌ ವರ್ಮಾ, ವಿಕಾಸ್‌ ವರ್ಮಾ, ಗೌತಮ್‌ ಸೇರಿದಂತೆ ನಾಲ್ವರ ಮೇಲೆ ದಾಳಿ ನಡೆಸಿದ್ದರು. ಈ ಪೈಕಿ ಮೂವರು ಅಸುನೀಗಿದ್ದರು.

ಸುದ್ದಿ ಹರಡಿದ ಮಾಧ್ಯಮ : ವಾಟ್ಸ್‌ಆ್ಯಪ್ | ಪರಿಣಾಮ: ೧೭ ಮಂದಿ ಬಂಧನ | ಮಾಹಿತಿ ಆಧಾರ: ಫಸ್ಟ್‌ ಪೋಸ್ಟ್‌

 • ಮೇ ೧೯, ೨೦೧೮
 • ಶೋಭಾಪುರ್‌, ರಾಜ್‌ನಗರ್‌, ಜಾರ್ಖಂಡ್‌

ಗೋ ಮಾರಾಟ ಮಾಡುತ್ತಿದ್ದರು ಎಂಬ ಸುಳ್ಳುಸುದ್ಧಿ ಹರಡಿದ್ದರಿಂದ ಉದ್ರಿಕ್ತರಾದ ೬೦೦ಕ್ಕೂ ಹೆಚ್ಚು ಜನರ ಸಮೂಹ, ಮೊಹಮ್ಮದ್‌ ನಯೀಮ್‌ ಸೇರಿದಂತೆ ನಾಲ್ವರನ್ನು ಹಲ್ಲೆ ನಡೆಸಿ, ಹತ್ಯೆ ಮಾಡಿತು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: ೩೭ ಮಂದಿ ಸೆರೆ | ಮಾಹಿತಿ ಆಧಾರ: ಇಂಡಿಯನ್‌ ಎಕ್ಸ್‌ಪ್ರೆಸ್‌

 • ಮೇ ೯, ೨೦೧೮
 • ಅದಿಮೂರ್‌, ತಿರುವಣ್ಣಾಮಲೈ, ತಮಿಳುನಾಡು

ತಮ್ಮ ಸಂಬಂಧಿಕರೊಂದಿಗೆ ದೇವಸ್ಥಾನಕ್ಕೆ ಕಾರಿನಲ್ಲಿ ಹೊರಟಿದ್ದ ಮಹಿಳೆಯನ್ನು ಜನ ಮಕ್ಕಳು ಬಂದವರೆಂದು ೨೦೦ ಮಂದಿ ಸ್ಥಳೀಯರು ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ರುಕ್ಮಿಣಿ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: ೩೦ ಮಂದಿ ಬಂಧನ | ಮಾಹಿತಿ ಆಧಾರ: ದಿ ಕ್ವಿಂಟ್‌

 • ಅಕ್ಟೋಬರ್‌ ೧, ೨೦೧೭
 • ಆನಂದ್‌, ಗುಜರಾತ್

ದಲಿತ ಯುವಕ ೨೧ ವರ್ಷದ ಜಯೇಶ್‌ ಸೋಲಂಕಿ ಮತ್ತು ಇನ್ನೂ ನಾಲ್ವರು, ಪಟೇಲ್ ಸಮುದಾಯದವರು ಆಯೋಜಿಸಿದ್ದ ಗರ್ಬಾ ನೃತ್ಯ ನೃತ್ಯ ವೀಕ್ಷಿಸುತ್ತಿದ್ದರು. ಇದನ್ನು ಕಂಡ ಸಮುದಾಯ , ಯುವಕರ ಮೇಲೆ ಹಲ್ಲೆ ನಡೆಸಿತ್ತು. ಹಲ್ಲೆಗೊಳಗಾದ ಜಯೇಶ್‌ ಮರುದಿನ ಸಾವನ್ನಪ್ಪಿದ್ದನು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: ೮ ಬಂಧನ | ಮಾಹಿತಿ ಆಧಾರ: ಫಸ್ಟ್‌ಪೋಸ್ಟ್‌

 • ಏಪ್ರಿಲ್‌ ೧, ೨೦೧೭
 • ಆಲ್ವಾರ್‌, ರಾಜಸ್ಥಾನ್

ಹರ್ಯಾಣದ ಮೂಲದ ಪೆಹ್ಲು ಖಾನ್‌ ಎತ್ತನ್ನು ಖರೀದಿಸಿ ತನ್ನ ಊರಿಗೆ ಮರಳುವಾಗ 200ಕ್ಕೂಹೆಚ್ಚು ಜನರಿದ್ದ ಗೋರಕ್ಷಣೆ ತಂಡವು ದಾಳಿ ನಡೆಸಿತು. ತೀವ್ರವಾಗಿ ಗಾಯಗೊಂಡಿದ್ದ ಪೆಹ್ಲುಖಾನ್ ಮೃತಪಟ್ಟು, ಜೊತೆಗಿದ್ದ ಐವರ ಗಂಭೀರವಾಗಿ ಗಾಯಗೊಂಡಿದ್ದರು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: ೩ ಬಂಧನ | ಮಾಹಿತಿ ಆಧಾರ: ಇಂಡಿಯನ್‌ ಎಕ್ಸ್‌ಪ್ರೆಸ್‌

 • ಮೇ 19, 2017
 • ಜಮ್ಶೆಡ್ಪುರ್, ಜಾರ್ಖಂಡ್

ಕರಪತ್ರ ಹಂಚುತ್ತಿದ್ದವರನ್ನು ನ ಮಕ್ಕಳ ಕಳ್ಳರೆಂದು ಭಾವಿಸಿದ ಹಳ್ಳಿಗರು, ನಾಲ್ವರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದವರಲ್ಲಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದರು. ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

ಸುದ್ದಿ ಹರಡಿದ ಮಾಧ್ಯಮ:ವಾಟ್ಸ್ ಆಪ್ | ಪರಿಣಾಮ: ಬಂಧನ ಇಲ್ಲ | ಮಾಹಿತಿ ಆಧಾರ: ಹಿಂದೂಸ್ಥಾನ ಟೈಮ್ಸ್

 • ಜೂನ್ 03, 2017
 • ಮಯೂರ್ಭಂಜ್, ಒಡಿಶಾ

ಮಾನಸಿಕ ಅಸ್ವಸ್ಥೆಯನ್ನು ಮಕ್ಕಳ ಕಳ್ಳಿಯೆಂದು ತಿಳಿದ ಗ್ರಾಮಸ್ಥರು, ಆಕೆಯನ್ನು ಮರಕ್ಕೆ ಕಟ್ಟಿ ಹಾಕಿದ್ದರು. ತಪ್ಪಿಸಿಕೊಳ್ಳುವ ಯತ್ನಿಸಿದ್ದ ಆಕೆ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದ್ದರು. ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಸುದ್ದಿ ಹರಡಿದ ಮಾಧ್ಯಮ:ಸಾಮಾಜಿಕ ಜಾಲತಾಣ | ಪರಿಣಾಮ: ೧೦ ಬಂಧನ | ಮಾಹಿತಿ ಆಧಾರ: ಒಡಿಶಾ ಸನ್ ಟೈಮ್ಸ್

 • ಜೂನ್‌ ೨೭, ೨೦೧೭
 • ಸಿಕೆಂದ್ರಾ, ಮುರ್ಷಿದಾಬಾದ್‌, ಪಶ್ಚಿಮ ಬಂಗಾಳ

ಅಂಗವಿಕಲ ಮಹಿಳೆಯೊಬ್ಬರನ್ನು ಬಾಂಗ್ಲಾದೇಶದ ಮಕ್ಕಳ ಕಳ್ಳಿ ಎಂಬ ವದಂತಿ ನಂಬಿ ಗ್ರಾಮಸ್ಥರು ಹಲ್ಲೆ ನಡೆಸಿದ್ದರು. ಮಹಿಳೆಯನ್ನು ಟ್ರಾಕ್ಟರ್‌ ಕಟ್ಟಿ, ನಂತರ ಹೊಡೆದಿದ್ದರು. ಮಾರಣಾಂತಿಕ ಹಲ್ಲೆಯಿಂದಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು.

ಸುದ್ದಿ ಹರಡಿದ ಮಾಧ್ಯಮ: ಜನರಿಂದ | ಪರಿಣಾಮ: ಏನೂ ಇಲ್ಲ| ಮಾಹಿತಿ ಆಧಾರ: ಹಿಂದೂಸ್ಥಾನ ಟೈಮ್ಸ್‌

 • ಮೇ ೨೨, ೨೦೧೮
 • ಚೆಂಗಲ್‌, ನಿಜಾಮಾಬಾದ್‌, ತೆಲಂಗಾಣ

ಮಕ್ಕಳ ಕಳ್ಳರು ವದಂತಿಗೆ ಬುಡಕಟ್ಟಿನ ಜನರೂ ಬಲಿಯಾದರು. ಇಪ್ಪತ್ತಮೂರು ಮಂದಿ ಗ್ರಾಮಸ್ಥರು ಬುಡಕಟ್ಟಿನ ಇಬ್ಬರು ಪುರುಷರನ್ನು ತೀವ್ರವಾಗಿ ಥಳಿಸಿದರು. ಈ ಪೈಕಿ ಒಬ್ಬ ಮೃತಪಟ್ಟು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದರು.

ಸುದ್ದಿ ಹರಡಿದ ಮಾಧ್ಯಮ: ಸಾಮಾಜಿಕ ಮಾಧ್ಯಮ | ಪರಿಣಾಮ: ೬ ಮಂದಿ ಬಂಧನ| ಮಾಹಿತಿ ಆಧಾರ: ಹಿಂದೂಸ್ಥಾನ ಟೈಮ್ಸ್‌

 • ಫೆಬ್ರವರಿ ೨೩, ೨೦೧೮
 • ಅಟ್ಟಪ್ಪಾಡಿ, ಕೇರಳ

ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಬುಡಕಟ್ಟಿನ ಹುಡುಗನನ್ನು ಕಳವಿನ ಆರೋಪದ ಮೇಲೆ ಸ್ಥಳೀಯ ಯುವಕರು ಕಟ್ಟಿ ಹಾಕಿ ಹಲ್ಲೆ ನಡೆಸಿದ್ದರು. ಸೆಲ್ಫಿ ತೆಗೆದುಕೊಂಡಿದ್ದರು. ಹಲ್ಲೆಯಿಂದ ಅಸ್ವಸ್ಥನಾಗಿದ್ದ ಯುವಕ ಸಾವನ್ನಪ್ಪಿದ.

ಸುದ್ದಿ ಹರಡಿದ ಮಾಧ್ಯಮ: ಸಾಮಾಜಿಕ ಮಾಧ್ಯಮ | ಪರಿಣಾಮ: ೨ ಮಂದಿ ಬಂಧನ| ಮಾಹಿತಿ ಆಧಾರ: ಬಿಬಿಸಿ ಇಂಡಿಯಾ

 • ಅಕ್ಟೋಬರ್‌ ೩, ೨೦೧೭
 • ಡೆಲಿನಾ, ಬಾರಾಮುಲ್ಲಾ, ಕಾಶ್ಮೀರ

ಯುವತಿಯ ಜಡೆ ಕತ್ತರಿಸುತ್ತಾನೆಂಬ ಎಂಬ ವದಂತಿಗೆ ಬಲಿಯಾದ ಯುವಕನೀತ. ತನ್ನ ಗೆಳತಿ ಭೇಟಿ ಮಾಡಲು ಹೋದಾಗ ಸ್ಥಳೀಯರು ಗಂಭೀರವಾಗಿ ಹಲ್ಲೆ ನಡೆಸಿದ್ದರು. ಅಸ್ವಸ್ಥ ಯುವಕನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಯಿತು.

ಸುದ್ದಿ ಹರಡಿದ ಮಾಧ್ಯಮ: ಸಾಮಾಜಿಕ ಮಾಧ್ಯಮ | ಪರಿಣಾಮ: ಕ್ರಮ ಇಲ್ಲ| ಮಾಹಿತಿ ಆಧಾರ: ಕಶ್ಮೀರ್‌ ಅಬ್ಸರ್ವರ್‌

 • ಮೇ ೨೪, ೨೦೧೮
 • ಚಾಮರಾಜಪೇಟೆ, ಬೆಂಗಳೂರು

ಮಕ್ಕಳ ಕಳ್ಳರ ವದಂತಿಯಿಂದ ಪ್ರೇರಿತ ಚಾಮರಾಜಪೇಟೆಯ ಗುಂಪೊಂದು ರಾಜಸ್ಥಾನ ಮೂಲದ ಯುವಕನ್ನು ಮಾರಣಾಂತಿಕವಾಗಿ ಥಳಿಸಿತು. ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟ.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: ೪ ಬಂಧನ | ಮಾಹಿತಿ ಆಧಾರ: ನ್ಯೂಸ್‌೧೮

 • ಮೇ ೨೦, ೨೦೧೮,
 • ವಿಶಾಖಪಟ್ಟಣಂ, ಆಂಧ್ರಪ್ರದೇಶ

ಮಕ್ಕಳ ಕಳವಿನಲ್ಲಿ ತೊಡಗಿರುವ ಪಾರ್ಥಿ ಗ್ಯಾಂಗಿಗೆ ಸೇರಿದವರೆಂದು ವಿಶಾಖಪಟ್ಟಣದ ಜಾಗೃತ ಗುಂಪು ೧೨ ಜನರ ಮೇಲೆ ಹಲ್ಲೆ ನಡೆಸಿತು. ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ಐದು ಮಂದಿ ತೀವ್ರವಾಗಿ ಗಾಯಗೊಂಡರು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: 3 ಬಂಧನ | ಮಾಹಿತಿ ಆಧಾರ: ಹಿಂದೂಸ್ತಾನ್‌ ಟೈಮ್ಸ್‌

 • ಜೂನ್‌ ೨೯, ೨೦೧೭
 • ಬಜರ್‌ತಂಡ್‌, ರಾಂಚಿ, ಜಾರ್ಖಂಡ್‌

ಅಸ್ಗರ್‌ ಅನ್ಸಾರಿ ಎಂಬಾತನ್ನು ದನದ ಮಾಂಸ ಒಯ್ಯುತ್ತಿದ್ದ ಎಂದು ಆರೋಪಿಸಿ ಸಾವಿರ ಜನರಿದ್ದ ಸ್ಥಳೀಯ ಗುಂಪು ಹಲ್ಲೆ ನಡೆಸಿತ್ತು. ಮಾರಣಾಂತಿಕವಾಗಿ ಹಲ್ಲೆ ನಡೆದ ಕಾರಣ ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಬಿಜೆಪಿ ನಾಯಕರನ್ನು ಪ್ರಕರಣದಲ್ಲಿ ಬಂಧಿಸಲಾಯಿತು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: 3 ಬಂಧನ | ಮಾಹಿತಿ ಆಧಾರ: ಎನ್‌ಡಿಟಿವಿ

 • ಜೂನ್‌ ೨೨, ೨೦೧೭
 • ಇಸ್ಲಾಮ್‌ಪುರ, ಪಶ್ಚಿಮ ಬಂಗಾಳ

ಉತ್ತರ ದಿನಾಜ್‌ಪುರ್‌ ಜಿಲ್ಲೆಯಲ್ಲಿ ಹಸುಗಳನ್ನು ಕದಿಯಲು ಯತ್ನಿಸಿದರು ಎಂದು ಮೂವರು ಮುಸ್ಲಿಮರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಯಿತು. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟರು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: 3 ಬಂಧನ | ಮಾಹಿತಿ ಆಧಾರ: ಇಂಡಿಯನ್‌ ಎಕ್ಸ್‌ಪ್ರೆಸ್‌

 • ಮೇ ೧, ೨೦೧೭
 • ನಾಗಾಂವ್‌, ಅಸ್ಸಾಮ್‌

ಕಾಸೋಮರಿ ಗ್ರಾಮದಲ್ಲಿ ಹಸುಗಳನ್ನು ಕದಿಯುತ್ತಿದ್ದರು ಎಂದು ಆರೋಪಿಸಿ ಅಬು ಹನೀಫ್‌ ಮತ್ತು ರಿಯಾಜುದ್ದೀನ್‌ ಎಂಬುವರ ಮೇಲೆ ದೊಂಬಿ ಹಲ್ಲೆ ನಡೆಯಿತು. ಪೊಲೀಸರು ಇಬ್ಬರನ್ನೂ ರಕ್ಷಿಸಿದರೂ, ಮಾರಣಾಂತಿಕ ಗಾಯಗಳಿಂದಾಗಿ ಸಾವನ್ನಪ್ಪಿದರು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: 6 ಬಂಧನ | ಮಾಹಿತಿ ಆಧಾರ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌

 • ಜೂನ್‌ ೨೮, ೨೦೧೮
 • ಹೊಸೂರು, ತಮಿಳುನಾಡು

ಒನ್ನಾಲ್‌ವಡಿ ಎಂಬಲ್ಲಿ ಉತ್ತರಪ್ರದೇಶದಿಂದ ಬಂದಿದ್ದದ ಕಾರ್ಮಿಕನೊಬ್ಬನ್ನು ಮಕ್ಕಳ ಕಳ್ಳನೆಂದು ಶಂಕಿಸಿ ದೊಂಬಿ ಹಲ್ಲೆ ನಡೆಯಿತು. ಗಾಯಗೊಂಡ ಈತನನ್ನು ಆಸ್ಪತ್ರೆಗೆ ಒಯ್ದರು ಚಿಕಿತ್ಸೆ ಫಲಿಸಿದೆ ಮೃತಪಟ್ಟನು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: ೭ ಬಂಧನ | ಮಾಹಿತಿ ಆಧಾರ: ದಿ ಹಿಂದು

 • ಜೂನ್‌ ೨೩, ೨೦೧೭
 • ವಲ್ಲಭಗಢ, ದೆಹಲಿ

ಹಬ್ಬದ ಶಾಪಿಂಗ್‌ಗೆ ಬಂದಿದ್ದ ನಾಲ್ವರು ಮುಸ್ಲಿಮರು ರೈಲು ಪ್ರಯಾಣ ಮಾಡುವಾಗ ಸಹ ಪ್ರಯಾಣಿಕರೊಮದಿಗೆ ದನದ ಮಾಂಸ ಸೇವನೆ ವಿಷಯದಲ್ಲಿ ನಡೆದ ಜಗಳ, ಹಲ್ಲೆಯಲ್ಲಿ ಕೊನೆಗೊಂಡಿತು. ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: 4 ಬಂಧನ | ಮಾಹಿತಿ ಆಧಾರ: ಡಿಎನ್‌ಎಇಂಡಿಯಾ.ಕಾಂ

 • ಏಪ್ರಿಲ್‌ ೨೪, ೨೦೧೭
 • ಜಮ್ಮು ಕಾಶ್ಮೀರ

ಗೋರಕ್ಷಣೆ ಹೆಸರಿನಲ್ಲಿ೯ ವರ್ಷದ ಬಾಲಕಿ ಸೇರಿದಂತೆ ಐವರು ಸದಸ್ಯರ ಕುಟುಂಬದಲ್ಲಿ ಹಲ್ಲೆ ನಡೆಯಿತು. ಎಪ್ಪತ್ತೈದು ವರ್ಷದ ವೃದ್ದರೂ ಇದ್ದ ಕುಟುಂಬ ಈ ಹಲ್ಲೆಯಿಂದ ತೀವ್ರ ಆಘಾತಕ್ಕೆ ಒಳಗಾಗಿತ್ತು. ಗೋರಕ್ಷಕರು ಮನೆಯನ್ನು ಧ್ವಂಸ ಮಾಡಿದ್ದರು.

ಸುದ್ದಿ ಹರಡಿದ ಮಾಧ್ಯಮ: ವಾಟ್ಸ್‌ಆ್ಯಪ್ | ಪರಿಣಾಮ: ೧೧ ಬಂಧನ | ಮಾಹಿತಿ ಆಧಾರ: ಅಲ್‌ಜಝೀರಾ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More