ನನ್ನ ವಿರುದ್ಧದ ಆರೋಪಗಳ ಬಹಿರಂಗ ವಿಚಾರಣೆಗೆ ಸಿದ್ಧ: ಪೇಜಾವರ ಶ್ರೀ

ಶೀರೂರು ಶ್ರೀ ಅನುಮಾನಸ್ಪದ ಸಾವಿನ ಬೆನ್ನಲ್ಲೇ ಬಿಡುಗಡೆಗೊಂಡಿದ್ದ ಆಡಿಯೋ ಕುರಿತಾಗಿ ಪೇಜಾವರ ಶ್ರೀಗಳು ಸ್ಪಷ್ಟನೆ ನೀಡಿದ್ದು, ಲಕ್ಷ್ಮೀವರ ತೀರ್ಥ ಆಪ್ತವರ್ಗ ಬಿಡುಗಡೆಗೊಳಿಸಿದ ಆಡಿಯೋ ಸುಳ್ಳು ಆರೋಪದಿಂದ ಕೂಡಿದ್ದು, ಈ ಬಗ್ಗೆ ಯಾವುದೇ ವಿಚಾರಣೆಗೆ ತಾವು ಸಿದ್ಧ ಎಂದು ತಿಳಿಸಿದ್ದಾರೆ

ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಬೆನ್ನಲ್ಲೇ ಬಿಡುಗಡೆಗೊಂಡಿದ್ದ ಆಡಿಯೋ ಕುರಿತಾಗಿ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳು ಸ್ಪಷ್ಟನೆ ನೀಡಿದ್ದು, ಲಕ್ಷ್ಮೀವರತೀರ್ಥ ಆಪ್ತವರ್ಗ ಬಿಡುಗಡೆಗೊಳಿಸಿದ ಆಡಿಯೋ ಸುಳ್ಳು ಆರೋಪದಿಂದ ಕೂಡಿದ್ದು, ಈ ಬಗ್ಗೆ ಯಾವುದೇ ಪರೀಕ್ಷೆ ಅಥವಾ ವಿಚಾರಣೆಗೆ ತಾವು ಸಿದ್ಧ ಎಂದು ತಿಳಿಸಿದ್ದಾರೆ.

ಸೋಮವಾರ ಚೈನ್ನೈನಿಂದ ಪತ್ರಿಕಾ ಹೇಳಿಕೆ ನೀಡಿರುವ ಅವರು, "ತಾರುಣ್ಯದಲ್ಲಿ ನನಗೆ ಸ್ತ್ರೀಸಂಗವಿತ್ತು. ಪದ್ಮಾ ಎಂಬ ಹೆಣ್ಣುಮಗಳು ತಮಿಳುನಾಡಿನಲ್ಲಿದ್ದಾಳೆಂಬ ಸಂಗತಿ ಶುದ್ಧ ಸುಳ್ಳು. ಇದನ್ನು ಯಾರು ಕೂಡ ಒಪ್ಪುವುದಿಲ್ಲ. ನನ್ನ ಬಗ್ಗೆ ಮಾಡುತ್ತಿರುವ ಆರೋಪಗಳು ನಿಜವಾದರೆ ತಕ್ಷಣವೇ ಪೀಠ ತ್ಯಾಗ ಮಾಡುವೆ," ಎಂದಿದ್ದಾರೆ.

ಇದನ್ನೂ ಓದಿ : ಶಿರೂರು ಶ್ರೀ ಸಾವು | ಊಹೆ ಮೀರಿದ ಸತ್ಯವೊಂದನ್ನು ಎದುರುನೋಡುತ್ತಿದೆ ಉಡುಪಿ

“ಲಕ್ಷ್ಮೀವರತೀರ್ಥರ ನಿಧನದ ನಂತರ ಅವರ ಅವ್ಯವಹಾರದ ಬಗ್ಗೆ ಹೇಳಿಕೆ ನೀಡಿದ್ದರಿಂದ ಕೆಲವರು ಆಕ್ಷೇಪಿಸಿದ್ದಾರೆ. ಲಕ್ಷ್ಮೀವರ ತೀರ್ಥರಿಗೆ ವಿಠಲ ದೇವರನ್ನು ಯಾಕೆ ಕೊಟ್ಟಿಲ್ಲ? ಅವರ ಅಂತ್ಯಸಂಸ್ಕಾರಕ್ಕೆ ಯಾಕೆ ಹೋಗಿಲ್ಲ ಎಂಬ ಪ್ರಶ್ನೆಗಳು ನನ್ನ ವಿರುದ್ಧ ಕೇಳಿಬಂದಿವೆ. ಇದಕ್ಕೆ ನನ್ನ ಉತ್ತರ ಇಷ್ಟೇ; ಅವರು ಸನ್ಯಾಸ ಧರ್ಮವನ್ನು ಪೂರ್ತಿಯಾಗಿ ಉಲ್ಲಂಘಿಸಿದ್ದರು,” ಎಂದು ಸ್ಪಷ್ಟನೆ ನೀಡಿದ್ದಾರೆ.

“ಹಿಂದಿನ ಪಲಿಮಾರು ಸ್ವಾಮಿಗಳಾದ ರಘುವಲ್ಲಭ ತೀರ್ಥರಿಗೆ ನಾನು ಐದು ಲಕ್ಷ ರು. ಕೊಟ್ಟಿದ್ದೇನೆ ಎಂದು ಆರೋಪಿಸಿರುವುದು ಸುಳ್ಳು. ನನ್ನ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳ ಬಹಿರಂಗ ವಿಚಾರಣೆಗೆ ನಾನು ಯಾವಾಗಲೂ ಸಿದ್ಧನಿದ್ದೇನೆ,” ಎಂದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More