ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು  

ಇಂದು ಗಮನಿಸಬೇಕಾದ ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ವಿದೇಶಿ ಸುದ್ದಿಗಳ ಸಂಕ್ಷಿಪ್ತ ನೋಟ  

೧,೦೯೦ ಕೋಟಿ ರುಪಾಯಿ ಪಾವತಿಸದ ಕೇಂದ್ರ ಸರ್ಕಾರ: ಕೃಷ್ಣ ಬೈರೇಗೌಡ

ನರೇಗಾ ಅಡಿ ಕೆಲಸ ಮಾಡುವ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ ಹಣ ಪಾವತಿಸಲಾಗಿದೆ. ಇದರ ಭಾಗವಾಗಿ ರಾಜ್ಯಕ್ಕೆ ಬರಬೇಕಾದ ೧,೦೯೦ ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರ ಇನ್ನೂ ಪಾವತಿಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಕಾರವಾರ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಎರಡು ವರ್ಷಗಳ ಹಿಂದೆ ನರೇಗಾ ಕಾರ್ಮಿಕರಿಗೆ ಎರಡು ಮೂರು ತಿಂಗಳ ಸಂಬಳಕ್ಕೆ ಅಡ್ಡಿಯಾಗಿತ್ತು. ಅದಕ್ಕಾಗಿ ರಾಜ್ಯ ಸರ್ಕಾರವು ಕಾರ್ಮಿಕರಿಗೆ ಸಮಸ್ಯೆಯಾಗಬಾರದು ಎಂದು ತನ್ನ ಕೈಯಿಂದ ಪಾವತಿಸಿತ್ತು. ಆದರೆ, ಇದನ್ನು ಇನ್ನೂ ಕೇಂದ್ರ ಸರ್ಕಾರ ಪಾವತಿಸಿಲ್ಲ. ಈ ಸಂಬಂಧ ಕೇಂದ್ರದ ಗಮನಸೆಳೆಯಲಾಗಿದೆ ಎಂದಿದ್ದಾರೆ.

ಇವಿಎಂ ದುರ್ಬಳಕೆ ಆರೋಪ: ಬಿಜೆಪಿ ಶಾಸಕ ಕಾಮತ್‌ಗೆ ನೋಟಿಸ್‌ ಜಾರಿ

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಜೆ ಆರ್‌ ಲೊಬೊ ಅರ್ಜಿಯನ್ನು ವಿಚಾರಣೆಗೆ ಪರಿಣಿಸಿರುವ ಹೈಕೋರ್ಟ್‌ ಬುಧವಾರ ಬಿಜೆಪಿ ಶಾಸಕ ವೇದವ್ಯಾಸ್‌ ಕಾಮತ್ ಸೇರಿದಂತೆ ೧೦ ಮಂದಿಗೆ ನೋಟಿಸ್‌ ಜಾರಿಗೊಳಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ದುರ್ಬಳಕೆ ಹಾಗೂ ಚುನಾವಣಾ ಅಕ್ರಮದಿಂದ ಬಿಜೆಪಿಯ ವೇದವ್ಯಾಸ್ ಕಾಮತ್ ಗೆದ್ದಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ ವಿರುದ್ಧವಾಗಿ ನಡೆದುಕೊಂಡಿರುವ ಅವರ ಶಾಸಕತ್ವ ಅನರ್ಹಗೊಳಿಸಬೇಕು ಎಂದು ಲೊಬೊ ಅವರು ಹೈಕೋರ್ಟ್‌ ಮೆಟ್ಟೆಲೇರಿದ್ದಾರೆ. ಲೋಬೊ ಅವರ ಪರ ವಕೀಲ ರವೀಂದ್ರನಾಥ್‌ ಕಾಮತ್‌ ವಾದ ಮಂಡಿಸುತ್ತಿದ್ದಾರೆ.

ವರ್ಷಾಂತ್ಯದೊಳಗೆ ವಿವಿಪ್ಯಾಟ್, ಇವಿಎಂ ಚುನಾವಣೆ ಆಯೋಗ ಕೈ ಸೇರಲಿವೆ

2019 ರ ಸಾರ್ವತ್ರಿಕ ಲೋಕಸಭೆ ಚುನಾವಣೆ ನಡೆಸಲು ಅಗತ್ಯವಿರುವ ವಿವಿಪ್ಯಾಟ್ ಗಳು ೨೦೧೮ ರೊಳಗೆ ಚುನಾವಣೆ ಆಯೋಗದ ಕೈ ಸೇರಲಿವೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಚುನಾವಣೆ ನಡೆಯಲು ಸುಮಾರು 23.35 ಲಕ್ಷ ಇವಿಎಂ ಹಾಗೂ 16.15 ಲಕ್ಷ ವಿವಿಪ್ಯಾಟ್ ಗಳ ಅಗತ್ಯವಿದೆ. ಎಲ್ಲ ಇವಿಎಂಗಳು ಸೆಪ್ಟೆಂಬರ್ 30ರೊಳಗೆ ಹಾಗೂ ವಿವಿಪ್ಯಾಟ್ ಗಳು ನವೆಂಬರ್ ಒಳಗೆ ಬರಲಿವೆ. ವಿವಿಪ್ಯಾಟ್‌ಗಳ ವಿಳಂಬಕ್ಕೆ ತಾಂತ್ರಿಕ ತೊಂದರೆ ಕಾರಣ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಉದಯಕುಮಾರ್ ಲಾಕಪ್ ಡೆತ್ ಪ್ರಕರಣ- ಇಬ್ಬರು ಪೊಲೀಸರಿಗೆ ಮರಣದಂಡನೆ

ತಿರುವನಂತಪುರದ ಪೋರ್ಟ್ ಪೊಲೀಸ್ ಠಾಣೆಯಲ್ಲಿ 2005ರಲ್ಲಿ ನಡೆದಿದ್ದ ಉದಯಕುಮಾರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯ, ಇಬ್ಬರು ಪೊಲೀಸರಿಗೆ ಮರಣ ದಂಡನೆ ಶಿಕ್ಷೆವಿಧಿಸಿದೆ. ಪ್ರಕರಣಕ್ಕೆಸಂಬಂಧಿಸಿದಂತೆ ಒಟ್ಟು ಆರು ಮಂದಿ ಪೊಲೀಸರನ್ನು ತಪ್ಪಿತಸ್ಥರು ಎಂದು ಪರಿಗಣಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆ.ನಾಸರ್, ಕೆ ಜಿತುಕುಮಾರ್ ಮತ್ತು ಎಸ್ ವಿ ಶ್ರೀಕುಮಾರ್ ಅವರಿಗೆ ಮರಣದಂಡನೆ ವಿಧಿಸಿದೆ. ಇಬ್ಬರು ಪೊಲೀಸ್ ಅಧಿಕಾರಿಗಳಿಗೆ 6ವರ್ಷಜೈಲು ಶಿಕ್ಷೆ ಹಾಗೂ ಇನ್ನೊಬ್ಬರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಕಳ್ಳತನದ ಆರೋಪದ ಮೇಲೆ 27ವರ್ಷದಉದಯಕುಮಾರ್ ನನ್ನು ಪೊಲೀಸರು ಬಂಧಿಸಿದ್ದರು. ಬಳಿಕಪೊಲೀಸ್ ವಿಚಾರಣೆ ವೇಳೆಯೇ ಆರೋಪಿ ಮೃತಪಟ್ಟಿದ್ದ.

ಅಪಾರ್ಟಮೆಂಟ್‌ಲಿದ್ದ ನೇಪಾಳದ 16 ಯುವತಿಯರನ್ನು ರಕ್ಷಿಸಿದ ದೆಹಲಿಯ ಮಹಿಳಾ ಆಯೋಗ

ದೆಹಲಿಯ ಮುನಿರ್ಕಾ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಗೃಹ ಬಂಧನದಲ್ಲಿರಿಸಲ್ಪಟ್ಟಿದ್ದ ನೇಪಾಳ ಮೂಲದ 16 ಯುವತಿಯರನ್ನು ರಕ್ಷಿಸುವಲ್ಲಿ ದೆಹಲಿಯ ಮಹಿಳಾ ಆಯೋಗ ಯಶಸ್ವಿಯಾಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್, ಪ್ರಕರಣದ ಸಂತ್ರಸ್ತೆಯರಿಗೆ ಕೆಲಸದ ಆಮಿಷವೊಡ್ಡಿ ನೇಪಾಳದಿಂದ ಕರೆತರಲಾಗಿತ್ತು. ಆರೋಪಿಗಳು 16 ಯುವತಿಯರನ್ನು ಇರಾನ್ ಮತ್ತು ಕುವೈತ್ ರಾಷ್ಟ್ರಗಳಿಗೆ ಮಾನವ ಅಕ್ರಮ ಸಾಗಣೆ ಮಾಡುವ ಯತ್ನದಲ್ಲಿದ್ದರು, ಈ ಹಿಂದೆಯೂ ಆರೋಪಿಗಳು ಮಾನವ ಕಳ್ಳ ಸಾಗಣೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ.

ಇರಾನ್ ಜೊತೆ ಹೊಸ ಒಪ್ಪಂದದ ಸುಳಿವು ನೀಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇರಾನ್ ಮತ್ತು ಅಮೆರಿಕ ನಡುವೆ 2015ರಲ್ಲಿ ಆಗಿದ್ದ ಪರಮಾಣು ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮೇ ೮ ರಂದು ರದ್ದು ಮಾಡಿದ ಬೆನ್ನಲ್ಲೇ ಈಗ ಹೊಸ ಒಪ್ಪಂದದ ಕುರಿತಾಗಿ ಮಾತಾಡಿದ್ದಾರೆ. ಆದರೆ ಹೊಸ ಒಪ್ಪಂದದ ಕುರಿತಾಗಿ ಯಾವುದೇ ಮಾಹಿತಿಯನ್ನು ಅಮೆರಿಕ ನೀಡಿಲ್ಲ. 2016ರಲ್ಲಿ ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ರಷ್ಯಾ ಮತ್ತು ಇರಾನ್ ನಡುವೆ ಪರಮಾಣು ಒಪ್ಪಂದ ಏರ್ಪಟ್ಟಿತ್ತು. ಇದು ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಒಪ್ಪಂದ ಎಂದು ಟ್ರಂಪ್ ಹೇಳಿದ್ದರು.

ಇರ್ಫಾನ್‌ ‘ಪಜಲ್‌’ಗೆ ಅಲೆಕ್ ಬಾಲ್ಡ್‌ವಿನ್ ಮೆಚ್ಚುಗೆ

ಬಾಲಿವುಡ್ ನಟ ಇರ್ಫಾನ್‌ ಖಾನ್ ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇರ್ಫಾನ್‌ ಅನುಪಸ್ಥಿತಿಯಲ್ಲೂ ಅವರ ಸಿನಿಮಾಗಳು ಸುದ್ದಿಯಾಗುತ್ತಿದ್ದು, ಮುಂದಿನ ವಾರ ಅವರ ‘ಕಾರ್ವಾ’ ಹಿಂದಿ ಸಿನಿಮಾ ತೆರೆಕಾಣಲಿದೆ. ನಾಡಿದ್ದು (ಜು 27) ಅವರ ಇಂಗ್ಲಿಷ್ ಸಿನಿಮಾ ‘ಪಜಲ್‌’ ತೆರೆಕಾಣುತ್ತಿದೆ. ಅಮೆರಿಕಾದಲ್ಲಿ ಆಯೋಜನೆಗೊಂಡಿದ್ದ ಪ್ರೀಮಿಯರ್‌ ಶೋನಲ್ಲಿ ಈ ಸಿನಿಮಾ ವೀಕ್ಷಿಸಿದ ಖ್ಯಾತ ಹಾಲಿವುಡ್ ನಟ ಅಲೆಕ್ ಬಾಲ್ಡ್‌ವಿನ್‌ ಅವರು ಇರ್ಫಾನ್‌ ನಟನೆಗೆ ಮೆಚ್ಚುಗೆ ಅಪಾರ ವ್ಯಕ್ತಪಡಿಸಿದ್ದಾರೆ. “ಚಿತ್ರದಲ್ಲೊಂದು ಮ್ಯಾಜಿಕ್ ಇದೆ. ನೋಡಲೇಬೇಕಾದ ಸಿನಿಮಾ” ಎಂದು ಅಲೆಕ್‌ ಟ್ವೀಟ್‌ ಮಾಡಿದ್ದಾರೆ.

ದೆಹಲಿ ಕ್ರಿಕೆಟ್ ಸಮಿತಿಗೆ ಸೇರ್ಪಡೆಯಾದ ವೀರೂ

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಕ್ರಿಕೆಟ್ ಸಮಿತಿಯನ್ನು ರಚಿಸಿದ್ದು, ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಅವರನ್ನು ಸೇರ್ಪಡೆಗೊಳಿಸಿದೆ. ಮೂವರು ಸದಸ್ಯರ ಸಮಿತಿಯಲ್ಲಿ ಸೆಹ್ವಾಗ್ ಜತೆಗೆ ಆಕಾಶ್ ಚೋಪ್ರಾ ಹಾಗೂ ರಾಹುಲ್ ಸಾಂಘ್ವಿ ಕೂಡಾ ಸ್ಥಾನ ಗಳಿಸಿದ್ದಾರೆ. ಇನ್ನು, ದೆಹಲಿ ಮೂಲದ ಎಡಗೈ ಆಟಗಾರ ಗೌತಮ್ ಗಂಭೀರ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಆಯ್ಕೆಮಾಡಲಾಗಿದೆ. ನ್ಯಾ. ಆರ್ ಎಂ ಲೋಧಾ ಸಮಿತಿ ಮತ್ತು ಬಿಸಿಸಿಐನ ಮಾರ್ಗಸೂಚಿಯಂತೆ ಈ ಕ್ರಿಕೆಟ್ ಸಮಿತಿ ದೆಹಲಿ ಕ್ರಿಕೆಟ್ ಆಯ್ಕೆಸಮಿತಿ ಸೇರಿದಂತೆ ಪ್ರಮುಖ ಸಮಿತಿಗಳನ್ನು ನಿಯಂತ್ರಿಸಲಿದೆ. ಜತೆಗೆ ದೆಹಲಿ ರಾಜ್ಯದ ಕ್ರಿಕೆಟ್ ಅಭಿವೃದ್ಧಿಗೆ ಬೇಕಾದ ಸಲಹೆ-ಸೂಚನೆ ನೀಡುವ ಅಧಿಕಾರ ಈ ಸಮಿತಿಗಿದೆ.

ಬೆಂಗಳೂರಿನಲ್ಲಿ ಆಪಲ್ ಐಫೋನ್ ತಯಾರಿಕೆ

ಬೆಂಗಳೂರಿನಲ್ಲಿ ಆಪಲ್ ಐಫೋನ್ ತಯಾರಿಸಲಾಗುತ್ತಿದೆ. ಗುತ್ತಿಗೆ ಉತ್ಪಾದಕರ ಮೂಲಕ ತಯಾರಿಸಲಾಗುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಖಾತೆ ಸಚಿವ ಸಿ ಆರ್ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಆಪಲ್ ಕಂಪನಿಯ ಆಯ್ದ ಮಾಡೆಲ್ ಗಳ ಐಫೋನ್ ಗಳನ್ನು ಬೆಂಗಳೂರಿನಲ್ಲಿ ಗುತ್ತಿಗೆ ಉತ್ಪಾದಕರ ಮೂಲಕ ತಯಾರಿಸುತ್ತಿದೆ. ಖಾಸಗಿ ಕಂಪನಿಗಳ ವ್ಯವಹಾರ ನಿರ್ಧಾರಗಳ ಮಾಹಿತಿಯನ್ನು ಸರ್ಕಾರವು ಸಂಗ್ರಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಸ್ಮಾರ್ಟ್ ಫೋನ್ ಉತ್ಪಾದಿಸುವ, ರಿಪೇರಿ, ಬಿಡಿಭಾಗ ತಯಾರಿಕೆಗೆ ತೆರಿಗೆ ವಿನಾಯ್ತಿ ನೀಡಬೇಕು ಎಂಬ ಮನವಿಗಳು ಸರ್ಕಾರಕ್ಕೆ ಬಂದಿವೆ. ಆದರೆ, ಮನವಿಯನ್ನು ಪುರಸ್ಕರಿಸಿಲ್ಲ ಎಂದು ಹೇಳಿದ್ದಾರೆ. ಜುಲೈ 15ರವರೆಗೆ 16,324 ಸ್ಟಾರ್ಟ್ ಅಪ್ ಅರ್ಜಿಗಳು ಬಂದಿದ್ದು, ಈ ಪೈಕಿ 11129 ಮಾನ್ಯಮಾಡಲಾಗಿದೆ ಎಂದೂ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಅಜಯ್ ಜಯರಾಮ್, ಕಶ್ಯಪ್‌ಗೆ ನಿರಾಸೆ

ರಷ್ಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗ್ಲಾಸ್ಗೊ ಕಾಮನ್ವೆಲ್ತ್ ಸ್ವರ್ಣ ಪದಕ ವಿಜೇತ ಪರುಪಳ್ಳಿ ಕಶ್ಯಪ್ ಮತ್ತು ಅಜಯ್ ಜಯರಾಮ್ ನಿರಾಸೆ ಅನುಭವಿಸಿದ್ದಾರೆ. ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಜಪಾನ್ ಆಟಗಾರ ಮರುವೊ ವಿರುದ್ಧ ಕಶ್ಯಪ್ ೧೨-೨೧, ೧೧-೨೧ರ ಎರಡು ನೇರ ಗೇಮ್‌ಗಳಲ್ಲಿ ಸೋತರೆ, ಇನ್ನೊಂದು ಪಂದ್ಯದಲ್ಲಿ ಅಜಯ್ ಜಯರಾಮ್ ಮೂರು ಗೇಮ್‌ಗಳ ಕಠಿಣ ಹೋರಾಟದಲ್ಲಿ ಭಾರತದವರೇ ಆದ ಶುಭಾಂಕರ್ ದೇ ವಿರುದ್ಧ ೨೧-೧೫, ೧೪-೨೧, ೧೫-೨೧ರಿಂದ ಪರಾಭವ ಕಂಡರು. ಇನ್ನು, ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ರಿತುಪರ್ಣಾ ದಾಸ್, ೨೧-೧೧, ೨೧-೧೮ರಿಂದ ರಷ್ಯಾದ ವಿಕ್ಟೋರಿಯಾ ಸ್ಲೊಬೊಡಿಯನ್ಯುಕ್ ವಿರುದ್ಧ ಗೆಲುವು ಪಡೆದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More